ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ರೇವೂರ ಠಾಣೆ : ದಿನಾಂಕ:20-12-2018
ರಂದು ಮಲ್ಲಿಕಾರ್ಜುನ @ ಮಲ್ಲಪ್ಪ
ತಂದೆ ಸಿದ್ದಮಾಳಪ್ಪ ನಿಂಬರ್ಗಾ ಎಂಬಾತನು ತಾನು ನಡೆಸುವ ಟಂಟಂ ತಗೆದುಕೊಂಡು ಬಂದು ನಿಮ್ಮ ಮನೆಯ
ಹತ್ತಿರ ನಿಲ್ಲಿಸಿ ನನ್ನ ಮಗಳನ್ನು ಹೆದರಿಸಿ ಅಪಹರಿಕೊಂಡು ಹೋಗಿದ್ದು ದಿನಾಂಕ:14-01-2019
ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಕಲಬುರಗಿಗೆ ಹೋದಾಗ ನಮ್ಮ ಪೊಲೀಸ್ ಬಾತ್ಮಿದಾರನು
ಬಸ್ಟ್ಯಾಂಡನಲ್ಲಿ ಕುಳಿತಿದ್ದ ಕುಮಾರಿ ಇವಳಿಗೆ ತೋರಿಸಿದ್ದು, ಆಗ
ಅವರು ಸದರಿಯವಳಿಗೆ ವಿಚಾರಿಸಿದಾಗ ಅವಳು ನನಗೆ ದಿನಾಂಕ:20-12-2018
ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಮಲ್ಲಿಕಾರ್ಜುನ @ ಮಲ್ಲಪ್ಪ
ತಂ/ಸಿದ್ದಮಾಳಪ್ಪ ನಿಂಬರಗಿ ಎಂಬಾತನು ನಮ್ಮ ಮನೆಯ ಮುಂದೆ ಟಂಟಂ ತಂದು ನಿಲ್ಲಿಸಿ ಹಾರ್ನ
ಹೊಡೆದಿದ್ದರಿಂದ ನಾನು ಯಾರು ಬಂದಿದ್ದಾರೆ ಅಂತ ಹೊರಗೆ ಬಂದಾಗ ಅವನು ನನಗೆ ನಾನು ನಿನ್ನನ್ನು
ಪ್ರೀತಿಸುತ್ತಿದ್ದೇನೆ, ನಿನ್ನೊಂದಿಗೆ ಮದುವೆ ಮಾಡಿಕೊಳ್ಳುತ್ತೇನೆ
ನನ್ನೊಂದಿಗೆ ನಡೆ ಅಂತ ಹೇಳಿದನು. ಆಗ ನಾನು ಬರುವುದಿಲ್ಲ ಅಂತ ಹೇಳಿದಾಗ ನನಗೆ ಹೆದರಿಸಿ
ಒತ್ತಾಯಪೂರ್ವಕವಾಗಿ ಟಂಟಂ ದಲ್ಲಿ ಅಪಹರಿಸಿಕೊಂಡು ಗೊಬ್ಬೂರ ಕಡೆಗೆ ಹೋಗುವ ರೋಡಿಗೆ ಕರೆದುಕೊಂಡು
ಹೋಗಿ ರೋಡಿನ ಪಕ್ಕದಲ್ಲಿರುವ ಹಳ್ಳದಲ್ಲಿ ನನಗೆ ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿ ಲೈಂಗಿಕ
ದೌರ್ಜನ್ಯ ಎಸಗಿರುತ್ತಾನೆ. ನಂತರ ಟಂಟಂ ದಲ್ಲಿಯೆ ಕಲಬುರಗಿಗೆ ಕರೆದುಕೊಂಡು ಬಂದು ಅಲ್ಲಿಂದ ಬೆಂಗಳೂರಿಗೆ
ಕರೆದುಕೊಂಡು ಹೋಗಿ ದೇವಸ್ಥಾನಗಳಿಗೆ ಮತ್ತು ಪಾರ್ಕಗಳಿಗೆ ಸುತ್ತಾಡಿ ಅವನಲ್ಲಿದ್ದ ಹಣ ಖರ್ಚಾದ
ನಂತರ ಮರಳಿ ಊರಿಗೆ ಹೋಗಿ ನಾನು ಹಣ ತೆಗೆದುಕೊಂಡು ಬರುತ್ತೇನೆ ಅಂತ ಹೇಳಿ ಕರೆದುಕೊಂಡು ಬಂದು
ನನಗೆ ಇಲ್ಲಿ ಬಸ್ಟ್ಯಾಂಡನಲ್ಲಿ ಕೂಡಿಸಿ ಹೋದವನು ಮರಳಿ ಬಂದಿರುವುದಿಲ್ಲ ಅಂತ ತಿಳಿಸಿದಳು.
ಅಪ್ರಾಪ್ತ ವಯಸ್ಕಳಾದ ನನ್ನನ್ನು ಪುಸಲಾಯಿಸಿ ಟಂಟಂ ದಲ್ಲಿ ಅಪಹರಿಸಿಕೊಂಡು ಹೋಗಿ ನನಗೆ
ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯವೆಸಗಿರುತ್ತಾನೆ ಅಂತ ತಿಳಿಸಿರುತ್ತಾಳೆ ಅಂತ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ
ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಜಗದೇವಿ ಗಂಡ ಶ್ಯಾಮರಾವ ಶೇಟ್ಟಿ ಸಾ :: ಓಕಳಿ, ತಾ: ಕಮಲಾಪೂರ ರವರ ಮಗನಾದ
ವಿಜಯಕುಮಾರ ಇವನ ಹತ್ತಿರ 70,000/- ರೂಪಾಯಿಗಳನ್ನು ನಮ್ಮ
ಗ್ರಾಮದ, ನಮ್ಮ ಓಣಿಯವನೆಯಾದ
ರಾಜಕುಮಾರ ತಂದೆ ಹಣಮಂತ ನಿಡಗುಂದಿ ಇವರು ತೆಗೆದುಕೊಂಡಿದ್ದು, ಇಲ್ಲಿಯವರೆಗು ಹಣ ವಾಪಸ್ಸು
ನೀಡಿರುವುದಿಲ್ಲ. ಹೀಗಿದ್ದು, ದಿನಾಂಕ 12/01/2019 ರಂದು ಬೆಳಿಗ್ಗೆ ನಾನು, ರಾಜಕುಮಾರ ನಿಡಗುಂದಿ ಇವರಿಗೆ ನನ್ನ ಮಗನ ಹಣ ಕೇಳಲು ಮನೆಗೆ
ಹೋದಾಗ, ರಾಜಕುಮಾರನು ಮನೆಯಲ್ಲಿ
ಇರಲಿಲ್ಲ. ಆಗ ನಾನು ರಾಜಕುಮಾರನ ಹೆಂಡತಿಯಾದ ಸಂಗೀತಾ ಇವಳಿಗೆ, ವಿಷಯವನ್ನು ತಿಳಿಸಿ, ನನ್ನ ಮಗನ ಹಣವನ್ನು ವಾಪಸ್ಸು
ನೀಡುವಂತೆ ನಿನ್ನ ಗಂಡನಿಗೆ ಹೇಳು ಅಂತ ಹೇಳಿ, ನನ್ನ ಮನೆಗೆ ವಾಪಸ್ಸಾಗಿರುತ್ತೇನೆ. ಮುಂದೆ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ
ಕಂಪೌಂಡಿನಲ್ಲಿ ಬಟ್ಟೆ ತೊಳೆಯುತ್ತಿದ್ದೆನು. ನನ್ನ ಮಗನಾದ ಉದಯಕುಮಾರ ಈತನು ನಮ್ಮ ಕಿರಾಣಿ
ಅಂಗಡಿಯ ಮುಂದೆ ಮಲಗಿಕೊಂಡಿದ್ದು, ಅಲ್ಲಿಗೆ ರಾಜಕುಮಾರ ಈತನು ಚೀರಾಡುತ್ತಾ, ನನ್ನ ಮನೆಗೆ ಬಂದು, ನನಗೆ ಏ ರಂಡಿ, ನಿನ್ನ ಮಗನಿಗೆ ನಾನು ಯಾವುದು ರೊಕ್ಕ
ಕೊಡುವುದಿದೆ, ರೊಕ್ಕ ಕೊಡು ಅಂತ ಹೇಳಿ
ನಮ್ಮ ಮನೆಗೆ ಬಂದಿದ್ದಿ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಕೈಯಿಂದ ಬಲಗೈ ರಟ್ಟೆಯ ಮೇಲೆ ಮತ್ತು
ಬೆನ್ನ ಮೇಲೆ ಜೋರಾಗಿ ಹೊಡೆದು, ಕಾಲಿನಿಂದ ನನ್ನ ಎಡಗಾಲ ಮೇಲೆ ಒದ್ದನು. ನಾನು ಚೀರಾಡುವುದನ್ನು ಕೇಳಿ
ಅಲ್ಲಿಯೆ ಮಲಗಿರುವ ನನ್ನ ಮಗ ಉದಯಕುಮಾರ ಈತನು
ಎಚ್ಚರಗೊಂಡು, ಯಾಕೆ ನಮ್ಮ ತಾಯಿಗೆ
ಹೊಡೆಯುತ್ತಿದ್ದಿ ಅಂತ ಕೇಳಿದಕ್ಕೆ, ರಂಡಿ ಮಗನೆ, ನಿನೇನು ಕೇಳುತ್ತಿ, ನಿನಗೂ, ನಿನ್ನ ಅವ್ವನಿಗು ಮತ್ತು ನಿನ್ನ ಎಲ್ಲಾ ಅಣ್ಣ ತಮ್ಮಂದಿರಿಗು
ಹೊಡೆಯುತ್ತೇನೆ ಬೋಸಡಿ ಮಗನೆ ಅಂತ ಬೈಯುತ್ತಾ ಕೈಯಿಂದ, ನನ್ನ ಮಗನ ಕಪಾಳೆ ಹೊಡೆದಾಗ, ನನ್ನ ಮಗನು ನೆಲಕ್ಕೆ ಬಿದ್ದನು. ಆಗ
ರಾಜಕುಮಾರನು ಹಾಗೆ ನನ್ನ ಮಗನಿಗೆ ತನ್ನ ಕಾಲಿನಿಂದ, ಅವನ ಕಾಲುಗಳ ಮೇಲೆ, ಪಕ್ಕೆಲುಬಿಗೆ ಒದ್ದನು. ಇದರಿಂದ
ನನ್ನ ಮಗನ ಮುಖದ ಮೇಲೆ ತರಚಿದ ಗಾಯಗಳು ಆದವು. ಹಾಗೆ ಎಡಗಾಲಿನ ಪಾದದ ಮೇಲೆ ಗುಪ್ತಾಗಾಯ ಮತ್ತು
ಎಡಗೈ ಮೇಲೆ ತರಚಿದ ಗಾಯ, ಎಡ ಪಕ್ಕೆಲುಬಿನ ಮೇಲೆ ಗುಪ್ತಗಾಯಗಳಾಗಿ ನರಳಾಡುತ್ತಾ ಬಿದ್ದನು.
ಅಷ್ಟರಲ್ಲಿ ರಾಜಕುಮಾರನ ಹೆಂಡತಿ ಸಂಗೀತಾ ಇವಳು ಕೂಡಾ ಬಂದು, ಇವರದು ಬಹಳ ಅಗ್ಯಾದ, ಸುಮ್ಮನೆ ನಮ್ಮ ಮನೆಗೆ ಬಂದು ರೊಕ್ಕ
ಕೊಡು ಅಂತ ಕೇಳುತ್ತಿ ಬೋಸಡಿ ಅಂತ ಅನ್ನುತ್ತಾ ನನ್ನ ಕೂದಲು ಹಿಡಿದು ಎಳೆದಾಡಿದಳು. ಆಗ
ರಾಜಕುಮಾರನು ತನ್ನ ಮನೆಯ ಕಡೆಗೆ ಓಡಿ ಹೋಗಿ, ಮನೆಯಲ್ಲಿದ್ದ ಒಂದು ಚೂರಿಯನ್ನು ತೆಗೆದುಕೊಂಡು ಬಂದವನೆ, ಇವತ್ತು, ಈ ರಂಡಿ ಮಗ ಉದ್ಯಾನಿಗೆ ಖಲ್ಲಾಸ್ ಮಾಡಿ ಬಿಡುತ್ತೇನೆ ಅಂತ ಅನ್ನುತ್ತಾ
ಚೂರಿಯಿಂದ ನನ್ನ ಮಗನಿಗೆ ಹೊಡೆಯಲು ಬಂದಾಗ, ನನ್ನ ಮಗ ತಪ್ಪಿಸಿಕೊಂಡನು. ಮತ್ತೆ ಹೊಡೆಯಲು ಬಂದಾಗ, ದಾರಿಯಲ್ಲಿ ಮೋಟರ ಸೈಕಲ್ಲಿನ ಮೇಲೆ
ಹೋಗುತ್ತಿದ್ದ ಯಾರೋ ಅವರ ಹೆಸರು, ವಿಳಾಸ ಗೊತ್ತಿರುವುದಿಲ್ಲ, ಅವರು ಬಂದು ರಾಜಕುಮಾರನಿಗೆ ತಡೆದು
ನಿಲ್ಲಿಸಿದರು. ಇಲ್ಲದಿದ್ದರೆ ರಾಜಕುಮಾರನು ನನ್ನ ಮಗನಿಗೆ ಖಲ್ಲಾಸ್ ಮಾಡಿವೆ ಬಿಡುತ್ತಿದ್ದನು.
ನಾವು ಜಗಳವಾಡುವುದನ್ನು ನೋಡಿ ನಮ್ಮ ಓಣಿಯ ದೇವಪ್ಪ ತಂದೆ ಶರಣಪ್ಪ ಧನ್ನಿ ಮತ್ತು ಸುಭಾಸ ತಂದೆ
ಶಿವಶರಣಪ್ಪ ಜ್ಯೋತಿ ಇವರು ಬಂದು ಜಗಳವನ್ನು ಬಿಡಿಸಿದರು. ಆಗ ರಾಜಕುಮಾರ ಮತ್ತು ಆತನ ಹೆಂಡತಿ
ಸಂಗೀತಾ ಇವರು ಇವತ್ತು ಉಳಿದಿರಿ ಮಕ್ಕಳ್ಯಾ, ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಮತ್ತು ನಿಮ್ಮ
ಮನೆಯವರಿಗೆ ಯಾರಿಗು ಬಿಡುವುದಿಲ್ಲ ಬೋಸಡಿ ಮಕ್ಕಳೆ ಅಂತ ಅನ್ನುತ್ತಾ ಹೋಗಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment