Police Bhavan Kalaburagi

Police Bhavan Kalaburagi

Friday, March 30, 2018

KALABURAGI DISTRICT REPORTED CRIMES

ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ರಾಜಕುಮಾರ ತಂದೆ ಗರಮುಸಿಂಗ ಪವಾರ ಸಾ: ಸಿಂಧೋಲ್ ತಾಂಡಾ ತಾ:ಜಿ: ಬೀದರ  ಹಾ.ವ: ಬಿರಜು ಗೋಪಾಲ ಡಾಗಾ ರವರ ಮನೆಯಲ್ಲಿ ಬಾಡಿಗೆ ವಿಠಲ ಮಂದಿರ ಸ್ಟೇಷನ ಏರಿಯಾ ಕಲಬುರಗಿ ರವರು ದಿನಾಂಕ. 28/03/2018 ರಂದು 11 ಪಿ.ಎಂ ಸುಮಾರಿಗೆ ನಾನು ನನ್ನ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ನಂ. KA-32 EE- 5860 ಚೆಸ್ಸಿನಂ. MBLHA10AMDHJ81028, ಇ.ನಂ. HA10EJDHJ49206 ಅ,ಕಿ|| 25,000/- ರೂ ನೇದ್ದು ಡಾಗಾ ರವರ ಮನೆ ಮುಂದಿನ ರೋಡಿನ ಬದಿಯಲ್ಲಿ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡು ನಂತರ ದಿನಾಂಕ 29/03/2018 ರಂದು 6-00 ಎ.ಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಬಸಪ್ಪ ತಂದೆ ತುಕ್ಕಣ್ಣ ಕಲಶೇಟ್ಟಿ ಸಾ|| ಹಿರೋಳ್ಳಿ ತಾ|| ಆಳಂದ ಹಾ|||| ಗೋಳಾ ದೇಶಮುಖ ರವರ ಮನೆಯಲ್ಲಿ ಬಾಡಿಗೆ ಶಿವ ಮಂದಿರ ಹತ್ತಿರ ಅಗ್ರೀಕಲ್ಚರ ಲೇ ಔಟ ಕಲಬುರಗಿ ಇವರ ಸೋದರಮಾವನವರಾದ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಸಾ|| ಕೋರವಾರ ತಾ|| ಚಿತ್ತಾಪೂರ ಜಿ|| ಕಲಬುರಗಿ ಇತನು ನನ್ನ ಕಡೆಯಿಂದ ಎರಡು ವರ್ಷಗಳ ಹಿಂದೆ 80,000/- ರೂ ನಗದು ಕೈಗಡ ತೆಗೆದು ಕೊಂಡಿದ್ದು ನನ್ನ ಹಣ ಮರಳಿ ಕೋಡುವಂತೆ ಕೇಳಿದರೆ ನನಗೆ ಹಣಕೋಡದೆ ನನಗೆ ಬೆದರಿಸುತ್ತಾ ಬಂದಿರುತ್ತಾನೆ.  ದಿನಾಂಕ; 28/03/2018 ರಂದು 10;15 ಎಎಮ್ ಸುಮಾರಿಗೆ ನಾನು ಆರ್‌‌.ಟಿ.ಐ ಅರ್ಜಿ ಸಲ್ಲಿಸುವ ಸಲುವಾಗಿ ಅಪ್ಪನಗುಡಿಕಡೆಗೆ ಹೊರಟಿದ್ದಾಗ ಕುಂಬಾರಗಲ್ಲಿಯ ಹಣಮಂತ ದೇವರ ಗುಡಿ ಹತ್ತಿರ ಬರುತ್ತಿರುವಾಗ ಎದರುಗಡೆಯಿಂದ ನಮ್ಮ ಸೋದರಮಾವನಾದ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಹಾಗು ಪ್ರಭು ತಂದೆ ಶಿವಲಿಂಗಪ್ಪ ಕಲಶೇಟ್ಟಿ ಇವರುಗಳು ಬೈಕ್ ಮೇಲೆ ಬಂದು ನನಗೆ ತಡೆದು ಅವಾಚ್ಯವಾಗಿ ಬೈಯ ಹತ್ತಿದರು ಆಗ ನನಗೆ 80,000/- ರೂ ಹಣ ಕೋಡಬೇಕು, ನೀವೇ ಬಂದು ನನಗೆ ಬೈಯುತ್ತಿರಲ್ಲಾ ಅಂದಾಗ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಇತನು ಯಾವ ಹಣಕೊಡ ಬೇಕು ಮಗನೆ ಅಂತಾ ಅಂದವನೆ ಕೈಯಿಂದ ನನ್ನ ಬಾಯಿಯ ಮೇಲೆ ಹೋಡೆದನುಪ್ರಭು ತಂದೆ ಶಿವಲಿಂಗಪ್ಪ ಕಲಶೇಟ್ಟಿ  ಇತನು ನನ್ನ ಹೆಡಕಿನ ಮೇಲೆ ಕೈಯಿಂದ ಹೊಡೆದು ಎದೆಯ ಮೇಲಿನ ಅಂಗಿ ಹಿಡದು ಎಳೇದುಕೊಂಡು ಹೊರಟನು ಆಗ  ಅಲ್ಲೆ ಇದ್ದ ಸಿದ್ದು ತಂದೆ ಶಿವಲಿಂಗಪ್ಪ ಕಲಶೇಟ್ಟಿ ಹಾಗು ನಮ್ಮ ಅಳಿಯನಾದ ಶರಣಬಸಪ್ಪ ತಂದೆ ನಾಗೇಂದ್ರಪ್ಪ ಕಲಶೇಟ್ಟಿ ಇವರುಗಳು ನನಗೆ ಹೊಡೆಯುತ್ತಿರುವದನ್ನು ನೋಡಿ ಬಿಡಿಸಿಕೊಂಡರು ಇಲ್ಲದಿದ್ದರೆ ನನಗೆ ಇನ್ನೂ ಹೊಡೆಬಡಿ ಮಾಡುತ್ತಿದ್ದರು.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.