Police Bhavan Kalaburagi

Police Bhavan Kalaburagi

Sunday, November 8, 2020

BIDAR DISTRICT DAILY CRIME UPDATE 08-11-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-11-2020

ಹುಲಸೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 82/2020 ಕಲಂ 307.498(ಎ).323.504.506. ಜೊತೆ 34 ಐಪಿಸಿ :- 

ದಿ: 07/11/2020 ರಂದು 1130 ಗಂಟೆಗೆ ಫಿರ್ಯಾದಿ ಶ್ರೀಮತಿ.  ಪುನಮ ದಿಗಂಬರ ಸೂರ್ಯವಂಶಿ ವಯ: 20 ವರ್ಷ ವೃತ್ತಿ - ಮನೆಕೆಲಸ ಸಾ|| ಖಾಡಗಾವ ರೋಡ  ಲಾತೂರ ಜಿ: ಲಾತೂರ (ಮಹರಾಷ್ಟ್ರ)  ಮೋ.ನಂ-8956240440 ಶ್ವಾಸ್ ಆಸ್ಪತ್ರೆ ನಿಲಂಗಾ ತಾ: ನಿಲಂಗಾ ಜಿ: ಲಾತೂರ ನಲ್ಲಿ ಆಯ್ಸಿಯು ವಾರ್ಡನಲ್ಲಿ ಬೆಡ್ ಸಂಖ್ಯೆ 09 ರ ಮೇಲೆ ಇಲಾಜು ಪಡೆಯುವಾಗ ಪೊಲೀಸರು ಕೇಳಿದಾಗ ಹೇಳಿಕೆಯನ್ನು ಬರೆದುಕೊಡುತ್ತಿದ್ದೆನೆಂದರೆ ಇವರ ಕುಟುಂಬದಲ್ಲಿ ಅತ್ತೆ, ಮಾವ, ಗಂಡ ಇದ್ದಾರೆ ಹಾಗೂ ಗಂಡನು ವ್ಯಾಪಾರ ಮಾಡಿ ಕುಟುಂಬದ ಜೀವನವನ್ನು ನಿರ್ವಹಿಸಿಕೊಳ್ಳುತ್ತಾನೆ ಗಂಡನ ಹೊಲ ಮಿರ್ಖಲ ತಾ|| ಹುಲಸೂರನಲ್ಲಿದೆ. ಇವರ ಗಂಡ ಅತ್ತೆ ಮಾವ ಆಗಾಗ ಕೆಲಸ ಇದ್ದಾಗ ಹೊಲಕ್ಕೆ ಹೋಗುತ್ತಾರೆ. ಇವರ ಮದುವೆ ದಿನಾಂಕ 26 ಮೇ 2019 ರಂದು ಆಗಿದೆ ಮದುವೆಯಾದ ನಂತರ   ಗಂಡ ಅತ್ತೆ ಮಾವ ಇವರು ಯಾವಾಗಲೂ ನಿನ್ನ ತಂದೆಯವರು ಕಡಿಮೆ ವರದಕ್ಷಿಣೆ  ಕೊಟ್ಟಿದ್ದಾರೆ ನಮ್ಮ ಮಾನ ಸಮ್ಮಾನ ಮಾಡಿಲ್ಲ ಹಾಗೂ ನಿನಗೆ ಒಳ್ಳೆಯ ಅಡುಗೆ ಮಾಡಲು ಬರುವದಿಲ್ಲ ಎಂದು ಮಾನಸಿಕ ತೊಂದರೆ ಕೊಡುತ್ತಿದ್ದರು   ಗಂಡ ದಿನಾಲೂ ಮನೆಗೆ ಸಾರಾಯಿ ಕುಡಿದು ಬಂದು ನೀನು ವ್ಯಾಪಾರ ಸಲುವಾಗಿ ತವರು ಮನೆಯಿಂದ 3 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತ ಹೊಡೆ ಬಡೆ ಮಾಡುತ್ತಿದ್ದರಿಂದ ಫಿರ್ಯಾದಿಯು ಬಹಳ ಸಲ   ತಂದೆ-ತಾಯಿಯವರಿಗೆ ಪೋನ್ ಮುಖಾಂತರ ತಿಳಿಸಲು ಪ್ರಯತ್ನಿಸಿದ್ದು   ಗಂಡ, ಅತ್ತೆ, ಮಾವನವರು ನನ್ನ ತಂದೆ-ತಾಯಿಗೆ ಪೋನ್ ಮೇಲೆ ಮಾತನಾಡಲು ಬಿಡುತ್ತಿರಲಿಲ್ಲ ಹಾಗೂ  ಗಂಡನು ನೀನು ತವರು ಮನೆಯಿಂದ ಹಣವನ್ನು ತಂದಿಲ್ಲ ಅಂದರೆ ನಾವು ನಿನ್ನನ್ನು ನಮ್ಮ ಮನೆಯಲ್ಲಿಟ್ಟುಕೊಳ್ಳುವದಿಲ್ಲ. ಮತ್ತು ನಿನ್ನ ಜೀವನವನ್ನು ನಿರ್ವಹಿಸಲು ಬಿಡುವದಿಲ್ಲ. ಅಂತ ಸತತವಾಗಿ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಕೊಟ್ಟಿರುತ್ತಾರೆ. ದಿನಾಂಕ 30/05/2020 ರಂದು   ಗಂಡ ದಿಗಂಬರ ಹಾಗೂ ಅತ್ತೆ ಪದ್ಮಿನಿ ಮಾವ ಕಿಶನ್ ಇವರೆಲ್ಲರೂ ನಮಗೆ ಮಿರ್ಖಲ ಹೊಲಕ್ಕೆ ಕೆಲಸ ಕುರಿತು ಹೋಗಬೇಕು ಅಂತ ಹೇಳಿ ಅವರು ಫಿರ್ಯಾದಿಯನ್ನು ಲಾತೂರದಿಂದ ಮಿರ್ಖಲ ಹೊಲದಲ್ಲಿದ್ದ ಮನೆಗೆ ಕರೆದುಕೊಂಡು ಹೋದರು ಅಲ್ಲಿ ಕೂಡ ನನ್ನ ಗಂಡನು ನೀನು ವ್ಯಾಪಾರ ಸಲುವಾಗಿ ತವರು ಮನೆಯಿಂದ 3 ಲಕ್ಷ ರೂಪಾಯಿ ಏಕೆ ತರುತ್ತಿಲ್ಲ ಎಂದು  ಮಾನಸಿಕ ಹಾಗೂ ದೈಹಿಕ ತೊಂದರೆ ಕೊಟ್ಟಿದ್ದಾರೆ. ಹಾಗೂ ದಿನಾಂಕ 05/06/2020 ರಂದು ಮದ್ಯಾಹ್ನ 1200 ಗಂಟೆಗೆ ನಾನು ಹೊಲದಲ್ಲಿ ಕೆಲಸ ಮಾಡುವಾಗ   ಗಂಡನಾದ ದಿಗಂಬರ ಸೂರ್ಯವಂಶಿ ಅತ್ತೆ ಪದ್ಮಿನಿ ಹಾಗೂ ಮಾವ ಕಿಶನ್ ಸೂರ್ಯವಂಶಿ ಈ ಮೂವರು   ಹತ್ತಿರ ಬಂದು ನೀವು ವ್ಯಾಪಾರ ಸಲುವಾಗಿ ತವರು ಮನೆಯಿಂದ 3 ಲಕ್ಷ ರೂಪಾಯಿ ತರಲಿಲ್ಲ ಎಂದು   ಬೈದು ಹೊಡೆ ಬಡೆ ಮಾಡಿದ್ದರು ಆವಾಗ   ಅತ್ತೆ ಮಾವ ಅವರು ಇವಳಿಗೆ ಜೀವಂತ ಬಿಡೋದಿಲ್ಲ ಎಂದು ಹೇಳಿ   ಅತ್ತೆ-ಮಾವ ನವರು ಕೆಳಗೆ ನೂಕಿದರು ಮತ್ತು ನನ್ನ ಕೈ ಕಾಲುಗಳು ಹಿಡಿದರು ಆವಾಗ   ಗಂಡನು ಹೊಲದಲ್ಲಿನ ಮನೆಯಲ್ಲಿಟ್ಟ ಒಂದು ಅಂದಾಜು ಒಂದು ಲೀಟರ್ ಸೀಮೆ ಎಣ್ಣೆಯನ್ನು ತಂದು  ಕೊಂದು ಹಾಕಲು ಅದನ್ನು  ಬಾಯಲ್ಲಿ ಹಾಕಿ ಸೀಮೆ ಎಣ್ಣೆ   ಕುಡಿಸಿದರು ನಾನು ಪ್ರತಿಕಾರ ಮಾಡಿದ್ದು ಆದರೆ ಅಂದಾಜು ಅರ್ದ ಬಾಟಲ್ ಎಣ್ಣೆ ಸೀಮೆ ನನ್ನ ಗಂಡ ನನಗೆ ಕುಡಿಸಿದನು ನಂತರ ಈ ಎಲ್ಲರೂ ನನಗೆ ಹೊಲದಲ್ಲಿದ್ದ ಒಂದು ತಗ್ಗಿನಲ್ಲಿ ನೂಕಿ ಹೋದರು ತಕ್ಷಣ   ಗಂಡನು ನನ್ನ ತಂದೆಯವರಿಗೆ ಪೋನ್ ಮಾಡಿ ನಿಮ್ಮ ಮಗಳು ಔಷದಿಯನ್ನು ಕುಡಿದಿದ್ದಾಳೆ ಆಕೆಗೆ ಇಲ್ಲಿಂದ ಕರೆದುಕೊಂಡು ಹೋಗಿ ಎಂದು ತಿಳಿಸಿದನು ನಂತರ ಈ ಎಲ್ಲರೂ ಅಲ್ಲಿಂದ ಓಡಿ ಹೋದರು ಸ್ವಲ್ಪ ಸಮಯದ ನಂತರ ಫಿರ್ಯಾದಿ ತಂದೆಯವರ ಪರಿಚಯದ ವ್ಯಕ್ತಿ ಶಿವ ಸಾ|| ಮಿರ್ಖಲ ಇವರು ನನ್ನ ಹತ್ತಿರ ಓಡಿ ಬಂದರು ಅವರು ನನಗೆ ಮೋಟಾರ್ ಸೈಕಲ್ ಮೇಲೆ ಕೂಡಿಸಿ ಪ್ರಥಮ ಔರಾದನಲ್ಲಿ ಇಲಾಜು ಕೊಡಿಸಿ ನಂತರ ನನ್ನ ಆರೋಗ್ಯ ಗಂಭೀರ ಇದ್ದ ಕಾರಣ ನನಗೆ ಶ್ವಾಸ್ ಆಸ್ಪತ್ರೆ ನಿಲಂಗಾ ನಲ್ಲಿ ತಂದು ಬತರ್ಿ ಮಾಡಿರುತ್ತಾರೆ.  ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 100/2020 ಕಲಂ 78(3) ಕೆ.ಪಿ. ಕಾಯ್ದೆ :-

 

ದಿನಾಂಕ 07/11/2020 ರಂದು ಬೆಳಗ್ಗೆ  11:00 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಕಾಂಬಳೆವಾಡಿ ಗ್ರಾಮದ ಹನುಮಾನ ಮಂದಿರದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಎಂದು ಬಾತ್ಮಿ ಬಂದ ಮೇರೆಗೆ,  ಸಿಬ್ಬಂದಿಯೊಂದಿಗೆ  12:45 ಗಂಟೆಗೆ ಕಾಂಬಳೆವಾಡಿ ಗ್ರಾಮಕ್ಕೆ ತಲುಪಿ ಹನುಮಾನ ಮಂದಿರ ಹತ್ತಿರ ಹೋಗಿ ಒಬ್ಬ ವ್ಯಕ್ತಿ ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 1 ರೂಪಾಯಿ 80 ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿದ್ದಾಗ  ದಾಳಿ ಮಾಡಿ ಅವನಿಗೆ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು ಗೋಪಾಳ ತಂದೆ ಪಾಂಡುರಂಗ ಪಾಶಮೆ ವಯಸ್ಸು: 30 ವರ್ಷ ಜಾತಿ: ಗೋಲ್ಲಾ ಉ: ಒಕ್ಕಲುತನ ಸಾ: ಕಾಂಬಳೆವಾಡಿ ತಾ: ಬಸವಕಲ್ಯಾಣ ಅಂತಾ ಹೇಳಿದಾಗ, ಇಲ್ಲಿ ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ, ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಂಡು ಈ ಹಣವನ್ನು ಕಿರಣ @ ಕಿಶನ ತಂದೆ ಬಳಿರಾಮ ಜೋಗೆ ವಯಸ್ಸು: 33 ವರ್ಷ ಜಾತಿ: ಕೋಳಿ ಉ: ಕೂಲಿಕೆಲಸ ಸಾ: ಜೋಗೆವಾಡಿ ತಾ: ಬಸವಕಲ್ಯಾಣ ಇವನಿಗೆ ಕೋಡುತ್ತೇನೆ ಅವನು ನನಗೆ ಕಮಿಷನ್ ಹಣ ನೀಡುತ್ತಾನೆ ಅಂತಾ ಹೇಳಿದನು.   ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ 1) ನಗದು ಹಣ 580 /-ರೂಪಾಯಿ, 2) ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಸಿಕ್ಕಿದ್ದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 55/2020 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ 07-11-2020 ರಂದು 14:00 ಗಂಟೆಗೆ ಪಿಎಸ್ಐ ರವರು  ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಬೇಮಳಖೇಡಾ ಗ್ರಾಮದ ಸರಕಾರಿ ಆಸ್ಪತ್ರೆಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ನಸೀಬಿನ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ  ಬೇಮಳಖೇಡಾ ಗ್ರಾಮದ ಸರಕಾರಿ ಆಸ್ಪತ್ರೆಯ ಎದುರಿಗೆ ಹೋಗಿ ನೋಡಿದಾಗ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 1 ರೂಪಾಯಿಗೆ 100 ರೂಪಾಯಿಗಳು ಕೊಡುತ್ತೇನೆ.ಅಂತ ಹೇಳುತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದುನ್ನು ಖಚಿತ ಪಡಿಸಿಕೊಂಡು ಸದರಿ ವ್ಯಕ್ತಿಯ ಮೇಲೆ 17:30 ಗಂಟೆಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದವನಿಗೆ ಹಿಡಿದು ಅವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಸುಧೀರ ತಂದೆ ಬಸವರಾಜ ಭಾಸ್ಕರ ವಯಃ33 ವರ್ಷ ಜಾತಿಃಹರಿಜನ ಉಃಪೆಂಟಿಂಗ್ ಕೆಲಸ ಸಾಃಬೇಮಳಖೇಡಾ ಅಂತಾ ತಿಳಿಸಿದನು. ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1960/-ರೂಪಾಯಿಗಳು ಮತ್ತು ಮಟಕಾ ನಂಬರ್ ಬರೆದ 1 ಮಟಕಾ ಚೀಟಿ, ಹಾಗು ಒಂದು ಬಾಲ ಪೆನ್ನ, ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 144/2020 ಕಲಂ 78(3) ಕೆಪಿ ಕಾಯ್ದೆ :-  

ದಿನಾಂಕ:07/11/2020 ರಂದು 13:00 ಗಂಟೆಗೆ   ಪಿ.ಎಸ್.(ಕಾ&ಸೂ) ಪೊಲೀಸ್ ರವರು ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತ ಖುರೇಶಿ ತಂದೆ ಉಸ್ಮಾನ ಖುರೇಶಿ ವಯಸ್ಸು//32 ವರ್ಷ ಜಾತಿ//ಮುಸ್ಲಿಂ //ಹೋಟಲ್ ಕೆಲಸ ಸಾ// ಅಮೀರಪೆಟ ಕಾಲೋನಿ ಬಸವಕಲ್ಯಾಣ ಇತನ್ನನ್ನು ಹೀಡಿದು ಅಂಗ ಶೋಧನೆ ಮಾಡಲು ಇತನ ಹತ್ತಿರ ನಗದು ಹಣ 5120/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.