Police Bhavan Kalaburagi

Police Bhavan Kalaburagi

Thursday, June 21, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ರೇವೂರ ಠಾಣೆ : ದಿನಾಂಕ-18-06-2018 ರಂದು ನನ್ನ ಗಂಡ ಬಸಣ್ಣಾ ಊರಿಗೆ ಬಂದಿರುತ್ತಾನೆ. ನಿನ್ನೆ ಗೌಡಗಾಂವ ಗ್ರಾಮಕ್ಕೆ ಹೋದಾಗ ನನ್ನ ಗಂಡ ಗೌಡಗಾಂವ  ಗ್ರಾಮದಲ್ಲಿರುವ ನಮ್ಮ ಸಂಬಂಧಿಕರಾದ ದೇವೆಂದ್ರ ರವರ ಮೋಟರ ಸೈಕಲ್ ತಂದಿರುತ್ತಾರೆ. ಮೋಟರ ಸೈಕಲ ನಂ-ಕೆಎ-39 ಹೆಚ್ 0537 ಅಂತಾ ಇರುತ್ತದೆ ದಿನಾಂಕ-19-06-2018 ರಂದು ರಾತ್ರಿ ನನ್ನ ಗಂಡನು ಕೇಲಸ ಇದೆ ಸ್ಟೇಷನಗಾಣಗಾಪೂರಕ್ಕೆ ಹೋಗಿ ಮರಳಿ ರಾತ್ರಿ 10 ಗಂಟೆಯ ವರೆಗೆ ಮನೆಗೆ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋಗಿರುತ್ತಾನೆ. 08-40 ಪಿಎಮ್ ಸಮಯಕ್ಕೆ  ನಾನು ನನ್ನ ಮೈದುನ ಶಾಂತಮಲ್ಲಪ್ಪಶ್ರೀಶೈಲ ಮತ್ತು ನನ್ನ ಅತ್ತೆ ಎಲ್ಲರೂ ಮನೆಯಲ್ಲಿದ್ದಾಗ ನಮ್ಮ ಗ್ರಾಮದ ಉದಯಕುಮಾರ ತಂದೆ ಸಿದ್ರಾಮಪ್ಪಾ ಮೂಲಗೆ ರವರು ನಮ್ಮ ಮನೆಗೆ ಬಂದು ತಿಳಿಸಿದೆನೆಂದರೆ ನಾನು ಸ್ಟೇಷನಗಾಣಗಾಪೂರಕ್ಕೆ ಹೋಗಿ ಮರಳಿ ಬರುವಾಗ ಗೌಡಗಾಂವ ಸಿಮಾಂತರದಲ್ಲಿರುವ ಲಕ್ಷ್ಮಣ ಚಿಂಚೋಳಿ ರವರ ಹೋಲದ ಹತ್ತಿರ ಮೋಟರ ಸೈಕಲ ಮೇಲೆ ಬರುತ್ತಿರುವಾಗ ನನ್ನ ಮುಂದೆ ಸುಮಾರು 20 ಮೀಟರ ಅಂತರದಲ್ಲಿ ಹೋಗುತ್ತಿದ್ದ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಿಸಿ ತನ್ನ ಸೈಡನು ಬಿಟ್ಟು ಎದುರುಗಡೆ ತನ್ನ ಸೈಡಿಗೆ ಬರುತ್ತಿದ್ದ ಮೋಟರ ಸೈಕಲಗೆ ಗುದ್ದಿ ಅಫಘಾತ ಪಡಿಸಿದನು. ಆಗ  ನಾನು ನನ್ನ ಮೋಟರ ಸೈಕಲ ನಿಲ್ಲಿಸಿ ಹತ್ತಿರ ಹೋಗಿ ನೋಡಲು ಎದುರುಗಡೆ ಮೋಟರ ಸೈಕಲ ಮೇಲೆ ಬರುತ್ತಿದ್ದ ವ್ಯಕ್ತಿ ಬಸಣ್ಣನಿದ್ದು ಆತನ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯಬಲಗಣ್ಣ ರೇಪೆ ಮತ್ತು ಹುಬ್ಬಿನ ಹತ್ತಿರ ರಕ್ತಗಾಯಬಲಗೈ ಮುಷ್ಟಿ ಹತ್ತಿರ ತೆರೆಚಿದ ಗಾಯಗಳಾಗಿದ್ದುವು ಮತ್ತು ಅಪಘಾತ ಪಡಿಸಿ ಮೋಟರ ಸೈಕಲ ಸವಾರನ ತಲೆಗೆ ಬಲಗಣ್ಣಿನ ಹತ್ತಿರ ರಕ್ತಗಾಯಗಳಾಗಿದ್ದವು. ಅಪಘಾತ ಪಡಿಸಿದ ವ್ಯಕ್ತಿಗೆ ಆತನಿಗೆ ಆತನ ಹೆಸರು ವಿಚಾರಿಸಲು  ಆತನು ತನ್ನ ಹೆಸರು ಮಾಳಪ್ಪಾ ತಂದೆ ಈರಣ್ಣಾ ಹಂಗರಗಿ ಸಾ|| ಬಸವಂತವಾಡಿ ತಾ|| ಆಳಂದ ಅಂತಾ  ತಿಳಿಸಿದನು ಆತನ ಮೋಟರ ಸೈಕಲ ನಂ-ಕೆಎ-32 ಈಎಮ್ 6619 ಅಂತಾ ಇತ್ತು. ಆತನ ಮೋಬೈನಿಂದ ಆತನ ಸಂಬಂಧಿಕರಿಗೆ ಕರೆಮಾಡಿ ಅಪಘಾತವಾದ ವಿಷಯ ತಿಳಿಸಿದ್ದು ಅವರು ಬರುತ್ತಿದ್ದಾರೆ. ನಿಮಗೆ ಫೋನ ಹಚ್ಚಿದರೆ ಫೋನ ಹತ್ತಲಿಲ್ಲ ಆಗ ರಸ್ತೆಯ ಪಕ್ಕದಲ್ಲಿದ ಮೇಟಗಿಯ ಲಕ್ಷ್ಮಣ ಚಿಂಚೋಳಿ ರವರು ಬಂದರು. ಯಾವುದೆ ವಾಹನಗಳು ಬರದ ಕಾರಣ ಲಕ್ಷ್ಮಣ ಚಿಂಚೋಳಿ ರವರಿಗೆ ಅಲಿಯ್ಲೇ ಬಿಟ್ಟು ನಾನು ಬಂದಿರುತ್ತೇನೆ ಅಂತಾ ತಿಳಿಸಿದನು. ಆಗ ನಾನು ನನ್ನ ಮೈದುನರಾದ ಶ್ರೀಶೈಲಶಾಂತಮಲ್ಲಪ್ಪಾಉದಯ ಎಲ್ಲರೂ ನಮ್ಮೂರಿನ ಯಲ್ಲಾಲಿಂಗ ಪೂಜಾರಿ ರವರ ಬುಲೇರೋ ವಾಹನ ತೆಗದುಕೊಂಡು ಹೋಗಿ ನೋಡಲು ಅಪಘಾತವಾಗಿದ್ದು ನಿಜವಿದ್ದು ನನ್ನ ಗಂಡನಿಗೆ ಬುಲೇರೋದಲ್ಲಿ ಹಾಕಿದಾಗ ಅಪಘಾತ ಪಡಿಸಿದ ವ್ಯಕ್ತಿಯ ಕಡೆಯುವರು ಕ್ರೋಸರ ತೆಗೆದುಕೊಂಡು ಬಂದರು. ನನ್ನ ಗಂಡ ಬಿಕ್ಕುತ್ತಿದ್ದನು ಸ್ಟೇಷನಗಾಣಗಾಪೂರ ಸರಕಾರಿ ಆಸ್ಪತ್ರೆಯ ಸಮೀಪ ತೆಗೆದುಕೊಂಡು  ಹೋದಾಗ 09 ಪಿಎಮ್ ಕ್ಕೆ ನನ್ನ ಗಂಡ ಬಿಕ್ಕುವುದನ್ನು ನಿಲ್ಲಿಸಿದ ಆಸ್ಪತ್ರೆಯಲ್ಲಿ  ತೆಗೆದುಕೊಂದು ಹೋದಾಗ ಆಸ್ಪತ್ರೆಯಲ್ಲಿ ನೋಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನನ್ನ ಗಂಡನ ಮೋಟರ ಸೈಕಲಗೆ ಅಫಘಾತ ಪಡಿಸಿ ನನ್ನ ಗಂಡನ ಸಾವಿಗೆ ಕಾರಣನಾದ ಮೋಟರ ಸೈಕಲ ನಂ-ಕೆಎ-32 ಈಎಮ್ 6619 ನೇದ್ದರ ಸವಾರನಾದ ಮಾಳಪ್ಪಾ ತಂದೆ ಈರಣ್ಣಾ ಹಂಗರಗಿ ಸಾ|| ಬಸವಂತವಾಡಿ ತಾ|| ಆಳಂದ ರವರ ಮೇಲೆ ಮಾನ್ಯರು ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಸಂಗಮ್ಮ ಗಂಡ ಬಸಣ್ಣಾ ಹರಸೂರ ಸಾ : ಅಂಕಲಗಾ ಹೊಸ ಬಡಾವಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಳಂದ ಠಾಣೆ : ಶ್ರೀ ಮೈಬೂಬಸಾಬ ತಂದೆ ಹುಸೇನಸಾಬ ಮುರುಮವಾಲೆ ಸಾ: ಮಟಕಿ ರೋಡ ಆಳಂದ ಮತ್ತು ಮಹ್ಮದ ಸಲಗರೆ ಇಬ್ಬರೂ ಕೂಡಿಕೊಂಡು ದಿನಾಂಕ: 20-06-2018 ರಂದು ಮಹ್ಮದ ಸಲಗರೆ ಇತನ ಮೋಟರ್ ಸೈಕಲ ನಂ. KA:32 EM-9873 ನೇದ್ದರ ಮೇಲೆ ಕೂಲಿ ಕೆಲಸಕ್ಕೆ ಬೇಳಗ್ಗೆ ಹೋಗುವಾಗ ನಾನು ಹಿಂದೆ ಕುಳಿತ್ತಿದ್ದು ಮಹ್ಮದ ಸಲಗರೆ ಇತನು ಮೋಟರ್ ಸೈಕಲ ಚಲಾಯಿಸುತ್ತಿದ್ದು ಉಮರ್ಗಾ ರೋಡಿನ ಮೀರಾದಾತುರ ಚಿಲ್ಲಾ ದರ್ಗಾ ಹತ್ತಿರದ ಆಣೆಕಟ್ಟಿನ ಕ್ರಾಸ್ ಮೂಲಕ ಹೋಗುವಾಗ ಎದುರುಗಡೆಯಿಂದ ಅಂದರೆ ಉಮರ್ಗಾ ರೋಡಿನಿಂದ ಒಮ್ಮಲೆ ಯಾವುದೋ ವಾಹನ ಚಾಲಕ ಅತೀವೇಗದಿಂದ ಹಾಗೂ ನಿರ್ಲಕ್ಷತನದಿಂದ ಬಂದು ನಮ್ಮ ಮೋಟರ್ ಸೈಕಲಿಗೆ ಡಿಕ್ಕಿಪಡಿಸಿದರಿಂದ ನನಗೆ ಬಲಕಾಲಿನ ಮೋಳಕಾಲಿಗೆ,ಎದೆಗೆ ಬಲಗೈಗೆ ಸಾದಾ ಗಾಯವಾಗಿದ್ದು ಮೋಟರ ಸೈಕಲ ಚಲಾಯಿಸುತ್ತಿದ್ದ ಮಹ್ಮದ ಸಲಗರೆ ಇತನಿಗೆ ತಲೆಗೆ, ಎದೆಗೆ, ಮೊಳಕಾಲಿಗೆ ಭಾರಿ ಗಾಯ ಹೊಂದಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ನನಗೆ ಗಾಯಪಡಿಸಿ ಮಹ್ಮದ ಸಲಗರೆ ಇತನ ಸಾವಿಗೆ ಕಾರಣವಾದ ಯಾವುದೋ ವಾಹನ ಪತ್ತೆ ಮಾಡಿ ಅದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕಸ್ಮಿಕ ಸಾವು ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ದಸ್ತಮ್ಮಾ ಗಂಡ ಮದರಪ್ಪಾ ಬಂಡಜಂಗಮ ಸಾ : ಲಿಂಗಂಪಲ್ಲಿ ತಾ : ಸೇಡಂ  ರವರೊಂದಿಗೆ ಮಂಗಮ್ಮ ಗಂಡ ಸಣ್ಣ ಮದರಪ್ಪ  ಬಂಡಜಂಗಮ ಸಾ : ಲಿಂಗಂಪಲ್ಲಿ ತಾ : ಸೇಡಂ  ರವರು ವಿನಃ ಕಾರಣ  ಜಗಳ ತೆಗೆದು ಹೊಡೆಯುತ್ತಿದ್ದಗ ಸದರಿ ಪಿರ್ಯಾದಿಯ ಮಗನು ಜಗಳವನ್ನು ಬಿಡಿಸಲು ಬಂದಾಗ ಆರೋಪಿತಳು ಸದರಿಯವನಿಗೆ ಕುತ್ತಿಗೆ ಹಿಡಿದು ಹಿಂದಕ್ಕೆ ದಬ್ಬಿ ಕೊಟ್ಟಾಗ ಸಿಸಿ ರಸ್ತೆಯ ಮೇಲೆ ಅಂಗಾತ ಬಿದ್ದು ತಲಗೆ ಪೆಟ್ಟಾಗಿದ್ದರಿಂದ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಲಕ್ಷ್ಮೀಬಾಯಿ ಗಂಡ ಶಾಂತಪ್ಪಾ ನೀಲಾ ಸಾ:ಜೆ.ಆರ್‌.ನಗರ ಕಲಬುರಗಿ ಇವರ ಗಂಡನಾದ ಶಾಂತಪ್ಪಾ ತಂದೆ ರೇವಣಸಿದ್ದಪ್ಪಾ ನೀಲಾ ಸಾ:ಜೆ.ಆರ್‌.ನಗರ ಕಲಬುರಗಿ ಇತನು ಕಾರ ತೆಗೆದುಕೊಳ್ಳುವ ಸಂಬಂಧ ಸಾಲ ತೆಗೆದುಕೊಂಡಿದ್ದು ಮತ್ತು ಹೊರಗಿನ ಸಾಲ ಮಾಡಿಕೊಂಡಿದ್ದು ಸಾಲ ತಿರಿಸುವ ವಿಷಯದಲ್ಲಿ ಚಿಂತೆ ಮಾಡುತ್ತಾ ಬಂದಿದ್ದು ಇಂದು ದಿನಾಂಕ:20/06/2018 ರಂದು ಸಾಯಂಕಾ 5.00 ಗಂಟೆ ಸುಮಾರಿಗೆ ಊಟಮಾಡಿ ಮೇಲಿನ ಮನೆಯಲ್ಲಿ ಮಲಗಲು ಹೋಗಿದ್ದು ಸಾಯಂಕಾಲ 7.00 ಗಂಟೆಯಾದರೂ ನನ್ನ ಗಂಡನು ಬರದೆ ಇದ್ದಾಗ ನಾನು ಹೋಗಿ ನೋಡಲು ನನ್ನ ಗಂಡನು ಬೇಡರೂಮೀನಲ್ಲಿಯ ಫ್ಯಾನಗೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: