Police Bhavan Kalaburagi

Police Bhavan Kalaburagi

Thursday, October 1, 2020

BIDAR DISTRICT DAILY CRIME UPDATE 01-10-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-10-2020

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ನಂ. 21/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಸಲ್ಮಾಬಾನು ಂಡ ಮಹ್ಮದ ಇಫ್ತೇಕಾರ ವಯ: 35 ವರ್ಷ, ಸಾ: ಬಿದ್ರಿ ಕಾಲೋನಿ ಬೀದರ ರವರ ಗಂಡನಾದ ಮಹ್ಮದ ಇಫ್ತೇಕಾರ ತಂದೆ ಅಬ್ದುಲ್ ಸತ್ತಾರ ವಯ: 40 ವರ್ಷ, ಸಾ: ಬಿದ್ರಿ ಕಾಲೋನಿ ಬೀದರ ರವರಿಗೆ ಫೀಡ್ಸ ರೋಗ ಇದ್ದು, ಹೀಗಿರುವಾಗ ದಿನಾಂಕ 28-09-2020 ರಂದು ರೋಗ ಹೆಚ್ಚಾಗಿದ್ದರಿಂದ ಗಂಡ ರೋಗ ಬೇಗ ವಾಸಿಯಾಗಲಿ ಅಂತ ಹೆಚ್ಚಿನ ಸಂಖ್ಯೆಯಲ್ಲಿ ಮಾತ್ರೆಗಳು ಒಮ್ಮೆಲೆ ಸೇವಿಸಿದ್ದರಿಂದ ಫೀಡ್ಸ್ ಬಂದು ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದ ಕಾರಣ ಕೂಡಲೆ ಅವರಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 2909-2020 ರಂದು ಆಸ್ಪತ್ರೆಯಲ್ಲಿ ಮ್ರತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 30-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 63/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 30-09-2020 ರಂದು ಯರನಳ್ಳಿ ಗ್ರಾಮದ ಸಂತೋಷ ಪರ್ಬುನೋರ ಮತ್ತು ದಶರಥ ಪರ್ಬುನೋರ ರವರು ಸಂತೋಷ ಪರ್ಬುನೋರ ರವರ ಹೋಟಲ್ ಅಂಗಡಿಯಲ್ಲಿ ಸರಾಯಿ ಟ್ಟುಕೊಂಡು ಮಾರಾಟ ಮಾಡುತ್ತಿದಾರೆಂದು ಶಿವರಾಜ ಪಾಟೀಲ್ ಪಿಎಸ್ಐ (ಕಾ&ಸು) ಜನವಾಡ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಯರನಳ್ಳಿ ಗ್ರಾಮಕ್ಕೆ ಹೋಗಿ ಆರೋಪಿತರಾದ 1) ಸಂತೋಷ ತಂದೆ ಬೀರಪ್ಪ ಪರ್ಬುನೋರ ವಯ: 29 ವರ್ಷ, ಜಾತಿ: ಎಸ್.ಟಿ (ಗೊಂಡ), 2) ದಶರಥ ತಂದೆ ಮಾಣಿಕ ಪರ್ಬುನೋರ ವಯ: 30 ವರ್ಷ, ಜಾತಿ: ಎಸ್.ಟಿ (ಗೊಂಡ) ಸಾ: ಯರನಳ್ಳಿ ಗ್ರಾಮ ಇವರ ಮೇಲೆ ದಾಳಿ ಮಾಡಿ ಅವರಿಗೆ ದಸ್ತಗಿರಿ ಮಾಡಿ, ಅವರಿಂದ 1) 90 ಎಮ್.ಎಲ್ ಒಟ್ಟು 40 ಓರಿಜಿನಲ್ ಚಾಯ್ಸ್ಡೀಲಕ್ಸ್ವಿಸ್ಕೀಯ ಸರಾಯಿ ತುಂಬಿದ ಫುಟ್ಟದ ಪಾಕೇಟಗಳು ಅ.ಕಿ 1405.2 ರೂ., 2) 180 ಎಮ್.ಎಲ್ ಒಟ್ಟು 7 ಒಲ್ಡ್ಟಾವರ್ನ ಸರಾಯಿ ತುಂಬಿದ ಬಾಟಲಗಳು ಅ.ಕಿ 518.91 ರೂ., 3) 180 ಎಮ್.ಎಲ್ ಒಟ್ಟು 5 ಮ್ಯಾಕಡಾಲ್ ಸರಾಯಿ ತುಂಬಿದ ಬಾಟಲಗಳು ಅ.ಕಿ 991.15 ರೂ. ಹಾಗೂ ಆರೋಪಿತರ ಹತ್ತಿರ ನಗದು ಹಣ ಒಟ್ಟು 2830/- ರೂ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 65/2020, ಕಲಂ. 323, 498(), 504, 506 ಜೊತೆ 34 ಐಪಿಸಿ :-

ದಿನಾಂಕ 30-09-2020 ರಂದು ಫಿರ್ಯಾದಿ ಸುಜಾತಾ ಗಂಡ ಪ್ರಭು ಸೊನಿ ವಯ: 32 ವರ್ಷ ಜಾತಿ: ಎಸ್.ಸಿ ಹೊಲಿಯಾ ಸಾ: ಬಾವಗಿ ಗ್ರಾಮ, ಸದ್ಯ: ಬೀದರ ರವರಿಗೆ ಬಾವಗಿ ಗ್ರಾಮದ ಪ್ರಭು ತಂದೆ ಚಂದ್ರಪ್ಪಾ ಸೋನಿ ವಯ: 48 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಬಾವಗಿ ಗ್ರಾಮ ಎಂಬುವವರ ಜೊತೆ 2012 ರಲ್ಲಿ ಮ್ಮ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ಗಂಡ ಫಿರ್ಯಾದಿಯೊಂದಿಗೆ 2 ವರ್ಷಗಳವರೆಗೆ ಮಾತ್ರ ಚೆನ್ನಾಗಿದ್ದು, ನಂತರ ನಿನಗೆ ಅಡುಗೆ ಮಾಡಲು ಬರುವುದಿಲ್ಲಾ, ಎರಡು ವರ್ಷವಾದರು ಮಕ್ಕಳಾಗಿಲ್ಲ, ಗೊಡ್ಡು ಇದ್ದಿಯಾ, ನೀನು ನಮ್ಮ ಮನೆಗೆ ಬಂದಾಗಿನಿಂದ ಮನೆಗೆ ಶನಿ ಬಡಿದ ಹಾಗೆ ಆಗಿದೆ ನೀನು ಮನೆಯಿಂದ ತೊಲಗು ನಾನು ಇನ್ನೊಂದು ಮದುವೆ ಆಗುತ್ತೇನೆಂದು ಫಿರ್ಯಾದಿಗೆ ದೈಹಿಕ ಮತ್ತು ಮಾನಸಿಕ ಕಿರುಕೊಳ ಕೊಟ್ಟು ಫಿರ್ಯಾದಿಗೆ ಮನೆಯಿಂದ ಹೊರಗೆ ಹಾಕಿರುತ್ತಾರೆ, ಅತ್ತೆ ದ್ರೌಪತಿ ಗಂಡ ಚಂದ್ರಪ್ಪಾ ಸೊನಿ ವಯ: 68 ವರ್ಷ ಗ್ರಾಮ ಬಾವಗಿ ಹಾಗೂ ಗಂಡನ ತಂಗಿಯಂದಿರಾದ 1) ಚನ್ನಮ್ಮ ತಂದೆ ಚಂದ್ರಪ್ಪಾ ಸೊನಿ ವಯ: 27 ವರ್ಷ ಹಾಗೂ 2) ಶಶಿಕಲಾ ತಂದೆ ಚಂದ್ರಪ್ಪಾ ಸೊನಿ ವಯ: 25 ವರ್ಷ ಇವರೆಲ್ಲರೂ ಸೇರಿ ಇವಳು ಗೊಡ್ಡು ಇದ್ದಾಳೆ ಇವಳು ಮನೆಯಲ್ಲಿರಲು ಲಾಯಕ ಇಲ್ಲಾ, ನಮ್ಮ ಅಣ್ಣನಿಗೆ ಇನ್ನೊಂದು ಮದುವೆ ಮಾಡುತ್ತೇವೆ, ಇವಳಿಗೆ ಮನೆಯಿಂದ ಹೊರಗೆ ಹಾಕಿ ಅಂತ ಬೈದು ಎಲ್ಲರು ಸೇರಿ ಮನೆಯಿಂದ ಹೊರಗೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ, ನಂತರ ಫಿರ್ಯದಿಯು ತನ್ನ ತವರು ಮನೆಗೆ ಬಂದಾಗ ಫಿರ್ಯಾದಿಯ ತಂದೆ-ತಾಯಿಯವರು ಗಂಡ ಮತ್ತು ಅವರ ಕುಟುಂಬದವರಿಗೆ ಕರೆಯಿಸಿ ನೌಬಾದಿನಲ್ಲಿ ತಿಳುವಳಿಕೆ ಹೇಳಿದಾಗ ಗಂಡ ಪ್ರಭು ಇವರು ನನಗೆ ವಾಟರ್ ಪ್ಲಾಂಟ್ ಹಾಕುವುದು ಇದೆ ಅದಕ್ಕೆ 5 ಲಕ್ಷ ರೂಪಾಯಿ ಕೊಟ್ಟರೆ ನಿಮ್ಮ ಮಗಳಿಗೆ ಇಟ್ಟುಕೊಳ್ಳುತ್ತೇನೆ ಇಲ್ಲಾಂದರೆ ಗೊಡ್ಡು ಹೆಂಗಸಿಗೆ ಇಟ್ಟುಕೊಳ್ಳಲ್ಲಾ ಅಂತ ಅವಾಚ್ಯ ಶಬ್ದಗಳಿಂದ ಬೈದಾಗ ಫಿರ್ಯಾದಿಯುವರ ತಂದೆ ತಾಯಿಯವರು ಬೇರೆಯವರ ಹತ್ತಿರ ಸಾಲ ಮಾಡಿ 4 ಲಕ್ಷ 50 ಸಾವಿರ ರೂಪಾಯಿ ತಂದು ಗಂಡನ ಕೈಗೆ ಕೊಟ್ಟಿರುತ್ತಾರೆ, ನಂತರ ಫಿರ್ಯಾದಿಗೆ ಮನಗೆ ಕರೆದಕೊಂಡು ಹೊಗಿ ಪುನಃ ಆರೋಪಿತರಾದ ಗಂಡ ಮತ್ತು ಅವರ ಕುಟುಂಬದವರು ತಮ್ಮ ಹಳೆಯ ಚಾಳಿ ಮುಂದುವರೆಸಿರುತ್ತಾರೆ, ಇಗ ಸದ್ಯ ಫಿರ್ಯಾದಿಯವರು ತನ್ನ ತವರು ಮನೆಯಲ್ಲಿಯೇ ವಾಸವಾಗಿದ್ದು, ಗಂಡ ಆಗಾಗ ಮನೆಗೆ ಬಂದು ಎಷ್ಟು ದಿವಸ ಇರುತ್ತಿ ಇನ್ನೂ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಇಲ್ಲಾ ಅಂದರೆ ಇಟ್ಟುಕೊಳ್ಳುವುದಿಲ್ಲಾ ಅಂತ ಹೇಳಿ ಜೀವ ಬೇದರಿಕೆ ಹಾಕಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 65/2020, ಕಲಂ. 309 ಐಪಿಸಿ :-

ದಿನಾಂಕ 29-09-2020 ರಂದು 2130 ಗಂಟೆಯ ಸುಮಾರಿಗೆ ಬೀದರ ನಗರದ ಡಿ.ಸಿ.ಸಿ.ಬ್ಯಾಂಕ ಹತ್ತಿರ ಆರೋಪಿ ಪ್ರದೀಪ @ ಪಪ್ಯಾ ತಂದೆ ಮಲ್ಲಿಕಾರ್ಜುನ ಭಾವಿದೊಡ್ಡಿ ವಯ: 21 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಸಂಗೋಳಗಿ ಗ್ರಾಮ, ತಾ: & ಜಿ: ಬೀದರ, ಸದ್ಯ: ದೀನ ದಯಾಳ ನಗರ ಬೀದರತನು ಸರಾಯಿ ಕುಡಿದ ಅಮಲಿನಲ್ಲಿ ತನ್ನ ತಾನೆ ತನ್ನ ಹತ್ತಿರ ಇದ್ದ ಚಾಕುವಿನಿಂದ ತನ್ನ ಹೊಟ್ಟೆಯಲ್ಲಿ ಹೊಡೆದುಕೊಂಡಿರುವುದರಿಂದ ರಕ್ತಗಾಯವಾಗಿರುತ್ತದೆ ಸದರಿ ಆರೋಪಿತನು ಚಾಕುವಿನಿಂದ ಹೊಡೆದುಕೊಂಡು ಆತ್ಮಹತ್ಯ ಮಾಡಿಕೊಳ್ಳುವ ಪ್ರಯತ್ನ ಮಾಡಿರುತ್ತಾನೆಂದು ಫಿರ್ಯಾದಿ ಸುಭದ್ರಾ ಗಂಡ ಮಲ್ಲಿಕಾರ್ಜುನ ಭಾವಿದೊಡ್ಡಿ ವಯ: 50 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಸಂಗೊಳಗಿ ಗ್ರಾಮ, ಸದ್ಯ ಹೊರ ಶಾಹಗಂಜ ಬೀದರ ರವರ ಹೇಳಿಕೆ ಸಾರಾಂಶದ ಮೇರೆಗೆ ಸದರಿ ಆರೋಪಿತನ ವಿರುದ್ಧ ದಿನಾಂಕ 30-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 71/2020, ಕಲಂ. 279, 337, 338 :-

ದಿನಾಂಕ 30-09-2020 ರಂದು ಫಿರ್ಯಾದಿ ಬಾಲಾಜಿ ತಂದೆ ರಾಮಣ್ಣಾ ಕೊರೆ ಸಾ: ಹಂದಿಕೇರಾ ರವರು ತಮ್ಮೂರ ಶಿವಾಜಿ ತಂದೆ ಶಾಮರಾವ ಗಡ್ಡೆ ಇಬ್ಬರೂ ಕೂಡಿಕೊಂಡು ತಮ್ಮೂರದಿಂದ ಬಸವಕಲ್ಯಾಣಕ್ಕೆ ಹೋಗುವ ಪ್ರಯುಕ್ತ ತಮ್ಮೂರ ಬಸ್ ನಿಲ್ದಾಣದ ಹತ್ತಿರ ಬಂದು ಬಸ್ಸಿನ ದಾರಿ ಕಾಯುತ್ತಾ ನಿಂತಿರುವಾಗ ತಮ್ಮೂರ ಅರ್ಜುನ ತಂದೆ ಗುಂಡಪ್ಪಾ ಲಗೊಂಡಾ ಇವನು ತನ್ನ ಲಾರಿ ಸಂ. ಎಮ್.ಹೆಚ್-11/ಎ.ಎಲ್-2414 ನೇದನ್ನು ಚಲಾಯಿಸಿಕೊಂಡು ಬಸ್ ನಿಲ್ದಾಣದ ಹತ್ತಿರ ಬಂದು ನಾನು ಬಸವಕಲ್ಯಾಣಕ್ಕೆ ಹೋಗುತ್ತಿದ್ದೇನೆ ನೀವು ಬನ್ನಿ ಅಂತ ಹೇಳಿದ್ದರಿಂದ ಫಿರ್ಯಾದಿ ಮತ್ತು ಶಿವಾಜಿ ಇಬ್ಬರೂ ಅರ್ಜುನ ಇವನು ಚಲಾಯಿಸುತ್ತಿದ್ದ ಲಾರಿಯಲ್ಲಿ ಕುಳಿತುಕೊಂಡು ಹಂದಿಕೇರಾದಿಂದ ಬಸವಕಲ್ಯಾಣಕ್ಕೆ ಹೋಗುತ್ತಿರುವಾಗ ಅರ್ಜುನ ಇವನು ತನ್ನ ಲಾರಿಯನ್ನು ರೋಡಿನ ಮೇಲೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಟಾಪ್ ಗೇರಿನಲ್ಲಿ ಚಲಾಯಿಸಿ ಘೋಡವಾಡಿ - ಹಂದಿಕೇರಾ ರೋಡಿನ ಮೇಲೆ ಹುಣಸನಾಳ ಶಿವಾರದ ಬಾಬುರಾವ ತಂದೆ ಶ್ರೀಪತರಾವ ರವರ ಹೊಲದ ಹತ್ತಿರ ಹೋಗಿ ರೋಡಿನ ಬದಿಯಲ್ಲಿ ತನ್ನ ಲಾರಿಯನ್ನು ಪಲ್ಟಿ ಮಾಡಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಲಾರಿಯಲ್ಲಿ ಕುಳಿತ ಫಿರ್ಯಾದಿಯ ಹಣೆಗೆ, ಎಡಗೈ ಮೊಣಕೈ ಕೆಳಗೆ ಮತ್ತು ಹೊಟ್ಟೆಯ ಬಲಗಡೆಗೆ ರಕ್ತಗಾಯ ಹಾಗೂ ಎದೆಗೆ, ಹೊಟ್ಟೆಗೆ ತೀವ್ರ ಗುಪ್ತಗಾಯಗಳು ಆಗಿರುತ್ತವೆ, ಶಿವಾಜಿ ಇವನಿಗೆ ನೋಡಲಾಗಿ ಎಡಗೈ ಮುಂಗೈಗೆ ರಕ್ತಗಾಯ ಮತ್ತು ಎಡಗಾಲ ಮೊಣಕಾಲ ಕೆಳಗೆ ತೀವ್ರ ಗುಪ್ತಗಾಯ ಆಗಿರುತ್ತದೆ, ಆರೋಪಿ ಅರ್ಜುನ ಇವನಿಗೆ ನೋಡಲಾಗಿ ಬಲಗಡೆ ಭಕಳಿಗೆ, ಬಲಗಡೆ ಕಿವಿಗೆ ಮತ್ತು ಬಲಗೈ ಮಧ್ಯದ ಬೆರಳಿಗೆ ರಕ್ತಗಾಯಗಳು ಆಗಿರುತ್ತವೆ, ಲಾರಿ ಸಂಪೂರ್ಣವಾಗಿ ಡ್ಯಾಮೇಜ್ ಆಗಿರುತ್ತದೆ, ನಂತರ ಫಿರ್ಯಾದಿಯು ಘಟನೆಯ ಬಗ್ಗೆ ತನ್ನ ತಮ್ಮ ವಿಜಯಕುಮಾರ ಕೊರೆ ಇವನಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರಿಂದ ವಿಜಯಕುಮಾರ ಇವನು ಘಟನಾ ಸ್ಥಳಕ್ಕೆ ಬಂದು ಗಾಯಗೊಂಡ ಮೂವರಿಗೂ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 123/2020, ಕಲಂ. 457, 380 ಐಪಿಸಿ :-

ದಿನಾಂಕ 27-09-2020 ರಂದು ಸುಭಾಷರಾವ ತಂದೆ ಗೋವಿಂದರಾವ ಕುಲಕರ್ಣಿ ವಯ: 72 ವರ್ಷ, ಜಾತಿ: ಬ್ರಾಹ್ಮಣ, ಸಾ: ದೇಶಪಾಂಡೆ ಗಲ್ಲಿ ಬಸವಕಲ್ಯಾಣ ರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ತನ್ನ ಹೆಂಡತಿಯ ಜೊತೆಯಲ್ಲಿ ಬೀದರಗೆ ಹೋದಾಗ ದಿನಾಂಕ 28-09-2020 ರಂದು 2300 ಗಂಟೆಯಿಂದ ದಿನಾಂಕ 30-09-2020 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿಯಾದಿಯವರ ಮನೆಗೆ ಹಾಕಿದ ಬೀಗವನ್ನು ಮುರಿದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಅಲಮಾರಿಯಲ್ಲಿದ್ದ ಬಂಗಾರದ 4 ತೋಲೆಯ ಎರಡು ಬಳೆಗಳು ಅ.ಕಿ 1,60,000/- ರೂ., ಬಂಗಾರದ ಒಂದು ತೊಲೆಯ ಲಾಕೇಟ್(ಚೈನ್) ಅ.ಕಿ 40,000/- ರೂ., ಬಂಗಾರ ಎರಡು ಉಂಗರುಗಳು ಪ್ರತಿ ಒಂದು 3 ಗ್ರಾಂ ತೂಕವುಳ್ಳದ್ದು ಅ.ಕಿ 24,000/- ರೂ., 3 ಗ್ರಾಂ ಬಂಗಾರದ ತಾಳಿ ಅ.ಕಿ 12,000/- ರೂ ಮತ್ತು ಒಂದು ಬೆಳ್ಳಿಯ ದೇವಿಯ ಮೂರ್ತಿ 500/- ರೂ. ಹಾಗು ನಗದು ಹಣ 12,000/- ರೂ ಹೀಗೆ ಒಟ್ಟು 2,48,500/- ರೂ ಬೆಲೆವುಳ್ಳ ಬಂಗಾರ ಮತ್ತು ಬೆಳ್ಳಿ ಹಾಗು ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 30-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 124/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 30-09-2020 ರಂದು ಬಸವಕಲ್ಯಾಣ ನಗರದ ಸಸ್ತಾಪೂರ ಬಂಗ್ಲಾ ಬ್ರೀಜ್ಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಎಂ. ಅಲೀಮ್ ಪಿ.ಎಸ. [.ವಿ] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಸಸ್ತಾಪೂರ ಬಂಗ್ಲಾ ಬ್ರೀಜ್ಡ್ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಸಸ್ತಾಪೂರ ಬಂಗ್ಲಾ ಬ್ರೀಜ್ಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಚೀನ ತಂದೆ ಶಿವಾಜಿ ಮೂಳೆ ವಯ: 22 ವರ್ಷ, ಜಾತಿ: ಮರಾಠಾ, ಸಾ: ಸಸ್ತಾಪೂರ, ತಾ: ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಸದರಿ ಆರೋಪಿತನಿಗೆ ಹಿಡಿದುಕೊಂಡು ಆತನ ಅಂಗ ಶೋಧನೆ ಮಾಡಲು ಆತನ ಹತ್ತಿರ ನಗದು ಹಣ 1870/- ರೂ., ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿದ್ದು, ನೇದ್ದವುಗಳನ್ನು ತಾಬೆಗೆ ತೆಗೆದುಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: