Police Bhavan Kalaburagi

Police Bhavan Kalaburagi

Friday, July 27, 2012

GULBARGA DIST


ದೇವಲ ಗಾಣಗಾಪೂರ ಪೊಲೀಸ್ ರ ಕಾರ್ಯಚರಣೆ
 :: ಮೋಟಾರ ಸೈಕಲ ಕಳ್ಳರ ಬಂದನ  ::
ಮಾನ್ಯ ಎಸ.ಪಿ ಸಾಹೇಬರಾದ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ, ರವರು, ಮಾನ್ಯ ಅಪರ್ ಎಸ.ಪಿ ರವರಾದ ಶ್ರೀ ಕಾಶೀನಾಥ ತಳಕೇರಿ, ಮಾನ್ಯ ಶ್ರೀ ಡಿ.ಎಸ.ಪಿ ಆಳಂದ ಎಸ.ಬಿ.ಸಾಂಬಾ, ಮತ್ತು ಸಿಪಿಐ ಅಫಜಲಪೂರ ರವರಾದ ಶ್ರೀ ರಾಜೇಂದ್ರ ರವರ ಮಾರ್ಗದರ್ಶನದ ಮೇರೆಗೆ ದೇವಲ ಗಾಣಗಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸ್ವತ್ತಿನ ಪ್ರಕರಣಗಳಲ್ಲಿಯ ಆರೋಪಿತರ ಮತ್ತು ಮಾಲು ಪತ್ತೆ ಕುರಿತು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ ಪಿ.,ಎಸ.ಐ. ಮಂಜುನಾಥ ಎಸ. ಕುಸಗಲ್  ಮತ್ತು ಸಿಬ್ಬಂದಿ ಜನರಾದ  ತಸ್ಲೀಮ್, ಪ್ರಕಾಶ, ಸಂಜಯ ಪಾಟೀಲ್, ಗುರುರಾಜ, ಶಾಂತವೀರ, ಮಲ್ಲಣ್ಣ, ಚಂದ್ರಕಾಂತ, ಎಂ.ಡಿ. ರಪೀಕ್ ರವರನೊಳ್ಳಗೊಂಡ ತಂಡವು ರಚಿಸಿದ್ದು,  ಅಪಜಲಪೂರ ತಾಲೂಕಿನ ಚೌಡಾಪೂರ ಗ್ರಾಮದ ಶ್ರೀ ದತ್ತಾ ಹೋಟೆಲ್ ಪಂಪ ಹತ್ತಿರ ದಿನಾಂಕ: 26-07-2012 ರಂದು ಸಾಯಂಕಾಲ 4-00 ಗಂಟೆಗೆ ಸುಮಾರಿಗೆ ಅಪಜಲಪೂರ ರೋಡಿನ ಕಡೆಯಿಂದ ಚೌಡಾಪೂರ ಕಡೆಗೆ ಒಬ್ಬರ ಹಿಂದೆ ಒಬ್ಬರು ಇಬ್ಬರು ಮೋಟಾರ ಸೈಕಲ ಸವಾರರು ಬರುತ್ತಿದ್ದ ನಮ್ಮನ್ನು ನೋಡಿ ತಮ್ಮ ಮೋಟಾರ ಸೈಕಲಗಳನ್ನು ತಿರುಗಿಸಿಕೊಂಡು ಓಡಿ ಹೋಗಲು ಯತ್ನಿಸುತ್ತಿದ್ದಾಗ ಅವರನ್ನು ಹಿಡಿದುಕೊಂಡು ವಿಚಾರಣೆ ಮಾಡಿದಾಗ ಅವರ ಹೆಸರು ಪ್ರವೀಣ ತಂದೆ ಆಶೋಕ ಪವಾರ ವ|| 30 ವರ್ಷ ಸಾ|| ಸೋಲಾಪೂರ, ಶ್ರೀಶೈಲ್ ತಂದೆ ಬಸಣ್ಣ ಜಮಾದಾರ ವ|| 30 ವರ್ಷ ಸಾ|| ಗಣೇಶ ನಗರ ಗುಲಬರ್ಗಾ ಅಂತಾ ತಿಳಿದು ಬಂದಿರುತ್ತದೆ. ಸದರಿಯವರು 11 ಮೋಟಾರ ಸೈಕಲಗಳು ಅಂದಾಜು ಕಿಮ್ಮತ್ತು 2,50,000/- ರೂಪಾಯಿಗಳದ್ದು ವಶಪಡಿಸಿಕೊಂಡಿರುತ್ತಾರೆ. ಮಾನ್ಯ ಎಸಪಿ ಸಾಹೇಬರು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ  ಅಧಿಕಾರಿ ಮತ್ತು ಸಿಬ್ಬಂದಿಯವರ ಪತ್ತೆ ಕಾರ್ಯ ಪ್ರಶಂಸಿರುತ್ತಾರೆ. 

No comments: