ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ: 20/07/2017 ರಂದು ಕಡಗಂಚಿ ಗ್ರಾಮದ ಹನುಮಾನ ದೇವಸ್ಥಾನದ ಮುಂದಿನ ರಸ್ತೆಯ
ಪಕ್ಕದಲ್ಲಿ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ
ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ.ನಾಯಕ
ಪಿ.ಎಸ್.ಐ ನರೋಣಾ ಪೊಲೀಸ್ ಠಾಣೆ ಹಾಗು
ಸಿಇಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ
ಆಳಂದರವರ ಮಾರ್ಗದರ್ಶನದಲ್ಲಿ, ಕಡಗಂಚಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ
ನಿಂತು ನೋಡಲಾಗಿ ದೇವಸ್ಥಾನದ ಮುಂದಿನ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ
ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ
ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ
ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ
ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿ ಸಲಾಗಿ ಬಸವರಾಜ ತಂದೆ ಶಾಂತಪ್ಪ ಪೊಲೀಸ್ ಪಾಟೀಲ್, ಸಾ:ಕಡಗಂಚಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ
ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1] ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2) ಒಂದು
ಬಾಲ ಪೆನ್ 3) ನಗದು ಹಣ 890/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಚಿತ್ರಪಟಗಳನ್ನು ತೋರಿಸಿ ಜೂಜಾಟವಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-07-2017 ರಂದು ಅಫಜಲಪೂರ ಪಟ್ಟಣದ ಶಾಸಕರ ಭವನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು
ವ್ಯೆಕ್ತಿಗಳು 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ
ಸಾರ್ವಜನಿಕರನ್ನು ಕರೆದು ತಮ್ಮ ಹತ್ತಿರ ಇದ್ದ ಒಂದು ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ
ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಹೇಳಿ ಜನರ
ಮನವೋಲಿಸಿ ಅವರಿಂದ ಹಣ ಪಡೆದು ಜೂಜಾಟ ಆಡುತ್ತಿದ್ದಾರೆ, ಅಂತಾ ಬೀಟ್ ಕರ್ತವ್ಯಕ್ಕೆ ಹೋದ ಚಿದಾನಂದ ಸಿಪಿಸಿ-1225 ರವರು ಮಾಹಿತಿ ತಿಳಿಸಿದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ರವರ ಹಾಗೂ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ
ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋದಾಗ ಮಾಹಿತಿ ನೀಡಿದ ನಮ್ಮ ಠಾಣೆಯ
ಪಿಸಿ-1225
ಚಿದಾನಂದ ಇವರು ಜೂಜಾಡುತ್ತಿದ್ದ ವ್ಯೆಕ್ತಿಗಳನ್ನು
ತೋರಿಸಿದ ಮೇರೆಗೆ, ಸದರಿ
ಜೂಜಾಡುತ್ತಿದ್ದ ವ್ಯೆಕ್ತಿಗಳನ್ನು ನೋಡಲಾಗಿ, ಸದರಿ ವ್ಯೆಕ್ತಿಗಳು 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ
ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತಮ್ಮ ಹತ್ತಿರ ಇದ್ದ ಪೇಪರದಲ್ಲಿನ ಚಿತ್ರಗಳನ್ನು
ತೋರಿಸಿ ಈ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತಿದ್ದನು ಖಚಿತಪಡಿಸಿಕೊಂಡು
ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ, 1) ಚನ್ನು @ ಚನ್ನಪ್ಪ ತಂದೆ ಅರ್ಜುನ ಪರೀಟ್ ಸಾ|| ಸಿದ್ದರಾಮೇಶ್ವರ ಗುಡಿ ಹತ್ತಿರ ಅಫಜಲಪೂರ ಅಂತ
ತಿಳಿಸಿದ್ದು, ಸದರಿಯವನ ಹತ್ತಿರ
ಜೂಜಾಟವಾಡುತ್ತಿದ್ದ ಒಂದು ಪ್ಲೇಯಿಂಗ ಪಿಕ್ಚರಸ್ ಅಂತಾ ಬರೆದ ಒಂದು ಜೂಜಾಟದ ಪೇಪರ ಹಾಗೂ
ಜೂಜಾಟಕ್ಕೆ ಸಂಬಂಧ ಪಟ್ಟ 270/- ರೂಪಾಯಿ ನಗದು ಹಣ ದೊರೆತವು, 2) ಶಂಖರ ತಂದೆ ಶ್ಯಾಮರಾವ ಪೋದ್ದಾರ ಸಾ|| ಅಕ್ಕಮಹಾಧೇವಿ ನಗರ ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನ ಹತ್ತಿರ ಜೂಜಾಟವಾಡುತ್ತಿದ್ದ ಒಂದು
ಪ್ಲೇಯಿಂಗ ಪಿಕ್ಚರಸ್ ಅಂತಾ ಬರೆದ ಒಂದು ಜೂಜಾಟದ ಪೇಪರ ಹಾಗೂ ಜೂಜಾಟಕ್ಕೆ ಸಂಬಂಧ ಪಟ್ಟ 430/- ರೂಪಾಯಿ ನಗದು ಹಣ ದೊರೆತವು, ಹೀಗೆ ಒಟ್ಟು 700 ನಗದು ಹಣ ಹಾಗೂ 2 ಪ್ಲೇಯಿಂಗ ಕಾರ್ಡಗಳನ್ನು ಅಕಿ-00 ಇವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ
ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 20-07-2017 ರಂದು ಗಸ್ತು ಸಂಖ್ಯೆ 5 ರ ಭೀಟ್ ಅಧಿಕಾರಿ ಆದ ಚಂದ್ರಶಾ ಹೆಚ್.ಸಿ-529 ರವರು ನನಗೆ ದೂರವಾಣಿ ಕರೆ ಮಾಡಿ, ಸ್ಥಳಿಯ ಅಫಜಲಪೂರ ಪಟ್ಟಣದ ವೆಂಕಟೇಶ್ವರ ಗುಡಿಯ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ
ಸಾರ್ವಜನಿಕರನ್ನು ಕರೆದು ತನ್ನ ಹತ್ತಿರ ಇದ್ದ ಒಂದು ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ
ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಹೇಳಿ ಜನರ
ಮನವೋಲಿಸಿ ಅವರಿಂದ ಹಣ ಪಡೆದು ಜೂಜಾಟ ಆಡುತ್ತಿದ್ದಾನೆ, ಅಂತಾ ನನಗೆ ಮಾಹಿತಿ ತಿಳಿಸಿದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ರವರ ಹಾಗೂ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ
ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋದಾಗ ಮಾಹಿತಿ ನೀಡಿದ ನಮ್ಮ ಠಾಣೆಯ
ಚಂದ್ರಶಾ ಹೆಚ್.ಸಿ-529 ಇವರು
ಜೂಜಾಡುತ್ತಿದ್ದ ವ್ಯೆಕ್ತಿಯನ್ನು ತೋರಿಸಿದ ಮೇರೆಗೆ, ಸದರಿ ಜೂಜಾಡುತ್ತಿದ್ದ ವ್ಯೆಕ್ತಿಯನ್ನು ನೋಡಲಾಗಿ, ಸದರಿ ವ್ಯೆಕ್ತಿ 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ
ಸಾರ್ವಜನಿಕರನ್ನು ಕರೆದು ತನ್ನ ಹತ್ತಿರ ಇದ್ದ ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ ಚಿತ್ರಗಳಿಗೆ
ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ
ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ
ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ, ಸುರೇಶ ತಂದೆ ತಮ್ಮಣ್ಣ ಗಾಡಿವಡ್ಡರ ಸಾ|| ವೆಂಕಟೇಶ್ವರ ನಗರ ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನ ಹತ್ತಿರ ಜೂಜಾಟವಾಡುತ್ತಿದ್ದ ಒಂದು
ಪ್ಲೇಯಿಂಗ ಪಿಕ್ಚರಸ್ ಅಂತಾ ಬರೆದ ಒಂದು ಜೂಜಾಟದ ಪೇಪರ ಹಾಗೂ ಜೂಜಾಟಕ್ಕೆ ಸಂಬಂಧ ಪಟ್ಟ 410/- ರೂಪಾಯಿ ನಗದು ಹಣ ವಶಪಡಿಸಿಕೊಂಡು ಸದರಿಯವನೊಂದಿಗೆ
ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ. ಹೇಮಾವತಿ ಗಂಡ ದಯಾನಂದ ಕಮ್ಮನ ಸಾ:ಜವಳಗಾ (ಬಿ)
ತಾ:ಆಳಂದ ಜಿ:ಕಲಬುರಗಿ ಹಾಲಿ ವಸತಿ
ಕೃಷ್ಣಾ ಕಾಲೋನಿ ಪಿಲ್ಟರ ಬೇಡ್ ಕಲಬುರಗಿ ಇವರು ದಿನಾಂಕ 20/07/2017 ರಂದು ಬೆಳಿಗ್ಗೆ 07.00
ಗಂಟೆ ಸುಮಾರಿಗೆ ಊಟ ಮಾಡಿ ಕೂಲಿ ಕೆಲಸಕ್ಕೆ ಹೋಗುತ್ತೆನೆಂದು ಮನೆಯಿಂದ ಆಳಂದ
ಚೆಕ್ಕಪೋಷ್ಟಕಡೆಗೆ ಹೋದನು ನಂತರ 08.30 ಎಎಮ್ ದ
ಸುಮಾರಿಗೆ ಅನೀಲಕುಮಾರ ಎಲಿಂತ್ರಿ ಎಂಬುವರು ನಮಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ನನ್ನ ಗಂಡ
ದಯಾನಂದ ಇತನು ಆಳಂದ ಚೆಕ್ಕ ಪೋಷ್ಟದಿಂದ ಹುಮನಾಬಾದ ರಿಂಗರೋಡ ಕಡೆಗೆ ಬರುವ ರಿಂಗರೋಡನ 300 ಮೀಟರ್
ಅಂತರದಲ್ಲಿ ದಯಾನಂದನು ರಿಂಗರೋಡ ಮಧ್ಯದ ಡಿವೈಡರಅನ್ನು
ದಾಟುವಾಗ ಅದೇ ವೇಳೆಗೆ ಆಳಂದ ಚೆಕ್ಕಪೋಷ್ಟ ಕಡೆಯಿಂದ
ಒಂದು ಸ್ಕೂಲ್ ಬಸ್ ಚಾಲಕನು ತನ್ನ ಸ್ಕೂಲ್ ಬಸನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ
ಓಡಿಸಿಕೊಂಡು ಬಂದು ದಯಾನಂದಗೆ ಜೋರಾಗಿ ಡಿಕ್ಕಿ ಹೊಡೆದಿದ್ದು ಆಗ ದಯಾನಂದ ಕೆಳಗೆ ಬಿದ್ದಾಗ
ರೋಡಿಗೆ ಹೋಗುತ್ತಿದ್ದ ನಾನು ಮತ್ತು ನನ್ನ ಗೆಳೆಯ ಅಜೇಯಕುಮಾರ ಸಿಂಗೆ ಇಬ್ಬರೂ ಕೂಡಿಕೊಂಡು
ದಯಾನಂದನಿಗೆ ನೋಡಲಾಗಿ ಆತನ ಎಡಬಾಗದಲ್ಲಿ ಕೀವಿಯ ಹತ್ತೀರ ಭಾರಿ ರಕ್ತಗಾಯವಾಗಿರುತ್ತದೆ. ನಾವು ಸರ್ಕಾರಿ ಆಸ್ಪತ್ರೇಗೆ ಅಟೋದಲ್ಲಿ ತೆಗೆದುಕೊಂಡು
ಹೋಗಿರುತ್ತೇವೆ ಆಸ್ಪತ್ರಗೆ ಬರಲು ತಿಳಿಸಿದರು. ಆಗ ನಾನು ಮತ್ತು ನಮ್ಮ ಮನೆಯ ಪಕ್ಕಾದ ಶ್ರೀದೇವಿ
ಚವ್ಹಾಣ ಕೂಡಿಕೊಂಡು ಒಂದು ಆಟೋದಲ್ಲಿ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವೈಧ್ಯರು
ತಿಳಿಸಿದ್ದೇನೆಂದರೆ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು ನನ್ನ ಗಂಡನನ್ನು ನೋಡಲಾಗಿ ಆತನ ತಲೆಯ
ಎಡಗಡೆ ಭಾರಿ ಪೆಟ್ಟಾಗಿರುತ್ತದೆ ಮತ್ತು ಎಡ
ಕಪಾಳಕ್ಕೆ ಎಡ , ಕಿವಿಯ ಹತ್ತೀರ ಭಾರಿ ರಕ್ತಗಾಯವಾಗಿ ಚಪ್ಪಟೆಯಾದಂತೆ ಆಗಿತ್ತು . ಬಲಕಿವಿಯಿಂದ
ರಕ್ತ ಸ್ರಾವವಾಗಿರುತ್ತದೆ ಹಾಗೂ ಎಡಗಣ್ಣಿನ
ಕೆಳಗೆ ರಕ್ತಗಾಯ ಹಾಗೂ ಎಡಗಾಲು ಮೋಳಕಾಲಿಗೆ ತರಚಿದ ಗಾಯಗಳಾಗಿದ್ದು ಆಗ ಅಲ್ಲಿಯೇ ಇದ್ದ
ಅನೀಲಕುಮಾರನಿಗೆ ವಿಚಾರಿಸಲಾಗಿ ಮುಂಜಾನೆ 08.25 ಗಂಟೆಗೆ ನನ್ನ ಗಂಡ ರೋಡ ಕ್ರಾಸ ಮಾಡುವಾಗ ಒಂದು
ಸ್ಕೂಲ ಬಸ್ ನಂಬರ ಕೆಎ-32-ಬಿ-0491 ಇದ್ದು ಅದರ ಚಾಲಕನ ಹೆಸರು ಕೇಳಿ ಗೊತ್ತಾದ ಸಂತೋಷ ಸಿಂಗ
ಠಾಕೂರ ಸಾ:ಬ್ರಹ್ಮಪೂರ ಎಂಬುವನು ತನ್ನ ಬಸ್ಸನ್ನು ಅತೀ-ವೇಗ ಮತ್ತು ನಿಷ್ಕಾಳಜಿತನದಿಂದ
ಓಡಿಸಿಕೊಂಡು ಬಂದು ದಯಾನಂದನಿಗೆ ಡಿಕ್ಕಿ ಹೊಡೆದಿರತ್ತಾನೆ . ಸದರಿ ಬಸ್ ರೋಡಿನ ಪಕ್ಕದಲ್ಲಿ
ನಿಂತಿರುತ್ತದೆ ಅಂತ ತಿಳಿಸಿದನು. ಆದ್ದರಿಂದ ಸದರಿ ಸ್ಕೂಲ ಬಸ್ ನಂ.ಕೆಎ-32-ಬಿ-0491 ನೇದ್ದರ
ಚಾಲಕ ಸಂತೋಷ ಸಿಂಗ ಠಾಕೂರ ಇತನ ಮೇಲೆ ಕಾನೂನು ಕ್ರಮ ಜರಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣಗಳು :
ಸ್ಟೇಷನ
ಬಜಾರ ಠಾಣೆ : ಶ್ರೀ ಅನುರಾಜ ತಂದೆ ಬಂಡೆಪ್ಪಾ ಮೇತ್ರೆ ಸಾಃ
ಬೀದರ ಇವರು ದಿನಾಂಕ 04/07/2017 ರಂದು ಮಧ್ಯಾಹ್ನ ಕಲಬುರಗಿ ಕೊರ್ಟ ಆವರಣದಲ್ಲಿ ಮೆಂಟೆನೆನ್ಸ
ಕಟ್ಟಿ ಬರುವಾಗ ಏಕಾ ಏಕಿ ತನ್ನ ಮಾವನಾದ ಬಾಬುರಾವ ಬಾಜಿ ರವರು ತಡೆದು ಹಲ್ಲೆ ನಡೆಸಿ ಜೀವದ
ಬೆದರಿಕೆ ಹಾಕಿದ್ದು ಇದೆ. ತರುವಾಯ ಜಿಲ್ಲಾ ಆಸ್ಪತ್ರೆಗೆ ನಾನು ಪ್ರಥಮ ಚಿಕಿತ್ಸೆ
ಪಡೆದಿರುತ್ತೇನೆ. ಎದೆಯ ಮೇಲೆ ಗುದ್ದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ
ನಗರ ಠಾಣೆ : ಫಿರ್ಯಾದಿಯ ತಂಗಿಯಾದ ಸೈಯದಾ ರುಬೀನಾ ಇವಳಿಗೆ
ಅವಳ ಗಂಡ ಮತ್ತು ಗಂಡನ ಮನೆಯವರು ದಿನಾಂಕ:
18/05/2017 ರಂದು ಉಮರ ಫಾರೂಖ ಕಾಲೋನಿಯಲ್ಲಿ ರುಬಿನಾಳನ್ನು ಅವರ ಅತ್ತೆ , ಭಾವ , ಭಾವನ ಹೆಂಡತಿ ಮತ್ತು
ನಾದನಿಯಂದಿರು ಕೋಲೆ ಮಾಡಿದ್ದು ಇರುತ್ತದೆ. ಈಗ ರುಬಿನಾಳ ಕೋಲೆಯಾದ ನಂತರ ಪ್ರಕರಣದಾಖಲಾಗಿರುತ್ತದೆ.
ಆದರೆ ರುಬಿನಾಳ ಗಂಡನ ಮನೆಯವರು ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ನಮ್ಮ ಮನೆಯಲ್ಲಿ ನಾನು
ಯಾಸ್ಮಿನ ಬಾನು ನನ್ನ ತಾಯಿ ಸೈಯದಾ ಮೆಹೆರುನಿಸಾ ನನ್ನ ಮಗ ಸೈಯದ ಅಫತಾಬ ಅಲಿ & ರುಬಿನಾಳ ಮಗಳು ಸೈಯದಾ
ಫಬೆಹಾಉಫಖ ರಜ್ವಿ ಇರುತ್ತಾರೆ ಮತ್ತು ನನ್ನ ಇನ್ನೋರವ ತಂಗಿಯಾದ ಮತ್ತಿನ ಅವರ ನಾಲ್ಕು ಜನ ಮಕ್ಕಳು
ಮತ್ತು ಅವಳ ಗಂಡ ಇವರೆಲ್ಲರ ಮತ್ತು ಶಬಾನಾ ಅವಳ 2 ಮಕ್ಕಳು ಮತ್ತು ಗಂಡ ಇವರೆಲ್ಲರ ಮೇಲೆ ಜೀವ
ಬೆದರಿಕೆ ಹಾಕುತ್ತಿದ್ದಾರೆ ಈ ಮೇಲೆ ನಮೂದಿಸಿದ
ಎಲ್ಲರ ಜೀವಕ್ಕೆ ಏನಾದರೂ ಆದರೆ ರುಬಿನಾಳ ಗಂಡನ ಮನೆಯವರೆ ಕಾರಣರಾಗಿರುತ್ತಾರೆ. ಮತ್ತು ನಮ್ಮ ತಂದೆಯವರಿಗೂ ಕೂಡ ಬೆದರಿಸುತ್ತಿದ್ದಾರೆ
ರುಬಿನಾಳ ಗಂಡ ಹೊರ ದೇಶದಲ್ಲಿದ್ದು ಅಲ್ಲಿಂದ ಕರೆ ಮಾಡಿ ಕೇಸ ವಾಪಸ ತೆಗೆದುಕೊಳ್ಳಿ ಇಲ್ಲವಾದರೆ
ನಿಮ್ಮನ್ನು ಬಿಡುವುದಿಲ್ಲಾ ವೆಂದು ಬೆದರಿಸುತ್ತಿದ್ದಾರೆ ಮೇಲೆ ಹೇಳಿದ ಯೋರೋಬರಿಗೂ ಏನಾದರೂ ಆದರೆ
ರುಬಿನಾಳ ಗಂಡನ ಮನೆಯವರೆ ಕಾರಣರಾಗಿರುತ್ತಾರೆ ತಾವು ಇವರೆಲ್ಲಾರ ಮೇಲೆ ಕ್ರಮ
ತೆಗೆದುಕೊಳ್ಳಬೇಕೆಂದು ಅಂತಾ ಶ್ರೀಮತಿ ಯಾಸ್ಮಿನ ಬಾನು
ಗಂಡ ಸೈಯದ ನಯಿಮೋದ್ದಿನ ಸಾ: ಶಾಂತನಗರ ಭಂಕೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment