Police Bhavan Kalaburagi

Police Bhavan Kalaburagi

Sunday, February 2, 2020

BIDAR DISTRICT DAILY CRIME UPDATE 01-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-02-2020

ಮಹಿಳಾ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 08/2020, ಕಲಂ. 363 ಐಪಿಸಿ :-
ದಿನಾಂಕ 30-01-2020 ರಂದು ಪಿüರ್ಯಾದಿ ಜಗದೇವಿ ಗಂಡ ರಾಜಕುಮಾರ ಕಬ್ಬಲಿಗೇರ : 40 ರ್ಷ, ಜಾತಿ: ಕಬ್ಬಲಿಗ, ಸಾ: ನಾವದಗೇರಿ ಬೀದರ ರವರ ಮಗಳಾದ ಸುಹಾಸಿನಿ ಗಂಡ ಸುರೇಶ : 22 ರ್ಷ, ಜಾತಿ: ಕಬ್ಬಲಿಗ, ಸಾ: ರುದನೂರ್ ಇವಳಿಗೆ ಫಿರ್ಯಾದಿಯವರ ಸಂಬಂಧಿಕನಾದ ಆರೋಪಿ ಶಂಕರ ತಂದೆ ರಾಜು ತಡಪಳ್ಳಿ : 25 ರ್ಷ, ಜಾತಿ: ಕಬ್ಬಲಿಗ, ಸಾ: ತಡಪಳ್ಳಿ ಗ್ರಾಮ ಇತನು ಯಾವುದೋ ಒಂದು ದುರುದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆಂದು ಕೊಟ್ಟ ಪಿüರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 31-01-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 04/2020, ಕಲಂ. 279, 337, 338 ಐಪಿಸಿ :-
ದಿನಾಂಕ 31-01-2020 ರಂದು ಫಿರ್ಯಾದಿ ಗೌತಮ ತಂದೆ ವಿಜಯಕುಮಾರ ವಯ: 24 ವರ್ಷ, ಸಾ: ಶಾಲಿಬಂಡಾ ಹೈದ್ರಾಬಾದ (ಟಿಎಸ) ರವರು ತನ್ನ ಗೆಳೆಯರಾದ 1) ರತನ ತಂದೆ ಮನೋಹರ ಸಾ: ಬೇಗಂ ಬಜಾರ ಹೈದ್ರಾಬಾದ, 2) ನರೇಶ ಜೈನ ತಂದೆ ಶ್ರೀನಿವಾಸ ಬೆಳಕರೆ ಸಾ: ಸೂರ್ಯಪೇಟ ಹೈದ್ರಾಬಾದ, 3) ಹಿರೇಶ ತಂದೆ ಬಂಡುಕುಮಾರ ಸಾ: ಶಾಲಿಬಂಡಾ ಹೈದ್ರಾಬಾದ ಎಲ್ಲರೂ ಕೂಡಿ 20 ಕಾರನಲ್ಲಿ ಕುಳಿತು ಹೈದ್ರಾಬಾದದಿಂದ ಬೀದರಕ್ಕೆ ಬರಲು ಹೊರಟಿದ್ದು, ಸದರಿ ಕಾರನ್ನು ನರೇಶ ಇವನು ಚಲಾಯಿಸುತ್ತಿದ್ದನು, ನಂತರ ತೆಲಂಗಾಣಾ ಬಾರ್ಡರ ದಾಟಿದ ನಂತರ ನರೇಶ ಇವನು ಕಾರನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಬೀದರ ಜಹಿರಾಬಾದ ರೋಡ್ ತೆಲಂಗಾಣಾ ಬಾರ್ಡರ್ ಹತ್ತಿರ ಪಲ್ಟಿ ಮಾಡಿದ್ದರಿಂದ ಫಿರ್ಯಾದಿಯ ಎಡಗೈ ಮುಂಗೈಗೆ ಗುಪ್ತಗಾಯ ಹಾಗೂ ತಲೆಯಲ್ಲಿ ರಕ್ತಗಾಯವಾಗಿರುತ್ತದೆ, ರತನ ಇವನಿಗೆ ತುಟಿಗೆ ರಕ್ತಗಾಯ, ಎಡಗೈಗೆ ತರಚಿದ ರಕ್ತಗಾಯ, ಬೆನ್ನಿನ ಮೇಲೆ ಗುಪ್ತಗಾಯವಾಗಿರುತ್ತದೆ, ಹಿರೇಶ ಇವನಿಗೆ ಬಲಗೈ ಮೊಳಕೈಗೆ ಗುಪ್ತಗಾಯ, ಬಲಗಡೆ ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ಕಾರ ಚಲಾಯಿಸುತ್ತಿದ್ದ ನರೇಶ ಇವನಿಗೆ ಎಡಗಾಲಿನ ಮೊಳಕಾಲು ಕೆಳಗೆ ಕಾಲು ಮುರಿದು ಭಾರಿ ರಕ್ತಗಾಯ ಹಾಗೂ ಬಲಗೈ ಮುಂಗೈ ಹತ್ತಿರ ಗುಪ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯಯವರ ಹೇಳಿಕೆ ಸಾರಾಂಶದ ಮೇರೆಗೆ ಬೀದರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 09/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 31-01-2020 ರಂದು ನಿರ್ಣಾ ಗ್ರಾಮದ ಎಸ್.ಬಿ.ಐ ಬ್ಯಾಂಕ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆ ಅಂತಾ ಸುನೀತಾ ಪಿಎಸ್ಐ ಮನ್ನಾಎಖೇಳ್ಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ನಿರ್ಣಾ ಗ್ರಾಮದ ಎಸ್.ಬಿ.ಐ ಬ್ಯಾಂಕ್ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ 1) ಶಿವಶಂಕರ ತಂದೆ ಗುರಯ್ಯಾ ಸ್ವಾಮಿ ವಯ: 52 ವರ್ಷ, ಜಾತಿ: ಸ್ವಾಮಿ, ಸಾ: ನಿರ್ಣಾ ಇತನು ಸಾರ್ವಜನಿಕರಿಗೆ ಇದು ಕಲ್ಯಾಣಿ ಮಟ್ಕಾ ಜೂಜಾಟ ಇದೆ ಒಂದು ರೂಪಾಯಿಗೆ 80/- ರೂಪಾಯಿ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಸದರಿಯವನ ಮೇಲೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ವಿಚಾರಿಸಿದಾಗ ತಾನು ಜನರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಳ್ಳುತ್ತೇನೆ ಬರೆದುಕೊಂಡ ಮಟ್ಕಾ ಚೀಟಿಗಳನ್ನು ಆರೋಪಿ 2) ಸಂಜುಕುಮಾರ ತಂದೆ ಲಕ್ಷ್ಮಣ ಬಾಳಪ್ಪನೋರ ಸಾ: ಮುತ್ತಂಗಿ ಇವನಿಗೆ ಕೊಡುತ್ತೇನೆ ಅಂತಾ ತಿಳಿಸಿರುತ್ತಾನೆ, ನಂತರ ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 800/- ರೂಪಾಯಿಗಳು ಮತ್ತು ಮಟಕಾ ನಂಬರ್ ಬರೆದ 2 ಮಟಕಾ ಚೀಟಿ, ಒಂದು ಬಾಲ ಪೆನ್ನ ಹಾಗೂ ಒಂದು ಜಿಯೋ ಕಂಪನಿಯ ಮೊಬೈಲ್ ಅ.ಕಿ 300/-ರೂಪಾಯಿ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರ ಪೊಲೀಸ ಠಾಣೆ ಅಪರಾಧ ಸಂ. 18/2020, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 30-01-2020 ರಂದು ರಾತ್ರಿ ಹುಲೆಪ್ಪಾ ತಂದೆ ಮಾಣಿಕಪ್ಪಾ ವಯ: 40 ವರ್ಷ, ಜಾತಿ: ಎಸ್.ಸಿ, ಸಾ: ಬಾಳೂರ ರವರು ಬೀದರದಿಂದ ಬಾಳುರ ಗ್ರಾಮಕ್ಕೆ ತಮ್ಮ ಗ್ರಾಮದವರಾದ ಸಂತೋಷ ತಂದೆ ಶರಣಪ್ಪಾ ಧುಳ್ಳಾ ವಯ: 35 ವರ್ಷ, ಜಾತಿ: ಲಿಂಗಾಯತ, ಶಂಕರ ತಂದೆ ಶರಣಪ್ಪಾ ವಯ: 45 ವರ್ಷ, ಇವರ ಜೊತೆ ಬಸ ಮೂಲಕ ಹಲಬರ್ಗಾದಲ್ಲಿ ಇಳಿದು ಮ್ಮ ಗ್ರಾಮಕ್ಕೆ ನಡೆದುಕೊಂಡು ಹೊಗುತ್ತಿರುವಾಗ ಹಲಬರ್ಗಾ-ಜೈನಪೂರ ಮದ್ಯ ಭಾಗದ ರಸ್ತೆ ಮೆಲೆ ಹಿಂಬದಿಯಿಂದ ಮಾರುತಿ ಕಾರ ನಂ. ಎಪಿ-28/ಬಿಹೆಚ-0668 ನೇದರ ಚಾಲಕನಾದ ಆರೋಪಿ ಚಂದ್ರಕಾಂತ ತಂದೆ ಬಸವರಾಜ ಬಡೆಬುಳ್ಳಾ ಸಾ: ಬಾಳೂರ ಇತನು ತನ್ನ ಕಾರನ್ನು ಅತಿವೇಗ ಹಾಗು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಎಲ್ಲರಿಗೂ ಡಿಕ್ಕಿ ಪಡಿಸಿದರ ಪರಿಣಾಮ ಸಂತೊಷ ಇತನಿಗೆ ಮುಖಕ್ಕೆ ಎಡಗಾಲಿಗೆ, ತಲೆಗೆ, ಎಡಗಾಲು ಮೊಳಕಾಲಿಗೆ ಭಾರಿ ರಕ್ತಗಾಯ ಹಾಗು ಬಾಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ಶಂಕರ ಇತನಿಗೆ ಬಲಗಡೆ ಕಣ್ಣಿನ ಹುಬ್ಬಿನ ಮೆಲೆ ರಕ್ತಗಾಯ, ಎರಡು ಮೊಳಕಾಲಿಗೆ ಭಾರಿ ರಕ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಗೆ ಎಡಗಡೆ ಮೊಳಕಾಲಿನ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ, ಆರೋಪಿಯು ತನ್ನ ಕಾರನ್ನು ಅಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 31-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: