ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-01-2020
ಮನ್ನಳ್ಳಿ
ಪೊಲೀಸ್ ಠಾಣೆ ಅಪರಾಧ ಸಂ. 05/2020, ಕಲಂ. 279, 304(ಎ) ಐಪಿಸಿ :-
ದಿನಾಂಕ 16-01-2020 ರಂದು ಫಿರ್ಯಾದಿ ಈರಮ್ಮಾ ಗಂಡ
ಘಾಳೆಪ್ಪಾ ವಾಡೆಕರ
ವಯ: 60 ವರ್ಷ, ಜಾತಿ:
ಎಸ್.ಟಿ ಗೊಂಡ, ಸಾ: ಬೇಮಳಖೇಡಾ ರವರ ಮಗನಾದ ಸಂತೋಷ ತಂದೆ ಘಾಳೆಪ್ಪಾ ವಾಡೆಕರ
ವಯ: 30 ವರ್ಷ, ಇತನು ತನ್ನ
ಹೊಂಡಾ ಶೈನ್ ಮೋಟಾರ ಸೈಕಲ್
ಮೇಲೆ ಧಾಬಾದಿಂದ ಭಂಗೂರು
ಗ್ರಾಮಕ್ಕೆ ಹೋಗುವಾಗ ಶಿವಶಕ್ತಿ ಶುಗರ ಮೀಲ್ಸ್ ಹತ್ತಿರ ಎನ್.ಹೆಚ್-65 ರ ಮೇಲೆ ತನ್ನ ಹೊಂಡಾ ಶೈನ್ ವಾಹನ ಸ್ಕಿಡ್ ಆಗಿ ಕೆಳಗೆ ಬಿದ್ದ ಪರಿಣಾಮ ತಲೆಯ ಹಿಂಭಾಗದಲ್ಲಿ ಪೆಟ್ಟಾಗಿ ಭಾರಿ ಗಾಯವಾಗಿ ರಕ್ತ ಮತ್ತು ಗುಪ್ತಗಾಯವಾಗಿದ್ದು ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಮಾಡುವಾಗ ಚಿಕಿತ್ಸೆ ಫಲಕಾರಿಯಾಗದೇ ಫಿರ್ಯಾದಿಯವರ ಮಗ ಸಂತೋಷ ಇತನು ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಂಣೆ ಅಪರಾಧ ಸಂ. 13/2020, ಕಲಂ. 279,
304(ಎ) ಐಪಿಸಿ :-
ದಿನಾಂಕ 16-01-2020 ರಂದು ಫಿರ್ಯಾದಿ ಹಣಮಂತಪ್ಪಾ ತಂದೆ ಘಾಳೆಪ್ಪಾ ಪಾಟೀಲ, ವಯ: 41 ವರ್ಷ, ಜಾತಿ: ಲಿಂಗಾಯತ, ಸಾ: ನಾವದಗೇರಿ ಬೀದರ ರವರ ಭಾವ ಓಂಕಾರ ತಂದೆ ಗಣಪತರಾವ ಮೆಳ್ಳೆ, ವಯ:
28 ವರ್ಷ, ಜಾತಿ: ಲಿಂಗಾಯತ, ಸಾ: ನಾವದಗೇರಿ ಬೀದರ ರವರು ಚಿಕ್ಕಪೇಟ ಕಡೆಯಿಂದ ಬೀದರ ಕಡೆಗೆ
ಮೊಟಾರ ಸೈಕಲ ನಂ. ಕೆಎ-38/ಆರ್-7630 ನೇದ್ದನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ವೇಗ ಹತೋಟಿಯಲ್ಲಿ ಇಟ್ಟುಕೊಳ್ಳದೇ ಬೀದರ ನಾವದಗೇರಿ ಚರ್ಚ ಎದುರಿಗೆ ಮೊಟಾರ ಸೈಕಲ ಸ್ಕೀಡ ಮಾಡಿ ಬಿದ್ದಿರುತ್ತಾರೆ, ಪರಿಣಾಮ
ಓಂಕಾರ ಈತನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ, ಮೂಗಿನಿಂದ ರಕ್ತ ಬಂದಿದ್ದರಿಂದ ಅವರಿಗೆ ಚಿಕಿತ್ಸೆ
ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಾಗ ವೈದ್ಯಾಧಿಕಾರಿಗಳು ಪರೀಕ್ಷಿಸಿ
ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ
ಸಂ. 06/2020, ಕಲಂ. 283 ಐಪಿಸಿ,
2(1)(ಸಿ), ಜೊತೆ 25
(1-ಬಿ)
ಆಯುಧ ಕಾಯ್ದೆ 1959 ಮತ್ತು 66(ಎ) ಐಟಿ ಕಾಯ್ದೆ 2000 :-
ದಿನಾಂಕ 15-01-2020 ರಂದು 2100 ಗಂಟೆಗೆ ಆರೋಪಿ ವಿಜಯಕುಮಾರ
ಪಾಟೀಲ ಸಾ: ಖಾಜಾಪೂರ ಎಂಬುವರು ತನ್ನ ಅಭಿಮಾನಿಗಳೊಂದಿಗೆ ಬೀದರ ನಗರದ ಕೆ.ಇ.ಬಿ ಎದುರಿನ
ಸಾರ್ವಜನಿಕ ನಡುಬಿದಿಯಲ್ಲಿ ವೇದಿಕೆ ಹಾಕಿ ಹೋಗಿ ಬರುವ ಸಂಚಾರಕ್ಕೆ ಅಡ್ಡಿ ಪಡಿಸಿ ತನ್ನ ಹುಟ್ಟು
ಹಬ್ಬ ಆಚಾರಿಸಿಕೊಳ್ಳವುದಕ್ಕಾಗಿ ಅಪಾಯಕಾರಿ ಹರಿತವಾದ ತಲವಾರದಿಂದ ಸಾರ್ವಜನಿಕರ ನೆಮ್ಮದಿಗೆ ಭಯ
ಪಡಿಸುವ ರೀತಿಯಲ್ಲಿ ಕೇಕನ್ನು
ಕತ್ತರಿಸಿರುತ್ತಾರೆ ಹಾಗು ಈ ಕೃತ್ಯದ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಹರಿ ಬಿಟ್ಟಿರುತ್ತಾರೆ, ಈ
ಕೃತ್ಯದಿಂದ ಸಾರ್ವಜನಿಕರ ನೆಮ್ಮದಿ ಹಾನಿ ಪಡಿಸಿದಲ್ಲದೆ ಸಾರ್ವಜನಿಕ ಸ್ಥಳದಲ್ಲಿ ವೇದಿಕೆ ನಿರ್ಮಿಸಿ
ಸಂಚಾರಕ್ಕೆ ಅಡ್ಡಿ ಪಡಿಸಿ ಕೃತ್ಯ
ಎಸಿಗಿರುತ್ತಾನೆ, ಸದರಿ ಕೃತ್ಯದ ಬಗ್ಗೆ ದಿನಾಂಕ 16-01-2020 ರಂದು ಯು-ಟ್ಯೂಬ್ ನಲ್ಲಿ
ಹರಿದಾಡಿದ್ದು ಗುರುಲಿಂಗಪ್ಪಾ ಗೌಡ ಪಾಟೀಲ, ಪೊಲೀಸ್ ಉಪನಿರೀಕ್ಷಕರು ಬೀದರ ನೂತನ
ನಗರ ಪೊಲೀಸ್ ಠಾಣೆ ರವರಿಗೆ ಗೊತ್ತಾದ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ.
04/2020, ಕಲಂ. 279, 338 ಐಪಿಸಿ :-
ದಿನಾಂಕ 16-01-2020 ರಂದು ಫಿರ್ಯಾದಿ ರಾಬಟ ತಂದೆ
ಶರಣಪ್ಪಾ ಭಾವಿಕಟ್ಟಿ ವಯ: 35 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಮಂದಕನಳ್ಳಿ ರವರ ಭಾವನಾದ ಸುನೀಲಕುಮಾರ ತಂದೆ ಪ್ರಭಾಕರ
ಟೊಳ್ಳಿ ವಯ: 38 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಿಂದೋಲ್ ರವರು ಮತ್ತು ಅಕ್ಕ
ಸುನೀತಾ ವಯ: 30 ವರ್ಷ, ಇಬ್ಬರು ಕೂಡಿಕೊಂಡು ಹಿರೋ ಹೊಂಡಾ ಫ್ಯಾಶನ್ ಮೋಟಾರ್ ಸೈಕಲ ನಂ. ಕೆಎ-38/ವಿ-1144
ನೇದರ ಮೇಲೆ ಸಂಜುಕುಮಾರ ತಂದೆ
ಮಾಣಿಕ ನಾರಗೇನೋರ ಸಾ: ನಾಗೋರಾ ಇವರಿಗೆ ಆರಾಮ
ಇಲ್ಲದೆ ಇರುವುದರಿಂದ ಮಾತಾಡಿಕೊಂಡು ಬರಲು ಹೋಗಿ ಅವರಿಗೆ ಮಾತನಾಡಿ ಮರಳಿ ಸಿಂದೋಲ್ ಗ್ರಾಮಕ್ಕೆ ಬರುವಾಗ ಮನ್ನಳ್ಳಿ ವಿಶಾಲ ಖಾಂಡಸಾರಿ ಕಾರ್ಖಾನೆ ಹತ್ತಿರ ಭಾವ ತನ್ನ
ಸದರಿ ದ್ವಿಚಕ್ರ ವಾಹನವನ್ನು ಅತಿವೇಗ ಹಾಗೂ
ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ವಾಹನ ಒಮ್ಮೇಲೆ ಸ್ವೀಡ್ ಆಗಿದ್ದರಿಂದ ಹಿಂದೆ ಕುಳಿತ್ತಿದ್ದ
ಅಕ್ಕ ಸುನಿತಾ
ರವರು ಬಿದ್ದ ಪ್ರಯುಕ್ತ ಅಕ್ಕನ ತಲೆಯ
ಹಿಂಭಾಗದಲ್ಲಿ ಭಾರಿ ಗುಪ್ತಗಾಯ ಮತ್ತು ಮೇಲ್ತುಟಿಗೆ ತುಟಿಗೆ ಬಾವು ಬಂದಿರುತ್ತದೆ ಹಾಗೂ ಎಡಗಣ್ಣು ಹುಬ್ಬಿನ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಭಾವನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ, ಅಕ್ಕ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೆ ಇರುವುದರಿಂದ ಅವರಿಗೆ 108 ಅಂಬುಲೆನ್ಸ್ನಲ್ಲಿ ಬೀದರ ಪ್ರಯಾವಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ
ಪೊಲೀಸ್ ಠಾಣೆ ಅಪರಾಧ ಸಂ. 09/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 16-01-2019
ರಂದು ಫಿರ್ಯಾದಿ ತುಕ್ಕಮ್ಮ ಗಂಡ ತುಕಾರಾಮ ರಾಜೇಶ್ವರ ಸಾ: ಇಂದಿರಾ ನಗರ
ಹುಡುಗಿ, ತಾ: ಹುಮನಾಬಾದ ರವರು ತಮ್ಮ ಸಂಬಂಧಿ ಲಕ್ಷ್ಮೀಬಾಯಿ ಗಂಡ ಭೀಮಶಾ ಮೇತ್ರೆ ಸಾ: ಸುಂಠಾಳ, ತಾ:
ಬಸವಕಲ್ಯಾಣ ಹಾಗು
ತಮ್ಮೂರ ಶರಣಮ್ಮ ಗಂಡ ವೀರಣ್ಣಾ ನಿಂಗದಳೆನೋರ್ ಮೂವರು ಕೂಡಿಕೊಂಡು ಕಟ್ಟಿಗೆ ತರುವ ಪ್ರಯುಕ್ತ ಹೊಲಕ್ಕೆ ಹೋಗಿ ಕಟ್ಟಿಗೆ ತೆಗೆದುಕೊಂಡು ರೋಡಿನ ಬದಿಯಲ್ಲಿ ನಡೆದುಕೊಂಡು ಮರಳಿ ಮನೆಗೆ ಬರುತ್ತಿದ್ದಾಗ ಇಂದಿರಾ ನಗರದ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಚಿಟಗುಪ್ಪಾ ಕಡೆಯಿಂದ
ಕ್ವಾಲಿಸ್
ವಾಹನ ಸಂ. ಎಪಿ-12/2098 ನೇದರ ಚಾಲಕನಾದ ಆರೋಪಿಯು ತನ್ನ ಕ್ವಾಲಿಸ್ ವಾಹನವನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಲಕ್ಷ್ಮೀಬಾಯಿ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿ ತನ್ನ ವಾಹನವನ್ನು ನಿಲ್ಲಿಸದೇ ಓಡಿ ಹೋಗಿರುತ್ತಾನೆ,
ಸದರಿ ಅಪಘಾತದಿಂದ ಲಕ್ಷ್ಮೀಬಾಯಿ ಇವರಿಗೆ
ಬಲಗಾಲ ಪಾದಕ್ಕೆ ತೀವ್ರ ರಕ್ತಗಾಯವಾಗಿದ್ದರಿಂದ
ಅವರಿಗೆ ಚಿಕಿತ್ಸೆ
ಕುರಿತು 108 ಆಂಬುಲೆನ್ಸದಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ
ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಧನ್ನೂರಾ
ಪೊಲೀಸ್ ಠಾಣೆ ಅಪರಾಧ ಸಂ. 11/2020, ಕಲಂ. ಕಲಂ. 279, 338
ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 16-01-2020
ರಂದು ಫಿರ್ಯಾದಿ ಕೈಲಾಸ ತಂದೆ ವೈಜಿನಾಥ ಹುಗಾರ ವಯ: 19 ವರ್ಷ, ಜಾತಿ: ಹುಗಾರ, ಸಾ: ಕೋನಮೇಳಕುಂದಾ ರವರು ತನ್ನ
ಚಿಕ್ಕಪ್ಪನ ಮಗನಾದ ಸಂಜುಕುಮಾರ ಇವರ ಮೋಟಾರ ಸೈಕಲ ನಂ. ಕೆಎ-39/ಕೆ-529 ನೇದರ ಮೇಲೆ ಕುಳಿತುಕೊಂಡು ಕೋನಮೇಳಕುಂದಾ ಗ್ರಾಮದಿಂದ ತರನಳ್ಳಿ ಗ್ರಾಮದ ತನ್ನ
ಚಿಕ್ಕಮ್ಮಳಿಗೆ ಮಕರ ಸಂಕ್ರಾಂತಿ ಎಳ್ಳು ಹಂಚಲು ಹೋಗಿ ಮರಳಿ ತಮ್ಮೂರಿಗೆ ಬರಲು ಸದರಿ
ವಾಹನ ಚಲಾಯಿಸಿಕೊಂಡು ಹಲಬರ್ಗಾ ಕಣಜಿ ರಸ್ತೆಯ ತರನಳ್ಳಿ ಕ್ರಾಸ್ ಹತ್ತಿರ ಬಂದಾಗ ಹಲಬರ್ಗಾ ಕಡೆಯಿಂದ ಕಾರ ನಂ.
ಟಿ.ಎಸ್-15/ಇ.ಎ-1466 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಕಾರನ್ನು ನಿಲ್ಲಿಸದೇ ಓಡಿ
ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾಧಿಯ ಎಡಗಾಲಿನ ಪಕ್ಕದಲ್ಲಿ ರಕ್ತಗಾಯ, ಬಲಗೈ ಮೋಳಕೈ ಹತ್ತಿರ ರಕ್ತಗಾಯ, ಬಲಗಾಲ ಮೋಳಕಾಲ ಮೇಲೆ ಮತ್ತು ಬಲಗಾಲ ಪಾದದ ಹತ್ತಿರ ಭಾರಿ ರಕ್ತಗಾಯ ಹಾಗೂ ಎಡಗಾಲ ಪಾದದ ಮೇಲೆ ರಕ್ತಗಾಯವಾಗಿರುತ್ತದೆ, ಆಗ
ಅಲ್ಲಿಂದ ಹೋಗುತ್ತಿರುವ ಜನರು 108 ಅಂಬ್ಯಲೇನ್ಸ ನಲ್ಲಿ ಹಾಕಿ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಗುರುನಾನಕ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ
ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.