Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 79/2017 ಕಲಂ 498(ಎ) 323.504.506. ಸಂ 34 ಐ ಪಿ ಸಿ;- ದಿನಾಂಕ 07-05-2017 ರಂದು 11-30 ಎಎಂಕೆ ಪಿಯರ್ಾದಿ ಶ್ರೀಮತಿ ಸಲ್ಮಾಬೇಗಂ ಗಂಡ ಶೇಖಫಾರೂಕ ಇವರು ಹೇಳಿಕೆ ಪಿಯರ್ಾದಿ
ನೀಡಿದ್ದು ಏನಂದರೆ ತನಗೆ ತನ್ನ ಗಂಡ ಹಾಗು ಅತ್ತೆ 2 ವರ್ಷಗಲಿಂದ ಅನೈತಿಕ ಸಂಬಂದ ವಿಷಯದಲ್ಲಿ ಮಾನಸಿಕ ದೈಹಿಕ ಕಿರಕೂಳ
ನೀಡಿದ್ದು ದಿನಾಂಕ 06-05-2017 ರಂದು 1 ಪಿಎಂ ಕ್ಕೆ ಗಂಡ ಹಾಗು ಅತ್ತೆ ಹಾಗು ಶದ್ದೋ. ಅವಳ ಗಂಡ
ಜಲಾಲ ಶೇಖ ಇವರು ಬಂದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕ ದೈಹಿಕ ಕಿರಕೂಳ ನೀಡಿ ಅವಾಚ್ಚವಾಗಿ
ಬೈಯ್ದಾಡಿ. ಜೀವದ ಬೆದರಿಕೆಯನ್ನು ಹಾಕಿದ್ದು ಅಂತಾ ಸಾರಾಂಶದ ಮೇಲಿಂದ ಗುನ್ನೆ ನಂ 79/2017 ಕಲಂ 498(ಎ),323.504.506.
ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ,
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 85/2017 ಕಲಂ: 279,
337, 338, 304(ಎ) ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ;- ದಿನಾಂಕ 07/05/2017 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾಧಿ ಗಂಡನಾದ ಮೃತ ಮಲ್ಲಪ್ಪ ತಂದೆ ಭಾಗಪ್ಪ
ಬನಹಟ್ಟಿ ಮತ್ತು ಆತನ ಮೊಮ್ಮಗ ಇಬ್ಬರೂ ಕೂಡಿಕೊಂಡು ತಮ್ಮ ಬೀಗರಿಗೆ ಮಾತಾಡಿಸಿಕೊಂಡು ಬರುವ
ಕುರಿತು ತಮ್ಮ ಮೋಟಾರ ಸೈಕಲ ನಂ ಕೆ-05-ಎಚ್.ವಿ-8655 ನೆದ್ದರ ಮೇಲೆ ಕುಳಿತುಕೊಂಡು ತಮ್ಮೂರಿನಿಂದ ನಾಚವಾರ
ಗ್ರಾಮಕ್ಕೆ ಹೋಗುವಾಗ ಮಾರ್ಗಮಧ್ಯ ಹತ್ತಿಕುಣಿ-ಭೀಮನಳ್ಳಿ ರೋಡಿನ ಮೇಲೆ ತಿರುವುನ ಹತ್ತಿರ
ಎದುರುಗಡೆ ಸೆಡಂ ಕಡೆಯಿಂದ ಒಂದು ಲಾರಿ ನಂ ಕೆ.-37-ಎ-7722
ನೆದ್ದರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಮಡು ಬಂದು ಮೋಟಾರ
ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಮಲ್ಲಪ್ಪ ತಂದೆ ಭಾಗಪ್ಪ ಬನಹಟ್ಟಿ ಇತನ ಹಣೆಗೆ
ರಕ್ತಗಾಯ, ಎದೆಗೆ ಗುಪ್ತಗಾಯ, ಎಡಗಡೆ ಹೊಟ್ಟೆಗೆ ರಕ್ತಗಾಯ, ಎಡಗಾಲು ಮೊಣಕಾಲು ಕೆಳಗೆ ಭಾರಿ ಗುಪ್ತಗಾಯವಾಗಿ ಕಾಲು
ಮುರಿದಿರುತ್ತದೆ, ಬಲಗಾಲು ಮೋಣಕಾಲು
ಕೆಳಗೆ ಭಾರಿ ಗುಪ್ತಗಾಯವಾಗಿತ್ತು, ಎಡಗಾಲು
ಮತ್ತು ಬಲಗಾಲು ತೊಡೆಗಳಿಗೆ ಭಾರಿ ಗುಪ್ತಗಾಯಗಳು ಆಗಿ ಸ್ಥಳದಲ್ಲಿಯೇ ಸತ್ತಿರುತ್ತಾನೆ, ಮತ್ತು ಶರಣಬಸಪ್ಪ ಇತನ ತಲೆಗೆ ರಕ್ತಗಾಯವಾಗಿರುತ್ತದೆ,
ಅಪಘಾತ ಮಾಡಿ ಲಾರಿ ಚಾಲಕನು ಓಡಿ ಹೋಗಿರುತ್ತಾನೆ
ಹೆಸರು ವಿಳಾಸ ಗೋತ್ತಾಗಿಲ್ಲಾ.
ಹುಣಸಗಿ
ಪೊಲೀಸ್ ಠಾಣೆ ಗುನ್ನೆ ನಂ. 55/2017 ಕಲಂ 78(3) ಕೆ.ಪಿ ಯಾಕ್ಟ;- ದಿನಾಂಕ:06/05/2017 ರಂದು 12.00 ಗಂಟೆಗೆ ಆರೋಪಿತನು ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು
ಇದು ಕಲ್ಯಾಣ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ
ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ
ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130
ಪಿ.ಸಿ-233, 290, 297 ರವರೊಂದಿಗೆ
ದಾಳಿ ಮಾಡಿ ಹಿಡಿದು ಸದರಿಯವನಿಂದ 970=00
ರೂ ನಗದು ಹಣ, ಒಂದು ಮಟಕಾ ನಂಬರ ಬರೆದ
ಚೀಟ, ಒಂದು ಬಾಲ್ ಪೆನ್, ಒಂದು ನೋಕಿಯಾ ಮೊಬೈಲ್ ಜಪ್ತಿ ಮಾಡಿಕೊಂಡಿದ್ದು ಅಂತಾ
ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ
ಜರುಗಿಸಿದ್ದು ಇರುತ್ತದೆ.
ಶೋರಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 135/2017 ಕಲಂ 379
ಐ.ಪಿ.ಸಿ. ಮತ್ತು ಕಲಂ.21(3)21(4)22
ಎಮ್.ಎಮ್.ಡಿ.ಆರ್.ಆಕ್ಟ;- ದಿನಾಂಕ:07-05-2017 ರಂದು 5.45 ಎ.ಎಮ್ ಕ್ಕೆ
ಆರೋಪಿತರು ತಮ್ಮ 4 ಟಿಪ್ಪರಗಳಲ್ಲಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ
ತುಂಬಿಕೊಂಡು ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಸಾಗಾಣಿಕೆ ಮಾಡುತ್ತಿದ್ದಾಗ ಕವಡಿ ಮಟ್ಟಿ
ಕೆನಾಲ ಹತ್ತಿರ ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರ ಸಹಾಯದಿಂದ ಹೋಗಿ ದಾಳಿ ಮಾಡಿ 4 ಟಿಪ್ಪರಗಳುನ್ನು ಹಿಡಿದು ವಶಕ್ಕೆ ತೆಗೆದುಕೊಂಡು ಕ್ರಮ
ಜರುಗಿಸಲಾಗಿದೆ.
ಶೋರಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 136/2017 ಕಲಂ 341.32.504.506.ಐಪಿಸಿ;- ದಿನಾಂಕ: 07/05/2017 ರಂದು 11.30 ಎ.ಎಂ ಕ್ಕೆ ಠಾಣೆಗೆ ಪಿಯರ್ಾದಿ ಶ್ರೀ ಅಯ್ಯಣ್ಣ ತಂ ಶಿವರಾಯ ನಿಲವಂಜಿ ವ|| 60 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಚಂದ್ಲಾಪುರ
ತಾ|| ಶೋರಾಪುರ ರವರು ಹಾಜರಾಗಿ
ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೇನೇಂದರೆ. ನಾನು ಅಯ್ಯಣ್ಣ ತಂ ಶಿವರಾಯ
ನಿಲವಂಜಿ ವ|| 60 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಚಂದ್ಲಾಪುರ ತಾ|| ಶೋರಾಪುರ
ಇದ್ದು, ನಾನು ಕೊಡುವ ದೂರು ಅಜರ್ಿ
ಏನೆಂದರೆ, ನನಗೆ ಮತ್ತು ನಮ್ಮೂರ
ಬಸವರಾಜ ತಂದೆ ನಿಂಗಪ್ಪ ದೊಡ್ಡಮನಿ ನಡುವೆ ಪಾಟರ್ಿ ವಿಷಯದಲ್ಲಿ ವೈಶಮ್ಯವಿದ್ದು, ಆಗಾಗ ನನ್ನ ಮತ್ತು ಅವನ ನಡುವೆ ತಕರಾರು ಆಗಿತ್ತು.
ಹೀಗಿದ್ದು ಬಸವರಾಜನ ದೂರದ ಸಂಬಂದಿ ಮಲ್ಲಪ್ಪ ತಂ/ ನಿಂಗಪ್ಪ ಮುಂಡರಗಿ ಈತನಿಗೂ ನನಗು ಒಂದು ತಿಂಗಳ
ಹಿಂದೆ ಪಾಟರ್ಿ ವಿಷಯದಲ್ಲಿ ತಕರಾರು ಆಗಿತ್ತು. ನಾನು ನಿನ್ನೆ ದಿನಾಂಕ: 06/05/2017 ರಂದು ಸಾಯಂಕಾಲ 6.30 ಪಿ.ಎಂ ಸುಮಾರಿಗೆ ನಾನು ನಮ್ಮ ಮನೆಯಿಂದ ಮರೆಮ್ಮನ ಗುಡಿ ಕಡೆಗೆ
ಹೋಗುವ ನಿಮಿತ್ಯ ಬಸವರಾಜನ ಮನೆಯ ಮುಂದೆ ಹಾದು ಹೋಗುವಾಗ ಬಸವರಾಜ ತಂದೆ ನಿಂಗಪ್ಪ ದೊಡ್ಡಮನಿ ಈತನು
ಬಂದು ನನಗೆ ತಡೆದು ನಿಲ್ಲಿಸಿ ಮಲ್ಲಪ್ಪನಿಗೆ
ಯಾಕೆ ಬೈದಿದ್ದಿ ಸೂಳೆ ಮಗನೆ ನಾವೇನಾದರೂ ಮಡುತ್ತೇವೆ ನೀ ಯಾರು ಕೇಳುವವನು ಅನ್ನುತ್ತಾ ನನ್ನ
ಎದೆಯ ಮೇಲಿನ ಅಂಗಿ ಹಿಡಿದು ನನ್ನ ಕಪಾಳಕ್ಕೆ ಹೊಡೆದನು. ಮತ್ತು ಸೂಳೆ ಮಗನೆ ನಿಂದು ಸೊಕ್ಕು ಬಹಳ
ಆಗಿದೆ ನಿನ್ನನ್ನು ಖಲಾಸ ಮಾಡುತ್ತೇನೆ ಅಂತಾ ಅಂದವನೆ ಕಾಲಿನಿಂದ ಒದ್ದು ನೆಲಕ್ಕೆ ಕೆಡವಿ ಕೈಯಿಂದ
ನನ್ನ ಬೆನ್ನಿಗೆ ಹೊಡೆದನು, ಆಗ
ಅಲ್ಲಿಯೆ ಇದ್ದ ನಮ್ಮೂರವರಾದ ಆದಪ್ಪ ತಂದೆ ನಿಂಗಪ್ಪ ದೊಡ್ಡಮನಿ ಮತ್ತು ಬಸವರಾಜ ಬಂಡೆಪ್ಪ
ದೇವದುರ್ಗ ಇವರು ಜಗಳ ನೋಡಿ ಬಿಡಿಸಿದರು. ಆಗ
ಬಸವರಾಜನು ಈಗ ಉಳಿದಿದ್ದಿ ಮಗನೆ ಇನ್ನೊಮ್ಮೆ ಸಿಗು ನಿನ್ನನ್ನು ಖಲಾಸ ಮಾಡುತ್ತೇನೆ ಅಂತಾ ಜೀವದ
ಭಯ ಹಾಕಿ ಹೋದನು. ನನಗೆ ಜಗಳದಲ್ಲಿ ಯಾವುದೆ ತರಹದ ಗಂಬೀರ ಗಾಯವಾಗಿರುವದಿಲ್ಲ ಮತ್ತು ನಾನು
ಆಸ್ಪತ್ರೆಗೆ ತೋರಿಸುವ ಅವಶ್ಯಕತೆ ಇರುವದಿಲ್ಲ ಈ ಬಗ್ಗೆ ನಮ್ಮ ಮಕ್ಕಳಲ್ಲಿ ವಿಚಾರಮಾಡಿ ಇಂದು
ದಿನಾಂಕ: 07/05/2017 ರಂದು 11.30 ಎ.ಎಂಕ್ಕೆ ಠಾಣೆಗೆ ಬಂದಿರುತ್ತೇನೆ. ಕಾರಣ ನನಗೆ
ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಸವರಾಜ
ತಂದೆ ನಿಂಗಪ್ಪ ದೊಡ್ಡಮನಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತ ಸಾರಾಂಶದ
ಮೇಲಿಂದ ಠಾಣಾ ಗುನ್ನೆ ನಂ 136/2017
ಕಲಂ: 341.323. 504.506 ಐಪಿಸಿ
ನೇದ್ದರಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಕೆ ಕೈ ಕೊಂಡೆನು.
ಶಹಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 147/2017 ಕಲಂ 147 148 149 323 324 326 504 506
ಸಂಗಡ 149
ಐಪಿಸಿ;- ದಿನಾಂಕಃ 07/05/2017ರಂದು ಶಹಾಪೂರ ಸಕರ್ಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ
ತಿಳಿಸಿದ್ದರಿಂದ ಆಸ್ಪತ್ರೆಗೆ ಭೇಟಿನೀಡಿ ಜಗಳದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ
ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ಶ್ರೀ ಅರುಣ ತಂದೆ ಬಸವರಾಜ ಚವ್ಹಾಣ ಸಾಃ ಜಾಪುನಾಯಕ ತಾಂಡಾ
ಕನ್ಯಾಕೊಳೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 06/05/2017ರಂದು ರಾತ್ರಿ ನಮ್ಮ ತಾಂಡಾದ ಚಂದ್ರು ರಾಠೋಡನ ಮಕ್ಕಳಾದ
ತಿಪ್ಪಣ್ಣ, ಸಂಜು ಇವರು ಮಹಾರಾಷ್ಟ್ರ
ಪೊಲೀಸರೊಂದಿಗೆ ತಿರುಗಾಡುತ್ತಿದ್ದಾಗ ನಾವು ಆತನಿಗೆ ಪೊಲೀಸರಿಗೆ ನಮ್ಮ ಮನೆಯ ಕಡೆ ಬೊಟ್ಟು ಮಾಡಿ
ಯಾಕೆ ತೋರಿಸುತ್ತಿದ್ದಿ, ಇನ್ನೊಮ್ಮೆ
ಪೊಲೀಸರಿಗೆ ನಮ್ಮ ಮನೆಯ ಕಡೆಗೆ ಕರೆದುಕೊಂಡು ಬರಬೇಡಾ ಅಂತಾ ಹೇಳಿದಾಗ ಅವರಿಗೂ ನಮಗೂ ಬಾಯಿ ಮಾತಿನ
ತಕರಾರು ಆಗಿತ್ತು. ನಂತರ ನಾವು ಸೀತಾದೇವಿ ಗುಡಿಯ ಹತ್ತಿರ ಇದ್ದಾಗ 11-30 ಪಿ.ಎಮ್ ಸುಮಾರಿಗೆ ಆರೋಪಿತರೆಲ್ಲರೂ ಅಕ್ರಮಕೂಟ
ರಚಿಸಿಕೊಂಡು ಕೈಯಲ್ಲಿ ಕಲ್ಲು, ಬಡಿಗೆ
ಹಿಡಿದುಕೊಂಡು ಅವಾಚ್ಯವಾಗಿ ಬೈಯ್ಯುತ್ತ ಬಂದು
ಪೊಲೀಸರಿಗೆ ನಾವು ಕರೆದಿಲ್ಲ, ಅವರಷ್ಟಕ್ಕೆ
ಅವರೇ ಬಂದು ತಿರುಗಾಡಿ ಹೋಗಿದ್ದಾರೆ, ಸುಮ್ಮನೆ
ನಾವು ಕರೆದಿದ್ದೇವೆ ಅಂತಾ ತಾಂಡಾದಲ್ಲಿ ನಮ್ಮ ಹೆಸರು ಕೆಡಸುತ್ತಿರೇನಲೇ ಎಂದು ಜಗಳ ತಗೆದು ನನಗೆ
ಹಾಗು ಇನ್ನು 4 ಜನರಿಗೆ ಕೈಯಿಂದ ಮತ್ತು
ಕಲ್ಲು, ಬಡಿಗೆ, ಮಚ್ಚಿನಿಂದ ಹೊಡೆದು ಸಾದಾ ಹಾಗು ಭಾರಿರಕ್ತಗಾಯ,
ಗುಪ್ತಗಾಯ ಪಡಿಸಿ ಜೀವದ ಬೆದರಿಕೆ
ಹಾಕಿರುತ್ತಾರೆ ಅಂತಾ ವಗೈರೆ ಹೇಳಿಕೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 147/2017 ಕಲಂ. 147 148 149 323 324 326 504 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 148/2017.ಕಲಂಃ 143.147.148.323.324.354.427.504.506
ಸಂ149.ಐ.ಪಿ.ಸಿ.;-
ದಿನಾಂಕ-07-05-2017 ರಂದು ಬೆಳಿಗ್ಗೆ 01-45 ಗಂಟೆಗೆ ನಾನು ಆಸ್ಪತ್ರೆಗೆ ಬೆಟಿನಿಡಿ ಗಾಯಾಳು ಪಿಯರ್ಾದಿ ಕಮಲ್
ತಂದೆ ಚಂದ್ರಾಮ ರಾಠೋಡ ವ|| 19 ಉ||
ವಿದ್ಯಾಥರ್ಿ ಜಾ|| ಲಂಬಾಣಿ ಸಾ|| ಜಾಪಾ ನಾಯಕ ತಾಂಡಾ ಕನ್ಯಾಕೋಳ್ಳುರ ತಾ|| ಶಹಾಪೂರ ಇವರ ಹೇಳಿಕೆ ಪಿಯರ್ಾದಿಯ ಸಾರಾಂಶ ಎನೆಂದರೆ ದಿನಾಂಕ 06/05/2017 ರಂದು ರಾತ್ರಿ ನಮ್ಮ ಅತ್ತಿ ಮಗನ ಮದುವೆ ಇದ್ದ
ಪ್ರಯುಕ್ತ ಅಡಿಗೆ ಸಾಮಾನು ತರಲು ನಾನು ಮತ್ತು ರೇಖಾ ತಂದೆ ಚಂದ್ರಶೇಖರ್ ಓಡ್ಯಾಡುತ್ತಿದೆವು ರಾತ್ರಿ 11-30 ಗಂಟೆಗೆ ಸೀತಾದೇವಿ ಗುಡಿ ಹತ್ತಿರ ನಿಂತಾಗ ನಮ್ಮ
ತಾಂಡಾದವರಾದ 1) ಬಸವರಾಜ ತಂದೆ
ಟಾಕ್ರ್ಯಾ ಚವ್ಹಾಣ 2) ಅಶೋಕ ತಂದೆ
ಬಸವರಾಜ ಚವ್ಹಾಣ 3) ದಿನೇಶ ತಂದೆ
ಬಸವರಾಜ ಚವ್ಹಾಣ 4) ಕೀರ್ಯಾ ತಂದೆ
ಶಂಕರ ಚವ್ಹಾಣ 5) ಗೋಪ್ಯಾ ತಂದೆ
ಟಾಕ್ರ್ಯಾ ಚವ್ಹಾಣ 6) ತಾರಾಸಿಂಗ್
ತಂದೆ ಮೇಗ್ಯಾ ಚವ್ಹಾಣ 7) ಸುರೇಶ ತಂದೆ
ಮೇಗ್ಯಾ ಚವ್ಹಾಣ 8) ಕಿಶನ್ ತಂದೆ
ಲೆಟ್ಯಾ ಚವ್ಹಾಣ 9) ರಾಮಲಿ ತಂದೆ
ಶಂಕ್ರ್ಯಾ ಚವ್ಹಾಣ ಇವರೆಲ್ಲರು ಅಕ್ರಮ ಕೂಟ ರಚಿಸಿ ಕೊಂಡು ಕೈಯಲ್ಲಿ ಕಲ್ಲು, ಬಡಿಗೆ ಬಡಿಗೆ ಹಿಡಿದುಕೊಂಡು ಬಂದು. ಲೇ ಕಮಲ್ ನಿನ್ನ
ಸೋಕ್ಕು ಬಹಳವಾಗಿದೆ ನಮ್ಮ ಅಣ್ಣ ತಂಮ್ಮಂದಿರಿಗೆ
ತಾಂಡಾದಲ್ಲಿ ಇರಲಾರದಂಗ ಮಾಡಿದ್ದಿ. ಪೊಲೀಸ್ರಿಗೆ ನಮ್ಮ ಅಣ್ಣ ತಮ್ಮಂದಿರು ಕಳ್ಳತನ
ಮಾಡಿರುತ್ತಾರೆ ಅಂತಾ ಸುಳ್ಳು ಹೇಳಿ ಹಿಡಿಸಿಕೊಡುತ್ತಿರಿವಿ ಸೂಳೆ ಮಗನೆ ಇವತ್ತು ನಿನಗೆ
ಬಿಡುವದಿಲ್ಲ ಎಂದು ಎಲ್ಲರು ಅವಾಚ್ಚ ಶಬ್ದಗಳಿಂದ ಬೈಯುತ್ತ ಬಂದು ಅವರಲ್ಲಿ ಅಶೋಕ ತಂದೆ ಬಸವರಾಜ
ಇತನು ತನ್ನ ಕೈಯಲ್ಲಿ ಇದ್ದ ಕಲ್ಲಿನಿಂದ ನನ್ನ ಮುಗಿಗೆ ಹೊಡೆದಿದ್ದರಿಂದ ಮುಗಿನಿಂದ ರಕ್ತ
ಬಂದಿರುತ್ತದೆ. ಗೋಪ್ಯಾ ತಂದೆ ಟಾಕ್ರ್ಯಾ ಇತನು ತನ್ನ ಕೈಯಲ್ಲಿ ಇದ್ದ ಬಡಿಗೆಯಿಂದ ನನ್ನ ಎಡಗಡೆ
ಬೆನ್ನಿಗೆ ಹೊಡೆದು ಗಾಯ ಮಾಡಿದನು. ಅದೆ ಬಡಿಗೆ ಯಿಂದ ನನ್ನ ಎಡಕೈಗೆ ಹೊಡೆದು ಗುಪ್ತಗಾಯ ಮಾಡಿದನು
ಬಸವರಾಜನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಎಡಗಡೆ ಬುಜಕ್ಕೆ ಹೊಡೆದನು. ಸುರೇಶ ತಂದೆ
ಮೇಗ್ಯಾ ಇತನು ರೇಖಾಳಿಗೆ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ತನ್ನ ಕೈಯಿಂದ ಎದೆಗೆ, ಹೊಟ್ಟೆಗೆ, ಗುದ್ದಿ ಗುಪ್ತಗಾಯ ಮಾಡಿದನು. ಅಲ್ಲೆ ನಿಲ್ಲಿಸಿದ್ದ ನನ್ನ ಮೋಟರ್
ಸೈಕಲ್ ನಂ ಕೆ.ಎ-.28 ಎಸ್-1351
ನೆದ್ದಕ್ಕೆ ದಿನೇಶ ತಂದೆ ಬಸವರಾಜ. ಕೀರ್ಯಾ
ತಂದೆ ಶಂಕರ್. ತಾರಾಸಿಂಗ್ ತಂದೆ ಮೇಗ್ಯಾ. ಕಿಶನ್ ತಂದೆ ಲೇಟ್ಯಾ. ರಾಮಲಿ ತಂದೆ ಶಂಕ್ರ್ಯಾ
ಇವರೆಲ್ಲರು ಕೂಡಿ ನನ್ನ ಗಾಡಿಯನ್ನು ನೆಲಕ್ಕೆ ಹಾಕಿ ಅಲ್ಲೆಬಿದ್ದಿದ್ದ ಒಂದು ದೊಡ್ಡ ಕಲ್ಲನ್ನು
ತೆಗೆದು ಕೊಂಡು ನನ್ನ ಗಾಡಿಯ ಮೇಲೆ ಎತ್ತಿಹಾಕಿ ಜಖಂ ಗೋಳಿಸಿರುತ್ತಾರೆ. ಜಗಳದ ಸಪ್ಪಳ ಕೇಳಿ ನಮ್ಮ
ತಮ್ಮ ಸಂಜು ತಂದೆ ಚಂದ್ರಾಮ. ಮತ್ತು ನಮ್ಮ ತಾಂಡಾದವರಾದ ತಿರುಪತಿ ತಂದೆ ಲೊಕ್ಯಾ ಚವ್ಹಾಣ. ಮಹೇಶ
ತಂದೆ ಲೋಕ್ಯಾ ಚವ್ಹಾಣ ಇವರು ಜಗಳವನ್ನು ನೋಡಿ ಬಿಡಿಸಿದರು ಆಗ ಅವರೆಲ್ಲರು ಲೇ ಸುಳಿ ಮಕ್ಕಳೆ
ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಉಳಿಸುವದಿಲ್ಲಾ ಅಂತಾ ಜೀವದ ಬೆದರಿಕೆಹಾಕಿ
ಹೋಗಿರುತ್ತಾರೆ. ನಂತರ ನಮ್ಮ ತಮ್ಮ ಸಂಜು ಇತನು ನಮಗೆ
ಉಪಚಾರಕ್ಕಗಿ ಆಸ್ಪತ್ರೆಗೆ ಕರೆದು ಕೊಂಡು ಬಂದು ಸೆರಿಕೆ ಮಾಡಿರುತ್ತಾನೆ. ಕಾರಣ ಅಕ್ರಮ
ಕೂಟ ರಚಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತ ನಮಗೆ ಹೊಡೆಬಡೆ ಮಾಡಿ ಜೀವದ ಬೆದರಿಕೆ
ಹಾಕಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಹೇಳಿಕೆ