ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-01-2021
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 05/2021, ಕಲಂ. 379 ಐಪಿಸಿ :-
ದಿನಾಂಕ 24-12-2020 ರಂದು 2230 ಗಂಟೆ ಸುಮಾರಿಗೆ ಫಿರ್ಯಾದಿ ವಿಶಾಲ ತಂದೆ ರಾಜೇಂದ್ರ ಚಿಂತಲಘಾಟ ವಯ: 25 ವರ್ಷ, ಜಾತಿ: ಕೊಮಟಿ, ಸಾ: ಮನೆ ನಂ. 2-4-157 ಬಾವರ್ಚಿ ಗಲ್ಲಿ ಜಾಮಿಯಾ ಮಜೀದ ಹತ್ತಿರ ಬೀದರ ರವರು ತನ್ನ ಹೊಂಡಾ ಶೈನ್ ಮೊಟಾರ ಸೈಕಲ್ ನಂ ಎಂ.ಹೆಚ್-13/ಬಿ.ಝಡ್-6166 ಅ.ಕಿ 35,000/- ರೂ. ನೇದನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿ ಹ್ಯಾಂಡಲ್ ಲಾಕ್ ಮಾಡಿ ಮನೆಯಲ್ಲಿ ಮಲಗಿಕೊಂಡು ಮರುದಿವಸ ದಿನಾಂಕ 25-12-2020 ರಂದು 0500 ಗಂಟೆಗೆ ಎದ್ದು ನೊಡಲು ಮನೆಯ ಮುಂದೆ ನಿಲ್ಲಿಸಿದ ಸದರಿ ಮೊಟಾರ ಸೈಕಲ್ ಇರಲ್ಲಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-01-2021 ರಂದು ಪ್ರಕರಣ ದಾಖಲಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 10/2021, ಕಲಂ. 379 ಐಪಿಸಿ :-
ದಿನಾಂಕ 13-01-2021 ರಂದು ಫಿರ್ಯಾದಿ ನೇತಾಜಿ ತಂದೆ ನರಬಾ ಮುರಾಳೆ ವಯ: 58 ವರ್ಷ, ಜಾತಿ: ಮರಾಠಾ, ಸಾ: ಏಕ್ಲಾಸಪುರ ವಾಡಿ, ತಾ: ಭಾಲ್ಕಿ ರವರು ತನ್ನ ಮಗನಾದ ಬಾಲಾಜಿ ಇತನ ಹಿರೋ ಹೋಂಡಾ ಮೋಟಾರ ಸೈಕಲ ನಂ. ಕೆ.ಎ-39/ಕ್ಯೂ-4441 ನೇದರ ಮೇಲೆ ತನ್ನ ಖಾಸಗಿ ಕೆಲಸಕ್ಕಾಗಿ ಭಾಲ್ಕಿಗೆ ಬಂದು ಭಾಲ್ಕಿಯ ಧೂಳಪೇಟ ಗಲ್ಲಿಯಲ್ಲಿರುವ ಸಂತೋಷ ಎಲೇಕ್ಟ್ರಾನೀಕ್ ಅಂಗಡಿ ಹತ್ತಿರ ಮೋಟಾರ ಸೈಕಲ ನಿಲ್ಲಿಸಿ ಸಂತೋಷ ರವರ ಅಂಗಡಿಯಲ್ಲಿ ಅವರ ಜೋತೆ ಮಾತಾಡುತ್ತಾ ಕುಳಿತಿರುವಾಗ 1530 ಗಂಟೆಯಿಂದ 1630 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಸರಿ ಮೋಟಾರ ಸೈಕಲ ಅ.ಕಿ 45,000/- ರೂ. ದಷ್ಟು ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ಮೋಟಾರ ಸೈಕಲ ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್.ಎ.10.ಎ.ಎಮ್.ಎಫ್.ಹೆಚ್.ಎ.10369, ಇಂಜಿನ ನಂ. ಹೆಚ್.ಎ.10.ಇ.ಜೆ.ಎಫ್.ಹೆಚ್.ಎ.00239 ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಖ 21-01-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 12/2021, ಕಲಂ. 384 ಐಪಿಸಿ :-
ದಿನಾಂಕ 21-01-2021 ರಂದು 0345 ಗಂಟೆಗೆ ಫಿರ್ಯಾದಿ ಸೈಯದ ಮೀರಾಜೋದ್ದಿನ ತಂದೆ ಸೈಯದ ಮೈನೊದ್ದಿನ ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಸಿ.ಎಂ.ಸಿ ಕಾಲೋನಿ ಮೈಲೂರ, ಬೀದರ ರವರು ಮನೆಯಲ್ಲಿ ಮಲಗಿರುವಾಗ ಒಬ್ಬ ವ್ಯಕ್ತಿ ಮನೆಯ ಬಾಗಿಲು ತೆರೆದು ಮನೆಯಲ್ಲಿ ಬಂದು ಚಾಕು ತೋರಿಸಿ ಸಾಲೆ ತೆರೆಪಾಸ ಕಿತನೆ ಪೈಸೆ ಹೈ ದೇ ನಹಿತೊ ಮಾರತು ಎಂದು ಬೆದರಿಕೆ ಹಾಕಿ ಫಿರ್ಯಾದಿಯವರ ಹತ್ತಿರವಿದ್ದ 1) ಒಂದು ಸ್ಯಾಮಸಂಗ ಮೋಬೈಲ ನೋಟ-10 ಅ.ಕಿ 40,000/- ರೂ., 2) ನಗದು ಹಣ 500/- ರೂ. ಮತ್ತು ಖಿಡಕಿಯಲ್ಲಿಟ್ಟಿದ 3) 20 ಗ್ರಾಮ ಬೇಳ್ಳಿಯ ಚೈನ ಅ.ಕಿ 1500/- ರೂ. ಹೀಗೆ ಒಟ್ಟು 42,000/- ರೂಪಾಯಿ ಬೆಲೆಬಾಳುವ ಮೋಬೈಲ ಮತ್ತು ನಗದು ಹಾಗು ಬೆಳ್ಳಿಯ ಸಾಮಾನುಗಳನ್ನು ಬಲತಗ್ರಹಣದಿಂದ ತೆಗೆದುಕೊಂಡು ಹೊಗಿರುತ್ತಾನೆ, ನಂತರ ಫಿರ್ಯಾದಿಯು ಮನೆಯ ಹೊರಗೆ ಬಂದು ತಮ್ಮ ಮನೆಯ ಪಕ್ಕದಲ್ಲಿರುವ ಗುಜರಿ ಅಂಗಡಿಯಲ್ಲಿಯ ಸಿ.ಸಿ.ಟಿ.ವಿ ಕ್ಯಾಮರಾ ಪರೀಶಿಲಿಸಿ ನೊಡಲಾಗಿ ಸದರಿ ವ್ಯಕ್ತಿ ಸಿ.ಸಿ.ಟಿ.ವಿ. ಕ್ಯಾಮರಾದಲ್ಲಿ ಸೇರೆಯಾಗಿದ್ದು ಆತನ ಮುಖ ಸರಿಯಾಗಿ ನೋಡಿ ಅವನ ಹೇಸರು ಶೇಖ ವಾಹಬ ಎಂದು ತಿಳಿದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 21-01-2021 ರಂದು ಫಿರ್ಯಾದಿ ವಿಶಾಲ ತಂಧೆ ಝರೆಪ್ಪಾ ದೀಪನೋರ ವಯ: 20 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಬುದೇರಾ ರವರು ತನ್ನ ಮೋಟಾರ ಸೈಕಲ ನಂ. ಕೆಎ-06/ಎಚ್.ಎ-4148 ನೇದರ ಮೇಲೆ ಬೀದರದಿಂದ ಬಸಂತಪೂರಕ್ಕೆ ಹೋಗುತ್ತಿರುವಾಗ ಘೊಡಂಪಳ್ಳಿ ದಾಟಿ ಸ್ವಲ್ಪ ಮುಂದೆ ಹೋದಾಗ ಸಾದುಘಾಠ ರಸ್ತೆಯ ಮೇಲೆ ಎದುರಿನಿಂದ ಟೆಂಪೋ ನಂ. ಎಮ್.ಎಚ-05/ಎ.ಎಮ್-0390 ನೇದರ ಚಾಲಕನಾದ ಆರೋಪಿಯು ತನ್ನ ಟೆಂಪೋ ನೇದನ್ನು ಅತೀವೇಗ ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಿಗೆ ಅಪಘಾತ ಪಡಿಸಿ ತನ್ನ ವಾಹನ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಮದ ಫಿರ್ಯಾದಿಯ ಬಲಗಾಲ ತೊಡೆಗೆ ಭಾರಿ ಗುಪ್ತ ಗಾಯ, ಬಲಗಾಲ ಮೋಳಕಾಲ ಕೆಳಗೆ, ಬಲಗಾಲ ಪಾದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯವರ ತಾಯಿ ಘಟನೆ ಸ್ಥಳಕ್ಕೆ ಬಂದು ನೋಡಿ 108 ಅಂಬುಲೆನ್ಸದಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಅಸ್ಪತ್ರಯಲ್ಲಿ ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೆಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 09/2021, ಕಲಂ. 392 ಐಪಿಸಿ :-
ದಿನಾಂಕ 19-01-2021 ರಂದು 1600 ಗಂಟೆಗೆ ಫಿರ್ಯಾದಿ ತಿಪ್ಪಮ್ಮಾ ಗಂಡ ಮಲ್ಲಪ್ಪ ವಯ: 65 ವರ್ಷ, ಜಾತಿ ಎಸ್.ಟಿ ಕೋಳಿ, ಸಾ: ಬೋರಾಳ ರವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಒಬ್ಬ ವ್ಯಕ್ತಿ ತನ್ನ ಮುಖಕ್ಕೆ ಬಟ್ಟೆ ಕಟ್ಟಿ ಫಿರ್ಯಾದಿಯವರ ಬಳಿ ಬಂದಾಗ ಫಿರ್ಯಾದಿಯು ಆತನಿಗೆ ಯಾರು ಇದ್ದೀರಿ ಇಲ್ಲಿ ಏಕೆ ಬಂದಿದ್ದಿ ಅಂತಾ ಕೇಳಲು ಅವನು ಏನು ಮಾತಾಡದೇ ಹೊಲದ ಸುತ್ತಾಮುತ್ತ ಯಾರೂ ಇಲ್ಲದನ್ನು ನೋಡಿ ಫಿರ್ಯಾದಿಯ ಕೊರಳಿಗೆ ಕೈ ಹಾಕಿದಾಗ ಫಿರ್ಯಾದಿಯು ಚಿರಾಡಿದರೂ ಬಿಡದೇ ಕೊರಳಲ್ಲಿದ್ದ ಹಳೆಯ ಬಂಗಾರದ ಗುಂಡಿನ ಸರ ಒಂದು ತೊಲೆ ಅ.ಕಿ 40,000/- ರೂ. ಬೆಲೆ ಬಾಳುವ ಸರವನ್ನು ಕಸಿದುಕೊಂಡು ಪರಾರಿಯಾಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಾಗಿದೆ.
ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 08/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 20-01-2021 ರಂದು ಚಳಕಾಪೂರ ಗ್ರಾಮದಲ್ಲಿನ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಂಡೇರಾವ ಎ.ಎಸ್.ಐ ಖಟಕಚಿಂಚೋಳಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಳಕಾಪೂರ ಗ್ರಾಮಕ್ಕೆ ಹೊಗಿ ಅಲ್ಲಿ ವಾಲ್ಮೀಕಿ ಚೌಕ್ ಹತ್ತಿರ ಮರೆಯಾಗಿ ನಿಂತು ನೊಡಲು ಚಳಕಾಪೂರ ಗ್ರಾಮದಲ್ಲಿನ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿ ಬಗವಂತ ತಂದೆ ಮಚಂದ್ರ ದೊಡ್ಡಮನಿ ವಯ: 33 ವರ್ಷ, ಜಾತಿ: ಕುರುಬ, ಸಾ: ಚಳಕಾಪೂರ ಇತನು 1/- ರೂಪಾಯಿಗೆ 80/- ರೂ. ಕೊಡುತ್ತೆವೆ ಮಟಕಾ ಇದು ನಶಿಬಿನ ಆಟ ಇರುತ್ತದೆ ಅಂತಾ ಜೋರಾಗಿ ಚೀರಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು, ಸಿಬ್ಬಂದಿಯ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆತನಿಗೆ ಹಿಡಿದು ಅವನ ಅಂಗ ಜಡ್ತಿ ಮಾಡಿ ನೋಡಲು ಸದರಿಯವನ ಶರ್ಟಿನ ಜೆಬಿನಲ್ಲಿ 1 ಮಟಕಾ ನಂಬರ ವುಳ್ಳ ಚಿಟಿ ಮತ್ತು 1020/- ರೂಪಾಯಿ ನಗದು ಹಣ ಮತ್ತು 1 ಬಾಲ್ ಪೇನ್ ನೇದ್ದವುಗಳನ್ನು ವಶಕ್ಕೆ ಪಡೆದು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.