ಕಳವು ಪ್ರಕರಣಗಳು :
ರಾಘವೇಂದ್ರ
ನಗರ ಠಾಣೆ : ಶ್ರೀ ವಿಜಯಕುಮಾರ ತಂದೆ ಶರಣಪ್ಪ ಮಳ್ಳಿ ಸಾಃ
ಸಂಗಮತಾಯಿ ಕಾಲೋನಿ ಕಲಬುರಗಿ ರವರು ಸಂಗಮ ತಾಯಿ ಕಾಲೋನಿಯಲ್ಲಿ ನಮ್ಮದು ಒಂದು ಸ್ವಂತ ಮನೆ
ಇದ್ದು ನಮ್ಮ ಮನೆಯಲ್ಲಿ ಕೆಲವೋಂದು ಕೋಣೆಗಳು ನಾವು ಉಪಯೋಗ ಮಾಡಿಕೊಂಡು ಬಂದಿದ್ದು ಒಂದು
ಪೋರ್ಶನ ಸಿದ್ರಮಾ ರೆಡ್ಡಿ ಎಂಬುವರಿಗೆ ಬಾಡಿಗೆಯಲ್ಲಿ ಕೊಟ್ಟಿದ್ದು ಅವರು ಕಾಮರೆಡ್ಡಿ
ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ನಮ್ಮ ಮನೆಯಲ್ಲೆ ವಾಸವಾಗಿರುತ್ತಾರೆ. ಬೇಸಿಗೆ ಇರುವ
ಪ್ರಯುಕ್ತ ರಾತ್ರಿ ವೇಳೆ ನಮ್ಮ ಮನೆಗಳಿಗೆ ಕೀಲಿ ಹಾಕಿಕೊಂಡು ನಮ್ಮ ಮನೆ ಮೇಲಗಡೆ ಮಲಗುತ್ತಾ
ಬಂದಿರುತ್ತೇವೆ. ಹೀಗೆ ಇರುವಾಗ ಪ್ರತಿ ದಿನದಂತೆ ದಿನಾಂಕಃ 24.05.2019 ರಂದು ರಾತ್ರಿ 10.00
ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಬೇಸಿಗೆ ಇರುವ ಪ್ರಯುಕ್ತ ನಮ್ಮ ಮನೆಯ
ಬಾಗಿಲಕ್ಕೆ ಸರಿಯಾಗಿ ಚಿಲಕ ಹಾಕಿಕೊಂಡು ನಮ್ಮ ಮನೆಯ ಮೇಲಛಾವಣಿ ಮೇಲಗಡೆ ಮಲಗಿ ಕೊಂಡಿರುತ್ತೇವೆ.
ಅದರಂತೆ ನಮ್ಮ ಮನೆಯಲ್ಲಿ ಬಾಡಿಗಿ ಇರುವ ಸಿದ್ರಾಮ ರೆಡ್ಡಿ ತಂದೆ ಚಂದ್ರರೆಡ್ಡಿ ರಸ್ತಾಪೂರ ಇವರು
ಸಹ ರಾತ್ರಿ ಅವರ ಬಾಡಿಗೆ ಇರುವ ಮನೆಯ ಬಾಗಿಲಕ್ಕೆ ಬೀಗ ಹಾಕಿಕೊಂಡು ಮನೆಯ ಮೇಲಗಡೆ ಬಂದು
ಮಲಗಿಕೊಂಡಿರುತ್ತಾರೆ. ನಂತರ ದಿನಾಂಕಃ 25.05.2019 ರಂದು ಬೆಳಿಗ್ಗೆ 6.00 ಗಂಟೆಯ ಸುಮಾರಿಗೆ
ನಮ್ಮ ಮನೆಯಲ್ಲಿ ಬಾಡಿಗೆ ಇರುವ ಸಿದ್ರಾಮ ರೆಡ್ಡಿ ರವರು ಕೆಳಗಡೆ ಬಂದು ನೋಡಿದಾಗ ನಮ್ಮ ಮನೆ ಹಾಗೂ
ಬಾಡಿಗೆದಾರರ ಮನೆಯ ಎರಡು ಬಾಗಿಲು ಖುಲ್ಲಾ ಇರುವದನ್ನು ನೋಡಿ ನಮ್ಮನ್ನು ಕರೆದಾಗ ನಾವು ಕೆಳಗಡೆ
ಬಂದು ನೋಡಿದ್ದಾಗ ನಮ್ಮ ಮನೆಯ ಬಾಗಿಲಕ್ಕೆ ಹಾಕಿರುವ ಕೀಲಿಗಳು ಮುರಿದಿದ್ದು ನಮ್ಮ
ಮನೆಯೋಳಗಡೆ ಹೋಗಿ ನೋಡಲು ನಮ್ಮ ಮನೆಯ ಅಲಮಾರಿಯಲ್ಲಿಟ್ಟಿರುವ ಬಂಗಾರದ ಆಭರಣಗಳು ಮತ್ತು
ಬೆಳ್ಳಿಯ ಆಭರಣಗಳು ಒಟ್ಟು 4,02,000 ರೂ
ಬೆಲೆ ಬಾಳುವ ಬಂಗಾರ ಮತ್ತು ಬೆಳಿ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಅಲ್ಲದೆ ನಮ್ಮ
ಮನೆಯಲ್ಲೆ ಬಾಡಿಗೆ ಇರುವ ಶ್ರೀ ಸಿದ್ರಾಮ ರೆಡ್ಡಿ ತಂದೆ ಚಂದ್ರರೆಡ್ಡಿ ರಸ್ತಾಪೂರ ಇವರ ಮನೆಯ
ಬಾಗಿಲಕ್ಕೆ ಹಾಕಿರುವ ಕೀಲಿ ಮುರಿದ್ದು ಅವರ ಮನೆಯಲ್ಲಿರುವ ಬಂಗಾರದ ಬೆಳ್ಳಿಯ ಆಭರಣ ಹಾಗೂ ಮನೆಯೆ
ಮುಂದೆ ನಿಲ್ಲಿಸಿರುವ ಮೋಟಾರ ಸೈಕಲ್ ನಂ ಕೆಎ-32 ವಾಯಿ-8493 ಅಃಕಿಃ 30,000/- ಹೀಗೆ ಒಟ್ಟು 5,09,000
ಬೆಳೆಬಾಳುವ ಬಂಗಾರ ಮತ್ತು ಬೆಳಿ ಆಭರಣಗಳು ಮತ್ತು 36700 ನಗದು ಹಣ ಮತ್ತು ಮೋಟಾರ ಸೈಕಲ್ ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ
ಠಾಣೆ : ಶ್ರೀ ಖೇಮಲಿಂಗ
ತಂದೆ ಗುರಣ್ಣಾ ಬಿರಾದಾರ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನ ಘತ್ತರಗಾ
ರವರಿಗೆ ಭಾಗ್ಯವಂತಿ ದೇವಸ್ಥಾನದಲ್ಲಿ ದ್ವಿ.ದ.ಸಹಾಯಾಕನಾಗಿ ಕೇಲಸ ನಿರ್ವಹಿಸುತ್ತೀರುವ
ಭಿಮರಾಯ ತಂದೆ ಮರೇಪ್ಪ ದೊಡ್ಡಮನಿ ಮತ್ತು ಮಹಾಂತಪ್ಪ ತಂದೆ ಸಿದ್ರಾಮಪ್ಪ ಮೂಗಿನ ಡಿ.ದರ್ಜೆ ನೌಕರ ಇವರು
ದಿನಾಂಕ:10/05/2019 ರಂದು 11-30 ಎ.ಎಮ್.ಸುಮಾರಿಗೆ ನನಗೆ ಪೊನ ಮಾಡಿ ಒಬ್ಬರು ಯಾತ್ರಿಕರು ಕಾರ್ಯಾಲಯಕ್ಕೆ
ಬಂದು ನನ್ನ ಹೆಂಡತಿಯ ಘಂಟಣ ಸರ ಈಗ 10 ನಿಮೀಷದ ಹಿಂದೆ ದರ್ಶನ ಲೈನಿನಲ್ಲಿ ನಿಂತಿದ್ದಾಗ ಕಳೆದುಹೊಗಿರುತ್ತದೆ
ಸ್ವಲ್ಪ ಸಿ.ಸಿ.ಕ್ಯಾಮರಾ ಚೆಕ್ ಮಾಡಿ ನೋಡಿ ಅಂತ ಕೇಳಿಕೊಳ್ಳುತ್ತಿದ್ದಾರೆ ಅಂತ ತಿಳಿಸಿದನು ಆಗ ಸದರಿಯವರಿಗೆ
ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳು ತೊರಿಸು ಅಂತ ತಿಳಿಸಿರುತ್ತೇನೆ ನಂತರ ಭಿಮರಾಯನು
50 ನಿಮೀಷ ಬಿಟ್ಟು ನನಗೆ ಮತ್ತೊಮ್ಮೆ ಪೊನ ಮಾಡಿ ಸರ್ ಸದರಿಯವರಿಗೆ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ
ದೃಶ್ಯಾವಳಿಗಳು ತೊರಿಸಿದ್ದು ಅವರು ಕಳೆದುಕೊಂಡ ಸರದ ಬಗ್ಗೆ ಯಾವುದೆ ಉಪಯುಕ್ತ ಮಾಹಿತಿ ಸೆರೆಯಾಗಿರುವದಿಲ್ಲ
ಆದರೆ ದಿನಾಂಕ:26/04/2019 ರಂದು ಸಾಯಂಕಾಲ 4-27 ಪಿ,ಎಮ್.ಸುಮಾರಿಗೆ ದೇವಸ್ಥಾನದ ಹಿಂದುಗಡೆ ಇರುವ
ಹುಂಡಿಗಳ ಪೈಕಿ ಚಿಕ್ಕ ಹುಂಡಿಯಲ್ಲಿಯ ಹಣ ಘತ್ತರ್ಗಿ ಗ್ರಾಮದ ಸದ್ಯ ಪ್ರಸಕ್ತ ಸಾಲಿನ ಭಾಗ್ಯವಂತಿ ದೇವಸ್ಥಾನದ
ಪೂಜಾರಿಗಳಾದ 1)ರಾಜಕುಮಾರ ತಂದೆ ಬಸಣ್ಣ ರಮಗಾ 2)ನಾಗೇಶ ತಂದೆ ಶ್ರೀಮಂತ ರಮಗಾ 3)ಸಿದ್ದು ತಂದೆ ಶ್ರೀಮಂತ
ರಮಗಾ ಈ ಮೂರು ಜನರು ಹುಂಡಿಯಲ್ಲಿರುವ ಹಣ ಯಾವುದೊ ವಸ್ತುವನ್ನು ಒಳಗಡೆ ಹಾಕಿ ಅದರ ಸಹಾಯದಿಂದ ಹುಂಡಿಯಲ್ಲಿರುವ
ಹಣ ಕಳ್ಳತನ ಮಾಡಿರುವ ಬಗ್ಗೆ ಮತ್ತು ದಿನಾಂಕ:27/04/2019 ರಂದು 05-47 ಪಿ,ಎಮ್.ಸುಮಾರಿಗೆ ದೇವಸ್ಥಾನದ
ಮಂಟಪದಲ್ಲಿ ದರ್ಶನಕ್ಕೆ ಹೊಗುವಾಗ ಬಲಗಡೆ ಇರುವ ಹುಂಡಿಯಲ್ಲಿಯ ಹಣ ಘತ್ತರ್ಗಿ ಗ್ರಾಮದ ಸದ್ಯ ಪ್ರಸಕ್ತ
ಸಾಲಿನ ಪೂಜಾರಿಗಳಾದ 1)ರಾಜಕುಮಾರ ತಂದೆ ಬಸಣ್ಣ ರಮಗಾ 2)ಸಿದ್ದು ತಂದೆ ಶ್ರೀಮಂತ ರಮಗಾ ಈ ಇಬ್ಬರು
ಹುಂಡಿಯಲ್ಲಿರುವ ಹಣ ಯಾವುದೊ ವಸ್ತುವನ್ನು ಒಳಗಡೆ ಹಾಕಿ ಅದರ ಸಹಾಯದಿಂದ ಹುಂಡಿಯಲ್ಲಿರುವ ಹಣ ಕಳ್ಳತನ
ಮಾಡಿರುವ ಬಗ್ಗೆ ಸಿ,ಸಿ.ಟಿ.ವ್ಹಿ.ಯ ಕ್ಯಾಮರಾದ ದೃಶ್ಯಾವಳಿಯಲ್ಲಿ ಕಂಡು ಬಂದಿರುತ್ತದೆ ಅಂತ
ತಿಳಿಸಿದ ಮೇರೆಗೆ ನಾನು ದೇವಸ್ಥಾನಕ್ಕೆ ಬಂದು ಸಿ.ಸಿ.ಟಿ.ವ್ಹಿ.ಯ ದೃಶ್ಯಾ ವಳಿಗಳು ಪರಿಶೀಲಿಸಲಾಗಿ
ಸದರಿ ದೃಶ್ಯಾವಳಿಗಳು ನೀಜವಿದ್ದು ಈ ವಿಷಯದ ಬಗ್ಗೆ ನಮ್ಮ ಮೇಲಾದಿಕಾರಿಗಳಿಗೆ ತಿಳಿಸಿ ಮತ್ತು ಸಿ.ಸಿ.ಟಿ.ವ್ಹಿಯಲ್ಲಿ
ಸೆರೆಯಾದ ದೃಶ್ಯಾವಳಿಗಳ ಪುಟೇಜ ಪಡೆದುಕೊಂಡು ದೇವಸ್ಥಾನಕ್ಕೆ ಭಕ್ತರು ಹುಂಡಿಯಲ್ಲಿ ಕಾಣಿಕೆಯಾಗಿ ಹಾಕಿದ
ಹಣವನ್ನು ಅಂದಾಜು 15,000/- ರೂ ಕಳ್ಳತನ ಮಾಡಿದವರ ಮೇಲೆ ಕೂಡಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ
ಜರೂಗಿಸಬೇಕು. ಅಂತ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಫರತಾಬಾದ
ಠಾಣೆ : ಶ್ರೀ ಮಲ್ಲಿನಾಥ ತಂದೆ ಶರಣಗೌಡ ಪಾಟೀಲ ಸಾ :
ಮಂದೇವಾಲ ರವರು ದಿನಾಂಕ:25.05.2019 ರಂದು ರಾತ್ರಿ ತನ್ನ ಕೆಸವನ್ನು ಮುಗಿಸಿಕೊಂಡು ಕಲಬುರಗಿಯಿಂದ ಜೇವರಗಿಗೆ ತನ್ನ ಫ್ಯಾಶನ
ಪ್ಲಸ್ ಮೋ.ಸೈಕಲ್ ನಂ.ಕೆಎ.32 ಇಟಿ.5348 ಬೈಕನಲ್ಲಿ ಹೋಗುವಾಗ 10.50 ಪಿ.ಎಮ್.ಕ್ಕೆ ರಾಷ್ಟ್ರೀಯ ಹೆದ್ದಾರಿ ಸಂ.218 ರ ಸರಡಗಿ ಬಿ ಪೆಟ್ರೊಲ ಪಂಪ
ದಾಟಿ ಅಂದಾಜು 2 ಕಿ.ಮಿ ದೂರ ರೋಡಿನ ಮೇಲೆ ಯಾರೋ 3 ಜನ ಅಪರಿಚಿತರು ಒಂದು ಮೋ.ಸೈಕಲ ಮೇಲೆ ಬಂದು ನನಗೆ ಅಡ್ಡಗಟ್ಟಿ ಪರ್ಸಿಯಿಂದ
ಮತ್ತು ಚಾಕುವಿನಿಂದ ಹೋಡೆಬಡೆ ಮಾಡಿ ನನ್ನ ಹತ್ತೀರ ಇದ್ದ ಪರ್ಸ ಮತ್ತು ಮೋಬಾಯಿಲನ್ನು
ಜಬರದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾರೆ ಕಾರಣ ಮಾನ್ಯರವರು ಸದರಿ 3 ಜನ ಅಪರಿಚಿತರ ವಿರುದ್ದ ಸೂಕ್ತ ಕಾನೂನ ರಿತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರೋಜಾ ಠಾಣೆ
: ಶ್ರೀ ಜಗದೇವಪ್ಪ ತಂದೆ ಅಣ್ಣರಾಯ ಸಾಃ ಟೆಂಗಳಿ ಲೇಔಟ್ ಹುಮ್ನಾಬಾದ ರಿಂಗ ರೋಡ ಕಲಬುರಗಿ
ರವರು ದಿನಾಂಕಃ 24/05/2019 ರಂದು ಮಧ್ಯಾಹ್ನ 6:00 ಗಂಟೆಯ ಸುಮಾರಿಗೆ ದರ್ಗಾದ ದರ್ಶನಕ್ಕಾಗಿ
ನನ್ನ ಮೋಟಾರ್ ಸೈಕಲನ್ನು ದರ್ಗಾಸ ಆವರಣದಲ್ಲಿ ನನ್ನ ದ್ವೀಚಕ್ರ ವಾಹನಕ್ಕೆ ಸೈಡ್ ಲಾಕ್
ಹಾಕಿಕೊಂಡು ಒಳಗೆ ಹೋಗಿ ದರ್ಶನ ಪಡೆದುಕೊಂಡು ಪುನಃ 6.30 ಪಿಎಮ ಕ್ಕೆ ನಾನು ದರ್ಗಾದ ಆವರಣದಲ್ಲಿ
ನಾನು ನಿಲ್ಲಿಸಿದ ನನ್ನ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆಎ-32 ಇಇ-9590 ಬಂದು ನೋಡಿದ್ದಾಗ
ನನ್ನ ಮೋಟಾರ ಸೈಕಲ್ ಇರಲಿಲ್ಲ. ನಾನು ಗಾಬರಿಗೊಂಡು ಮತ್ತು ನಮ್ಮ ಸಂಬಂದಿಕರು ಹಾಗೂ ನನ್ನ
ಸ್ನೇಹಿತನಾದ ಶಿವಲಿಂಗಪ್ಪ ಇಬ್ಬರೂ ಕೂಡಿಕೊಂಡು ಎಲ್ಲಾ ಕಡೆ ಹುಡುಕಾಡಿದ್ದು ಮತ್ತು ಸ್ನೇಹಿತರ
ಕಡೆ ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ನನ್ನ ಸ್ನೇಹಿತರು ಮತ್ತು ಸಂಬಂಧಿಕರ ಕಡೆ ವಿಚಾರಣೆ
ಮಾಡಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ
ಠಾಣೆ : ಶ್ರೀ.ಶಾಂತಪ್ಪಾ ತಂದೆ ನಿಂಗಪ್ಪಾ ಹಿರೇಕುರುಬ ಸಾ||ಕಡಗಂಚಿ ಗ್ರಾಮ ರವರ ಊರಿನ ಮಲ್ಲಪ್ಪಾ
ತಂದೆ ಶಾಂತಪ್ಪಾ ವಗ್ಗಿ, ಈತನು ನನಗೆ ಸುಮಾರು 4-5 ತಿಂಗಳಿಂದ ನಮ್ಮೂರಿನಲ್ಲಿ ಆಗಾಗ ಸಿಕ್ಕಾಗ ತನಗೆ ಖಚರ್ಿಗೆ, ಸಾರಾಯಿ
ಕುಡಿಯಲು ಹಣ ನೀಡುವಂತೆ ಪೀಡಿಸುತ್ತಾ ಅಂಜಿಸುತ್ತಾ ಬಂದಿದ್ದು, ನಾನು
ಆತನಿಗೆ ಹೆದರಿ ಆಗಾಗ 100, 200, ರೂಪಾಯಿಗಳನ್ನು ಕೊಡುತ್ತಾ
ಬಂದಿರುತ್ತೇನೆ. ದಿನಾಂಕ:25/05/2019 ರಂದು ಸಾಯಂಕಾಲ ನಾನು ನಮ್ಮೂರಿನ
ಹನುಮಾನು ದೇವಸ್ಥಾನದ ಹತ್ತಿರ ನಿಂತಾಗ ಮಲ್ಲಪ್ಪಾ ಈತನು ಅಲ್ಲಿಗೆ ಬಂದು ತನಗೆ 200 ರೂಪಾಯಿ ಕೊಡು ಅಂತಾ ಕೇಳಿದನು ಅದಕ್ಕೆ ನಾನು ನನ್ನ ಹತ್ತಿರ ಈಗ ಹಣವಿಲ್ಲ ಅಂತಾ
ಹೇಳಿದಾಗ ಆತನು ರಂಡಿಮಗನೆ ಹಣ ಕೊಡದೆ ಹೋದರೆ ನಿನಗೆ ಇವತ್ತು ಖಲಾಸ ಮಾಡುವುದಾಗಿ ಅಂತಾ ಬೈದು
ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಗಂಟಲಿಗೆ ತನ್ನ ಕೈಯಿಂದ ಜೋರಾಗಿ ಹಿಡಿದು ಹಿಚುಕುತ್ತಾ
ನನಗೆ ತನ್ನ ಕಾಲಿನಿಂದ ಹೊಟ್ಟೆಗೆ ಒದೆಯುತ್ತಿದ್ದಾಗ ನಾನು ನನ್ನ ಕೈಗಳಿಂದ ಅವನಿಂದ ಬಿಡಿಸಿಕೊಂಡು
ನಮ್ಮ ಮನೆಯ ಕಡೆಗೆ ಓಡುತ್ತಿರುವಾಗ ಆತನು ಅಲ್ಲೆ ಬಿದ್ದಿದ್ದ ಒಂದು ಕಲ್ಲು ತಗೆದುಕೊಂಡು ಬೀಸಿ
ನನ್ನ ತಲೆಗೆ ಹೊಡೆದನು ನನಗೆ ತಲೆಗೆ ಭಾರಿ ರಕ್ತಗಾಯವಾಗಿ ಚಿರಾಡುತ್ತಿದ್ದಾಗ ನಮ್ಮೂರಿನ ಚಿದಪ್ಪಾ
ತಂದೆ ಮೈಲಾರಿ ಹೊಸಕುರುಬ, ಬೀರಪ್ಪಾ ತಂದೆ ಶರಣಪ್ಪಾ ಚಿತಲಿ ಇವರು ನೋಡಿ
ಓಡಿಬಂದು ಬಿಡಿಸಿರುತ್ತಾರೆ. ಒಂದುವೇಳೆ ಸದರಿಯವರು ಬಿಡಿಸದೇ ಹೊದಲ್ಲಿ ಮಲ್ಲಪ್ಪನು ನನಗೆ ಕೊಲೆ
ಮಾಡಿಯೇ ಬಿಡುತ್ತಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಶೋಕ ನಗರ
ಠಾಣೆ : ಶ್ರೀ ಸಂತೋಷ
ತಂದೆ ಶಿವಶರಣಪ್ಪ ಸಿಂಧೆ ಸಾ|| ಮ.ನಂ. ಬಿ1 ಎಂ.ಎಸ್.ಕೆ. ಮಿಲ್ ಕ್ವಾಟರ್ಸ ಕಲಬುರಗಿ ರವರು ದಿನಾಂಕ:24.05.2019
ರಂದು ರಾತ್ರಿ ಊಟ ಮುಗಿಸಿಕೊಂಡು 10:00 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಜ್ಯೋತಿ ಇಬ್ಬರು
ಮನೆಯ ಮುಂದೆ ಮಾತಾಡುತ್ತಾ ವಾಕಿಂಗ್ ಮಾಡುತ್ತಿದ್ದಾಗ ಯಾರೊ ಇಬ್ಬರು ಅಪರಿಚಿತ ದ್ವಿ-ಚಕ್ರ
ವಾಹನ ಸವಾರರು ಬಂದು ನನಗೆ ತಡೆದು ನಿಲ್ಲಿಸಿ ಏ ಭೋಸಡಿ ಮಗನೆ ಇಲ್ಲಿ ಏಕೆ ತಿರುಗಾಡುತ್ತಿ ಅಂತ
ಕೇಳಿದಾಗ ಇಲ್ಲಿಯೇ ಪಕ್ಕದಲ್ಲಿ ನಮ್ಮ ಮನೆ ಇರುತ್ತದೆ, ನೀವು ಯಾರು ಕೇಳುವವರು ಅಂತ ಅಂದಾಗ, ಏ ರಂಡಿ
ಮಗನೆ ನಮಗೆ ಎದರು ಮಾತಾಡುತ್ತಿಯಾ ಅಂತ ಇಬ್ಬರು ದ್ವಿ-ಚಕ್ರ ವಾಹನದಿಂದ ಕೆಳಗೆ ಇಳಿದು ಬಂದು ನನಗೆ
ಕೈಯಿಂದ ಹೊಡೆಯಲು ಪ್ರಾರಂಭಿಸಿದರು ನನ್ನ ಹೆಂಡತಿ ಮತ್ತು ನಾನು ಚಿರಾಡುತ್ತಿದ್ದಾಗ ಅವರಲ್ಲಿ
ಒಬ್ಬನು ತನ್ನ ಹತ್ತಿರ ಇದ್ದ ಒಂದು ಸಣ್ಣ ಚಾಕುವಿನಿಂದ ನನ್ನ ಎಡಗೈಗೆ ಹೊಡೆದಿರುತ್ತಾನೆ, ನಾನು ಜೋರಾಗಿ
ಕಿರುಚುವುದನ್ನು ಕೇಳಿ ಮನೆಯ ಒಳಗಿನಿಂದ ನನ್ನ ಅಣ್ಣ ಅಶೋಕ ಸಿಂಧೆ ಮತ್ತು ತಮ್ಮ ಅನೀಲ ಸಿಂಧೆ ಇವರು
ಓಡಿ ಬರುವುದನ್ನು ನೋಡಿ ಅಪರಿಚಿತ ದ್ವಿ-ಚಕ್ರ ವಾಹನ ಸವಾರರು ತಮ್ಮ ಹಿರೊ ಹೊಂಡಾ ವಾಹನ ಸಂ. ಕೆ.ಎ.-32
ಇ.ಹೆಚ್.-6907 ನೇದ್ದನ್ನು ನಮ್ಮ ಮನೆಯ ಮುಂದೆಯೆ ಬಿಟ್ಟು ಓಡಿ ಹೋಗಿರುತ್ತಾರೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.