ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-02-2020
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 14/2020, ಕಲಂ. 279, 304(ಎ) ಐಪಿಸಿ
ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 07-02-2020
ರಂದು
ಸೂರ್ಯಕಾಂತ ತಂದೆ ಚಂದ್ರಪ್ಪಾ ಹೊಸದೊಡ್ಡೆ ಸಾ: ಖಾನಾಪೂರ(ಕೆ) ರವರ ಮಗನಾದ ಅನಿಲ ಇತನು ಔರಾದ ಎಪಿಎಂಸಿ
ಕ್ರಾಸ ಕಡೆಯಿಂದ ಮೊಟಾರ ಸೈಕಲ್ ನಂ. ಕೆಎ-38/ಆರ್-3825
ನೇದನ್ನು
ಚಲಾಯಿಸಿಕೋಂಡು ಔರಾದ ಬಸ್ಸ ನಿಲ್ದಾಣದ ಕಡೆಗೆ ಹೋಗುವಾಗ ಪಟ್ನೆ ಪ್ರೀಂಟರ್ಸ ಹತ್ತಿರ ಹಿಂದಿನಿಂದ
ಟ್ರ್ಯಾಕ್ಟರವೊಂದರ ಚಾಲಕನಾದ ಆರೋಪಿ ಪ್ರಕಾಶ ತಂದೆ ಯಲ್ಲಪ್ಪ್ಆ ಪವರ, ಸಾ: ಔರಾದ(ಬಿ) ಇತನು ತನ್ನ
ಟ್ರ್ಯಾಕ್ಟರನ್ನು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದಾಗ ಮೊಟಾರ
ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಾಗ ಟ್ರ್ಯಾಕ್ಟರ ಟ್ರ್ಯಾಲಿಯ ಹಿಂದಿನ ಗಾಲಿಯು ಅನಿಲ ಇತನ ದೇಹದ
ಮೇಲಿಂದ ಹಾದು ಹೋಗಿದ್ದರಿಂದ ಎದೆಗೆ ಭಾರಿ ರಕ್ತಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 08/2020, ಕಲಂ. 379 ಐಪಿಸಿ :-
ದಿನಾಂಕ 22-12-2019 ರಂದು 1400 ಗಂಟೆಯಿಂದ ದಿನಾಂಕ 25-12-2019 ರಂದು 1330 ಗಂಟೆಯ ಮಧ್ಯಾವಧಿಯಲ್ಲಿ ಪಿüರ್ಯಾದಿ ಮಹಮ್ಮದ ಮುಬೀನ್ ತಂದೆ ಬಾಬುಮಿಯ್ಯಾ ಅಲಿಯಾಬಾದವಾಲೆ ಸಾ: ಆಣದೂರ ಗ್ರಾಮ, ತಾ: ಜಿ: ಬೀದರ ರವರು ತನ್ನ ಅಶೋಕ ಲಿಲ್ಯಾಂಡ್ ಲಾರಿ ನಂ. ಆರ್.ಜೆ-14/ಜಿ.ಸಿ-6565 ಅ.ಕಿ 5,50,000/- ರೂ. ನೇದನ್ನು ತಮ್ಮೂರಿನಲ್ಲಿ ತಮ್ಮ ಮನೆಯ ಹತ್ತಿರ ಇರುವ ರಾಜಕುಮಾರ ಅಗರವಾಲ ಸಾ: ಬೀದರ ರವರ ಖುಲ್ಲಾ ಜಾಗದಲ್ಲಿ ನಿಲ್ಲಿಸಿದ ಸದರಿ ಲಾರಿಯನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸದರಿ ಲಾರಿ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 07-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ
ಸಂ. 23/2020, ಕಲಂ. 279, 337, 338 ಐಪಿಸಿ :-
ದಿನಾಂಕ 06-02-2020 ರಂದು ಫಿರ್ಯಾದಿ ಖಾಜಾ ಮೈನೊದ್ದಿನ ತಂದೆ ಶಬ್ಬಿರ ಮಿಯಾ ಮಚಕುರಿ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಹರನಾಳ, ತಾ: ಭಾಲ್ಕಿ ರವರು ತಾನು ಕೆಲಸ ಮಾಡುವ ಸೊಲಾರ ಅಂಗಿಯ ಮಾಲಿಕ ಶಿವಕುಮಾರ ರಾಜೊಳೆ ಹಾಗು ಅನಿಲಕುಮಾರ ಸಿಕೆನಪೂರೆ ಎಲ್ಲರೂ ಹೈದ್ರಾಬಾದದಲ್ಲಿ ಒಬ್ಬ ವ್ಯಾಪಾರಸ್ಥರ ಹತ್ತಿರ ತಮ್ಮ
ಸೊಲಾರ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಶಿವಕುಮಾರ ಇವರ ಐ20 ಕಾರ ನಂ. ಕೆಎ-56/ಎಮ್-0831 ನೇದರಲ್ಲಿ ಹೈದ್ರಾಬಾದಗೆ ಹೋಗಿ ಹೈದ್ರಾಬಾದದಲ್ಲಿ ತಮ್ಮ
ಕೆಲಸ ಮುಗಿಸಿಕೊಂಡು ಮರಳಿ ಬರುವಾಗ ಸದರಿ ಕಾರನ್ನು ಅನೀಲಕುಮಾರ ಸಿಕೆನಪೂರೆ ಇವರು ಚಲಾಯಿಸಿಕೊಂಡು ದಿನಾಂಕ 07-02-2020
ರಂದು 0345 ಗಂಟೆ
ಸುಮಾರಿಗೆ ಬೀದರ-ಭಾಲ್ಕಿ ರಸ್ತೆಯ ತರನಳ್ಳಿ ಕ್ರಾಸ್ ದಾಟಿ ಸ್ವಲ್ಪ ಮುಂದೆ ಕೊನಮೆಳಕುಂದಾ ಗ್ರಾಮ ಶಿವಾರದ ನಾಮದೇವ ಮೆತ್ರೆ ಇವರ ಹೊಲದ ಹತ್ತಿರ ಹೊದಾಗ ಅನಿಕುಮಾರ ಸಿಕೆನಪೂರೆ ಇವರು ಸದರಿ ಕಾರನ್ನು ಅತೀವೇಗ ಮತ್ತು ನಿಸ್ಕಾಳಜಿಯಿಂದ ಅಡ್ಡತಿಡ್ಡವಾಗಿ ಚಲಾಯಿಸಿ ಕಾರ ಹತೊಟಿಯಲ್ಲಿ ಇಟ್ಟುಕೊಳ್ಳದೆ ರಸ್ತೆಯ ಬದಿಯಲ್ಲಿನ ತಗ್ಗಿನಲ್ಲಿ ಹೊಗಿ ಕಾರ ಪಲ್ಟಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಹಣೆಯ ಮೇಲೆ ರಕ್ತಗಾಯ, ಎಡಗೈ ಮೊಳಕೈ ಮೇಲೆ ತರಚಿದ ಗಾಯ, ಎದೆಯಲ್ಲಿ, ಎಡಗೈ ಮಣಿಕಟ್ಟಿನ ಹತ್ತಿರ ಮತ್ತು ಎಡಗಾಲಿನ ಮೊಳಕಾಲ ಮೇಲೆ ಗುಪ್ತಗಾಯವಾಗಿರುತ್ತದೆ, ಮಾಲಿಕ ಶಿವಕುಮಾರ ರಾಜೊಳೆ ಇವರಿಗೆ ಎಡಗಾಲ ಕಾಲುಗಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿ ಮೊಳೆ ಮುರಿದಿರುತ್ತದೆ, ಬಲಗೈ ಮುಂಗೈ ಹತ್ತಿರ ಬೆರಳುಗಳ ಮೇಲೆ ತರಚಿದ ರಕ್ತಗಾಯ, ಸೊಂಟದಲ್ಲಿ ಗುಪ್ತಗಾಯ, ಕೆಳಗಿನ ತುಟಿ ಮೇಲೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಬಂದಿರುತ್ತದೆ, ಕಾರ ಚಾಲಕ ಆರೋಪಿ ಅನೀಲಕುಮಾರ ಇವರಿಗೆ ತಲೆಯ ಎಡಭಾಗದಲ್ಲಿ ರಕ್ತಗಾಯ, ಸೊಂಟದಲ್ಲಿ ಗುಪ್ತಗಾಯ ಮತ್ತು ಎಡಗಾಲಿನ ಮೊಳಕಾಲ ಮೇಲೆ ರಕ್ತಗಾಯವಾಗಿರುತ್ತದೆ, ನಂತರ ಅನೀಲಕುಮಾರ ಇವರು 108 ಅಂಬುಲೆನ್ಸಗೆ ಕರೆ ಮಾಡಿ ಕರೆಯಿಸಿ ಅದರಲ್ಲಿ ಎಲ್ಲರೂ ಬೀದರದ ಗುರು ನಾನಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಕುರಿತು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ
ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment