ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 17-05-2020
ಜನವಾಡಾ
ಪೊಲೀಸ್ ಠಾಣೆ ಯು.ಡಿ.ಆರ್. ಸಂ. 07/2020 ಕಲಂ 174 ಸಿಆರ್.ಪಿ.ಸಿ. :-
ದಿನಾಂಕ 16/05/2020 ರಂದು 0810 ಗಂಟೆಗೆ ಫಿರ್ಯಾದಿ ವೈಜಿನಾಥ ರೂಪನರ ಸಾ|| ಶ್ರೀಮಂಡಲ ಗ್ರಾಮ ತಾ|| ಜಿ|| ಬೀದರ ರವರು ಖುದ್ದಾಗಿ ಪೊಲೀಸ್ ಠಾಣೆಗೆ ಹಾಜರಾಗಿ
ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಯ ಮಗನಾದ ಬಾಲಾಜಿ ವಯ|| 24 ವರ್ಷ ಇವನಿಗೆ ಅಂದಾಜು 4 ವರ್ಷದ ಹಿಂದೆ ಮದುವೆಯಾಗಿದ್ದು ಅವನಿಗೆ ಒಬ್ಬಳು
ಮಗಳು ಶ್ರದ್ದಾ ಇರುತ್ತಾಳೆ.
ಇವರ ಸೋಸೆ ಮೀರಾ ಇವಳು
ಒಂದು ತಿಂಗಳ ಹಿಂದೆ ತವರು ಮನೆಗೆ ಹೊಗಿರುತ್ತಾಳೆ. ಲಾಕಡೌನ್ ಇದ್ದ ಪ್ರಯುಕ್ತ ವಜ್ಜರ (ಮಹಾರಾಷ್ಟ್ರ) ದಿಂದ ವಾಪಸ್ಸು ಬಂದಿರುವುದಿಲ್ಲ. ನಮಗೆ ನಮ್ಮೂರ ಶಿವಾರದಲ್ಲಿ ಸರ್ವೆ ನಂ 19 ರಲ್ಲಿ ನನ್ನ ಹೆಸರಿನಲ್ಲಿ 3 ಎಕರೆ 12 ಗುಂಟೆ ಜಮೀನು ಇದ್ದು ಆ ಜಮೀನು ನನ್ನ ಮಗ ಬಾಲಾಜಿ
ಇತ ಇವನೆ ನೋಡಿಕೊಳ್ಳುತ್ತಾನೆ.
ಇವರ ಹೆಸರಿನ ಮೇಲೆ ಇರುವ
ಜಮೀನಿನ ಮೇಲೆ ಕೃಷ್ಣ ಗ್ರಾಮೀಣ ಬ್ಯಾಂಕ್ ಬೀದರನಲ್ಲಿ ಅಂದಾಜು 65,000/- ರೂ ನಷ್ಟು ಹಾಗು ನೇಮತಾಬಾದ ಪಿಕೆಪಿಎಸ್ ನಲ್ಲಿ 60,000/- ರೂ ನಷ್ಟು ಬೇಳೆ ಸಾಲ ಪಡೆದಿರುತ್ತೆವೆ. 2-3 ವರ್ಷಗಳಿಂದ ಮಳೆ ಸರಿಯಾಗಿ ಬಿಳದೆ ಹೊಲದಲ್ಲಿ ಬೇಳೆ
ಬೆಳೆದಿರುವುದಿಲ್ಲ.
ಬಾಲಾಜಿ ಈತನು ಆವಾಗ ಆವಾಗ
ನಮಗೆ ಸಾಲ ಬಹಳ ಆಗಿದೆ ಹೆಗೆ ತಿರಿಸುವುದು ಎಂದು ಚಿಂತೆ ಮಾಡುತ್ತಿದ್ದು, ನಾನು ಸಾಯುತ್ತೆನೆ ಅಂತಾ ಅವಾಗ ಅವಾಗ ಹೆಳುತ್ತಿದ್ದಾಗ
ನಾನು ಅವನಿಗೆ ಹೆಗಾದರು ಮಾಡಿ ಸಾಲ ತಿರಿಸೋಣಾ ಅಂತಾ ಸಮಾಧಾನ ಹೆಳುತ್ತಿದ್ದೆವು. ಹಿಗಿರುವಲ್ಲಿ ದಿನಾಂಕ 15/05/2020 ರಂದು ಫಿರ್ಯಾದಿ ಮತ್ತು ಇವರ ಹೆಂಡತಿ ಕಲಾವತಿ, ಮಗ ಅಮೂಲ, ಆಶಾರಾಣಿ, ರವರು ಅಂದಾಜು ರಾತ್ರಿ 10 ಗಂಟೆಯ ಸುಮಾರಿಗೆ ಊಟ ಮಾಡಿ ಮನೆಯ ಪಡಸಾಲೆಯಲ್ಲಿ
ಮಲಗಿಕೊಂಡಾಗ ಬಾಲಾಜಿ ಊಟ ತೆಗೆದುಕೊಂಡು ಮನೆಯ ಬೆಡರೂಮಿನಲ್ಲಿ
ಓಳಗೆ ಹೊಗಿ ನಾನು ಊಟ ಮಾಡುತ್ತೆನೆ ನೀವು ಮಲಗಿ ಅಂತಾ ಹೇಳಿ ಬೆಡರೂಮಿನ ಕೊಂಡಿ
ಹಾಕಿಕೊಂಡಿರುತ್ತಾನೆ.
ಅಂದಾಜು ರಾತ್ರಿ 12 ಗಂಟೆಯ ಸುಮಾರಿಗೆ ಫಿರ್ಯಾದಿ ಸಣ್ಣ ಮಗ ಅಮೂಲ ಇವನು ಫಿರ್ಯಾದಿಗೆ ಎಬ್ಬಿಸಿ ಅಣ್ಣ ಬಾಲಾಜಿ ತನ್ನ ವಾಟ್ಸ್
ಅಪ್ ಸ್ಟೇಟಸ್ ನಲ್ಲಿ ಬೈ ಬೈ ದೂನಿಯಾ ಅಂತಾ ಸ್ಟೆಟಸ್ ಇಕ್ಕಿರುತ್ತಾನೆ. ಅಂತಾ ತಿಳಿಸಿದ್ದು ಕೂಡಲೆ ಬೇಡ್ ರೂಮಿನ ಬಾಗಿಲ ತಟ್ಟೆ ಮುರಿದು ಓಳಗೆ ಹೊಗಿ ನೋಡಲು ಬಾಲಾಜಿ ಈತನು
ಫ್ಯಾನಿನ ಕೊಂಡಿಗೆ ಝುಕಾಲಿ ಹಾಕುವ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ನೀಡಿದ
ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
79/2020 ಕಲಂ 379 ಐಪಿಸಿ :-
ದಿನಾಂಕ 16/05/2020 ರಂದು 18-00 ಗಂಟೆಗೆ ಗಣಪತರಾವ ತಂದೆ ಬಸವಂತರಾವ ಕೊಟೆ
ಸಾ|| ನ್ಯೂ ಆದರ್ಶ ಕಾಲೋನಿ ಬೀದರ ರವರು ಠಾಣೆಗೆ ಹಾಜರಾಗಿ
ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 10/05/2020 ರಂದು ಎಂದಿನಾಂತೆ ತನ್ನ ಕಿರಾಣ ಅಂಗಡಿಯ ವ್ಯಾಪರ
ಬಂದ್ ಮಾಡಿ ರಾತ್ರಿ ಅಂದಾಜು 9 ಗಂಟೆಗೆ
ನ್ಯೂ ಆದರ್ಶ ಕಾಲೋನಿಯಲ್ಲಿರುವ ಮನೆಗೆ
ಮೋಟಾರ ಸೈಕಲ್ ನಂ ಕೆ.ಎ.38 ಕೆ-9243 ನೇದ್ದರ ಮೇಲೆ ಬಂದು ಮೊಟಾರ ಸೈಕಲ್ ಮನೆಯ ಮುಂದೆ ನಿಲ್ಲಿಸಿದ್ದು ಇರುತ್ತದೆ.
ದಿನಾಂಕ 11/05/2020 ರಂದು ಮುಂಜಾಣೆ 7 ಗಂಟೆಯ
ಸುಮಾರಿಗೆ ಎದ್ದು ನೋಡಲು ರಾತ್ರಿ ಮನೆಯ ಮುಂದೆ
ನಿಲ್ಲಿಸಿದ್ದ ಮೋಟಾರ ಸೈಕಲ ನಂ ಕೆ.ಎ.38 ಕೆ-9243 ನೇದ್ದು ಕಾಣದೆ ಇರವದರಿಂದ ಅಕ್ಕ ಪಕ್ಕದಲ್ಲಿ ಹುಡುಕಾಡಲಾಗಿ ನನ್ನ ಮೋಟಾರ ಸೈಕಲ್
ಸಿಕ್ಕಿರುವದಿಲ್ಲಾ. ಕಾರಣ ಮೋಟಾರ ಸೈಕಲ್ ನಂ
ಕೆ.ಎ.38 ಕೆ-9243 ನೇದ್ದು ದಿನಾಂಕ 10/05/2020 ರ ರಾತ್ರಿ 9 ಗಂಟೆಯಿಂದ
ದಿನಾಂಕ 11/05/2020 ರ ಬೆಳ್ಳಿಗೆ 7 ಗಂಟೆಯ
ಅವಧಿಯಲ್ಲಿ ಯಾರೋ ಅಪರಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/20 ಕಲಂ 174(ಸಿ) ಸಿ.ಆರ್.ಪಿ.ಸಿ. :-
ದಿನಾಂಕ 16/05/2020 ರಂದು 2000 ಗಂಟೆಗೆ ಬೀದರ ಸರ್ಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದ ಮೇರೆಗೆ 2030 ಗಂಟೆಗೆ ಬೀದರ ಸಕರ್ಾರಿ ಆಸ್ಪತ್ರೆಗೆ ಭೇಟ್ಟಿ ನೀಡಿ
ಸಂಗಮ್ಮಾ ಗಂಡ ಕಾಶಿನಾಥ ಬೋಳಶೆಟ್ಟೆ,
63 ವರ್ಷ, ರವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೇನಂದರೇ, ಇವರ ಮಗಳಾದ ಲಕ್ಷ್ಮಿ ಇವಳಿಗೆ ಸುಮಾರು 15 ವರ್ಷಗಳ ಹಿಂದೆ ಹುಮನಾಬಾದ ನಗರದ ಶರಣಪ್ಪಾ ಬಶೇಟ್ಟಿ
ರವರ ಮಗನಾದ ಪ್ರಭು ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಅಳಿಯನಾದ ಪ್ರಭು ಈತನು ಸುಮಾರು 10 ವರ್ಷಗಳಿಂದ ಕೊಳಾರ ಕೈಗಾರಿಕಾ ಪ್ರದೇಶದಲ್ಲಿರುವ
ಎಸ್.ಎನ್-2 ಕಂಪನಿಯಲ್ಲಿ ಕೆಲಸ ಮಾಡಿಕೊಂಡು ತನ್ನ ಹೆಂಡತಿ
ಮಕ್ಕಳೊಂದಿಗೆ ಕೊಳಾರ(ಕೆ) ಗ್ರಾಮದಲ್ಲಿಯೇ ವಾಸವಾಗಿರುತ್ತಾರೆ. ಹೀಗಿರುವಲ್ಲಿ ದಿನಾಂಕ 16/02/2020 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ಅಂದಾಜು 1130 ಗಂಟೆಯ ಸುಮಾರಿಗೆ ಅಳಿಯನಾದ ಪ್ರಭು ಈತನು ನನಗೆ ಫೋನ ಮಾಡಿ ಲಕ್ಷ್ಮಿ
ಇವಳಿಗೆ ಆರಾಮ ಇಲ್ಲ ಬೇಗ ಬನ್ನಿ ಎಂದು ತಿಳಿಸಿದಾಗ ಫಿರ್ಯಾದಿ ಮತ್ತು ಮಗನಾದ ಸಂಗಮೇಶ ರವರುಗಳು
ಕೂಡಿಕೊಂಡು ಅಂದಾಜು 2 ಪಿ.ಎಮ್. ಗಂಟೆಗೆ ಕೊಳಾರ(ಕೆ) ಗ್ರಾಮಕ್ಕೆ ಹೋಗಿ
ಹಾಜರಿದ್ದ ನನ್ನ ಮಗಳಾದ ಲಕ್ಷ್ಮಿ ಇವಳಿಗೆ ಏನಾಗಿದೆ ಅಂತ ಕೇಳಿದಾಗ ಇವರ ಮಗಳು ತಿಳಿಸಿದ್ದೇನಂದರೇ, ಸುಮಾರು 10-15 ದಿನಗಳಿಂದ ತನಗೆ ತಲೆನೋವು ಹಾಗು
ವಾಂತಿಯಾಗುತ್ತಿದ್ದರಿಂದ ಈ ಬಗ್ಗೆ ಕೊಳಾರ(ಕೆ) ಗ್ರಾಮದಲ್ಲಿ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದು
ಇರುತ್ತದೆ. ಹೀಗಿರುವಲ್ಲಿ ದಿನಾಂಕ 16/05/2020 ರಂದು ಮುಂಜಾನೆಯಿಂದ ನನಗೆ ಬಹಳ ತಲೆನೋವು ಹಾಗು
ವಾಂತಿಯಾಗುತ್ತಿದ್ದರಿಂದ ಮನೆಯಲ್ಲಿದ್ದ ಗುಳಿಗೆಗಳು ಸೇವಿಸಿದರೂ ಕೂಡ ತಲೆನೋವು ಕಡಿಮೆ ಆಗುತ್ತಿಲ್ಲ ಅಂತ
ತಿಳಿಸಿರುತ್ತಾಳೆ. ಮಗಳಾದ ಲಕ್ಷ್ಮಿ ಗಂಡ ಪ್ರಭು
ವಯಸ್ಸು-35 ವರ್ಷ ಇವಳಿಗೆ ಬೀದರ ಸಕರ್ಾರಿ ಆಸ್ಪತ್ರೆಯಲ್ಲಿ 1530 ಗಂಟೆಯ ಸುಮಾರಿಗೆ ದಾಖಲಿಸಿದ್ದು ಇರುತ್ತದೆ. ಲಕ್ಷ್ಮಿ ಇವಳು ಚಿಕಿತ್ಸೆ ಕಾಲಕ್ಕೆ ಚಿಕಿತ್ಸೆ
ಫಲಕಾರಿಯಾಗದೇ 1730 ಗಂಟೆಯ ಸುಮಾರಿಗೆ ಬೀದರ ಸಕರ್ಾರಿ ಆಸ್ಪತ್ರೆಯಲ್ಲಿ
ಮೃತಪಟ್ಟಿರುತ್ತಾಳೆ. ಅಂತಾ ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 45/2020 ಕಲಂ 78(3) ಕೆಪಿ ಕಾಯ್ದೆ :-
ದಿನಾಂಕ 16-05-2020 ರಂದು 1140 ಗಂಟೆಗೆ ಠಾಣೆಯಲ್ಲಿದ್ದಾಗ ಔರಾದ(ಬಿ) ಪಟ್ಟಣದ ರಾಮನಗರದ ಸರಕಾರಿ ಶಾಲೆಯ ಹತ್ತಿರ ರೋಡಿನ ಮೇಲೆ ಒಬ್ಬ ವ್ಯೆಕ್ತಿ ಅಕ್ರಮ
ಚಟುವಟಿಕೆಯಲ್ಲಿ ತೊಡಗಿರುತ್ತಾನೆ ಎಂದು ಮಾಹಿತಿ
ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಒಬ್ಬ ವಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ
ಕೂಗಿ ಕೂಗಿ ಕರೆದು ಅದೃಷ್ಟ ಸಂಖ್ಯೆಗೆ ಹಣ ಹಚ್ಚ್ಚಿದರೆ 1/-ರೂ ಗೆ 80/-ರೂ 10 ರೂ ಗೆ 800/-ರೂ ಕೊಡುತ್ತೇವೆ ಎಂದು ಹೇಳಿ ಸಾರ್ವಜನಿಕರಿಂದ ಹಣ
ಪಡೆದುಕೊಂಡು ಮಟಕಾ ಅನ್ನುವ ಅಂಕಿ ಸಂಖ್ಯೆಯ ಚೀಟಿಗಳು ಬರೆದುಕೊಳ್ಳುತ್ತಿದ್ದನ್ನು ನೋಡಿ ದಾಳಿ ಮಾಡಿದಾಗ ಸಮವಸ್ತ್ರದ ನೋಡಿ ಅದೃಷ್ಟ ಸಂಖ್ಯೆಗೆ
ಹಣ ಕೊಡುತ್ತಿದ್ದ ಜನರು ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ಹಣ ಪಡೆದುಕೊಳ್ಳುತ್ತಿದ್ದ
ವ್ಯಕ್ತಿಗೆ ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿ ಅಂಗ ಪರಿಶೀಲನೆ ಮಾಡಿ ನೋಡಲು ತನ್ನ ಹೆಸರು
ನಾರಾಯಣ ತಂದೆ ಪಾಂಡುರಂಗ ಅಜ್ಜನಸೊಂಡೆ ವಯ 60 ವರ್ಷ ಜಾತಿ
ಮರಾಠಾ ಸಾ: ಹೊಕ್ರಾಣಾ ಈತನ ಹತ್ತಿರ ನಗದು ಹಣ 2100/-ರೂ ,ಜಪ್ತಿ
ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.