Police Bhavan Kalaburagi

Police Bhavan Kalaburagi

Wednesday, July 14, 2021

BIDAR DISTRICT DAILY CRIME UPDATE 14-07-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 14-07-2021

 

ನೂತನ ನಗರ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ನಂ. 12/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ನಾಗಪ್ಪಾ ತಂದೆ ಯಲ್ಲಪ್ಪಾ ವಯ: 50 ವರ್ಷ, ಜಾತಿ: ಭೋವಿ, ಸಾ: ಅದನೂರ (ತೆಲಂಗಾಣಾ) ರವರ ಮಗಳಾದ ನಾಗಮ್ಮ ಇಕೆಯ ಗಂಡ 20 ದಿವಸಗಳ ಹಿಂದೆ ಸಾವನಪ್ಪಿದ್ದು, ಹೀಗಿರುವಾಗ ದಿನಾಂಕ 12-07-2021 ರಂದು ಮಗಳಾದ ನಾಗಮ್ಮ ಇವಳು ತನ್ನ ಗಂಡ ಮ್ರತಪಟ್ಟಿರುವುದರಿಂದ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ 3 ಜನ ಮಕ್ಕಳನ್ನು ಹೇಗೆ ಮಾಡಬೇಕೆಂದು ಚಿಂತೆ ಮಾಡಿ ಮನೆಯಲ್ಲಿರುವ ತಗಡಿನ ಕೆಳಗಡೆ ಇರುವ ದಂಟಕ್ಕೆ ಓಡ್ನಿಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮ್ರತಪಟ್ಟಿರುತ್ತಾಳೆ, ತನ್ನ ಮಗಳ ಸಾವಿನಲ್ಲಿ ಯಾರ ಮೇಲೆ ಯಾವ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 76/2021, ಕಲಂ. ಮಹಿಳೆ ಕಾಣೆ :-

ಫಿರ್ಯಾದಿ ಲಿಲತಾ ಗಂಡ ದಯಾನಂದ ಮೇತ್ರೆ ಸಾ: ಕಂಗಟಿ, ತಾ: & ಜಿ: ಬೀದರ ರವರ ಮಗಳಾದ ಆಶಾ ಇವಳು ಬಿಕಾಂ 2ನೇ ಷರ್ಷದಲ್ಲಿ ಸಿದ್ದಾರ್ಥ ಕಾಲೇಜದಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವಾಗ ಕೋರೋನಾ ಪ್ರಯುಕ್ತ ಲಾಕ್ ಡೌನ್ ಇದ್ದರಿಂದ ಶಾಲಾ ಕಾಲೇಜುಗಳು ಬಂದ ಇರುವ ಕಾರಣ ಮಗಳು ಆಶಾ ಇವಳು ಕಾಲೇಜಗೆ ಹೋಗದೇ ಗ್ರಾಮದಲ್ಲಿಯೇ ಇದ್ದಳು, ಆಶಾ ಇವಳಿಗೆ ಠೇಚಿ ಹತ್ತಿ ಉಗುರು ಕೆತ್ತಿರುತ್ತದೆ ಅವಳಿಗೆ ಆಸ್ಪತ್ರೆಗೆ ಚಿಕಿತ್ಸೆ ಮಾಡಿಸಿದ್ದು ಇರುತ್ತದೆ, ಹೀಗಿರುವಲ್ಲಿ ಫಿರ್ಯಾದಿಯು ಆಶಾ ಕಾರ್ಯಕರ್ತೆ ಇರುವುದರಿಂದ ದಿನಾಂಕ 09-07-2021 ರಂದು 1000 ಗಂಟೆ ಸುಮಾರಿಗೆ ಆಶಾ ಇವಳ ಕಾಲಿಗೆ ತೋರಿಸಲು  ಸರ್ಕಾರಿ ಆಸ್ಪತ್ರೆ ಬಿದರನಲ್ಲಿ ಆಶಾ ಇವಳಿಗೆ ತೋರಿಸುವಾಗ ಗ್ರಾಮದ ವಿಜಯಲಕ್ಷ್ಮಿ ಗಂಡ ಶಿವಕುಮಾರ ರವರು ಗರ್ಭೀಣಿಯಾಗಿರುವುದರಿಂದ ಅವರನ್ನು  ಚೆಕ್ ಅಪ್ ಮಾಡಿಸಲು ಅವರ ಗಂಡ ಬೀದರ ಜಿಲ್ಲಾ ಆಸ್ಪತ್ರೆಗೆ ತಂದಾಗ ಮಗಳು ಆಶಾ ಇವಳನ್ನು ತಮ್ಮೂರ ಆಟೋಗಳು ಹೋಗುವ ಸ್ಥಳ ಕಾವೇರಿ ಬೇಕರಿ ಹತ್ತಿರ ಬಿಟ್ಟು ಊರಿಗೆ ಹೋಗಲು ತಿಳಿಸಿ ಫಿರ್ಯಾದಿಯು ಪುನಃ ಆಸ್ಪತ್ರೆಗೆ ಹೋಗಿ ವಿಜಯಲಕ್ಷ್ಮಿ ರವರಿಗೆ ಚೆಕ್ ಮಾಡಿಸಿ ಫಿರ್ಯಾದಿಯು 1700 ಗಂಟೆ ಸುಮಾರಿಗೆ ಮನೆಗೆ ಹೋಗಿ ನೋಡಲು ಮನೆಯಲ್ಲಿ ಮಗಳು ಇರಲಿಲ್ಲ, ಆಗ ಮನೆಯಲ್ಲಿದ್ದ ಮಗ ಜೇಮ್ಸ ಇತನಿಗೆ ವಿಚಾರಿಸಲು ಆಶಾ ಇಕೆಯು ಮನೆಗೆ ಬಂದಿರುವುದಿಲ್ಲ ಅಂತಾ ತಿಳಿಸಿದ್ದರಿಂದ ಫಿರ್ಯಾದಿಯು ಎಲ್ಲಾ ಸಂಬಂಧಿಕರಿಗೆ ಕರೆ ಮಾಡಿ ಮಗಳು ಆಶಾ ಇವಳ ಬಗ್ಗೆ ವಿಚಾರಿಸಲು ಅವಳ ಬಗ್ಗೆ ಪತ್ತೆಯಾಗಿಲ್ಲ, ಕಾಣೆಯಾದ ಮಗಳ ವಿವರ :- 1) ಹೆಸರು: ಆಶಾ  ಮೇತ್ರೆ ತಂದೆ ದಯಾನಂದ ಮೇತ್ರೆ, ವಯ: 21 ವರ್ಷ, 2) ಎತ್ತರ: 5’ 2’’, 3) ಚಹರೆ ಪಟ್ಟಿ: ದುಂಡು ಮುಖ, ಗೋಧಿ ಮೈಬಣ್ಣ, ಅಗಲ ಹಣೆ, ಎಡಗಡೆ ಗಲ್ಲದ ಮೇಲೆ ಒಂದು ಚಿಕ್ಕ ಕಪ್ಪು ಚುಕ್ಕೆ ಇರುತ್ತದೆ, 4) ಧರಿಸಿದ ಬಟ್ಟೆಗಳು: ಬಿಳಿ ಲೆಗಿನ್ಸ್ & ಕಪ್ಪು ಬಣ್ಣದ ಟಾಪ್‌, ನೀಲಿ ಬಣ್ಣದ ಟಾಪ್, ಕಪ್ಪು ಬಣ್ಣದ ಕಾಪ್ಸ ಧರಿಸಿದ್ದು ಹಾಗೂ 5) ಮಾತನಾಡುವ ಭಾಷೆ: ಕನ್ನಡ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 80/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 13-07-2021 ರಂದು ಗೋಕುಳ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣವನ್ನು ಪಡೆದುಕೊಂಡು ಜನರಿಗೆ ಮಟಕಾ ನಂಬರ ಚೀಟಿ ಬರೆದು ಕೊಡುತ್ತಿದ್ದಾನೆಂದು ವಸೀಮ ಪಟೇಲ್ ಪಿ.ಎಸ. (ಕಾಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಗೋಕುಳ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ನವನಾಥ ತಂದೆ ವೈಜಿನಾಥ ಮಾರತಾಂಡ ವಯ: 28 ವರ್ಷ, ಜಾತಿ: ಎಸ.ಟಿ ಗೊಂಡ, ಸಾ: ಗೋಕುಳ ಇತನು ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಜೋರಾಗಿ ಕೂಗಿ ಕೂಗಿ ಜನರಿಗೆ ಕರೆದು ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುವುದನ್ನು ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ತನ ಅಂಗ ಜಡ್ತಿ ಮಾಡಲು ಆತನ ಹತ್ತಿರ 1) ನಗದು ಹಣ 1,420/- ರೂಪಾಯಿ, 2) 3 ಮಟಕಾ ನಂಬರ ಬರೆದ ಚೀಟಿಗಳು ಹಾಗೂ 3) ಒಂದು ಬಾಲ ಪೆನ್ನು ಸಿಕ್ಕಿರುತ್ತದೆ, ನಂತರ ಸದರಿಯವುಗಳನ್ನು ತಾಬೆಗೆ ತೆಗೆದುಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 63/2021, ಕಲಂ. 457, 380 ಐಪಿಸಿ :-

ದಿನಾಂಕ 13-07-2021 ರಂದು 0100 ಗಂಟೆಯಿಂದ 0300 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಚಂದ್ರಕಾಂತ ತಂದೆ ಅಜರ್Ä ಮೇಲಮನಿ ವಯ: 37 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ರೂಮ್ನನಗೂಡ ಗ್ರಾಮ, ತಾ: ಚಿಂಚೋಳಿ, ಸದ್ಯ: ಮನ್ನಾಎಖೇಳ್ಳಿ ರವರ ಮನೆಯ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಬ್ಯಾಗಿನಲ್ಲಿಟ್ಟಿದ್ದ 1) ಬಂಗಾರದ ಅಷ್ಠಪೈಲಿ ಗುಂಡು ಅರ್ಧ ತೊಲೆ .ಕಿ 20,000/- ರೂ., 2) ಬಂಗಾರಾದ ತಾಳಿ 6 ಗ್ರಾಮ .ಕಿ 25,000/- ರೂ., 3) ಬಂಗಾರದ ತಾಳಿ ಗುಂಡು 2 ಗ್ರಾಮ .ಕಿ 3000/- ರೂ. ಹೀಗೆ ಒಟ್ಟು 48,000/- ರೂ. ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 64/2021, ಕಲಂ. 457, 380 ಐಪಿಸಿ :-

ದಿನಾಂಕ 13-07-2021 ರಂದು 0100 ಗಂಟೆಯಿಂದ 0200 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಮಹ್ಮದ್ ಇಬ್ರಾಹಿಂ ತಂದೆ ಮಹ್ಮದ್ ಸುಲ್ತಾನ ಅಹ್ಮದ್ ಜಮಾದಾರ ವಯ: 49 ವರ್ಷ, ಜಾತಿ: ಮುಸ್ಲಿಂ,  ಸಾ: ಮನ್ನಾಏಖೇಳ್ಳಿ ಗ್ರಾಮ, ತಾ: ಚಿಟಗುಪ್ಪಾ, ಜಿ: ಬೀದರ ರವರ ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಫಿರ್ಯಾದಿಯ ಶರ್ಟಿನಲ್ಲಿದ್ದ 15,000/- ರೂ. ನಗದು ಹಣ ಮತ್ತು ಮನೆಯಲ್ಲಿ ಬ್ಯಾಗಿನಲ್ಲಿದ್ದ ಒಂದು ಬಂಗಾರದ ಲ್ಯಾಕೇಟ್ ಅ.ಕಿ 15,000/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರು ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 65/2021, ಕಲಂ. 457, 380 ಐಪಿಸಿ :-

ದಿನಾಂಕ 12-07-2021 ರಂದು 2300 ಗಂಟೆಯಿಂದ ದಿನಾಂಕ 13-07-2021 ರಂದು 0300 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಗಣೇಶ ತಂದೆ ಮಾಣಿಕ ವಜನದಾರ ವಯ: 26 ವರ್ಷ, ಜಾತಿ: ಹೆಳವ, ಸಾ: ಮನ್ನಾಏಖೇಳ್ಳಿ, ತಾ: ಚಿಟಗುಪ್ಪಾ, ಜಿ: ಬೀದರ ರವರ ಮನೆಯ ಬಾಗಿಲು ಮುರಿದು ಮನೆಯಲ್ಲಿ ಪ್ರವೇಸ ಮಾಡಿ ಮನೆಯಲ್ಲಿನ ಸಂದೂಕನಲ್ಲಿದ್ದ 1) 1 ತೋಲಿ ಬಂಗಾರದ ಗುಂಡಿನ ಸರ .ಕಿ 30,000/- ರೂ., 2) 1/2 ತೋಲಿ ಬಂಗಾರದ ಗುಂಡಿನ ಸರ .ಕಿ 15,000/- ರೂ., 3) 6 ಗ್ರಾಂ ಬಂಗಾರದ ಸೇವನ್ ಪೀಸ್ .ಕಿ 20,000/- ರೂ., 4) 6 ಗ್ರಾಂ ಬಂಗಾರದ ಅಷ್ಟಮೀನ .ಕಿ 20,000/- ರೂ., 5) 5 ತೋಲಿ ಬೆಳ್ಳಿ ಉಂಗುರು .ಕಿ 2,500/- ರೂ., 6) 7 ತೋಲಿ ಬೆಳ್ಳಿ ಖಡ್ಗ .ಕಿ 3000/- ರೂ., 7) 30 ತೋಲಿ ಬೆಳ್ಳಿ ಚೈನ್ .ಕಿ 15,000/- ರೂ. ಮತ್ತು ನಗದು ಹಣ 1,95,000/- ರೂ. ಹೀಗೆ ಒಟ್ಟು 3,00,500/- ರೂ. ಬೆಲೆ ಬಾಳುವ ನಗದು ಹಣ ಹಾಗೂ ಬಂಗಾರ-ಬೆಳ್ಳಿ ಆಭರಣಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 98/2021, ಕಲಂ. 457, 380 ಐಪಿಸಿ :-

ದಿನಾಂಕ 12-07-2021 ರಂದು 2200 ಗಂಟೆಯಿಂದ ದಿನಾಂಕ 13-07-2021 ರಂದು 0800 ಗಂಟೆಯ ಅವಧಿಯಲ್ಲಿ ಹಳೆ ಆದರ್ಶ ಕಾಲೋನಿಯಲ್ಲಿರುವ ಫಿರ್ಯಾದಿ ತಾನಾಜಿ ತಂದೆ ರಾಜೇಂದ್ರ ಪಾಟೀಲ ವಯ: 36 ವರ್ಷ, ಜಾತಿ: ಮರಾಠಾ, ಸಾ: ಕೊರೆಕಲ ಗ್ರಾಮ, ತಾ: ಕಮಲನಗರ, ಸದ್ಯ: ಹಳೆ ಆದರ್ಶ ಕಾಲೋನಿ ಬೀದರ ರವರು ವಾಸವಿದ್ದ ಬಾಡಿಗೆ ಮನೆಯ ಬೀಗವನ್ನು ಯಾರೋ ಕಳ್ಳರು ಮುದಿರು ಒಳಗೆ ಪ್ರವೇಶಿಸಿ ಮನೆಯ ಅಲಮಾರಾದಲ್ಲಿರುವ 1) ನಗದು ಹಣ 85,000/- ರೂ., 2) 10 ಗ್ರಾಮ ಬಂಗಾರದ ಚೈನ, 2) ಬಂಗಾರದ ಕಡಗಾ 07 ಗ್ರಾಮ, 3) ಕೀವಿಯ ಝುಮಕಿ 05 ಗ್ರಾಮ, 4) ಇತರೆ ಬಂಗಾರದ ಸಣ್ಣಪುಟ್ಟ ವಸ್ತುಗಳು 03 ಗ್ರಾಮ, ಹೀಗೆ ಒಟ್ಟು 25 ಗ್ರಾಮ ಬಂಗಾರ ಅ.ಕಿ 1,25,000/- ರೂ. ಮತ್ತು 5) 150 ಗ್ರಾಮ ಬೆಳ್ಳಿಯ ಪುಜಾ ವಸ್ತುಗಳು .ಕಿ 10,000/-ರೂ. ಹೀಗೆ ಒಟ್ಟು 2,20,000=00 ಬೇಲೆ ಬಾಳುವ ನಗದು, ಬಂಗಾರದ, ಬೆಳ್ಳಿಯ ಆಭರಣಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.