ಅಪಘಾತ ಪ್ರಕರಣ
:
ಹೆಚ್ಚುವರಿ
ಸಂಚಾರಿ ಠಾಣೆ : ಶ್ರೀ ಅಬ್ದುಲ ಸುಬಾನ ತಂದೆ ಅಬ್ದುಲ
ಹಪೀಜ ರವರು ದಿನಾಂಕ: 10-10-2013 ರಂದು 8=40 ಎ.ಎಮ್.ಕ್ಕೆ ತನ್ನ ಮೋ/ಸೈಕಲ್ ನಂ: ಕೆಎ 32 ಎಸ್ 7996 ನೆದ್ದರ ಮೇಲೆ
ಲಾಹೋಟಿ ಪೆಟ್ರೋಲ್ ಪಂಪ ದಿಂದ ಐ ವಾವನ ಈ ಶಾಹಿ ಕಡೆಗೆ ಹೋಗುತ್ತಿದ್ದಾಗ ಲಾಹೋಟಿ ಕ್ರಾಸ್ ಹತ್ತಿರ
ಏಷೀಯನ ಮಹಲ ರೋಡ ಕಡೆಯಿಂದ ಮೋ/ಸೈಕಲ್ ನಂ: ಕೆಎ 39 -5033 ರ ಸವಾರನು ತನ್ನ ಮೋ/ಸೈಕಲನ್ನು ಅತಿವೇಗವಾಗಿ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸಿಕೊಂಡು ಬರುತ್ತಿದ್ದ ಮೋ/ಸೈಕಲಿಗೆ
ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಭಾರಿ ಗಾಯಗೊಳಿಸಿ ತನ್ನ ಮೋ/ಸೈಕಲ್ ಸಮೇತ ಹೊರಟು ಹೋಗಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವೆಇ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕೆಲಸಕ್ಕೆ ಅಡೆ ತಡೆ ಮಾಡಿ
ಹಲ್ಲೆ ಮಾಡಿದ ಪ್ರಕರಣ :
ರೋಜಾ ಠಾಣೆ : ಶ್ರೀ ರಾಮಪ್ಪಾ ತಂದೆ ಪಾಂಡು ಜಾಧವ [ಆರ್.ಪಿ ಜಾಧವ] ವಲಯ
ಆಯುಕ್ತರು ವಲಯ ಕಚೇರಿ ನಂ. 03 ಗುಲಬರ್ಗಾ ಮಹಾನಗರ ಪಾಲಿಕೆ ಗುಲಬರ್ಗ ಇವರು ಒಂದು ಕನ್ನಡದಲ್ಲಿ
ಗಣಕೀಕೃತ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡೆಸಿದ್ದು ಸಾರಾಂಶ ಏನೆಂದರೆ ಇಂದು ದಿನಾಂಕ:
11-10-2013 ರಂದು ಬೆಳಿಗ್ಗೆ 8:30 ಗಂಟೆಗೆ ಗಂಜ ಕಾಲೋನಿಯಿಂದ ವಕ್ಕಲಗೇರಾ ಗ್ರೇವಯಾರ್ಡ
ರಸ್ತೆಯಲ್ಲಿ ಇರುವ ಶ್ರೀ ಮಹ್ಮದ ರಫೀಕ ಶೇಖ ತಂದೆ ಶಫಿಕ ರವರು ನಿರ್ಮಿಸಿರುವ ಅನಧೀಕೃತ
ಕಟ್ಟಡವನ್ನು ತೆರವುಗೊಳಿಸಲು ನಮ್ಮ ಪಾಲಿಕೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಬಂದು ಮನೆಯಲ್ಲಿ
ವಾಸವಾಗಿರುವವರನ್ನು ತಮ್ಮ ಸಾಮಾನುಗಳನ್ನು ತೆಗೆದುಕೊಳ್ಳಲು ಸೂಚಿಸಲಾಯಿತು ಅದರಂತೆ ಅವರು ನಮ್ಮ
ಪಾಲಿಕೆಯ ಪೌರ ಕಾರ್ಮಿಕರ ಸಹಾಯದಿಂದ ಸದರಿಯವರು ತಮ್ಮ ಸಾಮಾನುಗಳನ್ನು ಪಕ್ಕದ ಮನೆಗೆ
ಸಾಗಿಸುತ್ತಿದ್ದರು ಆದರೆ ಇದೇ ವೇಳೆಗೆ ಶ್ರೀ ಬಾಬಾ ಮಹ್ಮದ ರಫೀಕ ಖಾಸಿಮ ಇವರೊಂದಿಗೆ ಇನ್ನೂ 4-5
ಜನ ಸೇರಿ ನಮ್ಮ ಪಾಲಿಕೆಯ ಸಿಬ್ಬಂದಿಗಳಾದ ಶ್ರೀ ಗೋಪಾಲ ಕೃಷ್ಣ ಸಹಾಯಕ ಅಭಿಯಂತರರು ಶ್ರೀ ಪೀರಪ್ಪಾ
ಪೂಜಾರಿ ಹಿ.ನೈ.ನಿ, ಹನುಮಂತ ಗೌಡ. ಪ್ರ.ಆ.ಅ , ಮಲ್ಲಿ ಕಾರ್ಜುನ , ವಿನೋದ ಗಾಜರೆ ,
ಅಭಯಕುಮಾರ, ಹಾಗೂ ನನ್ನ ಮೇಲೆ [ಆರ.ಪಿ. ಜಾಧವ]
ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಪಾಳ ಮೇಲೆ ಕೈಯಿಂದ ಹೊಡೆದಿರುತ್ತಾರೆ ಹಾಗೂ ಪೀರಪ್ಪಾ
ರವರಿಗೆ ಮೂಗಿನ ಮೇಲೆ ಹೊಡೆದಿರುತ್ತಾರೆ , ಹಾಗೂ ಸರಕಾರಿ ಕೆಲಸ ಕ್ಕೆ ಅಡೆತಡೆ ಉಂಟು ಮಾಡಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ದಿನಾಂಕ 10-10-2013 ರಂದು ರಾತ್ರಿ ಸಮಯದಲ್ಲಿ ಶ್ರೀ . ಶ್ರೀಮಂತ ತಂದೆ ಲಕ್ಷ್ಮಣ ಗಡೆದ ವಯ: ಸಾ:ಕೇರಿ ಅಂಬಲಗಾ ಮನೆಯಲ್ಲಿ
ಅಂಗಳದಲ್ಲಿ ನಿಂಬೆಕಾಯಿ ಬಿದಿದ್ದು ನಾನು ಕಾಲ್ಮಡಿಗೆ ರಾತ್ರಿ ನೋಡಿದ್ದಾಗ ಮನೆಯ ಮುಂದೆ ರಾಣಪ್ಪಾ
ತಂದೆ ಅಣ್ಣಪ್ಪಾ ಚಿಂಚನಸೂರ ಇತನು ರಾಣಪ್ಪ ತಂದೆ ಶರಣಪ್ಪ
ಗಡೆದ ಇವರ ಅಳಿಯ ಇತನು ಮನೆಯ ಮುಂದೆ ನಿಂತಿದ್ದು ನೋಡಿ ನಮ್ಮ ಅಂಗಳದಲ್ಲಿ ನಿಂಬೆಕಾಯಿ
ಇಟ್ಟಿದ್ದಾರೆ ಅಂತಾ ಕೇಳಿದರೆ ನನಗೆ ಯಾಕೆ ಹೇಳುತ್ತಿ ಅಂತಾ ನಮ್ಮಲ್ಲಿ ಬಾಯಿ ಜಗಳಾವಾಗಿತ್ತು. ಇಂದು
ದಿನಾಂಕ 11-10-2013 ಬೆಳಿಗ್ಗೆ 09-00 ಗಂಟೆಗೆ ನಾನು ಕೂಲಿ ಕೆಲಸಕ್ಕೆ ಅಂಬೇಡ್ಕರ್ ಕಟ್ಟೆಯ
ಹತ್ತಿರ ರಸ್ತೆಯಿಂದ ನಡೆದು ಕೊಂಡು ಹೋಗುವಾಗ ಕಟ್ಟೆಯ ಹತ್ತಿರ 1] ರಾಣಪ್ಪಾ ತಂದೆ ಅಣ್ಣಪ್ಪಾ
ಚಿಂಚನಸೂರ 2] ಸಂಜು ತಂದೆ ರಾಣಪ್ಪಾ ಗಡೆದ 3] ಪ್ರಕಾಶ ತಂದೆ ರಾಣಪ್ಪಾ ಗಡೆದ ಇವರು ನನಗೆ ನೋಡಿ
ಇವರಲ್ಲಿಯ ರಾಣಪ್ಪಾ ಚಿಂಚನಸೂರ ಇತನು ರಾತ್ರಿ
ನನ್ನೊಂದಿಗೆ ಜಗಳಾ ಮಾಡಿದಿ ಬೋಸಡಿ ಮಗನೆ ರಂಡಿಮಗನೆ ಅಂತಾ ಬೈಯುತ್ತಾ ಹತ್ತಿರ ಬಂದು ನನಗೆ ಒತ್ತಿ
ಹಿಡಿದು ಕೈಯಿಂದ ತೆಲೆಯ ಮೇಲೆ ಹೊಡೆದನು. ಮತ್ತು ಸಮಜು ಗಡೆದ ಇತನು ಕಲ್ಲಿನಿಂದ ನನ್ನ ತಲೆಯ
ಹಿಂಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿದನು ಮತ್ತು ಪ್ರಕಾಶ ಗಡೆದ ಇತನು ನನಗೆ ನಲಕ್ಕೆ
ಹಾಕಿ ನನ್ನ ಹೊಟ್ಟೆಯ ಮೇಲೆ ಕಲ್ಲು
ಹಾಕಿದನು. ಹೊಟ್ಟೆ ಒಳ ನೋವು ಆಗಿದೆ ಹಾಗೂ ರಾಣಪ್ಪಾ
ಚಿಂಚನಸೂರ ಇತನು ಕಲ್ಲಿನಿಂದ ಬೆನ್ನ ಮೇಲೆ ಹೊಡೆದು ಕಂದು ಗಾಯ ಆಗಿದೆ . ಮತ್ತು ಬಲಗೈ ಮುಂಗೈಗೆ ರಕ್ತಗಾಯವಾಗಿದೆ.
ಮತ್ತು ಮೂವರು ಸೇರಿ ನನಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಭಯಹಾಕಿರುತ್ತಾರೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment