ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-01-2021
ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 06/2021, ಕಲಂ. 279, 304(ಎ) ಐಪಿಸಿ :-
ದಿನಾಂಕ 12-01-2021 ರಂದು ಎಳ್ಳ ಅಮವಾಸೆ ಇದ್ದ ಕಾರಣ ಫಿರ್ಯಾದಿ ಅರವಿಂದ ತಂದೆ ತುಳಸಿರಾಮ ಮಲ್ಲಿಗೆ ವಯ: 25 ವರ್ಷ, ಸಾ: ಬೆಳಕುಣಿ(ಸಿ) ಗ್ರಾಮ ರವರು ಊಟಕ್ಕೆ ಅಂತ ದೇವಿದಾಸ ತಂದೆ ಭೀಮಣ್ಣಾ ಮಾಳಗೆ ಇವರ ಹೊಲಕ್ಕೆ ಹೋಗಿ ಊಟ ಮಾಡಿಕೊಂಡು ಮರಳಿ ಮನೆಗೆ ನಡೆದುಕೊಂಡು ಬರುತ್ತಿರುವಾಗ ಮಾದಪ್ಪಾ ಗಂದಗೆ ರವರ ಹೊಲದ ಹತ್ತಿರ ಅತ್ತೆಯ ಮಗನಾದ ವಿಜಯಕುಮಾರ ತಂದೆ ಅಮೃತ ಇವರು ಸಹ ಬೆಳಕುಣಿ ಕ್ರಾಸ್ ಕಡೆಯಿಂದ ಊಟ ಮಾಡಲು ರೋಡಿನ ಬದಿಯಿಂದ ನಡೆದುಕೊಂಡು ಬರುತ್ತಿರುವಾಗ ಆತನ ಹಿಂದುಗಡೆಯಿಂದ ಅಂದರೆ ಬೆಳಕುಣಿ ಕ್ರಾಸ್ ಕಡೆಯಿಂದ ಟಾಟಾ ಎಸ್ ವಾಹನ ಸಂ. ಎಪಿ-26/ವೈ-4685 ನೇದರ ಚಾಲಕನಾದ ಆರೋಪಿ ಪ್ರಶಾಂತ ತಂದೆ ಸಂಜುಕುಮಾರ ಸಾ: ಬೆಳಕುಣಿಡ(ಸಿ) ಇತನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ವಿಜಯಕುಮಾರನಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ವಿಜಯಕುಮಾರ ಇತನ ತಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯ, ಮೂಗಿನಿಂದ ರಕ್ತ ಸೋರುತಿತ್ತು ಹಾಗು ಮೂಗಿಗೆ & ಕಾಲಿನ ಪಿಂಡರಿ ಹತ್ತಿರ ತರಚಿದ ಗಾಯವಾಗಿದ್ದು, ಎದೆಗೆ ಗುಪ್ತಗಾಯವಾಗಿರುತ್ತದೆ, ನಂತರ ಕೂಡಲೆ ಗಾಯಗೊಂಡ ವಿಜಯಕುಮಾರ ಇವರಿಗೆ ಚಿಕಿತ್ಸೆಗಾಗಿ ಸಂತಪೂರ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಅಂಬುಲೇನ್ಸದಲ್ಲಿ ಹೈದ್ರಬಾದಕ್ಕೆ ತೆಗೆದುಕೊಂಡು ಹೋಗುವಾಗ ದಾರಿ ಮಧ್ಯ ಆಂಧ್ರದ ಸದಾಶಿವ ಪೇಟ ಹತ್ತಿರ ವಿಜಯಕುಮಾರ ಇತನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 498 (ಎ), 306, 504 ಜೊತ 34 ಐಪಿಸಿ :-
ದಿನಾಂಕ 12-01-2021 ರಂದು ಫಿರ್ಯಾದಿ ಇರಫಾನಾ ಬೇಗಂ ಗಂಡ ಎಮ್.ಡಿ ಮೇಹೆಬÆಬ ದುಕಾನವಾಲೆ ವಯ: 35 ವರ್ಷ, ಸಾ: ಮರ್ಜಾಪುರ, ಸದ್ಯ: ಚಿಂತಲಮೆಟ ಹೈದ್ರಾಬಾದ ರವರ ಅಣ್ಣನಾದ ಮಹಮ್ಮದ ಮಿರಾಜ ಪಟೇಲ ರವರ ಮಗಳಾದ ಉಮೇರಾ ಬೇಗಂ ವಯ: 20 ವರ್ಷ ಇವಳಿಗೆ 6 ತಿಂಗಳ ಹಿಂದೆ ನಿರ್ಣಾ ಗ್ರಾಮದ ಬಾಬುಮಿಯ್ಯಾ ಇವರ ಮಗನಾದ ಮಸ್ತಾನ ಇತನ ಜೋತೆ ಮದುವೆ ಮಾಡಿ ಕೊಟ್ಟಿದ್ದು, ಅವಳಿಗೆ ಸದ್ಯ: ಮಕ್ಕಳಾಗಿರವುದಿಲ್ಲಾ, ಮದುವೆಯಾಗಿ 3 ತಿಂಗಳು ಚೆನ್ನಾಗಿ ಸಂಸಾರ ಮಾಡಿದ್ದು ನಂತರ ಅವಳ ಗಂಡ ಮಸ್ತಾನ, ಮಾವ ಬಾಬುಮಿಯ್ಯಾ, ಅತ್ತೆ ಸಾಬೀರಾಬೇಗಂ ಇವರೆಲ್ಲರೂ ಕೂಡಿ ಉಮೇರಾ ಬೇಗಂ ಇವಳಿಗೆ ದಿನಾಲು ನೀನು ಚೆನ್ನಾಗಿಲ್ಲಾ, ನಿನಗೆ ಅಡುಗೆ ಮಾಡಲು ಬರುವುದಿಲ್ಲಾ ಅಂತಾ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಹೊಡೆಬಡೆ ಮಾqÀವುದು ಮಾಡುತ್ತಾ ಬಂದಿರುತ್ತಾರೆ, ಹೀಗಿರುವಲ್ಲಿ ದಿನಾಂಕ 11-01-2021 ಉಮೇರಾ ಬೇಗಂ ಇವಳಿಗೆ ಆರೋಪಿತರಾದ ಗಂಡ ಮಸ್ತಾನ, ಮಾವ ಬಾಬುಮಿಯ್ಯಾ ಹಾಗೂ ಅತ್ತೆ ಸಾಬೀರಾಬೇಗಂ ಇವರೆಲ್ಲರೂ ಕೂಡಿ ಮಾನಸೀಕ ಹಾಗು ದೈಹಿಕ ಕಿರಕುಳ ನೀಡಿ ಹೊಡೆ ಬಡೆ ಮಾಡಿದ್ದರಿಂದ ಅವಳು ಬೇಸರಗೊಂಡು ಅವರ ಕಿರಕುಳ ತಾಳಲಾರದೇ ತನ್ನ ಮನೆಯಲ್ಲಿ ಕಟ್ಟಿಗೆ ಸರಕ್ಕೆ ತನ್ನ ಓಡನಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 279, 338 ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-
ದಿನಾಂಕ 12-01-2021 ರಂದು ಎಳ್ಳ ಅಮವಾಸೆ ಇರುವುದರಿಂದ ಫಿರ್ಯಾದಿ ಬಾಹದ್ದೂರ ಖಾನ್ ತಂದೆ ನಿಜಾಮೋದ್ದಿ£ï ಮಾಸುಲ್ದಾರ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ಹಳ್ಳಿಖೇಡ(ಬಿ) ರವರು ದೇವರ ನೈವಿದ್ಯಾ ತೆಗೆದುಕೊಂಡು ಹೊಲಕ್ಕೆ ಹೋಗುವಾಗ ಜೊತೆಯಲ್ಲಿ ತನ್ನ ಚಿಕ್ಕಪ್ಪನ ಮೊಮ್ಮಕಳಾದ ಸೈಯದ್ ಸಮೀರ ತಂದೆ ಸೈಯದ್ ಮಜರ್ ಮಾಸುಲ್ದಾರ ವಯ: 6 ವರ್ಷ ಹಾಗೂ ಸೈಯದ್ ಅರ್ಮಾನ ತಂದೆ ಸೈಯದ್ ಮುಕ್ರಾಮ ಮಾಸುಲ್ದಾರ ವಯ: 11 ವರ್ಷ ಇವರನ್ನು ಟಿ.ವಿ.ಎಸ್ ಸೂಪರ್ ಎಕ್ಸೆಲ್ ಮೋಟಾರ ಸೈಕಲ್ ನಂ. ಕೆಎ-39/ಎಲ್-8065 ನೇದರ ಮೇಲೆ ಕೂಡಿಸಿಕೊಂಡು ಹೊಲಕ್ಕೆ ಹೋಗುವಾಗ ಹೊಲದ ಹತ್ತಿರ ರೋಡಿನ ಮೇಲೆ ಕಾರ್ನರನಲ್ಲಿ ಫಿರ್ಯಾದಿಯು ತನ್ನ ಮೋಟಾರ ಸೈಕಲ್ ನಿಲ್ಲಿಸಿ ಹುಡುಗರಿಗೆ ಕೆಳಗೆ ಇಳಿಸುವಾಗ ಹಿಂದಿನಿಂದ ಅಂದರೆ ಹಳ್ಳಿಖೇಡ(ಬಿ) ಪಟ್ಟಣದ ಕಡೆಯಿಂದ ಪಲ್ಸರ್ ಮೋಟಾರ ಸೈಕಲ್ ನಂ. ಎಪಿ-23/ಎಸಿ-6714 ನೇದರ ಚಾಲಕನಾದ ಆರೋಪಿ ಶಿವಶರಣ ತಂದೆ ರಾಜಪ್ಪಾ ಸೋನಕೇರೆ ವಯ: 27 ವರ್ಷ, ಸಾ: ನಿಂಬೂರ, ತಾ: ಹುಮನಾಬಾದ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೆ ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ್ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಾಲ ಪಾದದ ಕಣ್ಣಿಗೆ ಮತ್ತು ಪಾದದ ಮೇಲಿನ ಭಾಗಕ್ಕೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಬಲಗಡೆ ಎದೆಯ ಮೇಲೆ ಗುಪ್ತಗಾಯ ಹಾಗೂ ಬಲಗೈ ಮೋಳಕೈ ಮೇಲೆ ತರಚಿದ ಗಾಯವಾಗಿರುತ್ತದೆ ಹಾಗೂ ಸೈಯದ್ ಸಮೀರ್ ಇವನಿಗೆ ಬಲಗಾಲ ಪಾದದ ಮೇಲ್ಭಾಗಕ್ಕೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ನಂತರ ಗಾಯಗೊಂಡವರಿಗೆ ಚಿಕ್ಕಪ್ಪನ ಮಗನಾದ ಸೈಯದ್ ಮಜರ್ ತಂದೆ ಸೈಯದ್ ಮಂಜೂರ ಮಾಸುಲ್ದಾರ ಇವನು ಚಿಕಿತ್ಸೆ ಕುರಿತು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಹಳ್ಳಿಖೇಡ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 279, 338 ಐಪಿಸಿ :-
ದಿನಾಂಕ 12-01-2021 ರಂದು ಫಿರ್ಯಾದಿ ಗುಣವಂತರಾವ ತಂದೆ ರಾಮರಾವ ಬಿರಾದರ ವಯ: 60 ವರ್ಷ, ಸಾ: ಹಿಪ್ಪಳಗಾಂವ ಗ್ರಾಮ ರವರ ಮಗನಾದ ಪುಂಡಲಿಕ ಇತನು ಸಂತಪೂರಕ್ಕೆ ಬಂದಿದ್ದರಿಂದ ಆತನಿಗೆ ಕರೆದುಕೊಂಡು ಬರಲು ಇನ್ನೊಬ್ಬ ಮಗನಾದ ಫಿರ್ಯಾದಿ ಪಂಡರಿನಾಥ ತಂದೆ ಗುಣವಂತರಾವ ಬಿರಾದರ ವಯ: 37 ವರ್ಷ ಇತನು ಮೋಟಾರ ಸೈಕಲ್ ನಂ. ಕೆಎ-38/ಎಸ್-1599 ನೇದನ್ನು ತೆಗೆದುಕೊಂಡು ಸಂತಪೂರಕ್ಕೆ ಹೋಗುವಾಗ ನಾಗೂರ ಬ್ರಿಡ್ಜ್ ಹತ್ತಿರ ಅತೀವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗಿ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದು, ಸದರಿ ಅಪಘಾತದಿಂದ ಪಂಡರಿನಾಥ ಇತನ ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯ, ಎರಡು ಕಣ್ಣಿನ ಹುಬ್ಬಿಗೆ ರಕ್ತಗಾಯ ಹಾಗು ಎಡಗಡೆ ದವಡೆಗೆ ಸಹ ರಕ್ತಗಾಯವಾಗಿರುತ್ತದೆ, ಕಾರಣ ಆತನಿಗೆ ಚಿಕಿತ್ಸೆ ಕುರಿತು ಸಂತಪೂರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಿ ನಂತರ ಆತನಿಗೆ ಹೆಚ್ಚಿನ ಚಿಕಿತ್ಸೆ ಕುರತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ನಂತರ ಹೈದ್ರಬಾದನ ವಾಸವಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 06/2021, ಕಲಂ. 379 ಐಪಿಸಿ :-
ದಿನಾಂಕ 08-01-2021 ರಂದು 0230 ಗಂಟೆಯಿಂದ 0330 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಪ್ರಭು ತಂದೆ ಝರೆಪ್ಪ ಸಾಗರ ವಯ: 42 ವರ್ಷ, ಜಾತಿ: ಎಸ್.ಸಿ (ಹೊಲಿಯ), ಸಾ: ಆಣದೂರ ಗ್ರಾಮ, ತಾ: ಜಿ: ಬೀದರ ರವರು ತಮ್ಮ ಮನೆಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ನಿಲ್ಲಿಸಿದ ತನ್ನ ಪಲ್ಸರ್ ಮೋಟಾರ ಸೈಕಲ ಚಾಸಿಸ್ ನಂ. ಎಂ.ಡಿ.2.ಎ.11.ಸಿ.ಎಕ್ಸ.9.ಎಲ್.ಸಿ.ಜಿ.22810 ಹಾಗೂ ಇಂಜಿನ್ ನಂ. ಡಿ.ಹೆಚ್.ಎಕ್ಸ.ಸಿ.ಎಲ್.ಜಿ.38560, ಕಪ್ಪು ಮತ್ತು ನೀಲಿ ಬಣ್ಣದ್ದು, ಅ.ಕ 1,00,000/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 12-01-2021 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 06/2021, ಕಲಂ. ಮಹಿಳೆ ಕಾಣೆ :-
ದಿನಾಂಕ 11-01-2021 ರಂದು 1600 ಗಂಟೆಯ ಸುಮಾರಿಗೆ ಫಿರ್ಯಾದಿ ದತ್ತು ತಂದೆ ಚಂದ್ರಪ್ಪಾ ಆಮಾಣೆ ಸಾ: ಸೋನಕೇರಾ ರವರ ಮಗಳಾದ ಸಂಧ್ಯಾ ವಯ: 20 ವರ್ಷ ಇಕೆಯು ಘೊಟವಾಡಿ ದರ್ಗಾದಿಂದ ಹೋಗಿ ಕಾಣೆಯಾಗಿರುತ್ತಾಳೆ, ಅವಳನ್ನು ಎಲ್ಲಾ ಕಡೆ ಹುಡಕಾಡಿದರೂ ಸಹ ಸಿಕ್ಕಿರುವುದಿಲ್ಲ, ಅವಳು ಕೆಂಪು ಬಣ್ಣದ ಟಾಪ, ಬಂಗಾರ ಬಣ್ಣದ ಪ್ಯಾಂಟ, ವೇಲ ಇರುತ್ತದೆ, ಹಣೆಯ ಮೇಲೆ ಒಂದು ಸಣ್ಣ ಹಳೆ ಗಾಯ ಇರುತ್ತದೆ, ಅಂದಾಜು 5 ಅಡಿ ಎತ್ತರ, ಉದ್ದನೆಯ ಮುಖ, ಸಾಧಾರಾಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.