ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-05-2021
ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 07/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಉಮೇಶ ತಂದೆ ವಿರಶೇಟ್ಟಿ ಜಾತಿ: ಲಿಂಗಾಯತ, ಸಾ: ಹುಣಜಿ(ಕೆ) ರವರ ತಂದೆಯಾದ ವಿರಶೇಟ್ಟಿ ರವರಿಗೆ ಗ್ರಾಮದ ಹೊಲ ಸರ್ವೆ ನಂ. 115/1 ನೇದರಲ್ಲಿ 34 ಗುಂಟೆ ಜಮೀನು ಅವರ ಹೆಸರಿನ ಮೇಲೆ ಇದ್ದು, ತಂದೆಯವರು ಸದರಿ ಹೊಲದಲ್ಲಿ ಒಕ್ಕಲುತನ ಹಾಗೂ ಬೇರೆಯವರ ಹೊಲವನ್ನು ಸಹ ಪಾಲದಿಂದ ಒಕ್ಕಲುತನ ಕೆಲಸವನ್ನು ಮಾಡಿಕೊಂಡಿರುತ್ತಾರೆ, ಒಕ್ಕಲುತನ ಕೆಲಸಕ್ಕಾಗಿ ತಂದೆಯವರು ಪಿ.ಕೆ.ಪಿ.ಎಸ ಜಾಂತಿಯಲ್ಲಿ ಅಂದಾಜು 15,000/- ರೂಪಾಯಿ ಸಾಲವನ್ನು ಪಡೆದುಕೊಂಡಿರುತ್ತಾರೆ ಹಾಗು ಗ್ರಾಮದಲ್ಲಿಯೂ ಸಹ ಅಂದಾಜು ಒಂದು ಲಕ್ಷ ರೂಪಾಯಿ ಕೈ ಸಾಲವನ್ನು ಪಡೆದುಕೊಂಡಿರುತ್ತಾರೆ, ಇಗ 2-3 ವರ್ಷಗಳಿಂದ ಸರಿಯಾಗಿ ಬೆಳೆ ಬೆಳೆಯದ ಕಾರಣ ಒಕ್ಕಲುತನ ಕೆಲಸಕ್ಕೆ ಮಾಡಿಕೊಂಡ ಸಾಲವನ್ನು ಮರು ಪಾವತಿ ಮಾಡಲು ಆಗದೆ ಚಿಂತೆಯಲ್ಲಿ ಇರುತ್ತಿದ್ದರು, ಹೀಗಿರುವಾಗ ತಂದೆಯಾದ ವಿರಶೇಟ್ಟಿ ತಂದೆ ಕಾಶಪ್ಪಾ ವಯ: 40 ವರ್ಷ ರವರು ಒಕ್ಕಲುತನ ಕೆಲಸಕ್ಕೆ ಮಾಡಿಕೊಂಡ ಸಾಲವನ್ನು ಮರು ಪಾವತಿ ಮಾಡಲು ಆಗದೆ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 29-05-2021 ರಂದು 0230 ಗಂಟೆಯಿಂದ 0600 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮ ಹೊಲದಲ್ಲಿರುವ ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ, ತನ್ನ ತಂದೆ ಆತ್ಮ ಹತ್ಯೆ ಮಾಡಿಕೊಂಡ ಬಗ್ಗೆ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.