ಮೋಟಾರ ಸೈಕಲ ಕಳ್ಳತನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ಶ್ರೀ ಸಿದ್ದಪ್ಪ ತಂದೆ ಕಲ್ಲಪ್ಪ ಅಲ್ಲಾಪೂರ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ರಾಮನಗರ ಮಣ್ಣೂರರವರು ದಿನಾಂಕ:27-08-2012 ರಂದು ಕರಜಗಿ ರೋಡಿಗೆ ಇರುವ ನಮ್ಮ ಹೊಲ ಸರ್ವೆ ನಂ:462 ನೇದ್ದರಲ್ಲಿ ಜೆಸಿಬಿ ಯಿಂದ
ಒಡ್ಡು ಹಾಕುವ ಕೆಲಸ ಮಾಡಿಸುತ್ತಿದ್ದೆನು. ನಾನು ಮತ್ತು ನನ್ನ ಮಗನಾದ ಕಲ್ಲಪ್ಪ ಇಬ್ಬರೂ
ಕೂಡಿಕೊಂಡು ಸಾಯಂಕಾಲ 6-45 ಗಂಟೆ ಸುಮಾರಿಗೆ ಹೀರೋ
ಹೊಂಡಾ ಸ್ಲೇಂಡರ ಪ್ರೋ ಕೆಂಪು ಮತ್ತು ಕಪ್ಪು ಬಣ್ಣದ್ದು ನಂ. ಕೆಎ-32ಈಎ-9124 ಚೆಸ್ಸಿ ನಂ.MBLHA10ADCHB03047 ಇಂಜಿನ ನಂ: HA10EHCHB04223 ನೇದ್ದರ ಮೇಲೆ ಕುಳಿತುಕೊಂಡು 7 ಪಿ ಎಮ್ ಕ್ಕೆ ಹೊಲಕ್ಕೆ ಹೋಗಿ ಮೋಟಾರ ಸೈಕಲನ್ನು ನನ್ನ ಹೋಲದ
ರೋಡ ಬದಿಗೆ ನಿಲ್ಲಿಸಿ ಕೆಲಸ ಮಾಡುತ್ತಿರುವದನ್ನ ಉ ನೋಡಿಕೊಂಡು 8-20 ಪಿ.ಎಮ ಸುಮಾರಿಗೆ ಮರಳಿ ಮನೆಗೆ ಹೋಗಬೇಕೆಂದು ಮೋಟಾರ
ಸೈಕಲ್ ನಿಲ್ಲಿಸಿದ ಜಾಗೆಗೆ ಬಂದು ನೋಡಲು ನನ್ನ ಮೊಟಾರ ಸೈಕಲ ಸ್ಥಳದಲ್ಲಿ ಇದ್ದಿರುವುದಿಲ್ಲ. ನಾನು ಮತ್ತು ನನ್ನ ಎಲ್ಲಾ ಕಡೆ ಹುಡಕಾಡಿದರು
ಸಿಕ್ಕಿರುವದಿಲ್ಲ ನನ್ನ ಮೋಟಾರ ಸೈಕಲ ಪತ್ತೆ ಮಾಡಿಕೊಡಬೇಕೆಂದು ದೂರು ಸಲ್ಲಿಸಿದ ಸಾರಂಶದ ಮೇಲಿಂದ
ಠಾಣೆ ಗುನ್ನೆ ನಂ:180/2012 ಕಲಂ. 379 ಐ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,