Police Bhavan Kalaburagi

Police Bhavan Kalaburagi

Wednesday, January 16, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 15-01-2019 ರಂದು  ಹವಳಗಾ ಗ್ರಾಮದ ರೇವಣಸಿದ್ದೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯೆಕ್ತಿಗಳು 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತಮ್ಮ ಹತ್ತಿರ ಇದ್ದ ಒಂದು ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತೇವೆ ಅಂತಾ ಹೇಳಿ ಜನರ ಮನವೋಲಿಸಿ ಅವರಿಂದ ಹಣ ಪಡೆದು ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ,  ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹವಳಗಾ ಗ್ರಾಮದ ರೇವಣಸಿದ್ದೇಶ್ವರ ಗುಡಿಯ ಸಮೀಪ ಹೋಗಿ ಮರೆಯಾಗಿ ನಿಂತು ನೊಡಲು ಗುಡಿಯ ಮುಂದೆ ಎರಡು ಜನರು ತಮ್ಮ ಮುಂದೆ ಒಂದು ಪೇಪರನ್ನು ಇಟ್ಟುಕೊಂಡು ಕುಳಿತು 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತಮ್ಮ ಹತ್ತಿರ ಇದ್ದ ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತಿದ್ದರು, ಆಗ ನಾವು  ದಾಳಿ ಮಾಡಿ ಮಾಡಿದಾಗ ಪಣಕ್ಕೆ ಹಣ ಹಚ್ಚುತ್ತಿದ್ದ ಜನರು ನಮ್ಮನ್ನು ನೋಡಿ ಓಡಿ ಹೊದರು. ಜೂಜಾಡುತ್ತದ್ದವರನ್ನು ಹಿಡಿದಿದ್ದು, ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ, 1) ಸಿದ್ದಲಿಂಗ ತಂದೆ ಲಕ್ಷ್ಮಣ ನಿಂಬರ್ಗಿ ಸಾ|| ಗೌರ (ಬಿ) 2) ಶೇಖ್ ವಸೀಂ ತಂದೆ ಇಮಾಮುದ್ದಿನ್ ಶೇಖ್ ಸಾ|| ಬೆಳಂಬ ತಾ|| ಉಮರ್ಗಾ ಜಿ|| ಉಸ್ಮಾನಬಾದ ಹಾ|| || ಲಕ್ಷ್ಮೀ ಗುಡಿ ಹತ್ತಿರ ಅಫಜಲಪೂರ ಅಂತ ತಿಳಿಸಿದ್ದು, ಸದರಿಯವ ಹತ್ತಿರ ಜೂಜಾಟವಾಡುತ್ತಿದ್ದ ಒಂದು ಪ್ಲೇಯಿಂಗ ಪಿಕ್ಚರಸ್ ಅಂತಾ ಬರೆದ ಒಂದು ಜೂಜಾಟದ ಪೇಪರ ಹಾಗೂ ಜೂಜಾಟಕ್ಕೆ ಸಂಬಂಧ ಪಟ್ಟ 2360/- ರೂ ನಗದು ಹಣ ಹಾಗೂ 2 ಪ್ಲೇಯಿಂಗ ಕಾರ್ಡಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ ಠಾಣೆ : ದಿನಾಂಕ 15/01/19 ರಂದು ನಂದಿಕೂರ ಗ್ರಾಮದ ಯಶವಂತ್ರಾಯ ಪಾಟೀಲ ಇವರ ಹೊಲದಲ್ಲಿಯ ಹುಣಸಿಗಿಡದ ಕೆಳಗೆ ದುಂಡಾಗಿ ಕುಳಿತು ಅಂದರ ಬಾಹರ ಜೂಜಾಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ 5 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1) ಭಾಗ್ಯವಂತ ತಂದೆ ಅಮೃತಪ್ಪ ಅಂಕಲಗಿ ಸಾಃಮುಕ್ತಂಪೂರ ಕಲಬುರಗಿ   2) ದಯಾನಂದ ತಂದೆ ಶರಣಯ್ಯ ಹೀರೆಮಠ  ವಃ33  ಸಾಃ ನಂದಿಕೂರ  3) ರಾಚಯ್ಯ ತಂದೆ ಸಿದ್ದಯ್ಯ ಅಗ್ಗಿಮಠ   ಸಾಃ ನಂದಿಕೂರ  4) ಮಲ್ಲಣ್ಣ ತಂದೆ ಶಿವರಾಯ ಕಣ್ಣಿ  ಸಾಃ ನಂದಿಕೂರ   5) ಅರ್ಜುನ ತಂದೆ ಚಂದ್ರಾಮ ಹೋನಬಾ ಸಾಃ ಮುಗಳನಾಗಾಂವ ತಾಃ ಚಿತ್ತಾಪೂರ ಹಾ.ವಃ ಫರಹತಾಬಾದ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 3450/-ರೂ ಮತ್ತು  52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  

No comments: