Police Bhavan Kalaburagi

Police Bhavan Kalaburagi

Saturday, May 13, 2017

BIDAR DISTRICT DAILY CRIME UPDATE 13-05-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-05-2017

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 56/2017, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ಫಿರ್ಯಾದಿ ಕಪಿಲ ತಂದೆ ತರುಣ ಸಾವ್ಲಾ ವಯ: 35 ವರ್ಷ, ಜಾತಿ: ಜೈನ, ಸಾ: 3-4-376/12 2ನೇ ಮಹಡಿ, ಬಸಂತ ನಗರ ಕಾಲೋನಿ ಕಾಚಿಗುಡ, ಹೈದ್ರಾಬಾದ ರವರ ತಮ್ಮ ಮಯೂರ ವಯ: 32 ವರ್ಷ ಇತನು ಮುಂಬೈಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಹೆಂಡತಿ ಜೀನಲ ವಯ: 30 ವರ್ಷ, ಮಗ ಕಯಾನ ವಯ: 6 ವರ್ಷ, ಮಗಳು ಟ್ವಿಶಾ ವಯ: 1 ವರ್ಷ, ತಾಯಿ ಭಾರತಿ ವಯ: 58 ವರ್ಷ ರವರೊಂದಿಗೆ ವಾಸವಾಗಿರುತ್ತಾನೆ, ಅವರ ಮನೆಯ ಕೆಲಸಕ್ಕೆ ಸುನಿಲ ವಯ: 25 ವರ್ಷ ಇತನಿಗೆ ಇಟ್ಟುಕೊಂಡಿರುತ್ತಾರೆ,      ಹೀಗಿರುವಾಗ ಹೈದ್ರಾಬಾದದಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮ ಇರುವದರಿಂದ ದಿನಾಂಕ 12-05-2017 ರಂದು ಮಯೂರ ಇತನು ತಮ್ಮ ಮಹಿಂದ್ರಾ ಕಾರ ನಂ. ಎಂಎಚ-43/ಎಟಿ-1501 ನೇದರಲ್ಲಿ ಮನೆಯವರೆಲ್ಲರೊಂದಿಗೆ ಕಾರನ್ನು ಚಲಾಯಿಸಿಕೊಂಡು ಮುಂಬೈಯಿಂದ ಹೈದ್ರಾಬಾದಕ್ಕೆ ಬರುವಾಗ ಎದುರಿನಿಂದ ಅಂದರೆ ಮುಂಬೈ ಕಡೆಗೆ ಹೋಗುತ್ತಿರುವ ಲಾರಿ ನಂ. ಎಂಎಚ-42/ಟಿ-1560 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಮಯೂರ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಮಾಡಿ ತನ್ನ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ಮಯೂರ ಇತನ ತಲೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ, ಅವನ ಪಕ್ಕದಲ್ಲಿ ಕುಳಿತ ತಾಯಿ ಭಾರತಿ ರವರ ತಲೆಗೆ ಭಾರಿ ರಕ್ತಗಾಯ, ಕೈಕಾಲುಗಳಿಗೆ ಭಾರಿ ರಕ್ತಗಾಯ ಹಾಗೂ ಹೊಟ್ಟೆ ಹರಿದು ಮಾಂಸ ಹೊರ ಬಂದ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾಳೆ, ಮಯೂರನ ಹೆಂಡತಿ ಜೀನಲ್ ಇಕೆಯ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಮೃತಪಟ್ಟಿರುತ್ತಾಳೆ, ಕೆಲಸಗಾರ ಸುನಿಲ ಇತನ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಮೃತಪಟ್ಟಿರುತ್ತಾನೆ, ಮಯೂರನ ಮಕ್ಕಳಾದ ಕಯಾನ ಮತ್ತು ಟ್ವಿಶಾರವರಿಗೆ ಭಾರಿಗಾಯಗಳಾಗಿದ್ದು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸಾಗಿಸುವಾಗ ಕಯಾನ ಇತನು ದಾರಿಯಲ್ಲಿ ಮೃತಪಟ್ಟಿರುತ್ತಾನೆ, ಟ್ವಿಶಾಳಿಗೆ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಸದರಿ ಅಪಘಾತ ಸ್ಥಳ ನೋಡಲಾಗಿ ಎಲ್ & ಟಿ ಕಂಪನಿಯವರು ರಸ್ತೆ ನಿರ್ಮಾಣ ಕಾರ್ಯ ಕೈಗೊಂಡಿದ್ದು ಒಂದು ಕಡೆಯ ರಸ್ತೆ ನಿರ್ಮಾಣ ಹಂತದಲ್ಲಿದ್ದು ವಾಹನಗಳಿಗೆ ಒಂದೆ ರಸ್ತೆ ಮೇಲೆ ಹೋಗಿ ಬರುವಂತೆ ಮಾಡಿದ್ದು ಇರುತ್ತದೆ, ಆದರೆ ರಸ್ತೆ ಸಂಚಾರಕ್ಕೆ ಸುರಕ್ಷತಾ ಕ್ರಮ ಕೈಕೊಳ್ಳದೆ ತಿರುವು ರಸ್ತೆ ಇದ್ದರೂ ಯಾವುದೆ ಸೈನ ಬೋರ್ಡ ವಗೈರೆ ಹಾಕದೆ ನಿರ್ಲಕ್ಷ ವಹಿಸಿದ್ದರಿಂದ ಸದರಿ ರಸ್ತೆ ಅಪಘಾತ ಸಂಭವಿಸಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ಶ್ರೀ ಅಬ್ದುಲ್ ಕರೀಮ್ ತಂದೆ ಮಹ್ಮದ ಮೌಲಾನ ಸಾ|| ಕಲಬುರ್ಗಿ  ರವರು ದಿನಾಂಕ 01-05-2017 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನಮ್ಮ ಸಂಬಂಧಿಕರನ್ನು ಬಿಟ್ಟು ಬರಲು ನಮ್ಮ ಕಾರ ನಂ ಕೆ 32 ಎಮ್ 6152 ನೆದ್ದನ್ನು ತೆಗೆದುಕೊಂಡು ನಾನು ಮತ್ತು ನಮ್ಮ ತಂದೆ ಅಬ್ದುಲ್ ಕರೀಮ್ ಇಬ್ಬರು ನಮ್ಮ ಕಾರನ್ನು ತೆಗೆದುಕೊಂಡು ಹೋಗಿ ನಮ್ಮ ಸಂಬಂಧಿಕರಿಗೆ ಹೈದ್ರಾಬಾದನಲ್ಲಿ ಬಿಟ್ಟು ನಾನು ಮತ್ತು ನಮ್ಮ ತಂದೆ ಇಬ್ಬರೂ ಸದರಿ ಕಾರಿನಲ್ಲಿ ವಾಪಾಸಾ ನಮ್ಮೂರಿಗೆ ಬರುತ್ತಿದ್ದೆವು.ನಮ್ಮ ತಂದೆ ಕಾರಿನ ಹಿಂದುಗಡೆ ಕುಳಿತಿದ್ದು ನಾನು ಕಾರನ್ನು ಚಾಲನೆ ಮಾಡುತ್ತಿದ್ದೆನು.ಇಂದು ದಿನಾಂಕ 02-05-2017 ರಂದು ಬೆಳಗ್ಗೆ 6-30 ಗಂಟೆಯ ಸುಮಾರಿಗೆ ಸೇಡಂ ಕೊಡಂಗಲ್ ಮುಖ್ಯ ರಸ್ತೆಯ ಮೇಲೆ ಮುಧೋಳ ಮೇನ ಗೇಟ ದಾಟಿ ಸುಮಾರು 1 ಕೀಮೀ ದೂರ ಬರುತ್ತಿದ್ದಾಗ ರಸ್ತೆಯ ಮೇಲೆ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಸೈಡ ಕೊಡಲು ಹೋಗಿ ನಮ್ಮ ಕಾರು ಪಲ್ಟಿಯಾಗಿ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು ನಂತರ ರಸ್ತೆಯಲ್ಲಿ ಹೋಗಿ ಬರುವ ವಾಹನ ಚಾಲಕರು ನಮ್ಮನ್ನು ನೋಡಿ ನಮ್ಮನ್ನು ಕಾರಿನಿಂದ ಹೊರಗಡೆ ತೆಗೆದು ನೋಡಲಾಗಿ ನಮ್ಮ ತಂದೆ  ಅಬ್ದುಲ್ ಕರೀಮ್ ಇವರಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬರುತ್ತಿದ್ದು ಎರಡು ಪಕ್ಕೆಲುಬುಗಳ ಹತ್ತೀರ ಹಾಗು ಬಲ ಬುಜದ ಹತ್ತೀರ ಭಾರಿ ಗುಪ್ತಗಾಯ ಮತ್ತು ತರುಚಿದಗಾಯಗಳು ಹಾಗು ಬಲಗಾಲು ಮೋಳಕಾಲು ಕೆಳಗಡೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಮೂಳೆ ಮುರಿದಿದ್ದು ಬೇವಾಸಾಗಿ ಬಿದ್ದಿದ್ದು ನನಗೆ ಮೈಕೈಗೆ ಸಣ್ಣ ಪುಟ್ಟ ಗುಪ್ತಗಾಯಳಾಗಿದ್ದು ನಂತರ ನಮ್ಮ ತಂದೆಗೆ ನಾನು ಮತ್ತು ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಸೇರಿ 108 ಅಂಬ್ಯೂಲೇನ್ಸನಲ್ಲಿ ಹಾಕಿಕೊಂಡು ಯುನೈಟೇಡ ಆಸ್ಪತ್ರೆಗೆ ತಂದು ಸೇರಿಕೆಮಾಡಿದ್ದು ಸದ್ಯ ನಮ್ಮ ತಂದೆಯು ಬೇವಾಸಾಗಿದ್ದು ಉಪಚಾರ ಪಡೆಯುತ್ತಿದ್ದಾರೆ ನನಗೆ ಅಂತದ್ದೆನು ಗಾಯಗಳು ಆಗಿರದೇ ಇದ್ದರಿಂದ ನಾನು ಯಾವುದೇ ಉಪಚಾರ ಪಡೆದುಕೊಂಡಿರುವದಿಲ್ಲಾ ಅಂತಾ ತಿಳಿಸಿದ್ದು ದಿನಾಂಕ 12-05-2017 ರಂದು ರಾತ್ರಿ 10-00 ಗಂಟೆಗೆ ಪ್ರಕರಣದ ಗಾಯಾಳು ಅಬ್ದುಲ ಕರೀಮ್ ಇವರ ಮಗನಾದ ಅಬ್ದುಲಮತೀನ್ ತಂದೆ ಅಬ್ದುಲ ಕರೀಮ ಶೇಕ ಸಾ|| ಕಲಬುರಗಿ ಇವರು ನಮ್ಮ ತಂದೆಗೆ ಯುನೀಟೇಡ್ ಅಸ್ಪತ್ರೆಯಲ್ಲಿ ಉಪಚಾರ ಮಾಡಿಸಿದ್ದು ಇತನಿಗೆ ಗುಣಮುಖವಾಗದ ಕಾರಣ ದಿನಾಂಕ 07-05-2017 ರಂದು ಸಾಯಾಂಕಾಲ 5-00 ಗಂಟೆ ಸುಮಾರಿಗೆ ಕಲಬುರಗಿಯಿಂದ ಹೆಚ್ಚಿನ ಉಪಚಾರಕ್ಕಾಗಿ ಗಂಗಾಮಯಿ ಅಸ್ಪತ್ರೆ ಸೋಲಪುರಕ್ಕೆ ಕರೆದುಕೊಂಡು ಹೋಗಿದ್ದು  ಅಂದು ರಾತ್ರಿ 8-30 ಗಂಟೆ ಸುಮಾರಿಗೆ ಸೇರಿಕೆ ಮಾಡಿದ್ದು ಡಾಕ್ಟರವರು ನಮ್ಮ ತಂದೆಗೆ ಪರೀಕ್ಷೆ ಮಾಡಿ ರಾತ್ರಿ 9-00 ಗಂಟೆ ಸುಮಾರಿಗೆ ನಮ್ಮ ತಂದೆ ಮೃತಪಟ್ಟಿರುವದಾಗಿ ತಿಳಿಸಿದ್ದು ಇರುತ್ತದೆ. ನಂತರ ನಮ್ಮ ತಂದೆ ರಸ್ತೆ ಅಫಘಾತದಲ್ಲಿ ಸತ್ತಿದ್ದರ ಬಗ್ಗೆ ಸೋಲಾಪುರದಲ್ಲಿರುವ ಸದರ ಬಜಾರ ಪೊಲೀಸ ಠಾಣೆಗೆ ವಯದ್ಯರು ಮಾಹಿತಿ ನಿಡಿದ್ದರಿಂದ ದಿನಾಂಕ 08-05-2017 ರಂದು ಬೇಳಗ್ಗೆ  ಸದರಿ ಬಜರ ಪೊಲೀಸರು ಬಂದು ನಮ್ಮ ತಂದೆಯ ಶವ ಪಂಚನಾಮೆ ಮಾಡಿ ಶವವನ್ನು ಪಿ.ಎಮ್ಇ  ಮಾಡಿಸಿ ನಮಗೆ ಕೊಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ :      ದಿನಾಂಕ 12-05-2017 ರಂದು ಟೆಂಗಳಿಯಲ್ಲಿರುವ ತನ್ನ ತಂಗಿಗೆ ಮಾತನಾಡಿಕೊಂಡು ಬರಲು ಟೆಂಗಳಿ ಕ್ರಾಸ ಹತ್ತಿರ ಸೇಡಂ ಕಲಬುರಗಿ ರಾಜ್ಯ ಹೆದ್ದಾರಿಯ ರೋಡಿನ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆ ಸಂದರ್ಭದಲ್ಲಿ ಸೇಡಂಕಡೆಯಿಂದ ಟ್ಯಾಂಕರ್ ನಂ-MH-12-LT-4640 ನೇದ್ದರ ಚಾಲಕ ತನ್ನ ವಶದಲ್ಲಿದ್ದ ಟ್ಯಾಂಕರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೇ ರೋಡಿನ ಪಕ್ಕದಲ್ಲಿ ನಡೆದುಕೊಂಡು ಬರುತ್ತಿರುವ ಫಿರ್ಯಾದಿಯ ಗಂಡ ಬಸವರಾಜ ಟೆಂಗಳಿ ಇವರಿಗೆ ಸೈಡಿನಿಂದ ಡಿಕ್ಕಿಪಡೆಯಿಸಿದ ಪರಿಣಾಮ ಮೃತನಿಗೆ ಬಲ ಸೊಂಟದ ಪಕ್ಕೆಲಬಿಗೆ ತರಚಿದ ಗಾಯಗಳಾಗಿ ಭಾರಿ ಗುಪ್ತಗಾಯಗಳಾಗಿ ಆಸ್ಪತ್ರೆಗೆ ತರುವಾಗ ಮೃತಪಟ್ಟಿರುತ್ತಾನೆ. ಸದರಿ ರಸ್ತೆ ಅಪಘಾತ ಪಡಿಸಿದ ಟ್ಯಾಂಕರ ಚಾಲಕ ತನ್ನ ಟ್ಯಾಂಕರ ವಾಹನವನ್ನು ಅದೇ ಸ್ಥಳದಲ್ಲಿ ಬಿಟ್ಟು ಓಡಿಹೋಗಿರುತ್ತಾನೆ. ಕಾರಣ ಸದರಿ ಟ್ಯಾಂಕರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀಮತಿ ಚೆನ್ನಮ್ಮ ಗಂಡ ಬಸವರಾಜ ಟೆಂಗಳಿ ಸಾ:ಹಲಕರ್ಟಿ ಗಲ್ಲಿ, ಸೇಡಂ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಹಾಂತೇಶ ತಂದೆ ಭೀಮರಾಯ ನಾಟೀಕಾರ ಸಾಃ ಬುಗ್ಗಿ ಏರಿಯಾ ಜೇವರಗಿ ರವರು ದಿನಾಂಕ  06.04.2017 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮ ಅಶೋಕ ಇಬ್ಬರೂ  ಕೂಡಿ ನಮ್ಮ ಸಂಭಂದಿಕರ ಊರಿಗೆ ಹೋಗಿದ್ದೆವು. ಮನೆಯಲ್ಲಿ ನನ್ನ ಹೆಂಡತಿ ಸುಮಿತ್ರಾಮಗಳು ಗೌರಮ್ಮ  ಮತ್ತು ನಮ್ಮ ತಂದೆ ತಾಯಿ ಇದ್ದರು, ನಾವಿಬ್ಬರೂ ಅದೇ ದಿವಸ ಸಾಯಂಕಾಲ 5.00 ಗಂಟೆಯ ಸುಮಾರಿಗೆ  ಮರಳಿ ಮನೆಗೆ ಬಂದೆವು ಮನೆಯಲ್ಲಿ ನನ್ನ ಹೆಂಡತಿ ಸುಮಿತ್ರಾ ಇವಳು ಕಾಣಲಿಲ್ಲಾ ನಮ್ಮ ತಂದೆ ತಾಯಿಯವರಿಗೆ ಕೇಳಲಾಗಿ ಅವರು ಹೇಳಿದ್ದೆನೆಂದರೆ ಸುಮಿತ್ರಾ ಇವಳು ಮದ್ಯಾಹ್ನ 1.00 ಗಂಟೆಯ ಸುಮಾರಿಗೆ  ಮನೆಯಿಂದ ಬಜಾರಕ್ಕೆ  ಹೊಗುತ್ತೆನೆ  ಎಂದು ಹೇಳಿ ಹೊದವಳು  ಮರಳಿ ಮನೆಗೆ ಬಂದಿರುವುದಿಲ್ಲಾ ಎಂದು ಹೇಳಿದರು. ನಂತರ ನಾನು ಮತ್ತು ನನ್ನ ಅಣ್ಣ ಶರಣು, ತಮ್ಮ ಅಶೋಕ ಮತ್ತು  ನಮ್ಮ ತಂದೆ ತಾಯಿಯವರು ಕೂಡಿಕೊಂಡು ಜೇವರಗಿ ಪಟ್ಟಣದಲ್ಲಿ ಹುಡುಕಾಡಿದೆವು ನನ್ನ ಹೆಂಡತಿ ಸುಮಿತ್ರಾ ಇವಳು ಸಿಕ್ಕಿರುವುದಿಲ್ಲಾ. ಮರು ದಿವಸ ನಾವು ನಮ್ಮ ಸಂಭಂದಿಕರ ಊರುಗಳಿಗೆ ಹೋಗಿ ಮತ್ತು ಪೋನ ಮಾಡಿ ವಿಚಾರ ಮಾಡಿ ಹುಡುಕಾಡಿದರು ನನ್ನ ಹೆಂಡತಿ ಸುಮಿತ್ರಾ ಇವಳು ಬಗ್ಗೆ ಪತ್ತೆ ಹತ್ತಿರುವುದಿಲ್ಲಾ. ನನ್ನ ಹೆಂಡತಿ ಮನೆಯಿಂದ ಬಜಾರಕ್ಕೆ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ದಿನಾಂಕ: 12/05/2017 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿದಾರರಾದ  ಶ್ರೀಮತಿ ಭಾಗಿರಥಿ ಗಂಡ ನೀಲಕಂಠ ಚೇಂಗಟಿ, ವಾಸ:ಕಡಗಂಚಿ ಗ್ರಾಮ ರವರನ್ನು ಈಗ ಸುಮಾರು 22 ವರ್ಷಗಳ ಹಿಂದೆ ಕಡಗಂಚಿ ಗ್ರಾಮದ ಮಲ್ಲೇಶಪ್ಪ ತಂದೆ ತಿಪ್ಪಣ್ಣ ಚೇಂಗಟಿ ಇವರ ಎರಡನೆ ಮಗನಾದ ನೀಲಕಂಠ ಚೇಂಗಟಿ ಇತನೊಂದಿಗೆ ಮದುವೆಮಾಡಿಕೊಟ್ಟಿದ್ದು ನನ್ನ ತವರೂರು ಆಳಂದ ತಾಲ್ಲೂಕಿನ ಶಕಾಪೂರ ಗ್ರಾಮ ಇರುತ್ತದೆ. ನನಗೆ ಮೂರುಜನ ಹೆಣ್ಣುಮಕ್ಕಳು ಹಾಗೂ ಎರಡುಜನ ಗಂಡುಮಕ್ಕಳು ಇರುತ್ತಾರೆ. ನನ್ನ ಹಿರಿಯ ಮಗಳಾದ ಕಲ್ಪನಾ ಇವಳಿಗೆ ಆಳಂದ ತಾಲ್ಲೂಕಿನ ಹೆಬಳಿ ಗ್ರಾಮದ ಅಂಕುಶ ತಂದೆ ಮಾರುತಿ ಇತನೊಂದಿಗೆ ವಿವಾಹ ಮಾಡಿಕೊಟ್ಟಿದ್ದು ಇನ್ನೂಳಿದ ಇಬ್ಬರು ಹೆಣ್ಣುಮಕ್ಕಳಾದ ಶಿಲ್ಪ ಮತ್ತು ಕಾವ್ಯಾಂಜಲಿ ಶಿಕ್ಷಣಮಾಡಿಕೊಂಡು ನನ್ನ ಜೊತೆ ಇರುತ್ತಾರೆ. ಹಾಗೂ ಇಬ್ಬರು ಗಂಡುಮಕ್ಕಳಾದ ನಿರಂಜನ ಮತ್ತು ನಿಖಿಲ ಇವರು ಶಿಕ್ಷಣ ಮಾಡಿಕೊಂಡು ನನ್ನೊಂದಿಗೆ ವಾಸವಾಗಿರುತ್ತಾರೆ. ನನ್ನ ಗಂಡನ ಹೆಸರಿಗೆ ಕಡಗಂಚಿ ಗ್ರಾಮದ ಸರ್ವೇ ನಂ 39ರಲ್ಲಿ 3 ಎಕರೆ ಜಮೀನು ಇದ್ದು ನನ್ನ ಗಂಡ ನೀರಾವರಿಗಾಗಿ ಬಾವಿ, ಬೋರವೇಲ್ ಕೊರೆಸಲು ಕಡಗಂಚಿ ಗ್ರಾಮದ ಎಸ್.ಬಿ.ಐ ಬ್ಯಾಂಕಿನಿಂದ ಕಳೆದವರ್ಷ 35000/- ಸಾವಿರ ರೂಪಾಯಿಗಳು ಬೆಳೆಸಾಲ ಪಡೆದಿದ್ದು ಅಲ್ಲದೇ ಬೀಜಗೊಬ್ಬರ ಖರಿದಿಗಾಗಿ ನನ್ನ ಗಂಡನ ಸಹೋದರ ಸಂಬಂಧಿಗಳಾದ ಕಾಶಿನಾಥ ತಂದೆ ಶಾಂತಪ್ಪ ಚೇಂಗಟಿ ಇವರಿಂದ ಕೈಗಡವಾಗಿ 80000/- ರೂಪಾಯಿಗಳು ಪಡೆದಿದ್ದು ಇರುತ್ತದೆ. ಈಗ ಸುಮರು ಎರಡು ಮೂರು ವರ್ಷಗಳಿಂದ ಮಳೆ ಚೆನ್ನಾಗಿ ಬಾರದಕಾರಣ ಬೆಳೆ ಬೆಳೆದಿರುವುದಿಲ್ಲ ಇದರಿಂದ ನನ್ನ ಗಂಡನು ಸದಾ ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಚಿಂತಿಸುತ್ತಾ ಇರುತ್ತಿದ್ದರು. ನಾನು ನನ್ನ ಮಕ್ಕಳು ಹಾಗೂ ಸಂಬಂಧಿಕರು ಈ ವಿಷಯವಾಗಿ ಚಿಂತಿಸಬೇಡ ಇಂದಲ್ಲಾ ನಾಳೆ ಮಳೆ ಚನ್ನಾಗಿ ಆಗಿ ಬೆಳೆ ಬೆಳೆದು ನಮ್ಮ ಸಾಲ ತೀರಿಸೋಣಾ ಅಂತಾ ಸಮಾದಾನ ಹೇಳುತ್ತಾ ಬಂದಿದ್ದು  ದಿನಾಂಕ: 11/05/2017 ರಂದು ರಾತ್ರಿ ನಾನು ನನ್ನ ಗಂಡ ಹಾಗೂ ನನ್ನ ಮಕ್ಕಳು ಕೂಡಿಕೊಂಡು ಊಟ ಮಾಡಿಕೊಂಡು ಮಲಗಿದ್ದು ನನ್ನ ಗಂಡನು ನಮ್ಮ ಮನೆಯ ಕೋಣೆಯಲ್ಲಿ ಮಲಗಿದ್ದು ನಾನು ಹಾಗೂ ನನ್ನ ಮಕ್ಕಳು ಹೊರಗಡೆ ಮಲಗಿರುತ್ತೇವೆ. ದಿನಾಂಕ:12/05/2017 ರಂದು ಬೆಳಿಗ್ಗೆ 08-00 ಗಂಟೆಯಾದರು ನನ್ನ ಗಂಡನು ಮಲಗಿರುವ ಕೊಣೆಯ ಬಾಗಿಲು ತೆರೆದು ಹೊರಗಡೆ ಬಂದಿರಲಿಲ್ಲಾ ನಾವು ಅನುಮಾನಗೊಂಡು ಬಾಗಿಲನ್ನು ತೆರೆಯಲು ಪ್ರಯತ್ನಿಸಿದಾಗ ಒಳಗಡೆಯಿಂದ ಚಿಲಕ ಹಾಕಿಕೊಂಡಿದ್ದರಿಂದ ಎಷ್ಟು ಕೂಗಿದರು ನನ್ನ ಗಂಡನಿಂದ ಯಾವುದೇ ಪ್ರತಿಕ್ರಿಯ ಬಾರದ ಕಾರಣ ಆಗ ನಮ್ಮ ಮನೆಯ ಪಕ್ಕದ ನಮ್ಮ ಸಹೋದರ ಸಂಬಂಧಿಗಳಾದ ಕಾಶಿನಾಥ ತಂದೆ ಶಂಕರ ಚೇಂಗಟಿ ಹಾಗೂ ಕೈಲಾಸ ತಂದೆ ಶ್ರೀಮಂತ ಧನ್ನಿ ಇವರ ಸಹಾಯದಿಂದ ಬಾಗಿಲು ಮುರಿದು ನೋಡಲಾಗಿ ಕೋಣೆಯ ಮೇಲ್ಗಡೆ ಚಾವಣಿಗೆ ಹಾಕಲಾದ ಕಬ್ಬಿಣದ ಪೈಪಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ನನ್ನ ಗಂಡನು ಮೃತಪಟ್ಟಿದ್ದು ಕಂಡು ಬಂದಿರುತ್ತದೆ. ನನ್ನ ಗಂಡನು ಎಸ್.ಬಿ.ಐ ಬ್ಯಾಂಕಿನಿಂದ 35000/- ರೂಪಾಯಿ ಹಾಗೂ ನಮ್ಮ ಸಹೋದರ ಸಂಬಂಧಿಗಳಾದ ಕಾಶಿನಾಥ ತಂದೆ ಶಾಂತಪ್ಪ ಚೇಂಗಟಿ ಇವರಿಂದ ಕೈಗಡವಾಗಿ 80000/- ಸಾವಿರ ರೂಪಾಯಿ ಹಾಗೂ ಕಾಶಿನಾಥ ತಂದೆ ಶಂಕರ ಚೇಂಗಟಿ ಇವರಿಂದ ಕೈಗಡವಾಗ 50000/- ರೂಪಾಯಿ ಹೀಗೆ ಒಟ್ಟು 1,65,000/- ಸಾವಿರ ರೂಪಾಯಿಗಳು ಸಾಲಮಾಡಿದ್ದು ಈ ಸಾಲ ಹೇಗೆ ತೀರಿಸುವುದು ಅಂತಾ ಮನನೊಂದು ರಾತ್ರಿ ವೇಳೆಯಲ್ಲಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.