Police Bhavan Kalaburagi

Police Bhavan Kalaburagi

Thursday, August 18, 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ  ಠಾಣೆ :- ದಿನಾಂಕ 17-08-2016 ರಂದು ಶ್ರೀ ದೇಸಣ್ಣ ತಂದೆ ಬಸವಣ್ಣಪ್ಪ ಕುಂಬಾರ ಸಾ:ಬನ್ನೂರ ರವರಿಗೆ ಲಾರಿ ಚಾಲಕನಾದ ನಾಗಮೂರ್ತಿ ಈತನು ಹುಮನಾಬಾದದಲ್ಲಿರುವ ಲೈಟಿನ ಕಂಬಗಳನ್ನು ತೆಗೆದುಕೊಂಡು ಬರುವ ಕುರಿತು ತನ್ನ ಜೊತೆ ಆತನ ಲಾರಿ ಕೆಎ 32 ಬಿ 1692 ನೇದ್ದರಲ್ಲಿ ಕಲಬುರಗಿಯಿಂದ ಹುಮನಾಬಾದ ಕಡೆಗೆ ಹೋಗುವಾಗ ಲಾರಿ ಚಾಲಕ ನಾಗಮೂರ್ತಿ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಕಮಲಾಪೂರ ಸಿಮಾಂತರದ ಚಿಂದಿ ಬಸವಣ್ಣ ಏರಿನಲ್ಲಿ ರಸ್ತೆ ಬದಿಯ ಗಿಡೆಕ್ಕೆ ಅಪಘಾತ ಪಡಿಸಿದ್ದು. ಅಪಘಾತದಿಂದ ಲಾರಿ ಮುಂದಿನ ಭಾಗ ಡ್ಯಾಮೇಜ ಆಗಿ ಸಂಪೂರ್ಣ ಗಿಡದಲ್ಲಿ ಸಿಕ್ಕು ಹಾಕಿಕೊಂಡಿದ್ದು. ಲಾರಿಯ ರೇಡಿಯಟರ ನೀರು ದೇಸಣ್ಣನ ಟೊಂಕಕ್ಕೆ ಎರಡು ಕಾಲುಗಳ ತೊಡೆಯ ಮೇಲೆ ಮತ್ತು ಗುಪ್ತಾಂಗದ ಮೇಲೆ ಬಿದ್ದು ಬೊಬ್ಬೆಗಳು ಬಂದಿದ್ದು ಲಾರಿ ಚಾಲಕ ನಾಗಮೂರ್ತಿಯ ಎರಡು ಕಾಲುಗಳು ಗಿಡದ ಬಡ್ಡೆ ಮತ್ತು ಲಾರಿ ಇಂಜನ ನಡುವೆ ಸಿಲುಕಿ ಆತನ ತಲೆಗೆ ಮತ್ತು ದೇಹದ ಇತರ ಬಾಗದಲ್ಲಿ ರಕ್ತಗಾಯ, ಗುಪ್ತಗಾಯವಾಗಿದ್ದು ರಸ್ತೆಯ ಮೇಲೆ ಹೊಗುತ್ತಿದ್ದ ವಾಹನ ಸವಾರರು ಮತ್ತು ಅಲ್ಲೆ ಹೊಲದಲ್ಲಿ ಕೇಲಸ ಮಾಡುವವರು ಅಪಘಾತವಾಗಿದ್ದನ್ನು ನೊಡಿ ಬಂದು ನನಗೆ ಹೊರಗೆ ತೆಗೆದು ನೋಡಲಾಗಿ ನಾಗಮೂರ್ತಿ ಮೃತ ಪಟ್ಟಿದ್ದು.ಲಾರಿ ಚಾಲಕ ನಾಗಮೂರ್ತಿ ಇತನು ಲಾರಿ ನಂ ಕೆಎ 32 ಬಿ 1692 ನೇದ್ದು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಬಂದು ರಸ್ತೆಯ ಪಕ್ಕದಲ್ಲಿರುವ ಗಿಡಕ್ಕೆ ಹಾಯಿಸಿ ಅಪಘಾತ ಪಡಿಸಿ ನನಗೆ ದು:ಖಾಪತ ಗೊಳಸಿದ್ದು ಮತ್ತು ಆತನು ಮೃತ ಪಟ್ಟಿದ್ದು ಇರುತ್ತದೆ. ಸದರಿಯವನ ವಿರುಧ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಹಲ್ಲೆ ಪ್ರಕರಣ:
ನೆಲೋಗಿ  ಪೊಲೀಸ್ ಠಾಣೆ: ದಿನಾಂಕ 16-08-2016ರಂದು ಶ್ರೀ ಚನ್ನಪ್ಪಾ ತಂದೆ ಬೀಮಣ್ಣಾ ಬಾಸಗಿ ಸಾಃ ಮೊಗನಇಟಗಾ ತಾ|| ಜೇವರಗಿ   ರವರು ಶರಣಪ್ಪಾ ರವರೊಂದಿಗೆ ತಮ್ಮ ಹೊಲದಲ್ಲಿರುವಾಗ ತಮ್ಮ ಹೊಲದ ಬಾಂದಾರಿಗೆ ಹೊಂದಿ ಹಣಮಂತ ಇವರ ಹೊಲ ಇದ್ದು, ನಮ್ಮ ಒಂದು ಎತ್ತು ಅವರ ಮೆಣಸಿನ ಗಿಡದಲ್ಲಿ ಹಾಯ್ದಿದ್ದು, ಆಗ ಹಣಮಂತ ಮತ್ತು ಅವನ  ಮಕ್ಕಳಾದ ಸಿದ್ದಪ್ಪ ಭಾಸಗಿ, ಭೀರಪ್ಪ ಇವರು ಅಲ್ಲಿಗೆ ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂಧ ಬಯ್ಯುತ್ತಾ  ಕೊಲೆ ಮಾಡುವ ಉದ್ದೇಶದಿಂದ ಭೀರಪ್ಪನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ತಲೆಗೆ ಮೇಲೆ ಹೊಡೆದನು. ಆಗ ನಮ್ಮ ಅಣ್ಣ ಶರಣಪ್ಪನು ಬಿಡಿಸಲು ಬಂದಾದ ಅವನಿಗೆ ಸಿದ್ದಪ್ಪನು ಬಡಿಗೆಯಿಂದ ಹೊಡೆದನು. ಹಣಮಂತನು ಇವರಿಗೆ ಬಿಡಬೇಡಿ ಹೊಡೆದು ಖಲಾಸ ಮಾಡಿ ಎಂದು ಹೊಡೆಯುತ್ತಿರುವಾಗ ನಾವೆಲ್ಲರೂ ಚೀರಾಡುವದನ್ನು ನೋಡಿ ರಸ್ತೆಯಲ್ಲಿ ಹೋಗುತ್ತಿದ್ದ ಲಕ್ಷ್ಮಣ, ಶರಣಪ್ಪ ಮ್ಯಾಕೇರಿ ಇವರು ಬಂದು ಜಗಳ ಬಿಡಿಸಿ ನಮಗೆ ಜೀಪಿನಲ್ಲಿ ಹಾಕಿಕೊಂಡು ಚಿಕಿತ್ಸೆ ಕೊಡಿಸಿದ್ದು. ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಕೊಡಲಿ, ಬಡಿಗೆಯಿಂದ ಹೊಡೆದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಹಲ್ಲೆ ಪ್ರಕರಣ:
ಫರಹತಾಬಾದ ಪೊಲೀಸ ಠಾಣೆ :ದಿನಾಂಕ 17/08/2016 ರಂದು ಶ್ರೀಮತಿ ಸೀನಾಬಾಯಿ ಗಂಡ ಚಂದ್ರಕಾಂತ ಚವ್ಹಾಣ ಸಾ: ಖಣದಾಳ ತಾಂಡಾ ಇವರು ಠಾಣೆಗೆ ಹಾಜರಾಗಿ ತನ್ನ ಗಂಡ ಚಂದ್ರಕಾಂತ ಇವರು ಈಗ ಸುಮಾರು ಒಂದು ವರ್ಷದ ಹಿಂದೆ ತಮ್ಮ ತಾಂಡಾದ ಶ್ರಿಕಾಂತ ತಂದೆ ಶಂಕರ  ಪವಾರ ಇವರ ಹತ್ತೀರ 5000/- ರೂ ಸಾಲ ಪಡೆದುಕೊಂಡಿದ್ದು . ಈ ಪಡೆದುಕೊಂಡಿರುವ ಸಾಲ ಮರಳಿ ಕೊಟ್ಟಿದ್ದು ಆದರೆ ಸದರಿ ಶ್ರೀಕಾಂತ ಇತನು ಇದರ ಬಡ್ಡಿ ಹಣ ಕೋಡು ಅಂತ ಆಗಾಗ ನಮ್ಮ ಮನೆಗೆ ಬಂದು ನನ್ನ ಗಂಡನ ಜೋತೆಗೆ ತಕರಾರು ಮಾಡುತ್ತಾ ಬಂದಿದ್ದು ನನ್ನ ಗಂಡ ದಿನಾಂಕ 16/8/2016 ರಂದು  ಕೂಲಿಕೆಲಸಕ್ಕೆ ಹೋಗಿದ್ದಾಗ ಶ್ರೀಕಾಂತನು ಆತನ  ಅಣ್ಣ ಹೀರು ಮತ್ತು ಹೀರುನ ಮಗ ಕಿರಣ ನೊಂದಿಗೆ ನಮ್ಮ ಮನೆಗೆ ಬಂದು ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂಧ ಬಯ್ಯುತ್ತಾ ಕೊಡಬೇಕಾದ ಬಡ್ಡಿ ಹಣ ಕೋಡುತ್ತಿಲ್ಲಾ ಎನ್ನುತ್ತಾ ಶ್ರಿಕಾಂತ ಇತನು ನನಗೆ ಕೈಹಿಡಿದು ಎಳೆದಾಡಿ  ಕೆಳಗೆ ಕೆಡವಿದ್ದು ಆಗ ಕಿರಣನು  ಕೈಯಿಂದ ಬೆನ್ನಲ್ಲಿ ಹೊಡೆದಿರುತ್ತಾನೆ ಹೀರು ಇತನು ಇನ್ನು ಹೊಡಿರಿ ಎನ್ನುತ್ತಾ ಅಲ್ಲಿಯೆ ನಿಂತು ಪ್ರಚೊದನೆ ನೀಡಿರುತ್ತಾನೆ . ಎಂಧು ಸಲ್ಲಿಸಿದ ದೂರು ಸಾರಾಂಶದ ಮೆಲಿಂದ ಫರಹತಾಬಾದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಾಕಾ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ: 16/08/2016 ರಂದು ಹೊನ್ನಕಿರಣಗಿ ಗ್ರಾಮದ ಕೋಣಿನ ರವರ ಬಿಲ್ಡಿಂಗದ ಹತ್ತಿರ ಒಬ್ಬ ಮನುಷ್ಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದ ಅಂಕಿಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ  ಭಾತ್ಮಿ ಬಂದ ಮೇರೆಗೆ ಸಿಪಿಐ ಎಮ್‌‌, ಬಿನಗರ ವೃತ್ತ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಫರಹತಾಬಾದ ಪೊಲೀಸ್ ಠಾಣೆ ರವರು ಇಬ್ಬರು ಪಂಚರಾದ 1) ಶ್ರೀ ಭಗವಂತ್ರಾಯ ತಂದೆ ಅಣ್ಣಪ್ಪಾ ಸಾತನೂರ ಸಾ: ಹೊನ್ನಕಿರಣಗಿ 2) ಶ್ರೀ ಪ್ರಶಾಂತ ತಂದೆ ಬಸವರಾಜ ಕಾಡಾದಿ ಸಾ: ಹೊನ್ನಿಕಿರಣಗಿ ರವರೊಂದಿಗೆ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ -159 ನಾಗೇಂದ್ರ , ಪ್ರಭು ಸಿಪಿಸಿ 366 ರವರನ್ನು ಕರೆದುಕೊಂಡು ಭಾತ್ಮಿ ಇದ್ದ ಸ್ಥಳದ ಹತ್ತಿರ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ   ಮೇಲೆ ಒಬ್ಬ ಮನುಷ್ಯನು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂ.ಗೆ 80 ರೂ ಕೊಡುತ್ತೇನೆ ಅಂತಾ ಹೇಳುತ್ತಾ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಗಳನ್ನು ಬರದುಕೊಳ್ಳುತ್ತಿರುವುದನ್ನು ನೋಡಿ ಪಂಚರ ಸಮಕ್ಷಮದಲ್ಲಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಮನುಷ್ಯನನ್ನು ವಿಚಾರಿಸಲಾಗಿ ತನ್ನ ಹೆಸರು ರಾಜಶೇಖರ  ತಂದೆ ಶರಣಯ್ಯ ಹಿರೇಮಠ ಸಾ: ಹೊನ್ನಕಿರಣಗಿ ಅಂತಾ ತಿಳಿಸಿದ್ದು, ಈತನಿಗೆ ನಾನು ಚೆಕ್ಕ ಮಾಡಿದಾಗ ಆತನ ಹತ್ತಿರ 1) ಎರಡು ಮಟಕಾ ಚೀಟಿ ಅ:ಕಿ: 00=00 ರೂ, 2) ಒಂದು ಬಾಲ್‌ ಪೆನ್‌ ಅ:ಕಿ: 00=00 ರೂ. 3) ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 260/- ರೂ.ಗಳು 4) ಒಂದು ಶ್ಯಾಮಸಂಗ ಮೋಬೈಲ ಅ,ಕಿ 300/- ರೂ ಕಿಮ್ಮತ್ತಿನವು ಸಿಕ್ಕವು. ಸದರಿಯವುಗಳನ್ನು ಕೇಸಿನ ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆತನ ವಿರುದ್ದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಾಕಾ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ   : ದಿನಾಂಕ: 16/08/2016 ರಂದು ಹೊನ್ನಕಿರಣಗಿ ಗ್ರಾಮದಲ್ಲಿ  ಮಟಾಕ ದಾಳಿ ಮಾಡಿ ಆರೋಪಿತನೊಂದಿಗೆ ಠಾಣೆಗೆ ಮರಳಿ ಬರುತ್ತಿರುವಾಗ ಅದೇ ಗ್ರಾಮದ ದೇವಮ್ಮ ಗುಡಿಯ ಹತ್ತಿರ  ಇನ್ನೊಬ್ಬ ಮನುಷ್ಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದ ಅಂಕಿಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ  ಭಾತ್ಮಿ ಬಂದ ಮೇರೆಗೆ ಸಿಪಿಐ ಎಮ್‌‌, ಬಿನಗರ ವೃತ್ತ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಫರಹತಾಬಾದ ಪೊಲೀಸ್ ಠಾಣೆ ರವರು ಇಬ್ಬರು ಪಂಚರಾದ 1) ಶ್ರೀ ಭಗವಂತ್ರಾಯ ತಂದೆ ಅಣ್ಣಪ್ಪಾ ಸಾತನೂರ ಸಾ: ಹೊನ್ನಕಿರಣಗಿ 2) ಶ್ರೀ ಪ್ರಶಾಂತ ತಂದೆ ಬಸವರಾಜ ಕಾಡಾದಿ ಸಾ: ಹೊನ್ನಿಕಿರಣಗಿ ರವರೊಂದಿಗೆ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ -159 ನಾಗೇಂದ್ರ , ಪ್ರಭು ಸಿಪಿಸಿ 366 ರವರನ್ನು ಕರೆದುಕೊಂಡು ಭಾತ್ಮಿ ಇದ್ದ ಸ್ಥಳದ ಹತ್ತಿರ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ   ಮೇಲೆ ಒಬ್ಬ ಮನುಷ್ಯನು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂ.ಗೆ 80 ರೂ ಕೊಡುತ್ತೇನೆ ಅಂತಾ ಹೇಳುತ್ತಾ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಗಳನ್ನು ಬರದುಕೊಳ್ಳುತ್ತಿರುವುದನ್ನು ನೋಡಿ ಪಂಚರ ಸಮಕ್ಷಮದಲ್ಲಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಮನುಷ್ಯನನ್ನು ವಿಚಾರಿಸಲಾಗಿ ತನ್ನ ಹೆಸರು ಹೆಸರು ಸಂತೋಷ  ತಂದೆ ಪ್ರಭು ಬೂಸಾಬೋ ಸಾ: ಹೊನ್ನಕಿರಣಗಿ ಅಂತಾ ತಿಳಿಸಿದ್ದು, ಈತನಿಗೆ ನಾನು ಚೆಕ್ಕ ಮಾಡಿದಾಗ ಆತನ ಹತ್ತಿರ 1) ಎರಡು ಮಟಕಾ ಚೀಟಿ ಅ:ಕಿ: 00=00 ರೂ, 2) ಒಂದು ಬಾಲ್‌ ಪೆನ್‌ ಅ:ಕಿ: 00=00 ರೂ. 3) ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 710/- ರೂ.ಗಳು 4) ಒಂದು ಶ್ಯಾಮಸಂಗ ಮೋಬೈಲ ಅ,ಕಿ 300/-ರೂ ಕಿಮ್ಮತ್ತಿನವು ಸಿಕ್ಕವು. ಸದರಿಯವುಗಳನ್ನು ಕೇಸಿನ ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆತನ ವಿರುದ್ದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.