Police Bhavan Kalaburagi

Police Bhavan Kalaburagi

Monday, May 24, 2021

BIDAR DISTRICT DAILY CRIME UPDATE 24-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-05-2021

 

ಮೇಹಕರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಸಂಜೀವಿನಿ ಗಂಡ ಗೋಪಾಳ ಕದಂ ವಯ: 31 ವರ್ಷ, ಜಾತಿ: ಮರಾಠಾ, ಸಾ: ಮೇಹಕರ ರವರ ಗಂಡನಾದ ಗೋಪಾಳ ತಂದೆ ಗುಂಡಾಜಿರಾವ ಕದಂ ವಯ: 35 ವರ್ಷ ರವರಿಗೆ ಕೃಷಿಸಾಲ ಇದ್ದು, ಹೊಲ ಸರಿಯಾಗಿ ಬೆಳೆಯದೇ ಇರುವುದರಿಂದ ತನಗಾದ ಸಾಲ ಹೇಗೆ ತೀರಿಸುವುದು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 23-05-2021 ರಂದು ಮನೆಯ ಹೊರಗಡೆಯ ಅಂಗಡಿಯ ಮೇಲಿನ ಕಬ್ಬಿಣದ ರಾಡಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನವರ ಸಾವಿನ ಬಗ್ಗೆ ಬೇರೆ ಯಾರ ಮೇಲೆ ಯಾವುದೇ ರೀತಿಯ ದೂರು ವಗೈರೆ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 58/2021, ಕಲಂ. 304(ಎ) ಐಪಿಸಿ :-

ಫಿರ್ಯಾದಿ ಬಾಲಿಕಾ ಗಂಡ ವಿಠಲ ಸಾ: ಭಾಟಸಾಂಗವಿ, ತಾ: ಭಾಲ್ಕಿ ರವರ ಗಂಡ ವಿಠಲ ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 22-05-2021 ರಂದು 0600 ಗಂಟೆಗೆ ರಾಜಕುಮಾರ ತಂದೆ ಮಾಣಿಕರಾವ ಇವರ ಟ್ರ್ಯಾಕ್ಟರ ಮೇಲೆ ಉಸುಕು ತುಂಬಲು ಗಂಡ ವಿಠಲ ಮತ್ತು ಮ್ಮೂರ ರಾಜಕುಮಾರ ತಂದೆ ರಘುನಾಥ, ಬಾಲಾಜಿ ತಂದೆ ಪೂಂಡಲಿಕರಾವ, ಸಂಜೀವ ತಂದೆ ತುಕಾರಾಮ ರವರು ಕೂಡಿ ಮ್ಮೂರ ಮಾಂಜ್ರಾ ನದಿಗೆ ಹೋಗಿರುತ್ತಾರೆ, ನಂತರ ಸಂಜೀವ ಮತ್ತು ಬಾಲಾಜಿ ರವರು ಗಂಡನಿಗೆ ಮನೆಗೆ ಕರೆದುಕೊಂಡು ಬಂದು ಸಂಜೀವ ಈತನು ತಿಳಿಸಿದ್ದೇನೆಂದರೆ ನಿಮ್ಮ ಗಂಡ ವಿಠಲ ಇವರು ಮಾಂಜ್ರಾ ನದಿಯಲ್ಲಿ ಬುಟ್ಟಿಯಿಂದ ಉಸುಕು ತುಂಬಿಕೊಂಡು ತಲೆಯ ಮೇಲೆ ಬುಟ್ಟಿ ಇಡುವಾಗ ನದಿಯಲ್ಲಿ ಒಮ್ಮೇಲೆ ಮರಳು ಧಡ್ಡಿ ವಿಠಲ ಈತನ ಮೈಮೇಲೆ ಬಿದಿದ್ದರಿಂದ ವಿಠಲ ಈತನು ಕೆಳಗೆ ಬಿದ್ದಾಗ ಎದೇಗೆ ಪೆಟ್ಟಾಗಿರುತ್ತದೆ ಅಂತ ತಿಳಿಸಿರುತ್ತಾನೆ, ನಂತರ ನ್ನ ಗಂಡನಿಗೆ ಫಿರ್ಯಾದಿ ಮತ್ತು ಮೈದುನಾದ ಸೂರ್ಯಕಾಂತ ಹಾಗೂ ಸಾಮವೇಲ ರವರು ಭಾಲ್ಕಿ ಭೂರೆ ಆಸ್ಪತ್ರೆಗೆ ತಂದು ಚಿಕಿತ್ಸೆ ಮಾಡಿಸಿ ಮರಳಿ ಮನೆಗೆ ಕರೆದುಕೊಂಡು ಹೋದಾಗ ದಿನಾಂಕ 23-05-2021 ರಂದು 12 ಗಂಟೆಗೆ ಮನೆಯಲ್ಲಿ ಗಂಡ ವಿಠಲ ಇವರು ಮರಣ ಹೊಂದಿರುತ್ತಾರೆ ಮತ್ತು ರಾಜಕುಮಾರ ಪಾಟೀಲ ಇವರ ನಿಸ್ಕಾಳಜಿತನದಿಂದ ಗಂಡನ ಮೈಮೇಲೆ ಉಸುಕು ಧಡಿ ಬಿದ್ದು ಎದೆಗೆ ಗಾಯವಾಗಿ ಮರಣ ಹೊಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರು ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 50/2021, ಕಲಂ. 279, 337, 338 ಐಪಿಸಿ :-

ದಿನಾಂಕ 23-05-2021 ರಂದು ಫಿರ್ಯಾದಿ ಎಮ್.ಡಿ ಇಸ್ಮಾಯಿಲ್ ತಂದೆ ಅಬ್ದುಲ ರಜಾಕಸಾಬ ಬಾಗವಾನ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ದುಬಲಗುಂಡ, ತಾ: ಹುಮನಾಬಾದ ರವರ ಮಗನಾದ ಚಾಂದಪಾಶಾ ಇತನು ತನ್ನ ಲಾರಿ ಸಂ. ಕೆಎ-56/2826  ನೇದರಲ್ಲಿ ಮೊಟ್ಟೆ ತುಂಬಿಕೊಂಡು ಲಾರಿ ಕ್ಲೀನರ್ ಎಮ್.ಡಿ ಅಯೂಬ ತಂದೆ ಎಮ್.ಡಿ ಯೂಸೂಫಮಿಯಾ ಗುಲಸೂರಿ ಸಾ: ದುಬಲಗುಂಡಿ ಇಬ್ಬರು ಕೂಡಿಕೊಂಡುತನಮ್ಮೂರದಿಂದ ಹುಮನಾಬಾದ ಮಾರ್ಗವಾಗಿ ಮಹಾರಾಷ್ಟ್ರದ ಮುಂಬೈಗೆ ಹೋಗುತ್ತಿರುವಾಗ ತಮ್ಮೂರ ಬಸ್ ನಿಲ್ದಾಣದ ಹತ್ತಿರ ಬಂದಾಗ ಮಸ್ತಾನ ತಂದೆ ಮತಾಬಸಾಬ ಪಠಾಣ ಮತ್ತು ಬಿಲಾಲ ತಂದೆ ಶುಕುರಮಿಯಾ ಮೊಗೆ ಇಬ್ಬರು ಸಾ: ದುಬಲಗುಂಡಿ ರವರು ಮಗನ ವಾಹನಕ್ಕೆ ಕೈ ಸನ್ನೆ ಮಾಡಿ ನಾವು ಹುಮನಾಬಾದಕ್ಕೆ ಬರುತ್ತಿದ್ದೇವೆ ನಮ್ಮನ್ನು ಕರೆದುಕೊಂಡು ಹೋಗು ಅಂತ ಕೇಳಿಕೊಂಡಿದ್ದರಿಂದ ಇಬ್ಬರಿಗೂ ಸದರೊ ಲಾರಿಯಲ್ಲಿ ಕೂಡಿಸಿಕೊಂಡು ಧುಮ್ಮನಸೂರ ಹೊರ ವಲಯದ ಬ್ರಿಡ್ಜ್  ಹತ್ತಿರ ಬಂದಾಗ ಅದೇ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ ನಂ. 50 ಬೀದರ - ಹುಮನಾಬಾದ ರೋಡಿನ ಮೇಲೆ ಹಿಂದಿನಿಂದ ಅಂದರೆ ಬೀದರ ಕಡೆಯಿಂದ ಲಾರಿ ನಂ. ಎಪಿ-28/ಟಿ.ಬಿ-3969 ನೇದರ ಚಾಲಕನಾದ ಆರೋಪಿ ಶರಣಪ್ಪಾ ತಂದೆ ಮಲ್ಲಪ್ಪಾ ಡಬರೆ ಸಾ: ಕಪಲಾಪೂರ(ಎ), ತಾ & ಜಿಲ್ಲೆ: ಬೀದರ ಇತನು ತನ್ನ ಲಾರಿಯನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಚಾಂದಪಾಶಾ ಇತನ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಚಾಂದಪಾಶಾ ಇತನ ಎಡಗೈ ಮೊಣಕೈಗೆ ಸಾದಾ ರಕ್ತಗಾಯ ಮತ್ತು ಎಡ ಭಕಾಳಿಗೆ ಸಾದಾ ಗುಪ್ತಗಾಯಗಳು ಅಗಿರುತ್ತವೆ, ಹಾಗ ಲಾರಿಯಲ್ಲಿದ್ದ ಎಮ್.ಡಿ ಅಯೂಬ, ಮಸ್ತಾನ ಮತ್ತು ಬಿಲಾಲ ರವರುಗಳಿಗೆ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ ಮತ್ತು ಆರೋಪಿಯ ಲಾರಿಯಲ್ಲಿದ್ದ ಪ್ರಯಾಣಿಸುತ್ತಿ ವಿಜಯಕುಮಾರ ತಂದೆ ರಘುನಾಥ ಮಡಿವಾಳ ಸಾ: ಕಪಲಾಪೂರ(ಎ) ತಾ & ಜಿಲ್ಲೆ: ಬೀದರ ಇತನ ಎಡಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯವಾಗಿರುತ್ತದೆ, ನಂತರ ಚಾಂದಪಾಶ ಇತನು ಚಿಕಿತ್ಸೆ ಕರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯುವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: