Police Bhavan Kalaburagi

Police Bhavan Kalaburagi

Tuesday, January 15, 2019

BIDAR DISTRICT DAILY CRIME UPDATE 15-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-01-2019

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 12/2019, PÀ®A. 394 L¦¹ :-
ಫಿರ್ಯಾದಿ ಜಗದೀಶ ತಂದೆ ಮಲ್ಲಣ್ಣಾ ಭಾವಿ ಸಾ: ಮನೆ ನಂ. 8-11-511, ಜ್ಯೋತಿ ಕಾಲೋನಿ, ಬೀದರ ರವರು ಬೀದರ ನಗರದ ರಂಗಮಂದಿರದ ರೋಡಿನಲ್ಲಿ ಕೊಕಾ-ಕೋಲಾ, ಏರಟೆಲ್ ಹಾಗು ಪಾಲೇ ಬಿಸ್ಕೀಟಿನ ಡಿಸ್ಟ್ರೀಬ್ಯೂಟರ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 14-01-2019 ರಂದು ಫಿರ್ಯಾದಿಯು ತಮ್ಮ ಅಂಗಡಿಯನ್ನು ಮುಚ್ಚಿ ದಿನದ ಕಲೆಕ್ಷನ ಆದ ಸುಮಾರು 2 ಲಕ್ಷ 5 ಸಾವಿರ ಹಣವನ್ನು ಒಂದು ಬ್ಯಾಗಿನಲ್ಲಿ ಹಾಕಿಕೊಂಡು ತಮ್ಮ ಹೀರೊ ಮೆಸ್ಟ್ರೋ ಸ್ಕೂಟಿಯ ಮುಂದುಗಡೆ ಇಟ್ಟುಕೊಂಡು ಮನೆಗೆ ಹೋಗುವಾಗ ಜ್ಯೋತಿ ಕಾಲೋನಿ ಕ್ರಾಸದಲ್ಲಿ ಶಂಕರ ಗಾದಾರವರ ಮನೆಯ ಹತ್ತಿರ ಸ್ಟೀಡ ಬ್ರೀಕರ ಇದ್ದು ಮೊಟರ ಸೈಕಲ ವೇಗ ಸ್ವಲ್ಪ ಕಡಿಮೆ ಮಾಡಿದಾಗ ಸ್ಟೀಡ ಬ್ರೇಕರ ಹತ್ತಿರ ನಿಂತ್ತಿದ್ದ ಇಬ್ಬರು ವ್ಯಕ್ತಿಗಳು ಫಿರ್ಯಾದಿಯ ಹತ್ತಿರ ಬಂದು ಫಿರ್ಯಾದಿಯ ಕಣ್ಣಿನಲ್ಲಿ ಪುಡಿಖಾರ ಹಾಕಿ ಸದರಿ ಹಣದ ಬ್ಯಾಗನ್ನು ಕಸಿದುಕೊಂಡು ಕತ್ತಲಲ್ಲಿ ಓಡಿ ಹೋಗಿರುತ್ತಾರೆ, ಅವರ ಅಂದಾಜು ವಯಸ್ಸು 20-25 ವರ್ಷ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-01-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 05/2019, ಕಲಂ. ಹುಡುಗಿ ಕಾಣೆ :-
ದಿನಾಂಕ 13-01-2019 ರಂದು 1430 ಗಂಟೆಯಿಂದ 1530 ಗಂಟೆಯ ಮದ್ಯದ ಅವಧಿಯಲ್ಲಿ ಬಗದಲ ಗ್ರಾಮದ ಫಿರ್ಯಾದಿ ರೇಣುಕಾ ಗಂಡ ಕಂಟೆಪ್ಪಾ ನಿಂಬೂರೆ ಸಾ: ಬಗದಲ ರವರ ಮನೆಯಿಂದ ಫಿರ್ಯಾದಿಯವರ ಮಗಳಾದ ಪೂಜಾ ಇವಳು ಫಿರ್ಯಾದಿಗೆ ಹೇಳದೇ ಕೇಳದೆ ಎಲ್ಲಿ ಹೋಗಿದ್ದಾಳೆಂದು ಗೊತ್ತಿರುವುದಿಲ್ಲಾ, ಅವಳು ಕಾಣೆಯಾಗಿರುತ್ತಾಳೆ, ಕಾಣೆಯಾದ ಮಗಳ ಚಹರಾ ಪಟ್ಟಿ 1) ಕು. ಪೂಜಾ ತಂದೆ ಕಂಟೆಪ್ಪಾ ನಿಂಬೂರೆ, ವಯ: 22 ವರ್ಷ, ಜಾತಿ: ಎಸ್.ಟಿ. ಗೊಂಡ, 2) ಚಹರೆ: ದುಂಡನೆಯ ಮುಖ, ಸಾಧಾರಣ ಮೈಕಟ್ಟು, ಗೊಧಿ ವರ್ಣ ಮೈ ಬಣ್ಣ, ಅಗಲವಾದ ಹಣೆ, 3) ಗುರುತು: ಹಣೆಯ ಮೇಲೆ ಒಂದು ಸಣ್ಣ ದುಂಡಾಕಾರದ ಹಚ್ಚೆ ಬಟ್ಟ ಇರುತ್ತದೆ, 4) ಎತ್ತರ: 4 ಫೀಟ್ 5 ಇಂಚ್ ಎತ್ತರ, 5) ಮಾತನಾಡುವ ಭಾಷೆ: ಕನ್ನಡ, ಹಿಂದಿ ಮತ್ತು ಅಲ್ಪ ಸ್ವಲ್ಪ ಇಂಗ್ಲೀಷ ಬರುತ್ತದೆ, 5) ಧರಿಸಿದ ಬಟ್ಟೆಗಳು ಕ್ರಿಮ ಕಲರ್ ಚುಡಿದಾರ, ಕಪ್ಪು ಬಣ್ಣದ ಪೈಜಾಮಾ, ಕಪ್ಪು ಬಣ್ಣದ ಓಡಣಿ ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 14-01-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 01/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 14-01-2019 ರಂದು ಯರನಳ್ಳಿ ಗ್ರಾಮದ ಮಾಣಿಕೇಶ್ವರ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಕುಮಾರಿ ಸವಿತಾ ಪ್ರಿಯಂಕಾ ಪಿ.ಎಸ್.ಐ ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಯರನಳ್ಳಿ ಗ್ರಾಮದ ಮಾಣಿಕೇಶ್ವರ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1) ಇಸಾಕ  ತಂದೆ ಹೈಯದ ಖಾನ ಬಾಲಕುಂದೆ,  2) ರಜಾಕಸಾಬ ತಂದೆ ಮತಾಬಸಾಬ ಮೋಜನ, 3) ಶಿವಕುಮಾರ ತಂದೆ ಶಂಕರ ಈರಗೊಂಡ, 4) ರಮೇಶ ತಂದೆ ಕಾಶಪ್ಪಾ ಪರ್ಬಾನೋರ, 5) ಬಸಪ್ಪಾ ತಂದೆ ಝೆರೆಪ್ಪಾ ಚಾಂಬೋಳೆ, 6) ಭೀಮಣ್ಣಾ ತಂದೆ ತಿಪ್ಪಣ್ಣಾ ರಾಂಪೂರೆ, 7) ಸಂಜುಕುಮಾರ ತಮದೆ ವಿಠಲ್ ಚಾಂಬೋಳೆ, 8) ಹಮೀದಸಾಬ ತಂದೆ ಮಕ್ಸೂದಸಾಬ ಮೋಜನ,  9) ಜಗನಾಥ ತಂದೆ ಮಾರುತಿ ಪರ್ಬಾನೋರ, 10) ಭೀಮಣ್ಣಾ ತಂದೆ ಬೀರಪ್ಪಾ ಖಂಡೆ ಹಾಗೂ 11) ರಾಚಯ್ಯಾ ತಂದೆ ವೀರಭದ್ರಯ್ಯಾ ಸ್ವಾಮಿ ಎಲ್ಲರೂ ಸಾ: ಯರನಳ್ಳಿ ಗ್ರಾಮ ಇವರೆಲ್ಲರ ಮೇಲೆ ದಾಳಿ ಮಾಡಿ ಸದರಿಯವರಿಗೆ ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 3300/- ರೂ. ಮತ್ತು 108 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 04/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 14-01-2019 ರಂದು ಬಸವಕಲ್ಯಾಣ ನಗರದ ತ್ರಿಪುರಾಂತ .ಬಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಶೀಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆದು ಸುನಿಲಕುಮಾರ ಪಿ.ಎಸ. [ಕಾ&ಸೂ] ಬಸವಕಲ್ಯಾಣ ನಗರದ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೆರೆಗೆ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಸದರಿ ತ್ರಿಪುರಾಂತ .ಬಿದಿಂದ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ತ್ರಿಪುರಾಂತ .ಬಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಿವಾಜಿ ತಂದೆ ಲಕ್ಷ್ಮಣ ವಾಡೆಕರ  ವಯ: 40 ವರ್ಷ, ಜಾತಿ: ಮರಾಠಾ, ಸಾ: ಲಾಲ ತಲಾಬ ಕಾಲೋನಿ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ 1/- ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಆರೋಪಿಗೆ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 5820/- ರೂ. ಮತ್ತು 03 ಮಟಕಾ ಚೀಟಿಗಳು, ಒಂದು ಬಾಲ ಪೆನ್ ಸಿಕ್ಕಿದ್ದು ನೇದವುಗಳು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 05/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 14-01-2019 ರಂದು ಬಸವಕಲ್ಯಾಣ ನಗರದ ಎಸ.ಎಸ್ ಖೋಬಾ ಕಾಲೇಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂ. ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಶೀಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆದು ಸುನಿಲಕುಮಾರ ಪಿ.ಎಸ. [ಕಾ&ಸೂ] ಬಸವಕಲ್ಯಾಣ ನಗರದ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೆರೆಗೆ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಎಸ.ಎಸ್ ಖೋಬಾ ಕಾಲೇಜದಿಂದ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಸದರಿ ಎಸ.ಎಸ್ ಖೋಬಾ ಕಾಲೇಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಚಂದ್ರಕಾಂತ ತಂದೆ ವಿಶ್ವನಾಥಯ್ಯಾ ವರವಟ್ಟೆ ವಯ 63 ವರ್ಷ, ಜಾತಿ: ಲಿಂಗಾಯತ, ಸಾ: ತ್ರಿಪುರಾಂತ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ 1/- ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವದನ್ನು ನೋಡಿ ಎಲ್ಲರು ಒಮ್ಮಲೆ ದಾಳಿ ಮಾಡಿದಾಗ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 1900/- ರೂ ಮತ್ತು 03 ಮಟಕಾ ಚೀಟಿಗಳು, ಒಂದು ಬಾಲ ಪೆನ್ ಸಿಕ್ಕಿದ್ದು ನೇದವುಗಳು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: