ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-05-2021
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 80/2021, ಕಲಂ. 379 ಐಪಿಸಿ :-
ದಿನಾಂಕ 19-04-2021 ರಂದು ಫಿರ್ಯಾದಿ ರಾಜು ತಂದೆ ಪ್ರಭು ವಯ: 47 ವರ್ಷ, ಜಾತಿ: ಕ್ರೀಶ್ಚನ, ಸಾ: ಶಾಹಪೂರ ಗೇಟ ಬೀದರ ರವರು ಮತ್ತು ಜಗದೀಶ ಶಹಪೂರ ಗೇಟ ಇಬ್ಬರು ಸೆಂಟ ಎನ್ಸ ಸೋಸೈಟಿಯ ಹಿರೊ ಮೈಸ್ಟ್ರೋ ವಾಹನ ಸಂ. ಕೆಎ-38/ವಿ-7430 ನೇದರ ಮೇಲೆ ಬೀದರ ಗಾಂಧಿಗಂಜದಲ್ಲಿರುವ ಕೃಷ್ಣಾ ಜನರಲ ಸ್ಟೋರ ಅಂಗಡಿಗೆ ಸೆಂಟ ಎನ್ಸ ಸೋಸೈಟಿಯ ಸಾಮಾನು ತರಲು ಬಂದು 1900 ಗಂಟೆಗೆ ಸದರಿ ವಾಹನ ಅಂಗಡಿಯ ಮುಂದೆ ಕೀಲಿ ಹಾಕಿ ನಿಲ್ಲಿಸಿ ಅಂಗಡಿಗೆ ಹೋಗಿ 1930 ಗಂಟೆಗೆ ಮರಳಿ ಬಂದು ನೋಡಲಾಗಿ ಫಿರ್ಯಾದಿಯವರು ನಿಲ್ಲಿಸಿದ ಸ್ಕೂಟರ ಇರಲಿಲ್ಲಾ, ಅಕ್ಕಪಕ್ಕದ ಜನರಿಗೆ ವಿಚಾರಿಸಲು ಯಾವುದೇ ಮಾಹಿತಿ ಸಿಕ್ಕಿರುವದಿಲ್ಲಾ, ನಂತರ ಫಿರ್ಯಾದಿಯು ತನ್ನ ಸ್ನೇಹಿತರ ಜೊತೆ ಕೂಡಿ ಎಲ್ಲಾ ಕಡೆ ಹುಡುಕಾಡಿದರೂ ಸಹ ಸ್ಕೂಟರ ಪತ್ತೆಯಾಗಿರುವುದಿಲ್ಲಾ, ಕಾರಣ 1) ಹಿರೊ ಮೈಸ್ಟ್ರೋ ಸ್ಕೂಟರ ವಾಹನ ನಂ. ಕೆಎ-38/ವಿ-7430, ) Engine No. JF33ABJ4J21243, 3) Chassis No. MBLJFW013J4J18598, ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 100/2021, ಕಲಂ. 380 ಐಪಿಸಿ :-
ದಿನಾಂಕ 23-05-2021 ರಂದು 1030 ಗಂಟೆಯಿಂದ 1530 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಪೌಲ ಆಂಟೋನಿ ತಂದೆ ಸಾಮಸನ್ ಕೇರುರಕರ, ವಯ: 28 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ಹೂಗಾರ ಲೇಔಟ ಕ್ರೀಶ್ಚಿಯನ ಗಲ್ಲಿ ಚಿಟಗುಪ್ಪಾ ರವರ ಮನೆ ಬಾಗಿಲು ತರೆದಿರುವಾಗ ಮನೆಯ ಬೇಡ ರೂಮಿನಲ್ಲಿದ್ದ 1) ನಗದು ಹಣ 3300/- ರೂ., 2) ಡ್ರೈಸಿಂಗ ಟೇಬಲನಲ್ಲಿದ್ದ ಹೆಂಡತಿಯ 3 ತೊಲೆ 3 ಗ್ರಾಂ. ನ ಬಂಗಾರದ ಗಂಟನ್ ಸರ ಅ.ಕಿ 1,32,000/- ರೂ., ಹಾಗೂ 3) 2 ತೊಲೆ ಬಂಗಾದರ ಲಾಕೇಟ ಸರ್ ಅ.ಕಿ 69,300/- ರೂ. ಹೀಗೆ ಒಟ್ಟು 2,01,300/- ರೂಪಾಯಿ ಬೆಲೆಬಾಳುವ ಬಂಗಾರದ ಆಭರಣ ಹಾಗು ನಗದು ಹಣ ನೇದವುಗಳನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 97/2021, ಕಲಂ. 4(1ಎ), 21 ಎಮ್.ಎಮ್.ಆರ್.ಡಿ ಕಾಯ್ದೆ 1957 ಜೋತೆ 379 ಐಪಿಸಿ :-
ದಿನಾಂಕ 24-05-2021 ರಂದು ಜಿ.ಎಂ.ಪಾಟೀಲ ಪಿಎಸ್ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರು ಬಸವಕಲ್ಯಾಣ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತ ಅಂಬೇಡ್ಕರ ಚೌಕ ಹತ್ತಿರ ಹೋದಾಗ ಎದುರಿನಿಂದ ಹರಳಯ್ಯಾ ಚೌಕ ಕಡೆಯಿಂದ ರೇತಿ (ಬಿಳಿ ಉಸುಕು) ಲೋಡ ವುಳ್ಳ ಅಶೋಕ ಲಿಲ್ಯಾಂಡ ಲಾರಿ ಬರುವುದನ್ನು ನೋಡಿ ಅದನ್ನು ನಿಲ್ಲಿಸಿ ಚಾಲಕನಿಗೆ ಹೆಸರು ವಿಚಾರಿಸಲು ಆತನು ನಾಗೇಂದ್ರಪ್ಪಾ ಪೂಜಾರಿ ವಯ: 42 ವರ್ಷ, ಜಾತಿ: ಕುರುಬ, ಸಾ: ಕಲಬುರಗಿ ಎಂದು ತಿಳಿಸಿದಾಗ ಲಾರಿಯಲ್ಲಿ ಎನಿದೆ? ಎಂದು ವಿಚಾರಿಸಲು ನಾಗೇಂದ್ರಪ್ಪಾ ಇತನು ರೇತಿ (ಬಿಳಿ ಉಸುಕು) ಲೋಡ ಇದೆ ಎಂದು ತಿಳಿಸಿದಾಗ ಇದನ್ನು ಎಲ್ಲಿಗೆ ತಗೆದುಕೊಂಡು ಹೋಗುತ್ತಿದ್ದಿ ಎಂದು ವಿಚಾರಿಸಿದಾಗ ಅವನು ಕಲಬುರಿಗಿ ಜಿಲ್ಲೆಯ ಶಾಹಪೂರದಲ್ಲಿ ಲೋಡ ಮಾಡಿಕೊಂಡು ಬಸವಕಲ್ಯಾಣ ಪಟ್ಟಣದಲ್ಲಿ ಮಾರಾಟ ಮಾಡುವ ಕುರಿತು ತೆಗೆದುಕೊಂಡು ಬಂದಿರುತ್ತೆನೆ ಎಂದು ತಿಳಿಸಿದಾಗ ಆತನಿಗೆ ನಿನ್ನ ಹತ್ತಿರ ಲಾರಿಯಲ್ಲಿ ರೇತಿ (ಬಿಳಿ ಉಸುಕು) ಲೋಡ ಮಾಡಿಕೊಂಡು ಗ್ರಾಹಕರಿಗೆ ಮಾರಾಟ ಮಾಡುವ ಬಗ್ಗೆ ಲೈಸೆನ್ಸ ವಗೈರೆ ಇದ್ದರೆ ಹಾಜರ ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ತರಹದ ಲೈಸೆನ್ಸ ಇರುವುದಿಲ್ಲ ಎಂದು ತಿಳಿಸಿರುತ್ತಾನೆ, ಕಾರಣ ಆರೋಪಿ ನಾಗೇಂದ್ರಪ್ಪ ಇತನು ಅನಧಿಕೃತವಾಗಿ ಅಶೋಕ ಲೀಲ್ಯಾಂಡ ಲಾರಿ ನಂ. ಕೆಎ-32/ಡಿ-3559 ನೇದರಲ್ಲಿ ರೇತಿ (ಬಿಳಿ ಉಸುಕು) ಲೋಡ ಮಾಡಿಕೊಂಡು ಗ್ರಾಹಕರಿಗೆ ಮರಾಟ ಮಾಡುವ ಕುರಿತು ಬಸವಕಲ್ಯಾಣ ನಗರದಲ್ಲಿ ತೆಗೆದುಕೊಂಡು ಬಂದಿರುತ್ತಾನೆಂದು ಕೊಟ್ಟ ಸಾರಾಂಶದ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 44/2021, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 24-05-2021 ರಂದು ಮದನೂರ ಗ್ರಾಮದ ಅಪ್ಪಾರಾವ ಬಳತೆರವರ ಕೊಟ್ಟಿಗೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗೋಲಾಗಿ ಕುಳಿತು ಪರೇಲ ಎಂಬ ನಸಿಬಿನ ಜೂಜಾಟ ಹಣ ಹಚ್ಚಿ ಪಣ ತೊಟ್ಟು ಆಡುತ್ತಿದ್ದಾರೆಂದು ಪಾಲಾಕ್ಷಯ್ಯಾ ಎಮ್.ಹಿರೇಮಠ ಸಿ.ಪಿ.ಐ ಕಮಲನಗರ ವೃತ್ತ ಕಛೇರಿ, ಕಮಲನಗರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಮದನೂರ ಗ್ರಾಮಕ್ಕೆ ಹೋಗಿ ನೋಡಲು ಅಪ್ಪಾರಾವ ಬಳತೆರವರ ಕೊಟ್ಟಿಗೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಸಿದ್ರಾಮ ತಂದೆ ಕಾಶಿನಾಥ ರೊಟ್ಟೆ, 2) ಹಾವಗೆಪ್ಪಾ ತಂದೆ ರಾಮಶೆಟ್ಟೆ ವಾಡೆ, 3) ಶಿವಕಾಂತ ತಂದೆ ಗುಣವಂತರಾವ ವಾಡೆ, 4) ಬಾಪೂರಾವ ತಂದೆ ನಾಗಶೆಟ್ಟಿ ಬಲ್ಲೆ, 5) ರಾಜಕುಮಾರ ತಂದೆ ದೆವರಾವ ಪಾಟೀಲ, 6) ವೈಜಿನಾಥ ತಂದೆ ಮಾರುತಿ ದಾಬಕೆ, 7) ಪಟ್ನಾಯಕ ತಂದೆ ಸಂಗ್ರಾಮ ಕೊಳಿ, 8) ಪಂಡಿತ ತಂದೆ ತ್ರಿಂಬಕ ಕೊಳಿ, 9) ಸುನೀಲ ತಂದೆ ಶಾಂತಪ್ಪಾ ಬೆಲ್ಲೆ, ಎಲ್ಲರೂ ಸಾ: ಮದನೂರ ಇವರೆಲ್ಲರೂ ಗೋಲಾಕಾರವಾಗಿ ಪರೇಲ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಂದ ಒಟ್ಟು ನಗದು ಹಣ 2410/- ರೂಪಾಯಿ ಹಾಗೂ 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment