Police Bhavan Kalaburagi

Police Bhavan Kalaburagi

Wednesday, April 1, 2020

BIDAR DISTRICT DAILY CRIME UPDATE 01-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-04-2020

ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ ಅಪರಾಧ ಸಂಖ್ಯೆ 04/2020 ಕಲಂ 67(ಡಿ) ಐ.ಟಿ ಆಕ್ಟ್ ಮತ್ತು 419, 420 ಐಪಿಸಿ :-

ದಿನಾಂಕ : 31/03/2020 ರಂದು 1215 ಗಂಟೆಗೆ ಫಿರ್ಯಾದಿ ಶ್ರೀ ಬಸವರಾಜ ತಂದೆ ಗುರುಪಾದಯ್ಯಾ ಕವಾಡಿ ಸಾ: ಗುರುನಾನಕ ಕಾಲೊನಿ ಬೀದರ ಇವರು ಠಾಣೆಗೆ ಹಾಜರಾಗಿ ತನ್ನ ದೂರು ನೀಡಿದರ ಸಾರಾಂಶವೇನೆಂದರೆ, ಫಿರ್ಯಾದಿಯು ಬಿ.ಕೆ.ಐ.ಟಿ ಕಾಲೇಜ್ ಭಾಲ್ಕಿಯಲ್ಲಿ ಸುಮಾರು 25 ವರ್ಷದಿಂದ ಉಪನ್ಯಾಸಕ ಅಂತ ಕರ್ತವ್ಯ ನಿರ್ವಹಿಸಿಕೊಂಡು ಇದ್ದು ಇವರ ಹೆಸರಿಗೆ ಬೀದರ ಪ್ರತಾಪನಗರ ಕೆಎಚ್ಬಿ ಕಾಲೋನಿಯಲ್ಲಿ ಒಂದು ಖಾಲಿ ನಿವೇಶನ ಇರುತ್ತದೆ. ಹೀಗಿರುವಾಗ ದಿನಾಂಕ: 14-02-2020 ರಂದು ಮನೆಯಲ್ಲಿರುವಾಗ ಬೆಳಿಗ್ಗೆ 10:59 ಕ್ಕೆ ಫಿಯರ್ಾದಿ ಮೋಬೈಲ್ ಸಂಖ್ಯೆ: 8660745771 ನೇದ್ದಕ್ಕೆ ಎ.ಡಿ.-ಜಿಯೋಟವರ  ಭಾರತಿ ಎಂಬ ಹೆಸರಿನಿಂದ ಒಂದು ಸಂದೇಶ ಬಂದಿದ್ದು ಅದರಲ್ಲಿ ನಿಮ್ಮ ಜಾಗೆಯಲ್ಲಿ ಅಥವಾ ಮನೆಯ ಛಾವಣಿ ಮೇಲೆ ಜಿಯೋ ಟಾವರ ಕೂಡಿಸಿಕೊಂಡಿದ್ದಲ್ಲಿ, ನಿಮಗೆ 60 ಲಕ್ಷ ಮುಂಗಡ ಹಣ ಮತ್ತು ತಿಂಗಳಿಗೆ 50 ಸಾವಿರ ಬಾಡಿಗೆ ನೀಡುವುದಾಗಿ ಮೆಸೇಜ ಬಂದಿದ್ದು, ಒಂದು ವೇಳೆ ನೀವು ಇದಕ್ಕೆ ಇಚ್ಛುಕರಿದ್ದಲ್ಲಿ, ಮೋಬೈಲ್ ನಂ 9193003066 ನೇದಕ್ಕೆ ಕರೆ ಮಾಡುವಂತೆ ಸಂದೇಶ ಇದ್ದದ್ದು ನೋಡಿ ನನ್ನದೊಂದು ಬೀದರ ಪ್ರತಾಪನಗರ ಕೆಎಚ್ಬಿ ಕಾಲೋನಿಯಲ್ಲಿ ಖಾಲಿ ನಿವೇಶನ ಇದ್ದುದರಿಂದ ಅಲ್ಲಿ ಟಾವರ ಕೂಡಿಸಬೇಕು ಅಂತಾ ವಿಚಾರ ಮಾಡಿ ನಾನು ಸದರಿ ಮೋಬೈಲ್ ನಂ 9193003066 ನೇದಕ್ಕೆ ಕರೆ ಮಾಡಿದಾಗ ಆ ಕಡೆಯಿಂದ ಅಜರ್ುನಕುಮಾರ ಎಂಬುವವರು ಮುಂಬೈ ಜಿಯೋ ಕಛೇರಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದರು. ಆಗ ಫಿರ್ಯಾದಿಯು ಅವರಿಗೆ ತಮ್ಮ ನಿವೇಶನದಲ್ಲಿ ಜಿಯೋ ಟಾವರ ಕೂಡಿಸಲು ಇಚ್ಚಿಸಿರುತ್ತೇನೆ ಅಂತಾ ತಿಳಿಸಿದೆ. ಅದಕ್ಕೆ ಅವನು ನಿಮ್ಮ ನಿವೇಶನದ ದಾಖಲಾತಿಗಳು ಮತ್ತು ನಿಮ್ಮ ಆಧಾರ ಕಾರ್ಡ ಹಾಗು ನಿಮ್ಮ ಭಾವಚಿತ್ರ ವ್ಯಾಟ್ಸ್-ಆಪ್ ಮೂಲಕ ಕಳುಹಿಸಲು ತಿಳಿಸಿದರು. ಅದರಂತೆ ಫಿರ್ಯಾದಿ ಪ್ರತಾಪ ನಗರದ ನಿವೇಶನ ಸಂಖ್ಯೆ ಎಚ್ಐಜಿ-159 ನೇದರ ದಾಖಲಾತಿಗಳು, ಆಧಾರ ಕಾರ್ಡ ಹಾಗು ಭಾವಚಿತ್ರ ವ್ಯಾಟ್ಸ್ಆಪ್ ನಂ 9193003066 ನೇದಕ್ಕೆ ಕಳುಹಿಸಿದರು.  ನಂತರ ದಿನಾಂಕ 17-02-2020 ರಂದು ಅಲ್ಲಿಂದ ಒಂದು ಸಂದೇಶ ಬಂದಿದ್ದು ಅದರಲ್ಲಿ ನಿಮ್ಮ ಜಿಯೋ ಟಾವರ ಕೂಡಿಸುವ ಅರ್ಜಿ  ಮಂಜೂರಾಗಿದೆ ಅಂತಾ ಬಂದಾಗ ಫಿರ್ಯಾದಿ ಅರ್ಜುನ ಕುಮಾರ ಇವನಿಗೆ ಕರೆ ಮಾಡಿದಾಗ ಅವನು ನನಗೆ ಇದರ ರಜಿಸ್ಟ್ರೇಷನ್ ಫೀಸ್ 2100/- ರೂಪಾಯಿ ಇದ್ದು, ಸದರಿ ಹಣವನ್ನು ಎಸ್.ಬಿ.ಐ. ಬ್ಯಾಂಕ ಖಾತೆ ಸಂಖ್ಯೆ 38909490435 (ಐಎಫ್ಎಸ್ಸಿ ನಂ ಎಸ್ಬಿಐಎನ್0031841 ಆರತಿಕುಮಾರಿ) ನೇದಕ್ಕೆ ಹಾಕಲು ತಿಳಿಸಿದಾಗ ನಾನು ನನ್ನ ಎಸ್ಬಿಐ ಬ್ಯಾಂಕ ಖಾತೆ ಸಂಖ್ಯೆ : 52139467620 ನೇದರಲ್ಲಿಂದ ನೆಟ್ ಬ್ಯಾಂಕಿಂಗ ಮೂಲಕ ಸದರಿ ಅಕೌಂಟಗೆ ರೂ. 2100/- ಹಣವನ್ನು ಹಾಕಿರುತ್ತಾರೆ. ನಂತರ ದಿನಾಂಕ 02-03-2020 ರಂದು ಸ್ಪೀಡ ಪೋಸ್ಟ ಮುಖಾಂತರ ಅಗ್ರಿಮೆಂಟ್ ಫಾರ್ ಟಾವರ ಇನ್ಸಾಟಲೆಷನ್ ಮತ್ತು ಭಾರತ ಸಕರ್ಾರದ ನೊ ಅಬ್ಜೆಕ್ಷನ್ ಸರ್ಟಿಫಿಕೆಟ್ ದಾಖಲಾತಿಗಳು ಸ್ಟೀಡ ಪೋಸ್ಟ ಮುಖಾಂತರ ಫಿಯರ್ಾದಿಗೆ ಸ್ವೀಕ್ರತವಾಗಿರುತ್ತವೆ. ಮರುದಿವಸ ದಿ:03-03-2020 ರಂದು ಅಜರ್ುನಕುಮಾರ ಇವನು ಫಿರ್ಯಾದಿಗೆ  ಕರೆ ಮಾಡಿ ನೊ ಅಬ್ಜೆಕ್ಷನ್ ಫೀಸ್ ರೂ. 24,200/- ಗಳ ಹಣವನ್ನು ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ ರೋಹಿಣಿ ನ್ಯೂ ದೆಹಲಿ ಖಾತೆ ನಂ.  0944241300553 ನೇದ್ದಕ್ಕೆ ಹಾಕಲು ತಿಳಿಸಿದಾಗ ಫಿಯರ್ಾದಿಯು ತಮ್ಮ ಖಾತೆಯಿಂದ ನೆಟ್ ಬ್ಯಾಂಕಿಂಗ್ ಮುಖಾಂತರ ಸದರಿ ಹಣ ಹಾಕಿರುತಾರೆ. ನಂತರ, ದಿ:05/03/2020 ರಂದು ರೂ. 30 ಲಕ್ಷದ ಮುಂಗಡ ಚೆಕ್ ಹಾಕುತ್ತೇವೆ ಅಂತ ಹೇಳಿ ಇನ್ಸುರೆನ್ಸ್ ಅರ್ಧ ಮೊತ್ತ ರೂ. 47500/- ಹಾಕಲು ತಿಳಿಸಿದ ಮೇರೆಗೆ ಮತ್ತೆ ಅಕೌಂಟಿಗೆ ಪಾವತಿ ಮಾಡಿರುತ್ತಾರೆ  ನಂತರ, ದಿ: 06-03-2020 ರಂದು ಚೆಕ್ ಏಕೆ ಕಳುಹಿಸಲ್ಲ ಅಂತ ಕೇಳಿದಾಗ, ಅವರ ಮ್ಯಾನೆಜರ್ ಅಂಶುಮಾನ ಠಾಕೂರ ಎಂಬುವವರು ಮೊಬೈಲ್ ಸಂ. 9193003064 ನೇದ್ದರಿಂದ ಕರೆ ಮಾಡಿ ಚೆಕ್ ಹಾಕಬೇಕಾದರೆ ರೆಡಿಯೇಶನ್ ಚಾಜರ್್ ರೂ. 95999/- ಹಣವನ್ನು ಹಾಕಲು ತಿಳಿಸಿದ ಮೇರೆಗೆ ಫಿಯರ್ಾದಿಯು ಸದರಿ ಹಣ ಅವರ ಓರಿಯೆಂಟಲ್ ಖಾತೆಗೆ ಹಾಕಿರುತ್ತಾರೆ ಮತ್ತು ಅದೇ ದಿವಸ ಪಿಟಿಎಫ್ ಚಾಜರ್್ ಅಂತ ರೂ. 1,50,000/- ಹಣವನ್ನು ಸಹ ಹಾಕಿರುತ್ತೇನೆ. ನಂತರ ದಿ: 07-03-2020  ರಂದು ಸದರಿ ಕಂಪನಿಯ ವಕೀಲರಾದ ಅತುಲ ತ್ರಿಪಾಠಿ ಎಂಬುವವನು ಮೊಬೈಲ್ ಸಂ. 9675554166 ನೇದ್ದರಿಂದ ಕರೆ ಮಾಡಿ ನಾನು ನಿಮ್ಮ ಕೆಲಸ ಮಾಡಿದ ಕಮಿಷನ್ ರೂ. 1,00,000/- ಹಣ ಓರಿಯಂಟಲ್ ಬ್ಯಾಂಕ್ ಖಾತೆಗೆ ಹಾಕಲು ತಿಳಿಸಿದ್ದು ಫಿಯರ್ಾದಿಯು ಸದರಿ ಹಣ ಸಹ ಓರಿಯಂಟಲ ಬ್ಯಾಂಕಿಗೆ ಹಾಕಿರುತ್ತಾರೆ. ತದನಂತರ, ಅಂಶುಮಾನ ಠಾಕೂರ್ ಮ್ಯಾನೇಜರ್ ರವರು ಕರೆ ಮಾಡಿ ದಿನಾಂಕ: 09-03-2020 ರಂದು ರೆಡಿಯೆಷನ್ ಇನ್ಸ್ಟ್ರುಮೆಂಟ್ ಮೊತ್ತ ರೂ. 1,60,949/-, ದಿನಾಂಕ: 10 ಮತ್ತು 11-03-2020 ಗಳಂದು ಸೆಂಟ್ರಲ್ ಜಿಎಸ್ಟಿ ರೂ. 1,50,000/- ಮತ್ತು 1,50,000/- ಗಳ ಹಣವನ್ನು ಹಾಕಿದ್ದು, ದಿನಾಂಕ:13-03-2020  ರಂದು ಹಾಗೂ 14-03-2020 ರಂದು ಟವರ್ ಸಾಮಾನುಗಳು ಎರಡು ಲಾರಿಗಳಲ್ಲಿ ಕಳುಹಿಸುವ ಆರ್ಟಿಓ ಚಾಜರ್್ ರೂ. 1,90,000/- ಮತ್ತು 1,90,000/- ಹಣಗಳನ್ನು ಮತ್ತು ದಿನಾಂಕ 17-03-2020 ರಂದು 10 ವರ್ಷದ ಟ್ರಾಯ್ ಫೀಸ್ ರೂ. 1,72,800/- ಗಳು ಮತ್ತು ದಿನಾಂಕ 19-03-2020 ರಂದು ಸ್ಟೇಟ್ ಜಿಎಸ್ಟಿ ರೂ. 3,00,000/- ಹಾಗೂ ಅಗ್ರಿಮೆಂಟ್ ಫೀಸ್ ರೂ, 1,50,000/- ಹಣವನ್ನು ಸದರಿ ಓರಿಯಂಟಲ್ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿರುತ್ತಾನೆ ಮತ್ತು ದಿನಾಂಕ 11-03-2020 ರೂ. ಸಾಲವೆನ್ಸಿ ಫೀಸ್ ರೂ. 1,20,000/- ಹಣವನ್ನು ಸದರಿ ಖಾತೆಯಲ್ಲಿ ನಗದು ಹಣ ಜಮಾ ಮಾಡಿರುತ್ತಾರೆ  ಹೀಗೆ ಅವರು ಹೇಳಿದಂತೆ ನಾನು ಹಣ ಜಮಾ ಮಾಡಿದರೂ ಫಿರ್ಯಾದಿಗೆ ರೂ. 30ಕ್ಷದ ಮುಂಗಡ ಚೆಕ್ ಹಾಕದರಿಂದ   ಅವರಿಗೆ ಕೇಳಿದರೆ ಅವರು ಇನ್ನು ರೂ. 2 ಲಕ್ಷ್ಯ 80 ಸಾವಿರ ಹಣಗಳನ್ನು ಜಮಾ ಮಾಡಿದರೆ ಚೆಕ್ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ ಅಂತ ಏನಾದರೊಂದು ಕಾರಣ, ಹೇಳುತ್ತಿದ್ದಾರೆ. ಇದರಿಂದ ಸದರಿ ಜನರು ನನಗೆ ಮೋಸ ಮಾಡಿ ನನ್ನಿಂದ ಹಣ ಹಾಕಿಸಿಕೊಳ್ಳುತ್ತಿದ್ದಾರೆ ಅಂತ ನನಗೆ ತಿಳಿದು ಬಂದು ನಾನು ಹಣ ಹಾಕಿರುವದಿಲ್ಲ. ನನಗೆ ದೂರು ನೀಡುವ ಬಗ್ಗೆ ಮಾಹಿತಿ ಇಲ್ಲದೆ ಇರುವುದರಿಂದ ಮತ್ತು ನಮ್ಮ ಮನೆಯಲ್ಲಿ ವಿಚಾರ ಮಾಡಿಕೊಂಡು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಹಿಗೆ ಈ ಮೇಲೆ ತಿಳಿಸಿದ ವ್ಯಕ್ತಿಗಳು ನನಗೆ ಜಿಯೋ ಕಂಪನಿಯವರೆಂದು ಸುಳ್ಳು ಹೇಳಿ ಜಿಯೋ ಮೊಬೈಲ್ ಟವರ್ ಕೂಡಿಸುವುದಾಗಿ ಹಾಗೂ ರೂ. 60 ಲಕ್ಷ ಮುಂಗಡ ಹಣ ಮತ್ತು ತಿಂಗಳಿಗೆ ರೂ. 50 ಸಾವಿರ ಬಾಡಿಗೆ ಕೋಡುವುದಾಗಿ ಸುಳ್ಳು ಹೇಳಿ ನಂಬಿಸಿ ಮೋಸದಿಂದ ನನ್ನಿಂದ ವಿವಿಧ ಚಾರ್ಜ ಅಂತ ಹೇಳಿ ಒಟ್ಟು ರೂ. 20,03,548 ಹಣವನ್ನು ಹಾಕಿಸಿಕೊಂಡಿದ್ದು, ಕಾರಣ ನನಗೆ ಮೋಸ ಮಾಡಿದ ಈ ಮೇಲಿನವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನನ್ನ ಹಣ ಮರಳಿಸಲು ತಮ್ಮಲ್ಲಿ ವಿನಂತಿ ಇರುತ್ತದೆ ಅಂತ ಇದ್ದ ಸಾರಾಂಶದ ಆಧಾರದ ಮೇರೆಗೆ ಠಾಣೆ ಗುನ್ನೆ ನಂ: 04/2020 ಕಲಂ 419, 420 ಐಪಿಸಿ ಮತ್ತು ಕಲಂ 66(ಡಿ) ಐ.ಟಿ ಆಕ್ಟ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂತಿನ ತನಿಖೆ ಕೈಕೊಳ್ಳಲಾಗಿದೆ.

ಬೇಮಳಖೇಡಾ ಪೋಲಿಸ್ ಠಾಣೆ ಯು.ಡಿ.ಆರ್ ನಂ. 05/2020 ಕಲಂ 174 (ಸಿ) ಸಿ.ಆರ್.ಪಿ.ಸಿ. :-

ದಿನಾಂಕಃ31-03-2020 ರಂದು 3-30 ಗಂಟೆಯ ಸುಮಾರಿಗೆ ಬಸಿರಾಪೂರ ಗ್ರಾಮದ ಫಿರ್ಯಾದಿ ಬಕಮ್ಮಾ ಗಂಡ ಚಂದ್ರಪ್ಪಾ ರವರ ಮಗ ಪ್ರಭು   ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ಬೇಮಳಖೇಡಾ ಶಿವಾರದಲ್ಲಿ ಕಾಡು ಹಂದಿ ಓಡಿಸಲು ಹೋದಾಗ ಅರಣ್ಯ ಪ್ರದೇಶದಲ್ಲಿನ ಕಾಡು ಹಂದಿ ಬಂದು   ತೊಡೆಗೆ ಹೊಡೆದು ಭಾರಿ ರಕ್ತ ಗಾಯ ಪಡಿಸಿರುತ್ತದೆ ಮತ್ತು  ಮಗನಿಗೆ ಚಿಕಿತ್ಸೆ ಕುರಿತು ಸಂಜುಕುಮಾತ ತಂದೆ ಶಾಮರಾವ ಮತ್ತು ಸಂಜುಕುಮಾರ ತಂದೆ ತುಕಾರಾಮ ಹಲಗಿ ಇವರ ದ್ವಿ ಚಕ್ರ ವಾಹನದ ಮೇಲೆ ಕುಡಿಸಿಕೊಂಡು ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆ   ಸೇರಿಕ ಮಾಡಿದ್ದು ಅಲ್ಲಿ ಕರ್ತವ್ಯ ನಿರತ ವೈಧ್ಯಾಧಿಕಾರಿಯವರು ನನ್ನ ಮಗ ಪ್ರಭು ಇತನಿಗೆ ನೋಡಿ ನನ್ನ ಮಗ ಪ್ರಭು ಇತನಿಗೆ ಆದ ಗಂಭಿರ ಗಾಯಗಳಿಂದ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತ ಪಟ್ಟಿರುತ್ತಾನೆ ಅಂತಾ ನೀಡಿದ ದೂರನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


No comments: