Police Bhavan Kalaburagi

Police Bhavan Kalaburagi

Saturday, May 13, 2017

BIDAR DISTRICT DAILY CRIME UPDATE 13-05-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-05-2017

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 56/2017, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ಫಿರ್ಯಾದಿ ಕಪಿಲ ತಂದೆ ತರುಣ ಸಾವ್ಲಾ ವಯ: 35 ವರ್ಷ, ಜಾತಿ: ಜೈನ, ಸಾ: 3-4-376/12 2ನೇ ಮಹಡಿ, ಬಸಂತ ನಗರ ಕಾಲೋನಿ ಕಾಚಿಗುಡ, ಹೈದ್ರಾಬಾದ ರವರ ತಮ್ಮ ಮಯೂರ ವಯ: 32 ವರ್ಷ ಇತನು ಮುಂಬೈಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಹೆಂಡತಿ ಜೀನಲ ವಯ: 30 ವರ್ಷ, ಮಗ ಕಯಾನ ವಯ: 6 ವರ್ಷ, ಮಗಳು ಟ್ವಿಶಾ ವಯ: 1 ವರ್ಷ, ತಾಯಿ ಭಾರತಿ ವಯ: 58 ವರ್ಷ ರವರೊಂದಿಗೆ ವಾಸವಾಗಿರುತ್ತಾನೆ, ಅವರ ಮನೆಯ ಕೆಲಸಕ್ಕೆ ಸುನಿಲ ವಯ: 25 ವರ್ಷ ಇತನಿಗೆ ಇಟ್ಟುಕೊಂಡಿರುತ್ತಾರೆ,      ಹೀಗಿರುವಾಗ ಹೈದ್ರಾಬಾದದಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮ ಇರುವದರಿಂದ ದಿನಾಂಕ 12-05-2017 ರಂದು ಮಯೂರ ಇತನು ತಮ್ಮ ಮಹಿಂದ್ರಾ ಕಾರ ನಂ. ಎಂಎಚ-43/ಎಟಿ-1501 ನೇದರಲ್ಲಿ ಮನೆಯವರೆಲ್ಲರೊಂದಿಗೆ ಕಾರನ್ನು ಚಲಾಯಿಸಿಕೊಂಡು ಮುಂಬೈಯಿಂದ ಹೈದ್ರಾಬಾದಕ್ಕೆ ಬರುವಾಗ ಎದುರಿನಿಂದ ಅಂದರೆ ಮುಂಬೈ ಕಡೆಗೆ ಹೋಗುತ್ತಿರುವ ಲಾರಿ ನಂ. ಎಂಎಚ-42/ಟಿ-1560 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಮಯೂರ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಮಾಡಿ ತನ್ನ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ಮಯೂರ ಇತನ ತಲೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ, ಅವನ ಪಕ್ಕದಲ್ಲಿ ಕುಳಿತ ತಾಯಿ ಭಾರತಿ ರವರ ತಲೆಗೆ ಭಾರಿ ರಕ್ತಗಾಯ, ಕೈಕಾಲುಗಳಿಗೆ ಭಾರಿ ರಕ್ತಗಾಯ ಹಾಗೂ ಹೊಟ್ಟೆ ಹರಿದು ಮಾಂಸ ಹೊರ ಬಂದ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾಳೆ, ಮಯೂರನ ಹೆಂಡತಿ ಜೀನಲ್ ಇಕೆಯ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಮೃತಪಟ್ಟಿರುತ್ತಾಳೆ, ಕೆಲಸಗಾರ ಸುನಿಲ ಇತನ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಮೃತಪಟ್ಟಿರುತ್ತಾನೆ, ಮಯೂರನ ಮಕ್ಕಳಾದ ಕಯಾನ ಮತ್ತು ಟ್ವಿಶಾರವರಿಗೆ ಭಾರಿಗಾಯಗಳಾಗಿದ್ದು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸಾಗಿಸುವಾಗ ಕಯಾನ ಇತನು ದಾರಿಯಲ್ಲಿ ಮೃತಪಟ್ಟಿರುತ್ತಾನೆ, ಟ್ವಿಶಾಳಿಗೆ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಸದರಿ ಅಪಘಾತ ಸ್ಥಳ ನೋಡಲಾಗಿ ಎಲ್ & ಟಿ ಕಂಪನಿಯವರು ರಸ್ತೆ ನಿರ್ಮಾಣ ಕಾರ್ಯ ಕೈಗೊಂಡಿದ್ದು ಒಂದು ಕಡೆಯ ರಸ್ತೆ ನಿರ್ಮಾಣ ಹಂತದಲ್ಲಿದ್ದು ವಾಹನಗಳಿಗೆ ಒಂದೆ ರಸ್ತೆ ಮೇಲೆ ಹೋಗಿ ಬರುವಂತೆ ಮಾಡಿದ್ದು ಇರುತ್ತದೆ, ಆದರೆ ರಸ್ತೆ ಸಂಚಾರಕ್ಕೆ ಸುರಕ್ಷತಾ ಕ್ರಮ ಕೈಕೊಳ್ಳದೆ ತಿರುವು ರಸ್ತೆ ಇದ್ದರೂ ಯಾವುದೆ ಸೈನ ಬೋರ್ಡ ವಗೈರೆ ಹಾಕದೆ ನಿರ್ಲಕ್ಷ ವಹಿಸಿದ್ದರಿಂದ ಸದರಿ ರಸ್ತೆ ಅಪಘಾತ ಸಂಭವಿಸಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: