ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ದಿನಾಂಕ:17-12-2012 ರಂದು ದಂಡಗುಂಡ ಗ್ರಾಮದಲ್ಲಿ ನನ್ನ ಸೊಸೆಯಾದ ಸಂಗಮ ಇವರ ಮಗಳ ಜವಳದ ಕಾರ್ಯಕ್ರಮ ಇರುವದರಿಂದ ನಾನು ಮತ್ತು ನನ್ನ ಹೆಂಡತ್ತಿಯಾದ ಶಿವಮ್ಮಾ, ಮಗಳು ಐಶ್ವರ್ಯಾ ವಯಾ:5 ವರ್ಷ, ಮಾವ ಶಿವಶರಣಪ್ಪ ಹಾಗೂ ನಮ್ಮ ಅಣ್ಣತಮ್ಮಕೀಯ ಶಂಕ್ರೇಪ್ಪ ತಂದೆ ಭೀಮಪ್ಪಾ ರವರು ಕೂಡಿಕೊಂಡು ನಮ್ಮೂರಿನ ಧರ್ಮಪಾಲ ಇವರ ಟಂಟಂ ನಂ:ಕೆಎ-32 ಬಿ-6532 ನೇದ್ದರಲ್ಲಿ ನಮ್ಮೂರಿನಿಂದ ಗುಲಬರ್ಗಾ ಮುಖಾಂತರ ಹೋಗುವಾಗ ಬೆಳಗ್ಗೆ 8=15 ಗಂಟೆಗೆ ಟಾಟಾ ಸುಮೋ ನಮ: ಕೆಎ 33 ಎನ್ 1184 ನೇದ್ದರ ಚಾಲಕ ರಾಮ ಮಂದಿರ ಕಡೆಯಿಂದ ಜೇವರ್ಗಿ ರೋಡ ಕಡೆಗೆ ಹೋಗುವ ಸಲುವಾಗಿ ಟಾಟಾ ಸುಮೋ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ನಾವು ಕುಳಿತಿದ್ದ ಟಂಟಂ ಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದನು. ಟಂಟಂ ಪಲ್ಟಿಯಾಗಿ ರೋಡಿನ ಮೇಲೆ ಬಿದ್ದಾಗ ನಾನು ಮತ್ತು ಧರ್ಮಪಾಲ ಟಂಟಂ ನಿಂದ ಹೊರಗೆ ಬಂದು ಟಂಟಂ ಎತ್ತಿ ನಿಲ್ಲಿಸಿ ನನ್ನ ಮಗಳಾದ ಐಶ್ವರ್ಯಾ ಇವಳಿಗೆ ನೋಡಲು ತಲೆಯ ಹಿಂದುಗಡೆ ಭಾರಿ ಪೆಟ್ಟು ಬಿದ್ದು ಕಿವಿಯಿಂದ ತಲೆಯಿಂದ ರಕ್ತ ಬರುತ್ತಿತ್ತು ಶಂಕ್ರೇಪ್ಪಾ ಇವರಿಗೆ ತಲೆಗೆ ರಕ್ತಗಾಯವಾಗಿತ್ತು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಬರುವಾಗ ಬೆಳಗ್ಗೆ 8=30 ಗಂಟೆಗೆ ಮೋಹನ ಲಾಡ್ಜ ಕ್ರಾಸ್ ಹತ್ತಿರ ನನ್ನ ಮಗಳ ಉಸಿರಾಟ ನಿಂತು ತೀರಿಕೊಂಡಿರುತ್ತಾಳೆ, ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗಳ ಶವವನ್ನು ವೈಧ್ಯರಿಗೆ ತೋರಿಸಿದೇವು. ಮತ್ತು ಶಂಕ್ರೇಪ್ಪಾ ಇವರನ್ನು ಉಪಚಾರ ಮಾಡಿಸಿರುತ್ತೇವೆ. ಟಾಟಾ ಸುಮೋ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತಿದ್ದ ಟಂಟಂ ನಂ:ಕೆಎ-32 ಬಿ-6532 ನೇದ್ದಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಅಪಘಾತಮಾಡಿದ್ದರಿಂದ ನನ್ನ ಮಗಳ ಐಶ್ವರ್ಯಾ ಇವಳಿಗೆ ಭಾರಿಗಾಯವಾಗಿ ಮೃತಪಟ್ಟಿರುತ್ತಾಳೆ ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಮಗುವಿನ ತಂದೆಯಾದ ಮಲ್ಲಿಕಾರ್ಜುನ ತಂದೆ ಗುರಣ್ಣಾ ಬಟ್ಟರಕಿ ಸಾ: ಗೊಬ್ಬುರ (ಬಿ) ತಾ:ಅಫಜಲಪೂರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:123/2012 ಕಲಂ: 279,337,304(ಎ) ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀಮತಿ ಜಗದೇವಿ ಗಂಡ ಶಿವಶರಣಪ್ಪಾ ಸಾ|| ದೇವಿ ನಗರ ಆಳಂದ ರೋಡ ನಾವು ಗುಲಬರ್ಗಾ ನಗರದ ಆಳಂದ ರೋಡ ಪಕ್ಕದಲ್ಲಿರುವ ಆಳಂದ ಕಾಲೋನಿಯ ಈರಣ್ಣಾ ಇವರ ಮನೆ ನಮ್ಮ ತಮ್ಮ ಭದ್ರ ಶೆಟ್ಟಿ ಈತನು 1,10,000/-ರೂಪಾಯಿಗಳಿಗೆ ಗಿರಿವೆ ಹಾಕಿಕೊಂಡು ಆ ಮನೆಯಲ್ಲಿ ಸುಮಾರು 15-20 ದಿವಸಗಳು ಉಳಿದು ನಂತರ ಈರಣ್ಣಾ ಮತ್ತು ಭದ್ರಶೇಟ್ಟಿ ನಡುವೆ ಬಾಯಿ ಮಾತಿನ ತಕರಾರು ಆಗಿರುವದರಿಂದ ಅವನು ಮನೆ ಬಿಟ್ಟಿದ್ದು ಅದಕ್ಕೆ ನನ್ನ ತಮ್ಮ ಮರಳಿ ಹಣ ಕೊಡುವಂತೆ ಕೇಳುತ್ತಿದ್ದನು. ದಿನಾಂಕ:16-12-12 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು, ನನ್ನ ಗಂಡ ಇಬ್ಬರು ದೇವಿ ನಗರದ ಕಮಾನದ ರೋಡಿನ ಮೇಲೆ ಹೊರಟಾಗ ಈರಣ್ಣಾ, ಮಂಜೂಳಾ, ಆಕಾಶ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ. ಮತ್ತು ನನಗೆ ಕೈ ಹಿಡಿದು ಏಳೆದಾಡಿ ಮಾನಭಂಗ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 93/12 ಕಲಂ 341,323, 324, 354, 504, ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ:ಶ್ರೀಮತಿ ಶರಣಮ್ಮಾ ಗಂಡ ಮಲ್ಲಪ್ಪಾ ದೊಡ್ಡಮನಿ ಸಾಃ ಭೂತಪೂರ ರವರು ನನಗೆ ಒಬ್ಬನೆ ಗಂಡು ಮಗ ಅವನ ಹೆಸರು ಸಂತೋಷಕುಮಾರ ಅಂತಾ ಇದ್ದು ಆತನ ವಯಸ್ಸು 10 ವರ್ಷ, ದಿನಾಂಕಃ09-12-2012 ರಂದು ರವಿವಾರ ದಿನದಂದು ಆಟವಾಡಲು ಮನೆಯಿಂದ ಹೋದವನು ರಾತ್ರಿಯಾದ್ದರು ಕೂಡ ಮರಳಿ ಮನೆಗೆ ಬಾರದ ಕಾರಣ ನಮ್ಮೂರಿನಲ್ಲಿ ಮತ್ತು ಅಕ್ಕ ಪಕ್ಕದ ಹಳ್ಳಿಗಳಲ್ಲಿ ಹುಡುಕಾಡಿದ್ದರು ಸಿಕ್ಕಿರುವದಿಲ್ಲ. ದಿನಾಂಕಃ 17-12-2012 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ನಮ್ಮೂರಿನಲ್ಲಿ ಜನರು ಮುಸ್ಲಿಂ ಸಮಾಜದ ಕಬರಸ್ತಾನದ ಹತ್ತಿರ ಹೊಲಸು ವಾಸನೆ ಬರುತ್ತಿದೆ ಅಂತಾ ಮಾತಾನಾಡುವದನ್ನು ಕೇಳಿ ನಾನು ಇತರರೊಂದಿಗೆ ಹೋಗಿ ನೋಡಲಾಗಿ ತನ್ನ ಮಗನ ತಲೆ ಮತ್ತು ಶರೀರ ಬೇರೆ ಬೇರೆಯಾಗಿ ಬಿದ್ದಿದ್ದು ಹಗ್ಗದಿಂದ ಕಾಲುಗಳನ್ನು ಕಟ್ಟಿ ಅದೆ ಹಗ್ಗದಿಂದ ಗಿಡದ ಬಡ್ಡಿಗೆ ಕಟ್ಟಿದ್ದು ಶವ ಪೂರ್ತಿ ಕೊಳೆತು ಹೋಗಿದ್ದು ತಾನು ತನ್ನ ಮಗ ಧರಿಸಿದ ಬಟ್ಟೆಯಿಂದ ಹೆಣವನ್ನು ಗುರುತ್ತಿಸಿರುತ್ತೆನೆ. ತನ್ನ ಮಗ ಕೊಲೆಯಾಗಲು ಕಾರಣವೆನೆಂದರೆ, ತನ್ನ ಸಣ್ಣ ಮಾವನ ಮಗನಾದ ಬಸಪ್ಪ ತಂದೆ ಹಾಶಪ್ಪ ದೊಡ್ಡಮನಿ ಇತನು ನಮಗೆ ಉಪಜೀವನಕ್ಕಾಗಿ ಒಂದು ಎಕರೆ ಹೊಲ ಮಾತ್ರ ಕೊಟ್ಟಿದ್ದು ಸದರಿ ಹೊಲ ನಮ್ಮ ಹೆಸರಿಗೆ ಮಾಡು ಅಂತಾ ಕಳೆದ ವರ್ಷ ಕೇಳಿದಾಗ ಬಸಪ್ಪ ಹಾಗೂ ಇತನ ಹೆಂಡತಿ ದೊಡ್ಡಮ್ಮ ಮತ್ತು ಮಗನಾದ ತೋಟಪ್ಪ ಇವರೆಲ್ಲರೂ ಜಗಳ ತೆಗೆದು ಹೊಲ ನಿಮ್ಮ ಹೆಸರಿಗೆ ಮಾಡುವುದಿಲ್ಲಾ ಇರುವ ನಿನ್ನ ಒಬ್ಬ ಮಗ ಸಂತೋಷಕುಮಾರನಿಗೆ ಖಲ್ಲಾಸ ಮಾಡಿ ನಿಮ್ಮ ವಂಶ ಇರದ ಹಾಗೆ ಮಾಡುತ್ತೆವೆ ಅಂತಾ ಅಂದಿದ್ದು ಇದೇ ವೈಮನಸ್ಸಿನಿಂದ ದಿನಾಂಕಃ09-12-2012 ರಂದು ಸಾಯಂಕಾಲ 4-00 ಗಂಟೆಯ ವೇಳೆಯಲ್ಲಿ ಆಟವಾಡಲು ಹೋದ ನನ್ನ ಮಗ ಸಂತೋಷಕುಮಾರನನ್ನು ಎತ್ತಿಕೊಂಡು ಹೋಗಿ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:92/2012 ಕಲಂ. 302, 201, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.