ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-06-2021
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 116/2021, ಕಲಂ. ಮನುಷ್ಯ ಕಾಣೆ :-
ದಿನಾಂಕ 03-06-2021 ರಂದು 0600 ಗಂಟೆಗೆ ಫಿರ್ಯಾದಿ ನಸರೀನ ಬೇಗಂ ಗಂಡ ಮೊಹ್ಮದ ರಫೀಕ, ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಚೀರಾಗಗಲ್ಲಿ ಚಿಟಗುಪ್ಪಾ, ಸದ್ಯ: ಬೇಳಕೇರಾ, ತಾ: ಚಿಟಗುಪ್ಪಾ ರವರ ಗಂಡ ಮೊಹ್ಮದ ರಫೀಕ ತಂದೆ ಮೊಹ್ಮದ ದಸ್ತಗೀರ ವಯ: 32 ವರ್ಷ ರವರು ಚಿಟಗುಪ್ಪಾದಲ್ಲಿರುವ ತಮ್ಮ ತಾಯಿಯ ಮನೆಯಿಂದ ಸೇಟ್ರಿಂಗ ಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದವರು ರಾತ್ರಿಯಾದರೂ ಮನೆಗೆ ಬರದ ಕಾರಣ ಫಿರ್ಯಾದಿಯು ತನ್ನ ತಾಯಿ ಸಾಜೀದಬೇಗಂ ಹಾಗು ತಮ್ಮ ಯುಸುಫ್ ರವರೆಲ್ಲರೂ ತಮ್ಮ ಸಂಬಂಧಿಕರ ಮನೆಗಳಿಗೆ ಕರೆ ಮಾಡಿ ಹಾಗೂ ಎಲ್ಲಾ ಕಡೆ ಹುಡುಕಾಡಿದರೂ ಗಂಡ ಸಿಕ್ಕಿರುವುದಿಲ್ಲ, ಗಂಡನ ಚಹರೆ ಪಟ್ಟಿ 1) ಎತ್ತರ : 5’ 1’’, 2) ಸಾಧರಣ ಮೈಕಟ್ಟು & ಕಪ್ಪು ಬಣ್ಣ, 3) ಧರಿಸಿದ ಬಟ್ಟೆಗಳು: ನೀಲಿ ಬಣ್ಣದ ಶರ್ಟ & ಪ್ಯಾಂಟ ಹಾಗೂ 4) ಭಾಷೆ: ಹಿಂದಿ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 25/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 16-06-2021 ರಂದು ಉಡುಮನಳ್ಳಿ ಗ್ರಾಮದ ಹನುಮಾನ ಮಂದಿರದ ಎದುರಿಗೆ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ನಸೀಬಿನ ಜೂಜಾಟ ನಡೆಸುತ್ತಿದ್ದಾನೆ ಅಂತಾ ಗಂಗಮ್ಮಾ ಪಿಎಸ್ಐ ಬೇಮಲಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಉಡುಮನಳ್ಳಿ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ಅರುಣಕುಮಾರ ತಂದೆ ಕಾಶಿನಾಥ ಕುರಿಕೊಟಿ ವಯ: 32 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಉಡುಮನಳ್ಳಿ ಇತನು ಹನುಮಾನ ಮಂದಿರದ ಎದುರಿಗೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 100/- ರೂಪಾಯಿಗಳು ಕೊಡುತ್ತೇನೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಆತನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1810/- ರೂ. ಮತ್ತು ಮಟಕಾ ನಂಬರ್ ಬರೆದ 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ ಪೆನ್ನು ನೇದವುಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 42/2021, ಕಲಂ. 498(ಎ), 323, 504, 506 ಜೊತೆ 34 ಐಪಿಸಿ :-
ಫಿರ್ಯಾದಿ ಪಾರ್ವತಿ ಗಂಡ ವಿದ್ಯಾಸಾಗರ ರಕ್ಷಾಳ ಸಾ: ಮುಧೋಳ(ಬಿ), ತಾ: ಕಮಲನಗರ, ಜಿ: ಬೀದರ ರವರ ಮದುವೆಯು ವಿದ್ಯಾಸಾಗರ ತಂದೆ ವೈಜಿನಾಥ ರಕ್ಷಾಳೆ ಸಾ: ಮುಧೋಳ(ಬಿ), ತಾ: ಕಮಲನಗರ, ಜಿ: ಬೀದರ ಇವರ ಜೊತೆ ದಿನಾಂಕ 30-05-2014 ರಂದು ಮುಧೋಳ(ಬಿ) ಗ್ರಾಮದ ತಮ್ಮ ಧರ್ಮದ ಅನುಸಾರವಾಗಿ ಹಿರಿಯ ಹಾಗು ಗ್ರಾಮದ ಜನರ ಸಮಕ್ಷಮದಲ್ಲಿ ಮಾಡಲಾಗಿದ್ದು, ಆದರೆ ಮದುವೆಯ ನಂತರ ಗಂಡನಾದ ವಿದ್ಯಾಸಾಗರ ಇತನು ಫಿರ್ಯಾದಿಗೆ ಕಿರುಕುಳ ನೀಡುವುದು, ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆ, ನಂತರ ದಿನಾಂಕ 25-09-2015 ರಂದು ಭಾಗ್ಯಶ್ರೀ ಅಂತ ಹೆಣ್ಣು ಮಗಳು ಹುಟ್ಟಿರುತ್ತಾಳೆ, ಆದರೆ ಆರೋಪಿತರಾದ ಗಂಡ ವಿದ್ಯಾಸಾಗರ, ಅತ್ತೆ ಸರಸ್ವತಿ, ಮಾವ ವೈಜಿನಾಥ ಹಾಗು ಭಾವ ಸತೀಷ ಇವರುಗಳು ಕೂಡಿ ನಿನಗೆ ಹೆಣ್ಣು ಮಗಳು ಹುಟ್ಟಿರುತ್ತದೆ, ನಿನಗೆ ಗಂಡು ಮಕ್ಕಳಾಗುವುದಿಲ್ಲ ಅಂತ ಅವಾಚ್ಯವಾಗಿ ಬೈಯುವುದು ಮಾಡಿರುತ್ತಾರೆ, ನಾದಿನಿ ಸುನಿತಾ ಗಂಡ ರಮೇಶ ಇವಳು ಮನೆಗೆ ಬಂದಾಗ ಕೆಟ್ಟದಾಗಿ ಬೈಯುತ್ತಾ ಗಂಡನಿಗೆ ಫಿರ್ಯಾದಿಯ ಬಗ್ಗೆ ಇಲ್ಲ-ಸಲ್ಲದ ಸುಳ್ಳು ಹೇಳಿರುತ್ತಾಳೆ, ಸುಮಾರು ಎರಡು ವರ್ಷಗಳ ಹಿಂದೆ ಗಂಡ ಫಿರ್ಯಾದಿ ಮತ್ತು ಮಗಳಿಗೆ ತವರು ಮನೆ ಜೋಜಾನಾ ಗ್ರಾಮಕ್ಕೆ ಬಿಟ್ಟು ಬಂದಿರುತ್ತಾರೆ ಹಾಗೂ ನೀನು ಮರಳಿ ಮನೆಗೆ ಬಂದರೆ ನಿನಗೆ ಹಾಗು ನಿನ್ನ ಮಗಳಿಗೆ ಕೊಲೆ ಮಾಡುತ್ತೆವೆಂದು ಜೀವ ಬೆದರಿಕೆ ಹಾಕಿರುತ್ತಾರೆ, ನಂತರ ದಿನಾಂಕ 15-02-2021 ರಂದು ಫಿರ್ಯಾದಿಯವರ ತಾಯಿ ಶರಣಮ್ಮಾ ಹಾಗೂ ಗ್ರಾಮದ ನಾಗಶೆಟ್ಟಿ ಪಡಂಪಳ್ಳೆ, ಕಾಶಿನಾಥ ಕನ್ನಳ್ಳೆ ರವರು ಕೂಡಿ ಫಿರ್ಯಾದಿಗೆ ಮುಧೋಳ(ಬಿ) ಗ್ರಾಮದ ಗಂಡನ ಮನೆಗೆ ಕರೆದುಕೊಂಡು ಹೋಗಿ ಗಂಡ ಹಾಗು ಅತ್ತೆ-ಮಾವನಿಗೆ ಪಾರ್ವತಿ ಇವಳಿಗೆ ನಿಮ್ಮ ಮನೆಯಲ್ಲಿ ನಡೆಸಿಕೊಳ್ಳಿರಿ ಅಂತ ಬುದ್ದಿವಾದ ಹೇಳಿರುತ್ತಾರೆ ಆದರೆ ಸದರಿ ಆರೋಪಿತರು ಇಕೆಗೆ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ ವಾಪಸ್ಸು ಕರೆದುಕೊಂಡು ಹೋಗಿರಿ ಅಂತ ಹೇಳಿ ಫಿರ್ಯಾದಿಗೆ ಮನೆಯಿಂದ ವಾಪಸ್ಸು ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 16-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 55/2021, ಕಲಂ. 379 ಐಪಿಸಿ :-
ದಿನಾಂಕ 13-06-2021 ರಂದು ಫಿರ್ಯಾದಿ ಸಂತೋಷ ತಂದೆ ಚಂದ್ರಪ್ಪಾ ಮೇತ್ರೆ ವಯ: 30 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ಚಿಟಗುಪ್ಪಾ ಜಿ: ಬೀದರ ರವರು ಚಿಟಗುಪ್ಪಾದಿಂದ ತನ್ನ ಹೆಂಡತಿಯ ತವರು ಮನೆಯಾದ ಮುಸ್ತರಿ ಗ್ರಾಮಕ್ಕೆ ಬೀಜ ತರಲು ತನ್ನ ಮೋಟಾರ್ ಸೈಕಲ್ ನಂ. ಕೆಎ-39/ಎಸ್-5348 ನೇದರ ಮೇಲೆ ಹೋಗಿ ಮುಸ್ತರಿ ಗ್ರಾಮದಲ್ಲಿ ಬೀಜ ಸಿಗದೆ ಇದ್ದಾಗ ಮರಳಿ ಚಿಟಗುಪ್ಪಾಗೆ ಬರುತ್ತಿರುವಾಗ ಮುಸ್ತರಿಯ ಬಸ್ ನಿಲ್ದಾಣದ ಹತ್ತಿರ ಒಬ್ಬ ಅಪರಿಚಿತ ವ್ಯಕ್ತಿ ನಿಂತಿದ್ದು ಆತನು ಬಿಜ ಕೊಡಿಸುವುದಾಗಿ ಹೇಳಿದನು, ಆಗ ಫಿರ್ಯಾದಿಯು ಆತನಿಗೆ ಬೀಜ ಕೊಡಿಸಿರಿ ಅಂತ ಕೇಳಿದಕ್ಕೆ ಆತನು ಮಾಡಗೂಳ ಗ್ರಾಮದಲ್ಲಿ ನನಗೆ ಪರಿಚಯದವರ ಹತ್ತಿರ ಬೀಜ ಇದೆ ನೀವು ನನ್ನ ಜೊತೆ ಬಂದರೆ ನಾನು ಕೊಡಿಸುತ್ತೇನೆ ಅಂತ ಹೇಳಿದನು, ಆಗ ಇಬ್ಬರೂ ಕೂಡಿ ಸದರಿ ಮೋಟಾರ್ ಸೈಕಲ್ ಮೇಲೆ ಮಾಡಗೂಳ ಗ್ರಾಮದ ಹನುಮಾನ ಮಂದಿರದ ಹತ್ತಿರ ಬಂದಾಗ ಸದರಿ ಅಪರಿಚಿತ ವ್ಯಕ್ತಿ ನಾನು ಬೀಜ ಕೊಡುವ ವ್ಯಕ್ತಿ ಇದ್ದಾನು ಅಥವಾ ಇಲ್ಲಾ ಎಂಬುದನ್ನು ನೊಡಿಕೊಂಡು ಬರುತ್ತೇನೆ ನೀವು ಇಲ್ಲಿ ಇರಿ ಅಂತ ಹೇಳಿ ಫಿರ್ಯಾದಿಗೆ ಮಾಡಗೂಳ ಗ್ರಾಮದ ಹುನುಮಾನ ಮಂದಿರದ ಹತ್ತಿರ ನಿಲ್ಲಿಸಿ ಸದರಿ ಮೋಟಾರ್ ಸೈಕಲನ್ನು 1830 ಗಂಟೆಗೆ ತೆಗೆದುಕೊಂಡು ಹೋಗಿ ಮರಳಿ ಆತನು ಬರಲೇ ಇಲ್ಲ, ನಂತರ ಫಿರ್ಯಾದಿಯು ಎಲ್ಲಾ ಕಡೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲಾ, ಕಳೆದು ಹೋದ ಮೋಟಾರ್ ಸೈಕಲ್ ವಿವರ 1) KA-39/S-5348, 2) ಚಾಸಿಸ್ ನಂ. MBLJAW143LHH03123, 3) ಇಂಜಿನ್ ನಂ. JA06EWLHH03542 ಹಾಗೂ 4) ಅ.ಕಿ 40,000/- ರೂಪಾಯಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 16-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 106/2021, ಕಲಂ. 380 ಐಪಿಸಿ :-
ದಿನಾಂಕ 04-06-2021 ರಂದು 0200 ಗಂಟೆಯಿಂದ 0300 ಗಂಟೆಂiÀi ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಲಕ್ಷ್ಮಣ ತಂದೆ ನಾಗಶೆಟ್ಟಿ ರಾಠೋಡ ವಯ: 24 ವರ್ಷ, ಜಾತಿ:
ಲಮಾಣಿ, ಸಾ: ಖಂಡ್ರೆ ತಾಂಡಾ ಭಾಲ್ಕಿ ರವರ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಮನೆಯಲ್ಲಿನ ಒಂದು ಮೋಬೈಲ್ ಅ.ಕಿ 10,000/- ರೂಪಾಯಿ ಹಾಗೂ ಸ್ಯಾಮಸಂಗ್ ಕಂಪನಿಯ ಒಂದು ಟ್ಯಾಬ ಅ.ಕಿ 7000/-
ರೂಪಾಯಿ, ಹೀಗೆ
ಒಟ್ಟು 17,000/- ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.