ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-09-2020
ನೂತನ ನಗರ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 15/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-
ಫಿರ್ಯಾದಿ ಮಹೇಶ ತಂದೆ ಚಂದ್ರಪ್ಪ ವಯ: 40 ವರ್ಷ, ಜಾತಿ: ಎಸ್. ಟಿ ಗೊಂಡ, ಸಾ: ಖಾನಾಪೂರ, ತಾ: ಭಾಲ್ಕಿ ರವರ ತಂದೆಯಾದ ಚಂದ್ರಪ್ಪ ರವರು ಕೆ.ಎಸ್.ಆರ್.ಟಿ.ಸಿ ಇಲಾಖೆಯಲ್ಲಿ ನಿರ್ಹಾಹಕ ಅಂತ ಕರ್ತವ್ಯ ನಿರ್ವಹಿಸಿ 2005 ನೇ ಸಾಲಿನಲ್ಲಿ ನಿವೃತ್ತಿ ಹೊಂದಿರುತ್ತಾರೆ, ಅವರು ನಿವೃತ್ತಿ ಹೊಂದಿದ ನಂತರ ನಿರಂತರವಾಗಿ ಬೀದರ ನಗರದಲ್ಲಿನ ಪಾಪನಾಶ, ಮೈಲಾರ, ಘಾಣಗಾಪೂರ ಹಾಗೂ ಇತರೆ ಮಂದಿರಗಳಲ್ಲಿ ದೇವರಿಗೆ ಸ್ಮರಿಸುತ್ತಾ ಗುಡಿ ಗುಂಡಾರಗಳಲ್ಲಿ ವಾಸ ಮಾಡುತ್ತಾ ಇದ್ದು, ಆಗಾಗ ಮನೆಗೆ ಬಂದು ಒಂದೆರಡು ದಿವಸ ಉಳಿದುಕೊಂಡು ಪುನ ಹೋಗುತ್ತಿದ್ದರು, ಹೀಗಿರುವಾಗ ದಿನಾಂಕ 06-09-2020 ರಂದು ಫಿರ್ಯಾದಿಗೆ ಗೊತ್ತಾಗಿದ್ದೆನೆಂದರೆ ತಂದೆಯು ಬೀದರ ನಗರದ ಪಾಪನಾಶ ಮಂದಿರದ ಆವರಣದಲ್ಲಿನ ಒಂದು ಕೋಣೆಯಲ್ಲಿ ಮೃತಪಟ್ಟಿರುತ್ತಾರೆಂದು ಗೊತ್ತಾದ ಕೂಡಲೇ ಫಿರ್ಯಾದಿಯು ತಮ್ಮ ಭಾವನಾದ ರಮೇಶ ಹಾಗು ಸಂಬಂಧಿಕನಾದ ನಿರಂಜನ ಮೂವರು ಕಡಿ ಕೂಡಲೇ ಪಾಪನಾಶ ಮಂದಿರಕ್ಕೆ ಹೋಗಿ ನೋಡಲು ಅಲ್ಲಿ ಒಂದು ಕೋಣೆಯಲ್ಲಿ ತಂದೆ ಚಂದ್ರಪ್ಪ ರವರ ಮೃತ ದೇಹ ಕಂಡಿದ್ದು, ತಂದೆಯಾದ ಚಂದ್ರಪ್ಪ ರವರು ದಿನಾಂಕ 05, 06-09-2020 ರಂದು ರಾತ್ರಿ ವೇಳೆಯಲ್ಲಿ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದು, ಅವರು ಯಾವ ರೀತಿ ಮೃತಪಟ್ಟಿರುತ್ತಾರೆಂದು ನಿಖರವಾಗಿ ಗೊತ್ತಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 74/2020, ಕಲಂ. 498(ಎ), 323, 504, 506 ಜೊತೆ 149 ಐಪಿಸಿ :-
ಫಿರ್ಯಾದಿ ಲಕ್ಷ್ಮೀ ಗಂಡ ನರಸಿಂಗ ಪವಾರ ವಯ: 28 ವರ್ಷ, ಜಾತಿ: ಮರಾಠಾ, ಸಾ: ಚನ್ನಬಸವ ನಗರ ನಿಮಿಯಾ ಶಾಲೆ ಹತ್ತಿರ, ಬೀದರ ರವರಿಗೆ 2018 ನೇ ಸಾಲಿನಲ್ಲಿ ಬೀದರ ನಗರದ ಚನ್ನಬಸವ ಕಾಲೋನಿಯ ನರಸಿಂಗ ತಂದೆ ರಮೇಶ ಪವಾರ ರವರ ಜೊತೆಗೆ ಹಿಂದು ಸಾಂಪ್ರದಾಯದಂತೆ ಮದುವೆ ಮಾಡಿದ್ದು ಇರುತ್ತದೆ, ಮದುವೆಯಾದ ನಂತರ ಆರೋಪಿತರಾದ ಗಂಡ ನರಸಿಂಗ ತಂದೆ ರಮೇಶ ಪವಾರ, ಮಾವ ರಮೇಶ ತಂದೆ ಶಂಕರರಾವ ಪವಾರ, ಅತ್ತೆ ಸುಮನಬಾಯಿ ಗಂಡ ರಮೇಶ ಪವಾರ, ಮೈದನ ವಿನೋದಕುಮಾರ ತಂದೆ ರಮೇಶ ಪವಾರ, ಸಾಯಿನಾಥ ತಂದೆ ರಮೇಶ ಪವಾರ ರವರೇಲ್ಲರೂ ಫಿರ್ಯಾದಿಯ ಜೊತೆಗೆ 5-6 ತಿಂಗಳವರೆಗೆ ಸರಿಯಾಗಿ ನಡೆದುಕೊಂಡು ನಂತರದಲ್ಲಿ ನೀನು ಸರಿಯಾಗಿಲ್ಲಾ, ನನ್ನ ಮಗನಿಗೆ ತಕ್ಕ ಸೊಸೆ ಇಲ್ಲಾ, ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ, ನೀನು ನಮ್ಮ ಮನೆಯಲ್ಲಿ ಇರಬೇಡ, ನಮ್ಮ ಮನೆ ಬಿಟ್ಟು ಹೋಗು ಅಂತಾ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುವುದು ಅಲ್ಲದೆ ಗಂಡ ನಿನಗೆ ನಾನು ಬಿಟ್ಟು ಬಿಡುತ್ತೇನೆ ನನಗೆ ನಿನ್ನ ಜೊತೆ ಸಂಸಾರ ಮಾಡಲು ಇಷ್ಟವಿಲ್ಲಾ ಅಂತಾ ಕಿರುಕುಳ ನೀಡುತ್ತಿದ್ದರಿಂದ ಫಿರ್ಯಾದಿಯು ಸದರಿ ವಿಷಯ ತಮ್ಮ ತಂದೆ-ತಾಯಿಗೆ ತಿಳಿಸಿದಾಗ ಅವರು ಫಿರ್ಯಾಸದಿಗೆ ಸಮಾಧಾನ ಮಾಡಿ ಸುಮ್ಮನೆ ಇರುವಂತೆ ತಿಳುವಳಿಕೆ ಹೇಳಿರುತ್ತಾರೆ, ನಂತರ ನವೆಂಬರ 2019 ತಿಂಗಳಿನಲ್ಲಿ ತಂದೆಯವರಿಗೆ ಕರೆಯಿಸಿ ಫಿರ್ಯಾದಿಗೆ ಅವರ ಜೊತೆಗೆ ತವರು ಮನೆಗೆ ಕಳುಹಿಸಿರುತ್ತಾರೆ, ಅಲ್ಲಿಂದ ಇಲ್ಲಿಯವರೆಗೆ ಫಿರ್ಯಾದಿಯು ತವರು ಮನೆಯಲ್ಲಿಯೇ ವಾಸವಾಗಿದ್ದು, ನಂತರ ಫಿರ್ಯಾದಿಯ ತಂದೆಯವರು ಫಿರ್ಯಾದಿಯ ಗಂಡನಿಗೆ ಕರೆ ಮಾಡಿ ಮಗಳಿಗೆ ಕರೆದುಕೊಂಡು ಹೋಗಿ ಅಂತಾ ಬಹಳ ಸಲ ಕೊರಿಕೊಂಡರು ಅವರು ಬಂದಿರುವುದಿಲ್ಲಾ, ಹೀಗಿರುವಾಗ ದಿನಾಂಕ 02-08-2020 ರಂದು ಫಿರ್ಯಾದಿಯು ತವರು ಮನೆಯಲ್ಲಿದ್ದಾಗ ಆರೋಪಿತರಾದ ಗಂಡ, ಮಾವ, ಅತ್ತೆ, ಮೈದುನ ರವರು ಕೂಡಿ ಬಂದು ಮಾವ ಫಿರ್ಯಾದಿಯ ತಂದೆಗೆ ನೀವು ಪದೇ ಪದೇ ಕರೆ ಮಾಡಿ ಕರೆದುಕೊಂಡು ಹೋಗಿ ಅಂತಾ ಹೇಳುತ್ತಿದ್ದಿರಿ ನಾವು ನಿಮ್ಮ ಮಗಳಿಗೆ ನಮ್ಮ ಮನೆಗೆ ಕರೆದುಕೊಂಡು ಹೋಗುವುದಿಲ್ಲಾ ಅಂತಾ ಎಷ್ಟು ಸಲ ಹೇಳಬೇಕು ಅಂತಾ ಅಂದಾಗ ತಂದೆಯವರು ಅವರಿಗೆ ಹೀಗೆ ಮಾಡಿದರೆ ನನ್ನ ಮಗಳ ಜೀವನ ಹಾಳಾಗುತ್ತದೆ ದಯವಿಟ್ಟು ಕರೆದುಕೊಂಡು ಹೋಗಿ ಅಂತಾ ವಿನಂತಿ ಮಾಡುವಾಗ ಗಂಡ ನಾನು ಅವಳಿಗೆ ಇಟ್ಟು ಕೊಳ್ಳಲ್ಲಾ ಅಂತಾ ಎಷ್ಟು ಸಲ ಹೇಳಿದರು ನನಗೆ ಕರೆ ಯಾಕೆ ಮಾಡುತ್ತಿ ಅಂತಾ ಅವಾಚ್ಯವಾಗಿ ಬೈಯುವಾಗ ಫಿರ್ಯಾದಿಯು ಏಕೆ ಅವಾಚ್ಯವಾಗಿ ಬೈಯುತ್ತಿದ್ದಿರಿ ಅಂತಾ ನಡುವೆ ಹೋದಾಗ ಗಂಡ ಫಿರ್ಯಾದಿಗೆ ತನ್ನ ಕೈಯಿಂದ ಕಪಾಳದಲ್ಲಿ, ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ನಂತರ ಅತ್ತೆ ಹೊಡಿರಿ ಇಕೆಗೆ ಅಂತಾ ಕೂದಲು ಹಿಡಿದು ಜಿಂಜಾಮುಷ್ಟಿ ಮಾಡಿರುತ್ತಾರೆ, ನಂತರ ಮೈದುನ ನಮ್ಮ ಮನೆಗೆ ಬಂದರೆ ನಿನಗೆ ಜಿವಂತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 188/2020, ಕಲಂ. 3, 4, 6 ಪಿ.ಐ.ಟಿ ಕಾಯ್ದೆ 1956 :-
ದಿನಾಂಕ 06-09-2020 ರಂದು ಭಾಲ್ಕಿಯ ಉಮೇಶ ಲಾಡ್ಜನಲ್ಲಿ ಗಂಡಸು ಹಾಗು ಹೆಂಗಸgÀÄ ವೇಶಾವಾಟಿಕೆಯಲ್ಲಿ ತೊಡಗಿದ್ದಾರೆಂದು ಡಾ. ದೇವರಾಜ.ಬಿ ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಡಿಎಸ್ಪಿ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ತಮ್ಮ ಸಿಬ್ಬಂದಿಯವರೊಡನೆ ಉಮೇಶ ಲಾಡ್ಜಗೆ ಹೋಗಿ ದಾಳಿ ಮಾಡಿದಾಗ 3 ಜನ ಓಡಿ ಹೋಗುತ್ತಿರುವಾಗ ಸಿಬ್ಬಂದಿಯವರ ಸಹಾಯದಿಂದ ಹಿಡಿದು ವಿಚಾರಿಸಲಾಗಿ 1) ಯಲ್ಲಪ್ಪಾ ತಂದೆ ವಿಶ್ವನಾಥ ಸಂಪಂಗೆ, ವಯ: 26 ವರ್ಷ, ಸಾ: ಪಾಪವ್ವ ನಗರ ಭಾಲ್ಕಿ, 2) ದಿಗಂಬರ ತಂದೆ ವೀರಶೆಟ್ಟಿ ಖಂಡಾಳೆ, ವಯ: 51 ವರ್ಷ, ಜಾತಿ: ಲಿಂಗಾಯತ, ಸಾ: ನಿಡೆಬಾನ ಹಾಗೂ 3) ರಾಜಕುಮಾರ ತಂದೆ ನಾಗಪ್ಪಾ ಮೋರೆ, ವಯ: 35 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸೈದಾಪುರ ವಾಡಿ ಅಂತ ತಿಳಿಸಿದ್ದು, ನಂತರ ಅವರೆಲ್ಲರಿಗೆ ಪಂಚರ ಸಮಕ್ಷಮದಲ್ಲಿ ವಿಚಾರಿಸಲು ಅವರೆಲ್ಲರೂ ನಾವು ಈ ಉಮೇಶ ಲಾಡ್ಜನಲ್ಲಿ ಸಂಭೋಗಕ್ಕಾಗಿ ಬಂದಿದ್ದು ಇಲ್ಲಿನ ಮ್ಯಾನೇಜರ ಕಾಶೆಪ್ಪಾ ಖಂಡಾಳೆ ಇವನು ನೀವು ರೂಮಿನಲ್ಲಿ ವಸತಿಗಾಗಿ ಇದ್ದರೆ ರೂ. 300/- ಹಣ ನೀಡಬೇಕು ನೀವು ಹೆಂಗಸರೊಂದಿಗೆ ಸಂಭೋಗದಲ್ಲಿ ತೊಡಗಲು ನೀವು ರೂ. 900/- ಹಣ ನೀಡಬೇಕು ಎಂದು ತಿಳಿಸಿರುತ್ತಾರೆ ಆದ್ದರಿಂದ ನಾವು ಅವನಿಗೆ ತಲಾ ರೂ. 900/- ನೀಡಿ ಮೂವರು ಈಗಾಗಲೆ ಲಾಡ್ಜ ರೂಮಿನಲ್ಲಿ ಸಂಭೋಗದಲ್ಲಿ ತೊಡಗಿರುವ ಹೆಂಗಸರೊಂದಿಗೆ ಸಂಭೋಗಕ್ಕಾಗಿ ಕುಳಿತಿರುತ್ತೇವೆ ಎಂದು ತಿಳಿಸಿದರು, ನಂತರ ಲಾಡ್ಜಿನಲ್ಲಿರುವ ರೂಮ ನಂ. 04 ನೇದನ್ನು ತೆರೆದು ನೋಡಲು ಲಾಡ್ಜಿನ ಕೋಣೆಯಲ್ಲಿರುವ ಪಲ್ಲಂಗದ ಮೇಲೆ ಒಬ್ಬ ಹೆಂಗಸು ಕೆಳಗಡೆ ಮಲಗಿದ್ದು ಅವಳ ಮೇಲೆ ಅರೆ ನಗ್ನವಾಗಿ ಒಬ್ಬ ಗಂಡಸು ಮಲಗಿದ್ದು, ಸದರಿ ಹೆಂಗಸಿಗೆ ಹೆಸರು ವಿಚಾರಿಸಲು ಅವಳು ತನ್ನ ಹೆಸರು ಪಾರ್ವತಿ ಗಂಡ ಪರಶುರಾಮ ರಾಠೊಡ, ವಯ: 40 ವರ್ಷ, ಜಾತಿ: ಲಮಾಣಿ, ಸಾ: ಬೀರಿ(ಬಿ) ತಾಂಡಾ ಅಂತಾ ತಿಳಿಸಿದಳು, ಅವಳೊಂದಿಗೆ ಇರುವ ಗಂಡಸು ವ್ಯಕ್ತಿಗೆ ಹೆಸರು ವಿಚಾರಸಲು ಅವನು ತನ್ನ ಹೆಸರು ಬಾಲಾಜಿ ತಂದೆ ಮಲ್ಲಿಕಾರ್ಜುನ ಬೆಲ್ಲಾಳೆ, ವಯ: 39 ವರ್ಷ, ಜಾತಿ: ಲಿಂಗಾಯತ, ಸಾ: ತೀನ ದುಕಾನ ಗಲ್ಲಿ ಭಾಲ್ಕಿ ಅಂತ ತಿಳಿಸಿ ನಾನು ಲಾಡ್ಜ ಮ್ಯಾನೇಜರಗೆ ರೂ. 900/- ಹಣ ನೀಡಿರುತ್ತೇನೆ ಅವನು ಹಣ ಪಡೆದು ನಮಗೆ ಸಂಭೋಗಕ್ಕಾಗಿ ರೂಮ ವ್ಯವಸ್ಥೆ ಮಾಡಿಕೊಟ್ಟಿರುತ್ತಾನೆಂದು ತಿಳಿಸಿದನು, ನಂತರ ಇನ್ನೊಂದು ರೂಮ ನಂ. 09 ನೇದನ್ನು ತೆರೆದು ನೋಡಲು ಲಾಡ್ಜಿನ ಕೋಣೆಯಲ್ಲಿರುವ ಪಲ್ಲಂಗದ ಮೇಲೆ ಒಬ್ಬ ಹೆಂಗಸು ಕೆಳಗಡೆ ಮಲಗಿದ್ದು ಅವಳ ಮೇಲೆ ಅರೆ ನಗ್ನವಾಗಿ ಒಬ್ಬ ಗಂಡಸು ಮಲಗಿದ್ದು ನೋಡಿ ಸದರಿ ಹೆಂಗಸಿಗೆ ಹೆಸರು ವಿಚಾರಿಸಲು ಅವಳು ತನ್ನ ಹೆಸರು ಸುನಿತಾ ಗಂಡ ದೀಪಕ ಚೌಹಾಣ, ವಯ: 35 ವರ್ಷ, ಜಾತಿ: ರಜಪುತ, ಸಾ: ರೈಲ್ವೆ ಸ್ಟೇಶನ ರೋಡ ಭಾಲ್ಕಿ ಅಂತಾ ತಿಳಿಸಿದಳು, ಅವಳೊಂದಗೆ ಇರುವ ಗಂಡಸು ವ್ಯಕ್ತಿಗೆ ವಿಚಾರಿಸಲು ಅವನು ತನ್ನ ಹೆಸರು ಸಂದೀಪ ತಂದೆ ಶ್ರೀಹರಿ ಶೇರಿಕಾರ, ವಯ: 32 ವರ್ಷ, ಜಾತಿ: ಕಬ್ಬಲಿಗ, ಸಾ: ಖೇಡ ಅಂತ ತಿಳಿಸಿ ನಾನು ಲಾಡ್ಜ ಮ್ಯಾನೇಜರಗೆ ರೂ. 900/- ಹಣ ನೀಡಿರುತ್ತೇನೆ ಅವನು ಹಣ ಪಡೆದು ನಮಗೆ ಸಂಭೋಗಕ್ಕಾಗಿ ರೂಮ ವ್ಯವಸ್ಥೆ ಮಾಡಿಕೊಟ್ಟಿರುತ್ತಾನೆಂದು ತಿಳಿಸಿದನು, ಸದರಿ ಲಾಡ್ಜ ಮಾಲಿಕ ಕಾಶೆಪ್ಪಾ ಖಂಡಾಳೆ ಎಲಿದ್ದಾನೆ ಎಂದು ನೋಡಲು ಅವನು ಲಾಡ್ಜನಿಂದ ಫರಾರಿಯಾಗಿದ್ದು ಇರುತ್ತದೆ, ಸದರಿ 2 ರೂಮಿನಲ್ಲಿ ಬಿದ್ದಿರುವ ಕಾಂಡಮಗಳನ್ನು ಜಪ್ತಿ ಮಾಡಿದ್ದು ಹಾಗೂ ಲಾಡ್ಜ ಮಾಲಿಕನು ಟೇಬಲ ಡ್ರಾದಲ್ಲಿ ಹಣವನ್ನು ಇಟ್ಟು ಓಡಿ ಹೋಗಿದ್ದಾನೆಂದು ದಿಗಂಬರ ತಂದೆ ವೀರಶೆಟ್ಟಿ ಖಂಡಾಳೆ, 51 ವರ್ಷ, ಲಿಂಗಾಯತ, ಕೂಲಿ ಕೆಲಸ, ಸಾ: ನಿಡೆಬಾನ ಇವನು ತಿಳಿಸಿದ ಮೇರೆಗ ಟೇಬಲ ಡ್ರಾ ತೆರೆದು ನೋಡಲು ಅಲ್ಲಿ ಒಟ್ಟು ರೂ. 4500/- ಹಣ ಇದ್ದುದನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು, ಸದರಿ ಹೆಂಗಸರಾದ ಪಾರ್ವತಿ ಹಾಗೂ ಸುನಿತಾ ಹಾಗೂ ಗಂಡಸರಾದ ಯಲ್ಲಪ್ಪಾ, ದಿಗಂಬರ, ರಾಜಕುಮಾರ, ಬಾಲಾಜಿ ಹಾಗೂ ಸಂದೀಪ ಇವರೆಲ್ಲರ ವಿವರವಾದ ವಿಳಾಸ ಪಡೆದು ನಾವು ಕರೆದಾಗ ಬಂದು ಲಾಡ್ಜ ಮಾಲೀಕನು ಬಾಡಿಗೆ ಪಡೆದು ಹೆಣ್ಣು ಮಕ್ಕಳಿಂದ ವೇಶ್ಯಾವಾಟಿಕೆ ಧಂದೆ ನಡೆಸುತ್ತಾನೆ ಎಂಬುವುದಕ್ಕೆ ಸಾಕ್ಷಿ ಹೇಳಿಕೆ ಕೊಡಲು ಹಾಜರಾಗಬೇಕೆಂದು ತಿಳಿಸಿ ಅವರನ್ನು ಅಲ್ಲಿಂದ ಕಳುಹಿಸಿ, ಸದರಿ ಲಾಡ್ಜ ಲೀಸ ಪಡೆದ ಮಾಲೀಕ ಮತ್ತು ಮ್ಯಾನೇಜರ ಕಾಶೆಪ್ಪಾ ಖಂಡಾಳೆ ಸಾ: ಭಾತಂಬ್ರಾ ಇವರಿಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 119/2020, ಕಲಂ. 279, 338 ಐಪಿಸಿ :-
ದಿನಾಂಕ 06-09-2020 ರಂದು ಫಿರ್ಯಾದಿ ಸುನೀಲಕುಮಾರ ತಂದೆ ಶಿವಣ್ಣಾ ಖಜ್ಜಿ ಸಾ: ಖೇಣಿ ರಂಜೋಳ, ತಾ: ಬೀದರ ರವರು ತನ್ನ ಹೆಂಡತಿ ಪದ್ಮಣಿಬಾಯಿ ಇಬ್ಬರು ತಮ್ಮೂರದಿಂದ ಆಳಂದಿ ಗ್ರಾಮಕ್ಕೆ ಮಹಾರಜರ ಹತ್ತಿರ ನೊಡಲಿಕೆ ಬಂದಿದ್ದು ಮತ್ತು ಫಿರ್ಯಾದಿಯ ಅಣ್ಣ ಅರವಿಂದ ಇವರು ಸಹ ಆಳಂದಿ ಗ್ರಾಮಕ್ಕೆ ಬಂದಿದ್ದು, ನಂತರ ಅಣ್ಣ ಅರವಿಂದ ಇವರು ನಾನು ತಮ್ಮೂರಿಗೆ ಮುಂದೆ ಹೋಗುತ್ತೇನೆ ನೀವು ಹಿಂದೆ ಬನ್ನಿ ಅಂತ ಹೇಳಿ ಮೋಟಾರ ಸೈಕಲ್ ನಂ. ಎಪಿ-23/ಕೆ-1229 ನೇದ್ದರ ಮೇಲೆ ಹೋಗುವಾಗ ಸದರಿ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಉದಗೀರ-ಬೀದರ ರೋಡಿನ ಮೇಲೆ ಅಂಬೆಸಾಂಗವಿ ಕ್ರಾಸ್ ಹತ್ತಿರ ಧಾಬಾದ ಮುಂದೆ ರೋಡ ಡಿವಾಯಡರಗೆ ಡಿಕ್ಕಿ ಹೊಡೆದು ಮೋಟಾರ ಸೈಕಲ ಸಮೇತ ಬಿದ್ದಿರುತ್ತಾರೆ, ಸದರಿ ಘಟನೆಯಿಂದ ರವಿಂದರ ಇವರ ಎಡಗಾಲ ತೊಡೆಗೆ ಭಾರಿ ಗುಪ್ತಗಾಯ, ಎಡಗೈ ಮೊಳಕೈ ಹತ್ತಿರ ಭಾರಿ ಗುಪ್ತಗಾಯವಾಗಿರುತ್ತವೆ, ನಂತರ ಅವರಿಗೆ 108 ಅಂಬುಲೇನ್ಸನಲ್ಲಿ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 118/2020, ಕಲಂ. 279, 338 ಐಪಿಸಿ ಜೊತೆ 187 ಐ.ಎಮ್.ವಿ ಕಾಯ್ದೆ :-
ದಿನಾಂಕ 06-09-2020 ರಂದು ಫಿರ್ಯಾದಿ ರಾಜಪ್ಪಾ ತಂದೆ ಅಶೋಕ ಮೂಲಗೆ, ವಯ: 30 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಖಟಕಚಿಂಚೋಳಿ, ಸದ್ಯ: ಕೂಡಂಬಲ ರವರು ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆಎ-39/ಕ್ಯೂ-0299 ನೇದರ ಮೇಲೆ ಹುಮನಾಬಾದಕ್ಕೆ ಹೋಗಿ ಮರಳಿ ಕೂಡಂಬಲಕ್ಕೆ ಹೋಗುವಾಗ ಚಿಟಗುಪ್ಪಾ-ಕೂಡಂಬಲ ರೋಡ ಕೂಡಂಬಲ ಶಿವಾರದ ಮುದ್ನಾಳ ಕ್ರಾಸ್ ಹತ್ತಿರ ಫಿರ್ಯಾದಿಯವರ ಮುಂದೆ ಹೋಗುತ್ತಿದ್ದ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಇಂಡಿಕೇಟರ ಹಾಕಲಾರದೇ ಒಮ್ಮೇಲೆ ಬಲಗಡೆ ಲಾರಿ ತಿರುಗಿಸಿ ಫಿರ್ಯಾದಿಯ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಲಾರಿಯೊಂದಿಗೆ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಎಡಗಾಲ ತೊಡೆಗೆ ಭಾರಿ ರಕ್ತಗಾಯ ಮತ್ತು ಎಡಗೈ ರೊಟ್ಟಿಗೆ ಹಾಗೂ ಎಡಗಾಲ ಬೆರಳುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ದಾರಿ ಹೋಕರು ಕರೆ ಮಾಡಿ ತಿಳಿಸಿದಾಗ ಮಾವನಾದ ಶಾಮರಾವ ಹೊಗಡಿ ಮತ್ತು ಕೂಡಂಬಲ ಗ್ರಾಮದ ಸುರೇಶ ಪೂಜಾರಿ ರವರು ಬಂದು ಫಿರ್ಯಾದಿಗೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.