ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 16-10-2017
ಮುಡಬಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 115/17 ಕಲಂ 379 ಐಪಿಸಿ :-
ದಿನಾಂಕ:-15-10-2017 ರಂದು 1700 ಗಂಟೆಗೆ ಫಿರ್ಯಾದಿ
ಶ್ರೀಮತಿ ಇಂದುಬಾಯಿ ಗಂಡ ಶಾಂತಪ್ಪಾ ಜಮಾದಾರ ವಯ: 40 ವರ್ಷ ಜಾ: ಬ್ಯಾಡರ್ ಸಾ:
ಯಳವಂತಗಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿಯು ಕೂಲಿಕೆಲಸ
ಮಾಡಿಕೊಂಡು ಉಪಜೀವನ ಮಾಡುತ್ತಿದ್ದು ಮನೆಯಲ್ಲಿ ಎರಡು ಹೋರಿ, ಒಂದು ಕೆಂಪು ಬಣ್ಣದ ಆಕಳು
ಮತ್ತು ಆಕಳದ ಕರು ಇರುತ್ತವೆ. ಇವುಗಳನ್ನು ದಿನಾಲು ರಾತ್ರಿ ವೇಳೆಯಲ್ಲಿ ದನಕರುಗಳು ಕಟ್ಟಲು 09 ತಗಡಾ ಹಾಕಿ
ತಯಾರಿಸಿದ ಕೊಟ್ಟಿಗೆಯ ಹೋರಗೆ ಖೂಲ್ಲಾ ಜಾಗದಲ್ಲಿ ಕಟ್ಟುತಿದ್ದು ದಿನಾಲು ರಾತ್ರಿ ಫಿರ್ಯಾದಿ ಗಂಡ
ಅಲ್ಲಿಯೇ ಮಲಗುತ್ತಿದ್ದು, ದಿನಾಂಕ;-28/09/2017 ರಂದು
ಪ್ರತಿ ನಿತ್ಯದಂತೆ ಹೋರಿ ಆಕಳು-ಕರು ಕೊಟ್ಟಿಗೆಯ ಹೋರಗೆ ಖೂಲ್ಲಾ ಜಾಗದಲ್ಲಿ ಕಟ್ಟಿ ರಾತ್ರಿ
ಸುಮಾರು 2200
ಗಂಟೆಯವರೆಗೆ
ಫಿರ್ಯಾದಿ ಗಂಡ ಕೊಟ್ಟಿಗೆಯಲ್ಲಿ ಇದ್ದು. ಫಿರ್ಯಾದಿ
ಅತ್ತೆಯವರಗೆ ಆರಾಮ ಇಲ್ಲದ ಕಾರಣ ಅವರನ್ನು ನೋಡಿಕೊಂಡು ಬರಲು ಮನೆಗೆ ಬಂದಿರುತ್ತಾರೆ ದಿನಾಂಕ:-29/09/2017 ರಂದು ಮುಂಜಾನೆ 0600 ಗಂಟೆಗೆ ಆಕಳು
ಹಾಲು ಹಿಂಡಲು ಕೊಟ್ಟಿಗೆಗೆ ಹೋಗಿ ನೋಡಲು ಕೊಟ್ಟಿಗೆಯಲ್ಲಿ ಎರಡು ಹೋರಿಗಳು ಮಾತ್ರ ಇರುತ್ತವೆ
ಆದರೆ ಆಕಳು ಮತ್ತು ಆಕಳ ಕರು ಇರಲಿಲ್ಲಾ ತಕ್ಷಣ ಎಲ್ಲ
ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ ದಿನಾಂಕ:-29-09-2017 ರಂದು ನಸುಕಿನ
ಜಾವ ಸುಮಾರು 0200
ಗಂಟೆಯ
ಸುಮಾರಿಗೆ ಯಾರೊ ಅಪರಿಚಿತ ಕಳ್ಳರು ಕೊಟ್ಟಿಗೆಯ ಹೋರಗೆ ಕಟ್ಟಿದ ಒಂದು ಕೆಂಪು 08 ವರ್ಷದ ಆಕಳು
ಅಂದಾಜು ಕಿಮ್ಮತ್ತ 20000/- ಹಾಗೂ ಒಂದು ಕೆಂಪು ಬಣ್ಣದ ಆಕಳು ಕರು 04 ತಿಂಗಳನದ್ದು
ಅಂದಾಜು ಕಿಮ್ಮತ್ತ -4000/- ಹೀಗಿ ಒಟ್ಟು 24000/- ಬಲೆಬಾಳುವ ನನ್ನ ಆಕಳು ಮತ್ತು ಆಕಳು ಕರುವನ್ನು
ಯಾರೊ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರರಕಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ
111/17 ಕಲಂ 279, 337 ಐಪಿಸಿ ಜೊತೆ 187 ಮೋ.ವಾಹನ ಕಾಯ್ದೆ :-
ದಿನಾಂಕ: 15/10/2017 ಫಿರ್ಯಾದಿ ತನ್ನ
ಹಿರೊ ಹೊಂಡಾ ಫ್ಯಾಶನ ಪ್ರೋ ಮೋಟಾರ ಸೈಕಲ ನಂ. ಕೆಎ47/ಹೆಚ್4723 ನೇದ್ದರ ಮೇಲೆ ತನ್ನ
ಅತ್ತಿಗೆಯಾದ ತುಳಜಮ್ಮಾ ಗಂಡ ಅಂಜಪ್ಪಾ, ವಯ 35 ವರ್ಷ, ಸಾ: ವಡ್ಡರ ಕಾಲೋನಿ ಬೀದರ ರವರಿಗೆ ಮೊಟಾರ
ಸೈಕಲ ಮೇಲೆ ಕೂಡಿಸಿಕೊಂಡು ಖಾಸಗಿ ಕೆಲಸ ಕುರಿತು ಬೀದರ ನಗರದಲ್ಲಿ ಹೋಗಿ ಮರಳಿ ಮೈಲೂರ ಚಿದ್ರಿ
ರಿಂಗ ರೋಡ ಮುಖಾಂತರ ಗೊಯೆಲ್ ಲೇ ಔಟ ರಿಂಗ ರೋಡ ಪಕ್ಕದಲ್ಲಿರುವ ವಡ್ಡರ ಕಾಲೋನಿ ಕಡೆಗೆ
ಹೊಗುತ್ತಿರುವಾಗ ಗೊಯೆಲ್ ಲೇ ಔಟ್ ಹತ್ತಿರ ಇರುವ ಯು ಟರ್ನ್ ನಲ್ಲಿ ತನ್ನ ಮೊಟಾರ ಸೈಕಲ
ತಿರುಗಿಸಿಕೊಳ್ಳುತ್ತಿರುವಾಗ ಸಮಯ ಅಂಧಾಜು 1930 ಗಂಟೆಗೆ ಚಿದ್ರಿ ಕಡೆಯಿಂದ ಒಂದು ಮೊಟಾರ ಸೈಕಲ
ನಂ. ಕೆಎ38ಯು5251 ನೇದ್ದರ ಚಾಲಕನು ತನ್ನ ಮೊಟಾರ ಸೈಕಲನ್ನು ಅತೀ ವೇಗ ಹಾಗು ನಿಸ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ, ತನ್ನ ಮೊಟಾರ ಸೈಕಲ ಅಲ್ಲಿಯೇ ಬಿಟ್ಟು
ಓಡಿ ಹೋಗಿರುತ್ತಾನೆ. ಪರಿಣಾಮ ತುಳಜಮ್ಮಾ ಇವಳಿಗೆ ಬಲಕಾಲ ಮೊಳಕಾಲ ಕೆಳಗೆ ಗುಪ್ತಗಾಯ,
ಹೊಟ್ಟೆಯಲ್ಲಿ ಗುಪ್ತಗಾಯ, ತಲೆಯಲ್ಲಿ ಗುಪ್ತಯವಾಗಿರುತ್ತದೆ. ಫಿರ್ಯಾದಿಗೆ ಯಾವುದೇ ರೀತಿಯ
ಗಾಯವಾಗಿರುವದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಜನವಾಡಾ ಪೋಲಿಸ್ ಠಾಣೆ ಗುನ್ನೆ ನಂ 137/2017 ಕಲಂ,
341, 504, 376, ಐ,ಪಿ,ಸಿ ಜೊತೆ 3, 2, (v) ಎಸ್.ಸಿ/ಎಸ್.ಟಿ. ಕಾಯ್ದೆ 1989 :-
ದಿನಾಂಕ 16-10-2017 ರಂದು 0015 ಗಂಟೆಗೆ
ಬೀದರ ಜಿಲ್ಲಾ ಸರಕಾರಿ
ಆಸ್ಪತ್ರೆಯಿಂದ ಎಮ.ಎಲ್.ಸಿ ಮಾಹಿತಿ ಮೇರೆಗ ಆಸ್ಪತ್ರಗೆ 0100 ಗಂಟೆಗೆ
ಭೇಟ್ಟಿ ನೀಡಿ ನಂದಗಾವ ಗ್ರಾಮದ ಗಾಯಾಳು ಫಿರ್ಯಾದಿ ವಯ :21 ವರ್ಷದ ಮಹಿಳೆ ರವರು ನೀಡಿದ ದೂರಿನ ಸಾರಾಂಶವನೆಂದರೆ
ದಿನಾಂಕ 15-10-2017 ರಂದು
ಮಧ್ಯಾಹ್ನ 1400 ಗಂಟೆಯ ಸುಮಾರಿಗೆ ಫಿರ್ಯಾದಿಯು
ಮಲವಿಸರ್ಜನೆಗೆ ಹೋಲದ ಕಡೆಗೆ ಹೋದಾಗ ಆರೋಪಿ ಸೀರಾಜ
ತಂದೆ ನವಾಬಸಾಬ ಮಚಕುರಿ ಈತನು ಫಿರ್ಯಾಧಿಗೆ
ಅವಾಚ್ಯ ಶಬ್ದಗಳೊಂದಿಗೆ ಬೈದು ಅವಳೊಂದಿಗೆ ಒತ್ತಾಯಪೂರ್ವಕವಾಗಿ ಜಬರಿ ಸಂಭೋಗ ಮಾಡಿರುತ್ತಾನೆ ನಂತರ
ಫಿರ್ಯಾದಿಗೆ ಚಿಕತ್ಸೆಗೊಸ್ಕರ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಇರುತ್ತದೆ ಆರೋಪಿತನ ವಿರುದ್ದ ಪ್ರಕರಣ
ಜನವಾಡಾ ಪೋಲಿಸ್ ಠಾಣೆ ಗುನ್ನೆ ನಂ 137/2017 ಕಲಂ, 341, 504, 376, ಐ,ಪಿ,ಸಿ ಜೊತೆ 3, 2, (v)
ಎಸ್.ಸಿ/ಎಸ್.ಟಿ. ಕಾಯ್ದೆ 1989 ನೇದರ
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment