Police Bhavan Kalaburagi

Police Bhavan Kalaburagi

Friday, October 9, 2020

BIDAR DISTRICT DAILY CRIME UPDATE 09-10-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 09-10-2020

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 65/2020 ಕಲಂ ಕಲಂ 287, 304 () .ಪಿ.ಸಿ . :-

ದಿನಾಂಕ 08/10/2020 ರಂದು ಅಂಕುಶ ತಂದೆ ತುಳಸಿರಾಮ ಜಾಧವ ಸಾ|| ಭಜರಂಗ ತಾಂಡಾ ಚಿಕ್ಲಿ (ಜೆ) ಗ್ರಾಮ ತಾ|| ಔರಾದ (ಬಾ) ರವರು ನೀಡಿದ ಮೌಖಿಕ ಹೇಳಿಕೆ ಸಾರಾಂಶವೆನೆಂದರೆ ಫಿರ್ಯಾದಿಯು 2 ವರ್ಷದಿಂದ ಬಸವರಾಜ ತಂದೆ ಶರಣಪ್ಪಾ ಕೋರಿ ಬೀದರ ರವರ ಕಂಗಟಿ ಗ್ರಾಮ ಶಿವಾರದಲ್ಲಿರುವ ಹೊಲದಲ್ಲಿ ಕೂಲಿ ಕೆಲಸಕ್ಕಾಗಿ ನೌಕರಿ ಉಳಿದು ಅಲ್ಲಿಯೆ ಹೆಂಡತಿ ಮಕ್ಕಳೊಂದಿಗೆ ಮನೆ ಮಾಡಿಕೊಂಡು ವಾಸವಿದ್ದು  ದಿನಾಂಕ 08/10/2020 ರಂದು ಮದ್ಯಾಹ್ನ 3:00 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಹೆಂಡತಿ ಸಾಮಕಾ ಜಾಧವ  ಹೊಲದಲ್ಲಿನ ಮಾವಿನ ಗಿಡದಲ್ಲಿನ ಹುಲ್ಲಿಗೆ ಟ್ರಾಕ್ಟರ್ ಇಂಜಿನ ನಂ ಕೆಎ-38/ಪಿ-3693  ನೇದ್ದಕ್ಕೆ ಔಷಧಿ ಹೊಡೆಯುವ ಟ್ಯಾಂಕ ಕೂಡಿಸಿ ಹುಲ್ಲಿಗೆ ಔಷಧಿ ಹೊಡೆಯುತ್ತಿರುವಾಗ ಇವರ ಮಗ ಬಾದಲ್ ಟ್ರಾಕ್ಟರ್ ಚಾಲಕ ಶಂಕರ ತಂದೆ ಪೀರಪ್ಪಾ ಮೇತ್ರೆ  ಮೋರ್ಗಿ ಗ್ರಾಮ ಈತನ ಪಕ್ಕದಲ್ಲಿ ಕುಳಿತ್ತಿದ್ದು, ಟ್ರಾಕ್ಟರ್ ಚಾಲಕ ಶಂಕರ ಈತನು  ಟ್ರಾಕ್ಟರನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ  ಅವನ ಪಕ್ಕದಲ್ಲಿ ಕುಳಿತ್ತಿದ್ದ ಬಾದಲ್ ಈತನು ಟ್ರಾಕ್ಟರ ಮೇಲಿಂದ ಆಯತಪ್ಪಿ ಹಿಂದುಗಡೆ ಟ್ರಾಕ್ಟರಕ್ಕೆ ಕೂಡಿಸಿದ ಔಷಧಿ ಸಿಂಪಡಿಸುವ ಯಂತ್ರದಲ್ಲಿ ಬಿದ್ದಾಗ ಭಾರಿ ರಕ್ತಗಾಯವಾಗಿ ಮೊಳಕಾಲು ಡಬ್ಬಿಯ ಕೆಳಗಡೆ ಕಟ್ಟಾಗಿದ್ದು, ಬಲ ಕಾಲು ಮತ್ತು ಬಲಕೈ ಗೆ ಭಾರಿ ರಕ್ತಗಾಯ ಗುಪ್ತಗಾಯಗಳಾಗಿದ್ದು, ಚಿಕಿತ್ಸೆ ಕಾಲಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 129/2020 ಕಲಂ 295 ಐಪಿಸಿ :-

ದಿನಾಂಕ 08-10-2020 ರಂದು 21:00 ಗಂಟೆಗೆ ಶ್ರೀ ಮರೇಪ್ಪಾ ತಂದೆ ಬಸವಂತಪ್ಪಾ ಪೊಲೀಸ್ ಪಾಟೀಲ್ ವಯಸ್ಸು//40 ವರ್ಷ,  ಸಾ//ತ್ರೀಪೂರಾಂತ ಬಸವಕಲ್ಯಾಣ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ, ತ್ರಿಪೂರಾಂತ ಓಣಿಯಲ್ಲಿರುವ ಜೈ ಹನುಮಾನ ಮಂದಿರ ಟ್ರಸ್ಟ್ ನೇದ್ದರ ಅಧ್ಯಕ್ಷನಾಗಿ ಸುಮಾರು 9 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಹನುಮಾನ ಮಂದಿರ ಆವರಣದಲ್ಲಿ ಗಣೇಶ ವಿಗೃಹ, ನಾಗೇಶ್ವರ ವಿಗೃಹ, ಮಹಾದೇವ ಲಿಂಗ ಹಾಗು ಇತರ ದೇವರ ವಿಗ್ರಹಗಳನ್ನು ಸಾರ್ವಜನಿಕರ ಪುಜೆಗಾಗಿ ಇಡಲಾಗಿದೆ.    ದಿನಾಂಕ 08/10/2020 ರಂದು ಮುಂಜಾನೆ 07:00 ಗಂಟೆಯ ಸುಮಾರಿಗೆ   ಮನೆಯಲ್ಲಿ ಇರುವಾಗ ಹನುಮಾನ ಮಂದಿರ ಪೂಜಾರಿಯಾದ ಶ್ರೀ ಗಂಗಾಧರ ಸ್ವಾಮಿ ರವರು ನನ್ನ ಹತ್ತಿರ ಬಂದು ಯಾರೋ ಕಿಡಿಗೆಡಿಗಳು ದಿನಾಂಕ 07, 08/10/2020 ರಾತ್ರಿ ವೇಳೆಯಲ್ಲಿ ಹನುಮಾನ ಮಂದಿರ ಆವರಣದಲ್ಲಿರುವ ಗಣೇಶ ವಿಗೃಹ ಮತ್ತು ನಾಗೇಶ್ವರ ವಿಗ್ರಹ ಕೂಡಿಸಿದ ಸ್ಥಳದಿಂದ ಕೆಡವಿರುತ್ತಾರೆ. ಎಂದು ತಿಳಿಸಿದ ತಕ್ಷಣ ಫಿರ್ಯಾದಿ ಮತ್ತು ಗುಂಡಪ್ಪಾ ಬಿರಾದಾರ, ವಿಪಿನ ಶ್ರೀವಾಸ್ತವ, ಸಚೀನ ಶ್ರೀವಾಸ್ತವ, ಬಸವರಾಜ ಮಾಲಿ ಪಾಟೀಲ್, ಮಲ್ಲಿಕಾರ್ಜುನ ಚನ್ನಮಲ್ಲೆ ಮತ್ತು ಅಂಬರೀಶ ಸ್ವಾಮಿ ಎಲ್ಲರೂ ಕೂಡಿಕೊಂಡು 07:30 ಗಂಟೆಗೆ ಹನುಮಾನ ಮಂದಿರ ಹತ್ತಿರ ಹೋಗಿ ನೋಡಲು ಪೂಜಾರಿ ತಿಳಿಸಿದಂತೆ ಗಣೇಶ ವಿಗ್ರಹ ಮತ್ತು ನಾಗೇಶ್ವರ ವಿಗ್ರಹ ಕೂಡಿಸಿದ ಸ್ಥಳದಿಂದ ಅಲ್ಲೇ ಕೆಡವಿದ್ದು ಇರುತ್ತದೆ. ಯಾವುದೇ ಮೂರ್ತಿಗೆ ಹಾನಿಯಾಗಿರುವುದಿಲ್ಲ.    ಕಾರಣ ದಿನಾಂಕ 07/10/2020 ರಂದು ರಾತ್ರಿ 11:30 ಗಂಟೆಯಿಂದ ದಿನಾಂಕ 08/10/2020 ರಂದು 04:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಿಡಿಗೆಡಿಗಳು ಹನುಮಾನ ಮಂದಿರ ಆವರಣದಲ್ಲಿರುವ ಗಣೇಶ ವಿಗೃಹ ಮತ್ತು ನಾಗೇಶ್ವರ ವಿಗೃಹ ಕೂಡಿಸಿದ ಸ್ಥಳದಿಂದ ಕೆಡವಿ ಧಾರ್ಮಿಕ ಭಾವನೆಗೆ ಧಕ್ಕೆವುಂಟು ಮಾಡಿದ್ದರಿಂದ ಅಪರಿಚಿತ ಕಿಡಿಗೆಡಿಗಳ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

                               

ಮನ್ನಾಏಖೆಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 86/2020 ಕಲಂ 15(ಎ), 32(3) ಕೆ.ಇ. ಕಾಯ್ದೆ ;-

ದಿನಾಂಕ 08-10-2020 ರಂದು 1500 ಗಂಟೆಗೆ  ಖಚಿತ ಬಾತ್ಮಿ ಬಂದಿದ್ದೆನೆಂದರೆ, ನಿರ್ಣಾ ಗ್ರಾಮದ ರೆಡ್ಡಿ ಧಾಬಾದ ಮುಂದೆ ಖುಲ್ಲಾ ಜಾಗೆಯಲ್ಲಿ ರಾಜರೆಡ್ಡಿ ತಂದೆ ಮಲ್ಲರೆಡ್ಡಿ ಲಚ್ಚಣಗಾರ ಸಾ: ನಿರ್ಣಾ ಇವನು ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುವು ಮಾಡಿಕೊಡುತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಂದಿನಿಂದ ಸ್ವಲ್ಪ ದೂರದಲ್ಲಿ ಉಡಬಾಳ ರೋಡ ಕಡೆಗೆ ಹೋಗಿ ಮರೆಯಾಗಿ ಜೀಪ್ ನಿಲ್ಲಿಸಿ ರೆಡ್ಡಿ ಧಾಬಾದ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ರೆಡ್ಡಿಧಾಬಾದ ಎದುರುಗಡೆ ಖುಲ್ಲಾ ಸ್ಥಳದಲ್ಲಿ ನಿಂತುಕೊಂಡು ಮದ್ಯದ ಬಾಟಲಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಡುವುದನ್ನು ಕಂಡು ಅವನ ಮೇಲೆ   ದಾಳಿ ಮಾಡಿ ಅವನಿಗೆ ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರಾಜರೆಡ್ಡಿ ತಂದೆ ಮಲ್ಲರೆಡ್ಡಿ ಲಚ್ಚಣಗಾರ ವಯ: 38 ವರ್ಷ ಜಾತಿ: ರೆಡ್ಡಿ ಉ: ಧಾಬಾ ಮ್ಯಾನೇಜರ ಕೆಲಸ ಸಾ: ನಿರ್ಣಾ ಅಂತ ತಿಳಿಸಿದನು. ಅವನ ಹತ್ತಿರ ಇದ್ದ ಮದ್ಯದ ಬಾಟಲಗಳನ್ನು ಪರಿಶೀಲಿಸಿ ನೋಡಲು ಅವು 180 ಎಂ.ಎಲ್ ಉಳ್ಳ 4 ಇಂಪಿರಿಯಲ್ ಬ್ಲೂ  ಬಾಟಲಗಳು ಇದ್ದು ಅದರಲ್ಲಿ ಒಂದು ಬಾಟಲದಲ್ಲಿ ಅಂದಾಜು 90 ಎಮ್.ಎಲ್ ದಷ್ಟು ಮದ್ಯ ಖಾಲಿ ಆಗಿದ್ದು ಇರುತ್ತದೆ. ಇವುಗಳ ಒಟ್ಟು ಅಂದಾಜು ಕಿಮ್ಮತ್ತು 792/-ರೂಪಾಯಿ ನೆದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 85/2020 ಕಲಂ  ಕಲಂ 4,5,9,11 ಕರ್ನಾಟಕ ಗೋವಧೆ ಪ್ರತಿ ಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ  1964 ಮತ್ತು 11(1)(ಡಿ) ದಿ ಪ್ರೀವೇನ್ಸ್ ಆಫ್ ಕ್ರೋವೆಲಿಟಿ ಟೋ ಎನಿಮಲ್ಸ್ ಎಕ್ಟ್ 1960 :-

 

ದಿನಾಂಕ 08/10/2020 ರಂದು 11.30 ಗಂಟೆಗೆ ಪಿ.ಐ. ರವರು ಕಛೇರಿಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದೆನೆಂದರೆ ವನಮಾರಪಳ್ಳಿ ಕಡೆಯಿಂದ ಗೂಡ್ಸ ವಾಹನದಲ್ಲಿ ಎಮ್ಮೆಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದಾರೆ ಅಂತಾ  ಭಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಎ.ಪಿ.ಎಂ.ಸಿ ಕ್ರಾಸ ಹತ್ತಿರ ಜೀಪ ಮರೆಯಾಗಿ ನಿಲ್ಲಿಸಿ  ಎಲ್ಲರು ಎ.ಪಿ.ಎಂ.ಸಿ ಹತ್ತಿರ ನಿಂತಾಗ ವನಮಾರಪಳ್ಳಿ ರೋಡಿನಿಂದ  ಒಂದು ಗೂಡ್ಸ ವಾಹನ ಬರುತ್ತಿದ್ದು  ನೋಡಿ 12:15 ಗಂಟೆಗೆ ಪಂಚರ ಸಮಕ್ಷಮ ಪೊಲೀಸರು ಕೈ ಮಾಡಿ ನಿಲ್ಲಿಸಿ ಪರಿಶೀಲಿಸಿದ್ದಾಗ ಅದರಲ್ಲಿ 4 ಎಮ್ಮೆಗಳು ಇದ್ದು ಅವುಗಳ ಕಾಲು ಕಟ್ಟಿ ಒಟ್ಟಿಗೆ ಎಮ್ಮೆಗಳಿಗೆ ತೊಂದರೆಯಾಗುವ ರೀತಿ ಕುಡಿಸಿದ್ದು  ಇರುತ್ತದೆ ಗೂಡ್ಸ್ ವಾಹನದಲ್ಲಿದ್ದ  ಕುಳಿತವರ ಹೆಸರು ವಿಚಾರಿಸಲು 1] ಮಹೇಬುಬ ತಂದೆ ರಸೀದ ಖುರೋಷಿ ವಯ 28 ಜಾ ಮುಸ್ಲಿಮ ಉ ಧನಗಳ ವ್ಯಾಪಾರ ಸಾ ಕಂದಾರ ತಾ, ಕಂದಾರ ಜಿ ನಾಂದೇಡ,ಅಂತಾ 2] ಗೌಸ ತಂದೆ ಅಕ್ಬರ ಖುರೋಷಿ ವಯ 24 ಜಾ ಮುಸ್ಲಿಂ ಉ ವ್ಯಾಪಾರ ಸಾ, ಕಂದಾರ  ತಾ ನಾಂದೇಡ ಅಂತಾ ತಿಳಿಸಿದನು ಗೋಡ್ಸ್ ವಾಹನ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಗೋವಿಂದ ತಂದೆ ಬಾಬು ಕಾಗನೆ ವಯ 25 ಜಾ: ವಂಜಾರೆ  ಗೂಡ್ಸ್ ವಾಹನದಲ್ಲಿ ಕುಳಿತವರು ಇಬ್ಬರು ತಮ್ಮ ತಲಾ ಎರಡು ಎಮ್ಮೆಗಳು ಇದ್ದು ಅವುಗಳನ್ನು ಗೂಡ್ಸ್ ವಾಹನದಲ್ಲಿ ಹಾಕಿಕೊಂಡು ಜಹೀರಾಬಾದ ಕಸಾಯಿ ಕಾರ್ಖನೆಗೆ ಸಾಗಿಸುತ್ತಿರುವುದಾಗಿ ತಿಳಿಸಿದರು.  ಒಟ್ಟು 4 ಎಮ್ಮೆಗಳು ಒಂದು ಗೂಡ್ಸ್ ವಾಹನದಲ್ಲಿ ಅವುಗಳ ಕಾಲು ಕಟ್ಟಿ ಹಿಂಸೆ ರೂಪದಲ್ಲಿ ಕೆಳಗೆ ಅಲುಗಾಡದಂತೆ ಎಮ್ಮೆಗಳಿಗೆ ಕೂಡಿಸಿದ್ದು    ಒಂದೂಂದು ಕೆಳಗೆ ಇಳಿಸಿ ನೋಡಲು 1} ಕಪ್ಪು ಬಣ್ಣದ ಎಮ್ಮೆ ಇದ್ದು ಹಣೆಯಲ್ಲಿ ಬಿಳಿ ಕೋದಲು ಇದ್ದು ಅದರ ಅಂದಾಜ ಕಿಮ್ಮತು 25,000/-   ಇನ್ನೋಂದು  ಕಪ್ಪು ಬಣ್ಣದ ಎಮ್ಮೆ ಇದ್ದು ಅದರ ಅ,ಕಿ 40,000/- 3]ಒಂದು ಕಪ್ಪು ಬಣ್ಣದ ಎಮ್ಮೆ ಇದ್ದು ಹಣೆಯಲ್ಲಿ ಬಿಳಿ ಕೂದಲು ಇರುತ್ತದೆ ಅ,ಕಿ 32,000/-4) ಒಂದು ಕಪ್ಪು ಬಣ್ಣದ ಎಮ್ಮೆ ಇದ್ದು ಅದರ ಅಂದಾಜ ಕಿಮ್ಮತ್ತು 20,000/- ಗೂಡ್ಸ್ ವಾಹನ ನೋಡಲು ಅಶೋಕ ಲಿಲ್ಯಾಂಡ್ ನಂಬರ ಎಂಎಚ್24,ಎಯು.2692 ಬಿಳಿ ಬಣ್ಣದು ಇದ್ದು ಅದರ ಅಂ.ಕಿ. 1,50,000/- ರೂ. ಒಟ್ಟು ನಾಲ್ಕು ಎಮ್ಮೆಗಳು ಒಂದು ಗೂಡ್ಸ್ ವಾಹನ ಸೆರಿ ಒಟ್ಟು 2,67,000/- ಬೆಲೆವುಳ್ಳವು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.