Police Bhavan Kalaburagi

Police Bhavan Kalaburagi

Tuesday, September 29, 2020

BIDAR DISTRICT DAILY CRIME UPDATE 29-09-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-09-2020

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 126/2020 ಕಲಂ 32, 34 ಕೆಇ. ಕಾಯ್ದೆ :-

ದಿನಾಂಕ:28/09/2020 ರಂದು ಮಧ್ಯಾಹ್ನ 1530 ಗಂಟೆಗೆ ಪಿ.ಎಸ್.. ಚಿಟಗುಪ್ಪಾ ರವರು ಠಾಣೆಯಲ್ಲಿದ್ದಾಗ  ಚಿಟಗುಪ್ಪಾದಿಂದ ಮುದ್ನಾಳಕ್ಕೆ ವ್ಯಕ್ತಿಯೊಬ್ಬ ಮೋಟರ ಸೈಕಲ ಮೇಲೆ ಅಕ್ರಮವಾಗಿ ಸರಾಯಿ ಮಾರಾಟ ಮಾಡಲು ಸಾಗಿಸುತ್ತಿರುವ ಮಾಹಿತಿ ಬಂದಿದರಿಂದ ಸಿಬ್ಬಂದಿಯೊಂದಿಗೆ ಮುದ್ನಾಳ ರೋಡ ಮುದ್ನಾಳ ಶಿವಾರದಲ್ಲಿ ಶ್ರೀನಿವಾಸ ಬಿರಾದಾರ ರವರ ಹೊಲದ ಹತ್ತಿರ ರಸ್ತೆ ಕೆಳಗೆ ಜೀಪನ್ನು ಗಿಡಮರಗಳ ಮರೆಯಲ್ಲಿ ನಿಲ್ಲಿಸಿ, ನಾವು ಜೀಪಿನಿಂದ ಕೆಳಗಿಳಿದು ರಸ್ತೆ ಬದಿಯ ಪೊದೆಗಳ ಮರೆಯಲ್ಲಿ ನಿಂತು ನೋಡಲು 1630 ಗಂಟೆಗೆ ಚಿಟಗುಪ್ಪಾ ಕಡೆಯಿಂದ ಬಂದ ಒಂದು ಮೋಟರ ಸೈಕಲ ಮೇಲೆ ಒಬ್ಬ ವ್ಯಕ್ತಿ ತನ್ನ ಮೋಟರ ಸೈಕಲ ಮೇಲೆ ಎರಡು ಕಾಟನಗಳನ್ನು ಸಾಗಿಸುತ್ತಿದ್ದು, ಅವನನ್ನು ತಡೆದು ಆತನ ಹೆಸರು ವಿಚಾರಿಸಲು ತನ್ನ ಹೆಸರು ಧನರಾಜ ತಂದೆ ಹುಸೇನಪ್ಪಾ ದುಕಾನದಾರ ವಯ: 27 ವರ್ಷ, ಜಾತಿ: ಎಸ್.ಸಿ, ಸಾ/ ಮಾಡಗೂಳ ತಾ/ ಚಿಟಗುಪ್ಪಾ ಅಂತಾ ತಿಳಿಸಿದ್ದು, ಮೋಟರ ಸೈಕಲ ನಂ: KA02HE8938 ಇದ್ದು ಮೋಟರ ಸೈಕಲ ಮೇಲೆ ಸಾಗಿಸುತ್ತಿದ್ದ ಕಾಟನಗಳನ್ನು ಪರಿಶೀಲಸಿ ನೋಡಲು ಒಂದರಲ್ಲಿ US wisky 90 ml ವುಳ್ಳ 96 ಸರಾಯಿ ಪ್ಲಾಸ್ಟಿಕ ಬಾಟಲಗಳಿದ್ದು ಅದರ ಮೇಲೆ 6990705121 ರಿಂದ 6990705216 ವರೆಗೆ ಕ್ರಮಾಂಕಗಳಿದ್ದು ಒಂದರ ಅಂ.ಕಿ. ರೂ.35.13/- ಒಟ್ಟು 96 ಸರಾಯಿ ಪ್ಲಾಸ್ಟಿಕ ಬಾಟಲಗಳ ಅಂ.ಕಿ. ರೂ. 3372/- ಇದ್ದು, ಇನ್ನೊಂದು ಕಾಟನ ಪರಿಶೀಲಿಸಲು ಇದರಲ್ಲಿ Old Tavern wisky 180 ml ವುಳ್ಳ 48 ಸರಾಯಿ ಪೌಚಗಳಿದ್ದು ಅದರ ಮೇಲೆ 0288117313 ರಿಂದ 288117360 ರವರೆಗೆ ಕ್ರಮಾಂಕಗಳಿದ್ದು ಒಂದರ ಅಂ.ಕಿ. ರೂ.86.75/- ಒಟ್ಟು 48 ಸರಾಯಿ ಪೌಚಗಳ ಅಂ.ಕಿ. ರೂ.4164/- ಇದ್ದು, ಹೀಗೆ ಒಟ್ಟು 17.28 ಲೀಟರ ಸರಾಯಿ ಅಂ.ಕಿ. ರೂ. 7536/- ಬೆಲೆಬಾಳುವುದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 132/2020 ಕಲಂ 78(3) ಕೆಪಿ ಕಾಯ್ದೆ :-

 ದಿನಾಂಕ 28/09/2020ರಂದು 1600 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿದ್ದಾಗ    ಖಚೀತ ಬಾತ್ಮಿ ಬಂದಿದ್ದೇನೆಂದರೆ,  ತಳವಾಡ (ಕೆ ) ಗ್ರಾಮದ ಸರಕಾರಿ ಹಿರಿಯ ಪ್ರಾಥಮೀಕ ಶಾಲೆಯ ಹತ್ತಿರ  ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ 1 ರೂಪಾಯಿಗೆ 90 ರೂಪಾಯ ಕೊಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಮಟಕಾ ಚೀಟಿ ಬರೆದುಕೊಳ್ಳುತಿದ್ದಾರೆ ಅಂತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ತಳವಾಡ (ಕೆ )  ಗ್ರಾಮದ ರೇಲ್ವೆ ಗೇಟ ಹತ್ತಿರ  ಸ್ವಲ್ಪ ದೂರದಲ್ಲಿ 1630 ಗಂಟೆಗೆ ತಲುಪಿ ಜೀಪ ಮರೆಯಾಗಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನೋಡಲು ಇಬ್ಬರು ವ್ಯಕ್ತಿಗಳು  1 ರೂಪಾಯಿ 90 ರೂಪಾಯಿ ಕೊಡುತ್ತೇವೆ ಅಂತಾ ಜೋರಾಗಿ ಕೂಗುತ್ತಾ ಜನರಿಂದ ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು 1645 ಗಂಟೆಗೆ ಪಂಚರ ಸಮಕ್ಷಮ  ದಾಳಿ ಮಾಡಿದಾಗ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಗಳಿಗೆ ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ಸಂಜೀವಕುಮಾರ ತಂದೆ ಮಾರುತಿ ಮೇತ್ರೆ ವಯ 40 ವರ್ಷ ಜಾ; ಕ್ರೀಶ್ಚನ  ; ಕೂಲಿ ಕೆಲಸ ಸಾ; ತಳವಾಡ (ಕೆ),  2)  ಸತೀಷ ತಂದೆ ಬಾಬುರಾವ ಸೈದುಮ  ವಯ 30 ವರ್ಷ ಜಾ; ಎಸ. ಸಿ. ಹೊಲಿಯಾ ಉ; ಕೂಲಿ ಕೆಲಸ ಸಾ; ತಳವಾಡ (ಕೆ ) ತಾ; ಭಾಲ್ಕಿ  ಅಂತಾ ತಿಳಿಸಿದರು . ಸಂಜೀನಕುಮಾರ  ಇತನ ಅಂಗ ಝಡ್ತಿ ಮಾಡಲು ಇತನ ಹತ್ತಿರ 2900/- ರೂಪಾಯಿ ಹಾಗೂ ನಾಲ್ಕು  ಬಿಳಿ ಹಾಳೆಯಲ್ಲಿ ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ಸಿಕ್ಕಿರುತ್ತದೆ.  ಮತ್ತು ಸತೀಷ ತಂದೆ ಬಾಬುರಾವ ಈತನ ಅಂಗ ಝಡ್ತಿ ಮಾಡಲು ಆತನ ಹತ್ತಿರ ನಗದು ಹಣ 500/- ರೂ ಹಾಗೂ ನಾಲ್ಕು ಬಿಳಿ ಹಾಳೆಯಲ್ಲಿ ಮಟಕಾ ನಂಬರ ಬರೆದ ಚೀಟಿಗಳು ಹಾಗೂ ಒಂದು ಬಾಲ ಪೆನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಹಳ್ಳಿಖೇಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 118/2020 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ-28/09/2020 ರಂದು ಮುಂಜಾನೆ 1130 ಗಂಟೆಗೆ  ನಿಂಗಪ್ಪಾ ಮಣ್ಣೂರ ಪಿ.ಎಸ್.ಐ(ಕಾಸು) ಠಾಣೆಯಲ್ಲಿದ್ದಾಗ ದುಬಲಗುಂಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ದುಬಲಗುಂಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ಜೀಪ ನಿಲ್ಲಿಸಿ ನಾವೆಲ್ಲರು ಜೀಪನಿಂದ ಇಳಿದು ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನೋಡಿ ಖಚಿತಪಡಿಸಿಕೊಂಡು ಸದರಿಯವನ ಮೇಲೆ ದಾಳಿ ಮಾಡಲು ಮಟಕಾ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಪರಶುರಾಮ ತಂದೆ ವಿಠಲ ನಂದಿ ವಯ: 44 ವರ್ಷ ಜಾ: ಎಸ್.ಸಿ ಮಾದಿಗ ಉ: ನಿರುದ್ಯೋಗಿ ಸಾ: ದುಬಲಗುಂಡಿ ಅಂತ ತಿಳಿಸಿದನು. ನಂತರ ಪಿ.ಎಸ್.ಐ ಸಾಹೇಬರು ಸದರಿ ವ್ಯಕ್ತಿಗೆ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಟ್ಟಿರುವ ಮಟಕಾ ಚೀಟಿ ಹಾಗೂ ಹಣವನ್ನು ಯಾರಿಗೆ ಕೊಡುತ್ತಿಯಾ ಅಂತ ವಿಚಾರಿಸಲು ಅವನು ತಿಳಿಸಿದ್ದೆನೆಂದ್ದರೆ, ನಾನು ಎರಡು ಕಾಲಿನಿಂದ ಅಂಗವಿಕಲನಿದ್ದು, ನನಗೆ ಓಡಾಡಲು ಬರದ ಕಾರಣ ನಾನು ಕುಳಿತಲ್ಲಿಯೆ ಕುಳಿತುಕೊಂಡು ಮಟಕಾ ಚೀಟಿ ಬರೆದು ಹಣ ಪಡೆದುಕೊಂಡು ನಂತರ ಮಟಕಾ ಚೀಟಿ ಮತ್ತು ಹಣ ಬಸವರಾಜ ತಂದೆ ತಿಪ್ಪಣ್ಣಾ ಸುಣಗಾರ ಇವನಿಗೆ ಕೊಡುತ್ತೇನೆ ಇವನು ಬಂದು ತೆಗೆದುಕೊಂಡು ಹೋಗುತ್ತಾನೆ ಅಂತ ತಿಳಿಸಿರುತ್ತಾನೆ.  ಅವನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ ಒಟ್ಟು 900/- ರೂ ನಗದು ಹಣ, 1 ಮಟಕಾ ಚೀಟಿಗಳು ಹಾಗೂ 1 ಪೆನ ಇದ್ದು, ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 89/2020 ಕಲಂ 379 ಐಪಿಸಿ :-      

 ದಿನಾಂಕ 28/09/2020 ರಂದು 20:30 ಗಂಟೆಗೆ ಠಾಣೆಯಲ್ಲಿ  ಫಿಯರ್ಾದಿದಾರರಾದ ಶ್ರೀ ಅಬ್ದುಲ ವಾಜೀದ ಅಲಿ ತಂದೆ ಅಬ್ದುಲ ಗಫಾರ ವಯ: 32 ವರ್ಷ ಜಾತಿ: ಮುಸ್ಲಿಂ ಉ: ಬಟ್ಟೆ ಅಂಗಡಿ ವ್ಯಾಪಾರ ಸಾ// ಮನೆ ನಂ: 2-4-7/3 ಬಾವಚರ್ಿಗಲ್ಲಿ ಬೀದರ ರವರು ನೀಡಿದ ದೂರಿನ ಸಾರಂಶವೆನೆಂದರೆ ದಿನಾಂಕ 21/03/2020 ರಂದು ರಾತ್ರಿ 21:00 ಗಂಟೆಗೆ ತನ್ನ ಮೋಟಾರ ಸೈಕಲ ಮನೆಯ ಮುಂದೆ ನಿಲ್ಲಿಸಿ ಮನೆಯ ಒಳಗಡೆ ಹೋಗಿ ಊಟಮಾಡಿಕೊಂಡು ಮಲಗಿಕೊಂಡಿದ್ದು ನಂತರ ದಿನಾಂಕ 22/03/2020 ರಂದು ನಸುಕಿನ ಜಾವ 05:00 ಗಂಟೆಯ ಸುಮಾರಿಗೆ ಮೂತ್ರ ವಿಸರ್ಜನೆ ಕುರಿತು ಮನೆಯ ಹೊರಗಡೆ ಹೋಗಿ ನೋಡಲು   ಮನೆಯ ಮುಂದೆ ನಿಲ್ಲಿಸಿದ ನನ್ನ ದ್ವಿಚಕ್ರ ವಾಹನ ಇದ್ದಿರುವುದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಯಾರೋ ಅಪರಿಚಿತ ಕಳ್ಳರು   ಮನೆಯ ಮುಂದೆ ನಿಲ್ಲಿಸಿದ ನನ್ನ ಹೊಂಡಾ ಸಿ.ಬಿ ಶೈನ್ ಮೋಟರ ಸೈಕಲ್ ನಂ ಕೆಎ-38-ಎಸ್-8931 ಅಂ.ಕಿ. 35,000/-ರೂಗಳದ್ದು ವಾಹನವನ್ನು ಯಾರೊ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂಖ್ಯೆ 117/2020  ಕಲಂ. 32, 34 ಕೆ,ಈ ಆಕ್ಟ್  :-

ದಿನಾಂಕ : 28-09-2020 ರಂದು ಮುಂಜಾನೆ 1100 ಗಂಟೆಗೆ   ಶಿವಕುಮಾರ ಪಿ.ಎಸ್.ಐ(ಅವಿ) ಹಳ್ಳಿಖೇಡ(ಬಿ) ಪೊಲೀಸ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ವಡ್ಡನಕೇರಾ ಗ್ರಾಮದ ಕ್ರಾಸ್ ರಾಯಣ್ಣಾ ಟೀಪಿನ್ ಸೆಂಟರ್ ಹೊಟೇಲ್ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ವಡ್ಡನಕೇರಾ ಗ್ರಾಮದ ಕ್ರಾಸ್ ರಾಯಣ್ಣಾ ಟೀಪಿನ್ ಸೆಂಟರ್ ಹೊಟೇಲ್ ಹತ್ತಿರ ಮದ್ಯಾಹ್ನ 1200 ಗಂಟೆಗೆ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಹೋಗಿ ನೋಡಿದಾಗ ಒಬ್ಬ ವ್ಯಕ್ತಿ ರಾಯಣ್ಣಾ ಟಿಪಿನ್ ಸೇಂಟರ್ ಹೊಟೇಲ್ ಪಕ್ಕದಲ್ಲಿ ಒಂದು ಬಿಳಿ ಬಣ್ಣದ ಚೀಲ ಇಟ್ಟುಕೊಂಡು ನಿಂತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು   ಸದರಿ ವ್ಯಕ್ತಿಯ ಮೇಲೆ 1215 ಗಂಟೆಗೆ ದಾಳಿ ಮಾಡಿ  ಸದರಿ ವ್ಯಕ್ತಿಯ ಹೆಸರು ವಿಚಾರಿಸಲು ಅವನು ತನ್ನ ಹೆಸರು ವೀರಪ್ಪಾ ತಂದೆ ರಾಮಣ್ಣಾ ಹೂಗೊಂಡ ವಯ: 32 ವರ್ಷ ಜಾತಿ: ಎಸ್.ಟಿ ಗೊಂಡ ಉ: ಹೊಟೇಲ್ ಕೆಲಸ ಸಾ: ವಡ್ಡನಕೇರಾ ಅಂತ ತಿಳಿಸಿದನು.  ಸದರಿ ವ್ಯಕ್ತಿಯ ಹತ್ತಿರ ಇದ್ದ ಚೀಲ ತೆರೆದು ನೋಡಲು ಅದರಲ್ಲಿ 1] 180 ಎಮ್.ಎಲ್ ಉಳ್ಳ ಒಟ್ಟು 16 ಓಟಿ ವಿಸ್ಕಿ ಸರಾಯಿ ತುಂಬಿದ ಪೋಚುಗಳಿದ್ದು, ಒಂದು ಪೋಚಿನ ಅ.ಕಿ 86.75/- ರೂ ಇರುತ್ತದೆ, ಒಟ್ಟು 16 ಪೋಚುಗಳ ಅ.ಕಿ 1,388/- ರೂ ಇರುತ್ತದೆ. ಮತ್ತು  2] 90 ಎಮ್.ಎಲ್ ಉಳ್ಳ ಒಟ್ಟು 20 ಯು.ಎಸ್ ವಿಸ್ಕಿ ಸರಾಯಿ ತುಂಬಿದ ಪ್ಲಾಸ್ಟೀಕ್ ಬಾಟಲಗಳಿದ್ದು, ಒಂದು ಬಾಟಲಿನ ಅ.ಕಿ 35.13/- ರೂ ಇರುತ್ತದೆ, ಒಟ್ಟು 20 ಬಾಟಲಗಳ ಅ.ಕಿ 702.6/- ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

 

No comments: