ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-11-2020
ಜನವಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 24/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 08-11-2020 ರಂದು ಫಿರ್ಯಾದಿ ರಂಗಮ್ಮ ಗಂಡ ಬಸವರಾಜ ಬಸನಾಳೆ ಸಾ: ದದ್ದಾಪೂರ ಗ್ರಾಮ, ತಾ: & ಜಿ: ಬೀದರ ರವರ ಗಂಡ ಬಸವರಾಜ ಬಸನಾಳೆ ಹಾಗು ಭಾವ ಸಿದ್ರಾಮ ಬಸನಾಳೆ ರವರು ತಮ್ಮ ಹೋಲದಲ್ಲಿನ ಸೋಯಾ ಬೆಳೆ ಕಟಾವು ಮಾಡಲು ಹೋಗಿ ಸೋಯಾ ತೆಗೆಯುತ್ತಿರುವಾಗ ಗಂಡ ಬಸವರಾಜ ರವರಿಗೆ ಹಾವು ಬಲಗಾಲಿಗೆ ಕಚ್ಚಿದ್ದರಿಂದ ಅವರಿಗೆ ಖಾಸಗಿ ವಾಹನದಲ್ಲಿ ಖಾಸಗಿ ಚಿಕತ್ಸೆಗೆ ಚಾಂಬೋಳ ಗ್ರಾಮಕ್ಕೆ ಬಂದು ಚಾಂಬೋಳ ಗ್ರಾಮದಲ್ಲಿ ಖಾಸಗಿ ಔಷಧಿ ಕೊಡಿಸಿ ನಂತರ ದಿನಾಂಕ 08-11-2020 ರಂದು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗುವಷ್ಟರಲ್ಲಿ ದದ್ದಾಪೂರನಲ್ಲಿ ಇರುವಾಗಲೆ ಗಂಡ ಬಸವರಾಜ ರವರು ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 100/2020, ಕಲಂ. 379, 411 ಐಪಿಸಿ 86, 87 ಅರಣ್ಯ ಕಾಯ್ದೆ :-
ದಿನಾಂಕ 08-11-2020 ರಂದು ಔರಾದ ಪಟ್ಟಣದ ಜನತಾ ಕಾಲೋನಿಯ ಬಾಬು ತಂದೆ ಮಾರುತಿ ಪವಾರ ಸಾ: ಜನತಾ ಕಾಲೋನಿ ಔರಾದ ಇತನ ಮನೆಯಲ್ಲಿ ಶ್ರೀಗಂಧದ ಕಟ್ಟಿಗೆಗಳನ್ನು ಕಳ್ಳತನ ಮಾಡಿಕೊಂಡು ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹ ಮಾಡಿರುತ್ತಾರೆ ಅಂತಾ ಜಗದೀಶ ನಾಯಕ ಪಿಎಸ್ಐ (ಕಾಸು) ಔರಾದ(ಬಿ) ಪೋಲಿಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಔರಾದ ಪಟ್ಟಣದ ಜನತಾ ಕಾಲೋನಿಗೆ ಹೋಗಿ ಆರೋಪಿ ಬಾಬು ತಂದೆ ಮಾರುತಿ ಪವಾರ ವಯ: 35 ವರ್ಷ, ಜಾತಿ: ವಡ್ಡರ, ಸಾ: ಜನತಾ ಕಾಲೋನಿ ಔರಾದ(ಬಿ) ಇತನ ಮನೆಯ ಶೋಧನ ಮಾಡಲು ಅಲ್ಲಿ ಹೋಗಿ ಶೋಧನೆ ವಾರೆಂಟ್ ತೋರಿಸಿ ಮನೆಯಲ್ಲಿ ಶೋಧನೆ ಮಾಡಲು ಮಾಲುಗಳು ಪಂಚರ ಸಮಕ್ಷಮ ಆರೋಪಿತರಾದ 1) ಬಾಬು ತಂದೆ ಮಾರುತಿ ಪವಾರ ವಯ: 35 ವರ್ಷ, ಜಾತಿ: ವಡ್ಡರ, ಸಾ: ಜನತಾ ಕಾಲೋನಿ ಔರಾದ(ಬಿ) ಹಾಗೂ 2) ಸಾಯಿನಾಥ ತಂದ ಅಶ್ರೋಬಾ ಪುಟೆ ವಯ: 43 ವರ್ಷ, ಜಾತಿ: ಬಾಲಾಜಿ ಪುಜಾರಿ, ಸಾ: ಸತಾಳ, ಸದ್ಯ: ಸೇಲ್ಯಾಳ ರೋಡ ಉದಗೀರ (ಎಮ್.ಎಸ್) ಇವರಿಬ್ಬರನ್ನು ವಶಕ್ಕೆ ಪಡೆದು ಅವರಿಂದ 1) 10 ಕೆ.ಜಿ ಶ್ರೀಗಂಧದ ಕಟ್ಟಿಗೆ ಅ.ಕಿ 60,000/- ರೂ., 2) ಮೋಟಾರ ಸೈಕಲ ಕೆಎ-38/ಎಕ್ಸ-3242, ಅ.ಕಿ 60,000/- ರೂ., 3) ನಗದು ಹಣ 6000/- ರೂ., 4) ಎರಡು ಸ್ಯಾಮಸಂಗ ಕಂಪನಿಯ ಮೋಬೈಲ್ ಅ.ಕಿ 4400/- ರೂ., 5) ಒಂದು ವಿವೋ ಕಂಪನಿಯ ಮೋಬೈಲ್ ಅ.ಕಿ 5000/- ರೂ., 6) ಒಂದು ಚಿಕ್ಕದ್ದು ತೂಕ ಮಾಡುವ ತಕ್ಕಡ್ಡಿ ಮತ್ತು ಅದರೊಂದಿಗೆ ಎರಡು ತೂಕದ ಕಲ್ಲುಗಳು (1 ಕೆ.ಜಿಯ ಒಂದು ಕಲ್ಲು ಮತ್ತು 500 ಗ್ರಾಂ ತೂಕದ ಒಂದು ಕಲ್ಲು), 7) ಒಂದು ಕಬ್ಬಿಣದ ಕೊಡಲಿ ಅದಕ್ಕೆ 2 ಫೀಟ 3 ಇಂಚು ಉದ್ದವುಳ್ಳ ಕಟ್ಟಿಗೆಯ ಕಾವು ನೇದವುಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.