Police Bhavan Kalaburagi

Police Bhavan Kalaburagi

Thursday, June 1, 2017

Yadgir District Reported Crimes


                                                  Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 89/2017 ಕಲಂ 379 ಐ.ಪಿ.ಸಿ;- ದಿನಾಂಕ 31/05/2017 ರಂದು ಬೆಳಿಗ್ಗೆ 09 ಗಂಟೆಗೆ ಫಿಯರ್ಾಧಿ ಶ್ರೀ ರವೀಂದದ್ರರೆಡ್ಡಿ ತಂದೆ ಈರಣ್ಣರೆಡ್ಡಿ ರೆಡ್ಡಡಿ ವಯಾ 44 ವರ್ಷ, ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಗಾಂಧಿನಗರ ಯಾದಗಿರಿ ಇವರು ಠಾಣೆಗೆ ಬಂದು ಒಂದು ಲಿಖಿತ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ನಾನು ರವೀಂದ್ರರೆಡ್ಡಿ ತಂದೆ ಈರಣ್ಣರೆಡ್ಡಿ ಸಾ|| ಮನೆ ನಂ 5-1-254, ಗಾಂಧಿ ನಗರ ಸ್ಟೇಷನ ಏರಿಯಾ ಯಾದಗಿರಿ ನಿವಾಸಿ ಇದ್ದು, ಈ ಮೂಲಕ ಪ್ರಮಾಣಿಕರಿಸಿ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಹಿರೋ ಹೊಂಡಾ ಸಿ.ಡಿ ಡಿಲೆಕ್ಸ್ ವಾಹನ ನಂ ಕೆ.ಎ 33 ಕೆ. 1947, ಚೆಸ್ಸಿ ನಂ ಒಃಐಊಂ11ಇಓಂ9ಐಔ1139, ಇಂಜಿನ್ ನಂ-ಊಂ11ಇಅಂ9ಐ06958, ಇದ್ದು, ಇದರ ನೊಂದಣಿ ಕೃತ ಮಾಲಕನಾಗಿದ್ದು, ಎಂದಿನಂತೆ ನಾನು ನನ್ನ ಸದರಿ ವಾಹವನ್ನು ದಿನಾಂಕ 13/04/2017 ರಂದು ಸಾ|| 8 ಕ್ಕೆ ರಾತ್ರಿ ಹಿರೋ ಶೋ ರೂಮ್ ಚಿತ್ತಾಪೂರ ರಸ್ತೆ ಮೋಹನ ಕಾಂಪ್ಲೆಕ್ಸ್ ಹಿಂದುಗಡೆ, ಯಾದಗಿರಿಯಲ್ಲಿರುವ ಸದರಿ ಜಾಗದಲ್ಲಿ ನಾನು ನನ್ನ ವಾಹನವನ್ನು ನಿಲ್ಲಿಸಿದದ್ದೆನು. ಸ್ವಲ್ಪ (09 ಪಿ.ಎಂಕ್ಕೆ) ಸಮಯವನ್ನು ಬಿಟ್ಟು ತಿರುಗಿ ನಾನು ನನ್ನ ವಾಹವನ್ನು ತೆಗೆದುಕೊಂಡು ಮನೆಗೆ ಹೋಗಬೇಕೆಂದುಕೊಂಡು ನಾನು ನನ್ನ ವಾಹನವನ್ನು ನಿಲ್ಲಿಸಿದ ಜಾಗದದಲ್ಲಿ ಹೋಗಿ ನೋಡಿದರೆ, ಸದರಿ ಜಾಗದಲ್ಲಿ ನನ್ನ ಗಾಡಿಯು ಇರಲಿಲ್ಲ. ಕಳುವಾಗಿದೆ ಎಂದು ಅಲ್ಲಿ ಇಲ್ಲಿ ಹುಡುಕಾಡಲಾಗಿ ಸದರಿ ಗಾಡಿಯು ಪತ್ತೆಯಾಗಿರುವುದಿಲ್ಲ. ಮತ್ತು ಎಲ್ಲಾ ರೀತಿಯಲ್ಲಿ ಹುಡುಕಿದರು ಸಿಕ್ಕಿರುವುದಿಲ್ಲವಾದ್ದರಿಂದ ಇಂದು ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಮೋ.ಸೈ. ಅ.ಕಿ 30,000/- ರೂ||, ವಾಹನದ ಬಣ್ಣ ಕಪ್ಪು ಇರುತ್ತದೆ. ಆದ್ದರಿಂದ ದಯಪೂರ್ವಕ ಮನವಿ ಸಲ್ಲಿಸುತ್ತಿದ್ದೇನೆ ಅಂತಾ ನೀಡಿದ ಲಿಖಿತ  ದೂರಿನ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂ 89/2017 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 90/2017 ಕಲಂ. 78 (3) ಕೆ.ಪಿ. ಆಕ್ಗಟ;- ದಿನಾಂಕ 31/05/2017 ರಂದು 6-15 ಪಿಎಂಕ್ಕೆ ಮಾನ್ಯ ಸುನೀಲ ವ್ಹಿ ಮೂಲಿಮನಿ ಪಿ.ಎಸ್.ಐ (ಕಾಸು) ಸಾಹೇಬರು ಠಾನೆಗೆ ಬಂದು ಆರೋಪಿ ಮತ್ತು ಮುದ್ದೆಮಾಲಿನೊಂಇಗೆ ಠಾಣೆಗೆ ಬಂದು ಜ್ಞಾಪನಾ ಪತ್ರದೊಂದಿಗೆ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:31/05/2017 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಯಾದಗಿರಿ ನಗರದ ಕೊಟಗಾರವಾಡಿಯ ಗಂಗಾಪರಮೇಶ್ವರಿ ಕಲ್ಯಾಣ ಮಂಟಪ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ನಾನು ವಿಠೋಭಾ ಹೆಚ್.ಸಿ.86, ರವಿ ರಾಠೋಡ ಪಿ.ಸಿ 269 ರವರಿಗೆ ಕರೆದು ವಿಷಯ ತಿಳಿಸಿ ರವಿ ಪಿಸಿ ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದು ಪಂಚರನ್ನು ಕರೆದುಕೊಂಡು ಠಾಣೆಗೆ ಬಂದಾಗ ಅವರಿಗೂ ವಿಷಯ ತಿಳಿಸಿ ಎಲ್ಲರೊಂದಿಗೆ ಠಾಣೆಯಿಂದ 4-15 ಪಿಎಂಕ್ಕೆ ಸರಕಾರಿ ಜೀಪ ನಂ. ಕೆಎ 33 ಜಿ 0075 ನೇದ್ದರಲ್ಲಿ ದಾಳಿ ಕುರಿತು ಹೊರಟು 4-25 ಪಿಎಂಕ್ಕೆ ಸ್ಥಳಕ್ಕೆ ಹೋಗಿ ಕೊಟಗಾರವಾಡಿಯ ಗಂಗಾ ಪರಮೇಶ್ವರಿ ಕಲ್ಯಾಣ ಮಂಟಪ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು  ನಡೆದುಕೊಂಡು ಹೋಗಿ ಒಂದು ಮನೆಯ ಹತ್ತಿರ ಮರೆಯಾಗಿ ನಿಂತು ನೋಡಿದಾಗ ಕಲ್ಯಾಣ ಮಂಟಪ ಮುಂದೆ ಇರುವ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ 1=00 ರೂಪಾಯಿಗೆ 80=00 ರೂಪಾಯಿ ಗೆಲ್ಲಿರಿ ಮಟ್ಕಾ ಆಡಿರಿ ಎಂದು ಅವರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಚೀಟಿಯಲ್ಲಿ  ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಸದರಿಯವನಿಗೆ 4-45 ಪಿಎಂಕ್ಕೆ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮಲ್ಲಪ್ಪ ತಂ. ಶಿವಪ್ಪ ಚಿರ್ತ ವಃ 45 ಜಾಃ ಕುರುಬರು ಉಃ ಒಕ್ಕಲುತನ ಮತ್ತು ಮಟ್ಕಾ ಬರೆಯುವುದು ಸಾಃಕೊಲಿವಾಡ ಯಾದಗಿರಿ ಅಂತಾ ಹೇಳಿದ್ದು, ಸದರಿಯವನಿಂದ 1) ಮಟ್ಕಾ ಜೂಜಾಟದ 1200=00 ರೂ. ನಗದು ಹಣ, 2) ಒಂದು ಮಟ್ಕಾ ನಂಬರ ಬರೆದ ಚೀಟಿ ಅ.ಕಿ.00-00 3) ಒಂದು ಬಾಲಪೆನ ಅ.ಕಿ.00-00 ಇವುಗಳನ್ನು ಜಪ್ತಿ ಮಾಡಿಕೊಂಡು 4-45 ಪಿಎಮ್ ದಿಂದ 5-45 ಪಿಎಮ್ ದವರೆಗೆ ವಿವರವಾಗಿ ಜಪ್ತಿ ಪಂಚನಾಮೆ ಕೈಕೊಂಡು 6-15 ಪಿಎಂಕ್ಕೆ ಠಾಣೆಗೆ ಬಂದಿದ್ದು ಈ ಅಪರಾಧವು ಅಸಂಜ್ಞೆಯ ಸ್ವರೂಪದ್ದಾಗಿರುವುದರಿಂದ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಲಯದಿಂದ 8-15 ಪಿಎಂಕ್ಕೆ ಅನುಮತಿ ಪಡೆದುಕೊಂಡು  ಠಾಣೆ ಗುನ್ನೆ ನಂ.90/2017 ಕಲಂ.78(3) ಕೆ.ಪಿ.ಆಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 28/2017 ಕಲಂ 279, 338, ಐಪಿಸಿ;- ದಿನಾಂಕ 31/05/2017 ರಂದು ಸಾಯಂಕಾಲ 5-45 ಪಿ.ಎಂ. ಸುಮಾರಿಗೆ ಫಿಯರ್ಾದಿ ಗಾಯಾಳು ತಮ್ಮ ಎಳೆನೀರು ಅಂಗಡಿಗೆ  ರಸ್ತೆಯ ಪಕ್ಕದಲ್ಲಿ ಹೊರಟಾಗ ಮಾರ್ಗ ಮದ್ಯೆ ಹೊಸಳ್ಳಿ ಕ್ರಾಸ್-ಶಾಸ್ತ್ರಿ ಚೌಕ್ ಮುಖ್ಯ ರಸ್ತೆಯ ಹೊಸ ಬಸ್ ನಿಲ್ದಾಣದ  ಹತ್ತಿರ ಆರೋಪಿ ತನ್ನ ಮೋಟಾರು ಸೈಕಲ್ ನಂ.ಕೆಎ-04, ಜೆಬಿ-2872 ನೆದ್ದನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಫಿಯರ್ಾದಿಗೆ ನೇರವಾಗಿ  ಡಿಕ್ಕಿಪಡಿಸಿದ ಪರಿಣಾಮ ಪಿಯರ್ಾದಿಗೆ ತಲೆಗೆ ಭಾರೀ ರಕ್ತಗಾಯ ಮತ್ತು ಸೊಂಟಕ್ಕೆ ಭಾರೀ ಗುಪ್ತಗಾಯವಾಗಿದ್ದು, ಎರಡು ಮೊಣಕಾಲುಗಳಿಗೆ, ಕೈಗಳಿಗೆ, ಭುಜಕ್ಕೆ ತರಚಿದ ರಕ್ತಗಾಯಗಳಾಗಿದ್ದು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಈ ಮೇಲಿನಂತೆ ಕ್ರಮ ಜರುಗಿಸಿದ್ದುಅದೆ                                                               
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 29/2017 ಕಲಂ 279,337,338,304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್;- ದಿನಾಂಕ: 01-06-2017 ರಂದು ನಸುಕಿನ ಸಮಯದಲ್ಲಿ ಭಿಮನಗರ ತಾಂಡಾದ ಸಂತೋಷ ತಂದೆ ಸೋಮ್ಯಾ ರಾಠೋಡ, ಚಂದ್ರು ತಂದೆ ಚಾಪಲಾ ರಾಠೋಡ ಈತನು ನಡೆಸುತ್ತಿದ್ದ ಟ್ಯಾಕ್ಟರ ಇಂಜಿನ ನಂಬರ ಕೆಎ-33, ಟಿಎ-4315 ಟ್ರಾಲಿ ಸಮೇತ ತಾಂಡಾದ ಸಂತೋಷ ತಂದೆ ಸೋಮ್ಯಾ ರಾಠೋಡ, ಶಂಕರ ತಂದೆ ಕೀರ್ಯಾ ರಾಠೋಡ, ಕುಮಾರ ತಂದೆ ಶಂಕರ ರಾಠೋಡ, ಎಲ್ಲರೂ ಕೂಡಿಕೊಂಡು ಚಂದ್ರು ಇವರ ಹೊಲದಲ್ಲಿಯ ಕಟ್ಟಿಗೆಗಳನ್ನು ತರಲು ಟ್ಯಾಕ್ಟರ ಟ್ರಾಲಿಯಲ್ಲಿ ಚಂದ್ರು, ಕುಮಾರ, ಶಂಕರ ಮೂವರು ಕುಳಿತಿದ್ದು ಟ್ಯಾಕ್ಟರನ್ನು ಚಂದ್ರು ಈತನು ನಡೆಸಿಕೊಂಡು ಹೊಗುತ್ತಿದ್ದನು. ಅಂದಾಜು 4-30 ಎ.ಎಂ. ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಡಿಕಲ್ ಕಾಲೇಜ ಕ್ರಾಸ ಹತ್ತಿರ ರೋಡಿನಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಯಾದಗಿರಿ ಕಡೆಯಿಂದ ಒಂದು ಲಾರಿ ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬಂದವನೆ ನೊಡ ನೊಡುತ್ತಿದ್ದಂತೆ ಟ್ಯಾಕ್ಟರ ಟ್ರಾಲಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಪಡಿಸಿದಾಗ ಟ್ಯಾಕ್ಟರ ಟ್ರಾಲಿಯಲ್ಲಿ ಕುಳಿತ ಕುಮಾರ ಈತನು ಟ್ಯಾಲಿಯಿಂದ ಒಮ್ಮೆಲೆ ಸಿಡಿದು ರಸ್ತೆಯ ಮೇಲೆ ಬಿದ್ದಿದ್ದು ಟ್ಯಾಕ್ಟರ ಕೂಡಾ ಸ್ವಲ್ಪ ಮುಂದೆ ಹೋಗಿ ಪಲ್ಟಿಯಾಗಿ ರಸ್ತೆಯ ಎಡಗಡೆ ತಗ್ಗಿನಲ್ಲಿ ಬಿದ್ದಿತು, ಆಗ ಸದರಿ ಅಪಘಾತದಲ್ಲಿ ಚಂದ್ರು ಈತನಿಗೆ ಬಲಗಾಲಿನ ಹಿಮ್ಮಡಿಗೆ ಭಾರಿ ಗುಪ್ತ ಗಾಯ ಎರಡು ಬುಜಗಳಿಗೆ ಗುಪ್ತಗಾಯ ಹಾಗೂ ಶಂಕರ ಈತನಿಗೆ ತಲೆಯ ಹಿಂಬಾಗಕ್ಕೆ ಭಾರಿ ರಕ್ತಗಾಯ ಹಾಗೂ ಮುಖಕ್ಕೆ ಭಾರಿಗಾಯ ಹೊಂದಿ ಹಲ್ಲು ಮುರಿದ್ದಿದ್ದು, ಟ್ಯಾಕ್ಟರ ಚಾಲಕ ಚಂದ್ರು ಈತನಿಗೆ ಬಲಗಣ್ಣಿಗೆ ಭಾರಿ ಗುಪ್ತ ಹಾಗೂ ತೆರಚಿದ ಗಾಯವಾಗಿದ್ದು, ರೋಡಿನ ಬಿದ್ದ ಕುಮಾರ ಈತನಿಗೆ ಲಾರಿ ಆತನ ಮೇಲೆ ಹಾಯ್ದು ಹೋಗಿದ್ದರಿಂದ ತಲೆಗೆ ಮುಖಕ್ಕೆ ಭಾರಿ ರಕ್ತಗಾಯವಾಗಿ ಮೆದುಳು ಹೊರಗೆ ಬಂದಿದ್ದು ಎರಡು ಮೊಳಕಾಲಗಳ ಕೆಳಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದನು. ಲಾರಿ ಚಾಲಕನು ಲಾರಿಯನ್ನು ಅಲ್ಲೆ ಸ್ವಲ್ಪ ಮುಂದುಗಡೆ ಸೈಡಿಗೆ ನಿಲ್ಲಿಸಿ ಕುಮಾರ ಈತನು ಮೃತಪಟ್ಟಿದ್ದನ್ನು ತಿಳಿದು ಪುನ ಲಾರಿಯನ್ನು ಚಾಲು ಮಾಡಿಕೊಂಡು ಹೊರಟು ಹೊದನು. ಲಾರಿ ನಂಬರ ನೊಡಿದ್ದು ಅದರ ನಂಬರ ಜಿಎ-05, ಟಿ-4210 ನೇದ್ದು ಇದ್ದು ಚಾಲಕನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಘಟನೆಯು ಲಾರಿ ನಂಬರ ಜಿಎ-05, ಟಿ-4210 ನೇದ್ದರ ಚಾಲಕನ ಅತೀ ವೇಗ ಮತ್ತು ಅಲಕ್ಷತನ ಚಾಲನೆ ಮಾಡಿ ಟ್ಯಾಕ್ಟರಕ್ಕೆ ಡಿಕ್ಕಿ ಪಡಿಸಿದ್ದರಿಂದ ಸಂಬವಿಸಿದ್ದು ಅಂತ ದೂರಿನ ಸಾರಾಂಶದ ಮೇಲಿಂದ ಈ ಮೇಲಿನ ಗುನ್ನೆ ಧಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 91/2017 ಕಲಂ: 279, 337, 338, ಐಪಿಸಿ;- ದಿನಾಂಕ 31/05/2017 ರಂದು ಮಧ್ಯಾಹ್ನ 3-15 ಗಂಟೆಗೆ ಫಿರ್ಯಾಧಿ ಮತ್ತು ಆರೋಪಿತನು ಕೂಡಿಕೊಂಡು ಮೋಟಾರ ಸೈಕಲ ನಂ ಕೆ-35-ಎಲ್-2481 ನೆದ್ದರ ಮೇಲೆ ಕುಳಿತುಕೊಂಡು ತಮ್ಮ ಬೀಗರಿಗೆ ಮಾತಾಡಿಸಿಕೊಂಡು ಬರುವ ಕುರಿತು ತ್ಮಮೂರಿನಿಂದ ರಾಸಮುದ್ರ ಗ್ರಾಮಕ್ಕೆ ಹೋಗುವಾಗ ಮಾರ್ಗಮಧ್ಯ ಮುಂಡರಗಿ-ರಾಮಸಮುದ್ರ ರೋಡಿನ ಮೇಲೆ ಹೋಗುವಾಗ ಆರೋಪಿತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುವಾಗ ನಾಯಿ ಅಡ್ ಬಂದುದ್ದರಿಂದ ಒಮ್ಮೆಲೆ ಬ್ರೇಕ್ ಹಾಕಿದಾಗ ಮೋಟಾರ ಸೈಕಲ ಸ್ಕೀಡ ಆಗಿ ಅಪಘಾತ ಮಾಡಿದ್ದರಿಂದ ಫಿರ್ಯಾಧಿಗೆ ಮತ್ತು ಆರೋಪಿತನಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆದ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 92/2017 ಕಲಂ: 323, 324, 504, 506 ಐಪಿಸಿ;- ದಿನಾಂಕ 01/06/2017 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾಧಿದಾರನು ಶೆಟ್ಟಿಕೇರಾ ಗ್ರಾಮದ ಶಾಂತಮ್ಮ ಇವರ ಹೊಟೆಲ ಹತ್ತಿರ ಕುಳಿತಾಗ ಆರೋಪಿತನು ಅಲ್ಲಿಗೆ ಬಂದನು, ಆಗ ಫಿರ್ಯಾಧಿಯು ನಾನು ಮನೆ ಕಟ್ಟುತ್ತಿದ್ದೆನೆ, ನನಗೆ ಕಟ್ಟಿಗೆಗಳು ಬೇಕಾಗಿವೆ ನಮ್ಮ ಹೊಲದಲ್ಲಿಯ ಗಿಡಗಳು ಕಡಿದುಕೊಳ್ಳುತ್ತೆನೆ ಅಂತಾ ಅಂದಾಗ ಆರೋಪಿತನು ಆವಾಚ್ಯವಾಗಿ ಬೈದು ಜಗಳ ತೆಗೆದು ಕಟ್ಟಿಗೆಯಿಂದ, ಕೈಯಿಂದ ಹೊಡೆದು ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.
 

No comments: