ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 25-09-2020
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 71/2020 ಕಲಂ 279, 304(ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-
ದಿನಾಂಕ 23/09/2020 ರಂದು ಫೀರ್ಯಾದಿ ಶ್ರೀ ಅರ್ಬಾಸ್ ತಂದೆ ಮುಸ್ತಾಫಾ ಖಾನ, ವಯ: 21 ವರ್ಷ, ಜಾತಿ: ಮುಸ್ಲಿಂ, ಉ: ಪಾನಶಾಪ ಅಂಗಡಿ ಸಾ|| ರೋಹಿಲೆಗಲ್ಲಿ ದರ್ಗಾಪೂರ ಬೀದರ. ಬೊಮ್ಮಗೊಂಡೇಶ್ವರ ವೃತ್ತದ ಹತ್ತಿರ ಇರುವ ಆದಾಬ ಪಾನಶಾಪದಲ್ಲಿ ವ್ಯಾಪಾರ ಮಾಡಿಕೊಂಡು ಇದ್ದಾಗ, ಪಾನಶಾಪ ಅಂಗಡಿ ಮುಂದೆ ಒಬ್ಬ ಅಪರಿಚಿತ ಅರೆ ಹುಚ್ಚನಂತೆ ಕಂಡು ಬಂದ 45-50 ವರ್ಷದ ವ್ಯಕ್ತಿ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಸುಮಾರು ರಾತ್ರಿ 9:30 ಗಂಟೆಗೆ ಮೈಲೂರ ಕ್ರಾಸ್ ಕಡೆಯಿಂದ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ಅಪರಿಚಿತ ಆಟೋ ಚಾಲಕ ತನ್ನ ಆಟೋವನ್ನು ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ ಆಟೋ ಸಮೇತ ಅಂಬೇಡ್ಕರ ವೃತ್ತದ ಕಡೆಗೆ ಓಡಿ ಹೋಗಿರುತ್ತಾನೆ. ಪರಿಣಾಮ ಅಪರಿಚಿತ ವ್ಯಕ್ತಿ ಕೆಳಗೆ ಬಿದ್ದಾಗ ಅವನಿಗೆ ತಲೆಯಲ್ಲಿ ರಕ್ತಗುಪ್ತಗಾಯವಾಗಿ, ಎಡಕಿವಿಯಿಂದ ರಕ್ತ ಬಂದಿರುತ್ತದೆ. ಕಾಲಿನ ಬೆರಳುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಅವನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆಗ ಫಿರ್ಯಾದಿ ಮತ್ತು ಅಲ್ಲೆ ಇರುವ ಮೆಕಾನಿಕ ಫಿರೋಜ ತಂದೆ ಬಾಬುಖಾನ ಸಾ: ಬಿಲಾಲ ಕಾಲೋನಿ ಬೀದರ ಇಬ್ಬರು ಕೂಡಿ 108 ಅಂಬುಲೆನ್ಸ ಕರೆಯಿಸಿ ಬೀದರ ಸರಕಾರಿ ಆಸ್ಪತ್ರೆಗೆ ದಾಖಲ ಮಾಡಿದ್ದು ದಿನಾಂಕ 24.09.2020 ರಂದು ಮುಂಜಾನೆ 08:04 ಚಿಕಿತ್ಸೆ ಫಲಕಾರಿಗಾಯದೆ ಮೃತಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ 112/2020 ಕಲಂ 78(3) ಕೆ.ಪಿ. ಕಾಯ್ದೆ :-
ದಿನಾಂಕ: 24/09/2020 ರಂದು 1330 ಗಂಟೆಗೆ ಬೀದರ ನಗರದ ಸುಜಾತಾ ಬಾರ್ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಮಟ್ಕಾ ಎಂಬ ನಸೀಬಿನ ಮಟ್ಕಾ ಚೀಟಿ ನಡೆಸುತ್ತಿದ್ದಾನೆಂದು ಖಚಿತ ಭಾತ್ಮಿ ಮೇರೆಗೆ ಪಿಎಸ್.ಐ. ರವರು ಸಿಬ್ಬಂದಿಯೊಂದಿಗೆ ಸುಜಾತಾ ಬಾರ್ ಹತ್ತಿರ ತಲುಪಿ ಅಲ್ಲಿ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಬಾರ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಮಟ್ಕಾ ನಸೀಬಿನ ಜೂಜಾಟ 01 ರೂ. ಗೆ 08 ಅಂತಲೂ ಮತ್ತು 10 ರೂ. ಗೆ 80 ರೂ. ಅಂತಾ ಹೇಳುತ್ತಾ ಸಾರ್ವಜನಿಕರಿಂದ ದುಡ್ಡು ಪಡೆದುಕೊಳ್ಳುತ್ತಾ ಅವರಿಗೆ ಮಟ್ಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು ಪಿಎಸಐ ಹಾಗೂ ಸಿಬ್ಬಂದಿಗಳು ಪಂಚರ ಸಮಕ್ಷಮ ಹಿಡಿದು ವಿಚಾರಿಸಲಾಗಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಹೆಸರು ಸುಧೀರ ತಂದೆ ಬಳಿರಾಮ ವಯ:42 ವರ್ಷ ಜಾತಿ:ಎಸ್.ಸಿ.ಹೊಲೆಯ ಉ:ಕಿರಾಣಿ ವ್ಯಾಪಾರ ಸಾ/ಸಿದ್ರಾಮಯ್ಯ ಲೇಔಟ ಬೀದರ ಎಂದು ತಿಳಿಸಿದ್ದು, ಈತನ ಅಂಗ ಝಡ್ತಿ ಮಾಡಲಾಗಿ ಅವನ ಹತ್ತಿರ ಒಟ್ಟು 1500/-ರೂ. ನಗದು ಹಣ, 4 ಮಟ್ಕಾ ಚೀಟಿಗಳು, ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 121/2020 ಕಲಂ 78(6) ಕೆಪಿ ಕಾಯ್ದೆ :-
ದಿನಾಂಕ:24/09/2020 ರಂದು 1500 ಗಂಟೆಗೆ ಜಿ.ಎಮ್. ಪಾಟೀಲ್ ಪಿಎಸ್ಐ (ಕಾಸೂ) ಬಸವಕಲ್ಯಾಣ ನಗರ ಪೊಲೀಸ ಠಾಣೆಯಲ್ಲಿದ್ದಾಗ ಬಸವಕಲ್ಯಾಣ ನಗರದ ತ್ರೀಪೂರಾಂತ ಮಡಿವಾಳ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಜನರು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಐಪಿಯಲ್ ಟೂರ್ನಿಯ ಕ್ರಿಕೇಟ್ ಆಟದ ತಂಡಗಳ ಮೇಲೆ ಗೆಲವು ಮತ್ತು ಸೋಲಿನ ಬಗ್ಗೆ ಸಾರ್ವಜನಿಕರಿಂದ ಹಣ ಪಡೆದು ಬೆಟ್ಟಿಂಗ್ ಕಟ್ಟಿಕೊಂಡು ಹಣ ಪಡೆಯುತ್ತಿದ್ದಾರೆ ಅಂತಾ ಮಾಹಿತಿ ಬಂದಿದರಿಂದ ಸಿಬ್ಬಂದಿಯೊಂದಿಗೆ ತ್ರೀಪೂರಾಂತ ಮಡಿವಾಳ ಚೌಕ ದಿಂದ 50 ಅಡಿ ಅಂತರದಲ್ಲಿ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರು ಜೀಪನಿಂದ ಕೇಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಅಲ್ಲಿ ಇಬ್ಬರು ಜನರು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡಿದ್ದು ಅದರಲ್ಲಿ ಒಬ್ಬರು ಹೋಗಿ ಬರುವ ಸಾರ್ವಜನಿಕರಿಗೆ ನಿಮ್ಮ ಅದೃಷ್ಟವನ್ನು ಅವಲಿಂಬಿಸಿಕೊಳ್ಳಿ ಇಂದು ನಡೆಯುತ್ತಿರುವ ರಾಯಲ್ ಚಾಲೆಂಜರ ಬೆಂಗಳೂರ ಕ್ರಿಕೇಟ್ ತಂಡ ಹಾಗು ಕಿಂಗ್ಸ ಪಂಜಾಬ ಕ್ರಿಕೇಟ್ ತಂಡಗಳ ಸೋಲು ಗೇಲುವಿನ ಬಗ್ಗೆ ಜನರಿಗೆ ಈ ಎರಡು ಕ್ರಿಕೇಟ್ ತಂಡಗಳ ಬೆಟ್ಟಿಂಗ ಕಟ್ಟಿ ಎಂದು ಕೂಗಿ ಹೇಳುತಿದ್ದರು ಇನ್ನೂ ಒಬ್ಬ ಸಾರ್ವಜನಿಕರಿಂದ ಹಣ ಪಡೆದು ಕೋಳ್ಳುತ್ತಿದ್ದನು ನೋಡಿ ಅವರ ಮೇಲೆ ಸಮಯ 18:15 ಗಂಟೆಗೆ ಎಲ್ಲರು ಒಮ್ಮಲೆ ದಾಳಿ ಮಾಡಿ 1] ದೀಪಕ ತಂದೆ ನೂರೊಂದಪ್ಪಾ ಗುಡ್ಡಾ ವಯಸ್ಸು//33 ವರ್ಷ ಜಾತಿ//ಲಿಂಗಾಯತ ಉ//ವ್ಯಾಪಾರ ಸಾ// ಗುಡ್ಡಾ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಇವನ ಹತ್ತಿರ ನಗದು ಹಣ 20120/- ರೂಪಾಯಿ 2] ಅಕ್ತರಪಾಶಾ ತಂದೆ ಅಹ್ಮದಮಿಯ್ಯಾ ಶೇಖ್ ವಯಸ್ಸು//40 ವರ್ಷ ಜಾತಿ//ಮುಸ್ಲಿಂ ಉ// ವ್ಯಾಪಾರ ಸಾ//ಬಿರಾದಾರ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಇವನ ಅಂಗ ಶೋಧನೆ ಮಾಡಲು ಇವನ ಹತ್ತಿರ ನಗದು ಹಣ 10,000/- ರೂಪಾಯಿ ಸಿಕ್ಕಿರುತ್ತವೆ, ಸದರಿ ಇಬ್ಬರು ಆರೋಪಿತರ ಹತ್ತಿರ ಸಿಕ್ಕ ಒಟ್ಟು ಹಣ 30,120/-ರೂಪಾಯಿ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಅರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 128/2020 ಕಲಂ 457, 380 ಐಪಿಸಿ :-
ದಿನಾಂಕ 24/09/2020 ರಂದು 1100 ಗಂಟೆಗೆ ಶ್ರೀ ವೀರಭದ್ರಪ್ಪಾ ತಂದೆ ಕಲ್ಲಪ್ಪಾ ಬಂಬಳಗೆ ಸಾ; ಡೊಣಗಾಪೂರ ತಾ; ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಡೊಣಗಾಪೂರ ಗ್ರಾಮದ ಇವರ ಪತ್ನಿ ಪಲ್ಲವಿ ರವರು ದಿನಾಂಕ 23/09/2020 ರಂದು ಸಾಯಂಕಾಲ ತನ್ನ ತವರು ಮನೆ ಭಾತಂಬ್ರಾ ಗ್ರಾಮಕ್ಕೆ ಹೋಗಿರುತ್ತಾಳೆ. ರೂಮಿನಲ್ಲಿ ಇವರ ತಾಯಿಯವರು ಒಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಬಂಗಾರ, ಬೆಳ್ಳಿ, ಹಣ ಹಾಗೂ ಬಟ್ಟೆಗಳು ಇಡುತ್ತಾರೆ. ದಿನಾಂಕ 23/09/2020 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಮನೆಯಲ್ಲಿ ಫಿರ್ಯಾದಿ ಹಾಗೂ ತಂದೆ ಕಲ್ಲಪ್ಪಾ ಮತ್ತು ತಾಯಿ ಸುಗಮ್ಮಾ ರವರು ಊಟ ಮಾಡಿ ನಂತರ ರಾತ್ರಿ 11 ಗಂಟೆಯ ಸುಮಾರಿಗೆ ತಂದೆ ತಾಯಿಯವರು ಮನೆಯ ಪಡಸಾಲಿಯಲ್ಲಿ ಮಲಗಿಕೊಂಡರು. ಫೀರ್ಯಾದಿಯು ಬಲಗಡೆ ಇರುವ ಬೆಡ್ ರೂಮಿನಲ್ಲಿ ಮಲಗಿಕೊಂಡಿರುತ್ತಾರೆ ನಂತರ ದಿನಾಂಕ 24/09/2020 ರಂದು 0300 ಗಂಟೆಯ ಸುಮಾರಿಗೆ ನಮ್ಮ ತಾಯಿಯವರು ಒಮ್ಮೇಲೆ ಚಿರಾಡಿದ್ದರಿಂದ ನಾನು ಒಮ್ಮೇಲೆ ಎದ್ದು ರೂಮಿನ ಹೊರಗಡೆ ಬಂದು ನನ್ನ ತಾಯಿಯವರಿಗೆ ವಿಚಾರಿಸಲು ಅವರು ತಿಳಿಸಿದ್ದೇನೆಂದರೆ, ಮುತ್ರವಿಸರ್ಜನೆ ಮಾಡಲು ಎದ್ದು ಮನೆಯ ಮುಖ್ಯ ಗೇಟ ತೆರೆಯಲು ಹೋದಾಗ ಬಾಗೀಲು ತೆರೆದಿದನ್ನು ನೋಡಿ ನಂತರ ಮನೆಯಲ್ಲಿ ಬಂದು ರೂಮಿಗೆ ನೋಡಲು ರೂಮಿನ ಬಾಗೀಲು ಸಹ ತೆರೆದಿದ್ದು ಇರುವುದ್ದನ್ನು ನೋಡಿ ರೂಮಿನ ಒಳಗಡೆ ಹೋಗಿ ನೋಡಲು ಸುಟಕೇಸ ತೆರವು ಮಾಡಿ ಚಿಲ್ಲಾಪಲ್ಲಿ ಮಾಡಿದ್ದು ಇರುತ್ತದೆ. ಮನೆಯಲ್ಲಿರುವ ಕಬ್ಬಿಣದ ಪೆಟ್ಟಿಗೆಯಲ್ಲಿರುವ 1) 2 1/2 ತೋಲಿ ಬಂಗಾರದ ಹಳೆ ನಾಣ ಅ;ಕಿ; 50,000/- ರೂ, 2) ಒಂದು ತೋಲಿಯ ಬಂಗಾರದ ಹಳೆ ಗುಂಡಿನ ಸರಾ ಅ;ಕಿ; 15000/- ರೂ, 3) 5 ಗ್ರಾಂ. ಬಂಗಾರದ ಹಳ್ಳವುಳ್ಳ ಒಂದು ಹಳೆ ಸುತ್ತುಂಗುರು ಅ;ಕಿ; 7000/- ರೂ, 4) ಒಂದು ತೋಲಿಯವುಳ್ಳ ಬೆಳ್ಳಿಯ ಹಳೆ 12 ನಾಣ್ಯಗಳು ಅ;ಕಿ; 4000/- ರೂ, .ಹಾಗೂ ನಗದು ಹಣ 1500/- ರೂ, ಹೀಗೆ ಎಲ್ಲಾ ಒಟ್ಟು 77,500/- ರೂ ಬೆಲೆ ಬಾಳುವ ಬಂಗಾರ, ಬೆಳ್ಳಿಯ ಅಭರಣಗಳು ಹಾಗೂ ನಗದು ಹಣ ದಿನಾಂಕ 23/09/2020 ರಂದು ರಾತ್ರಿ 11 ಗಂಟೆಯಿಂದ ದಿನಾಂಕ 24/09/2020 ರಂದು 0300 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ರಾತ್ರಿ ವೇಳೆಯಲ್ಲಿ ಬಂಗಾರದ ಹಾಗೂ ಬೆಳ್ಳಿಯ ಅಭರಣಗಳು ಹಾಗೂ ನಗದು ಹಣ ಕಳವು ಮಾಡಿಕೊಂಡು ಪೆಟ್ಟಿಗೆ ಬಿಸಾಡಿ ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment