Police Bhavan Kalaburagi

Police Bhavan Kalaburagi

Thursday, December 12, 2019

KALABURAGI DISTRICT REPORTED CRIMES


ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 11/12/2019 ರಂದು ಬೆಳಿಗ್ಗೆ ಶ್ರೀಮತಿ ಇಂದ್ರಾಬಾಯಿ ಗಂಡ ಮಲ್ಲಿಕಾರ್ಜುನ ಜಮಾದಾರ ಸಾ: ಸೊನ್ನ ರವರಿಗೆ  ಒಂದು ಫೋನ್ ಕರೆ ಬಂದು ಫೋನ್ ಮಾಡಿದವರು ಶ್ರೀ ಬಸವಂತ ತಂದೆ ಲಕ್ಷ್ಮಣ ತಳವಾರ ಇವರು ಹೇಳಿದ್ದೇನೆಂದರೆ ಅಫಜಲಪೂರ-ವಿಜಯಪೂರ ರೋಡ ಶಿವಲಿಂಗ ಜಮಾದಾರ ರವರ ಹೊಲದ ಹತ್ತಿರ ನಿನ್ನ ಗಂಡ ಮಲ್ಲಿಕಾರ್ಜುನ ಮತ್ತು ನಾನು ಇಬ್ಬರು ಕೂಡಿಕೊಂಡು ವಾಕಿಂಗ್ ಗೆ ಹೋಗುತ್ತಿದ್ದಾಗ ನಾನು ಮೂತ್ರ ವಿಸರ್ಜನೆಗೆಂದು ರಸ್ತೆಯ ಬದಿಗೆ ಹೋದಾಗ ಹಿಂದಿನಿಂದ ಒಂದು ಕಾರು ಅಂದರ ಸ್ವಿಪ್ಟ ಡಿಜಾಯರ ದೇವಣಗಾಂವ ಕಡೆಯಿಂದ ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಅಡ್ಡಾ ದಿಡ್ಡಿಯಾಗಿ ಎಡಗಡೆ ಹೋಗುತ್ತಿದ್ದ ನಿನ್ನ ಗಂಡನಿಗೆ ವೇಗವಾಗಿ ಗುದ್ದಿತು ಆಗ ನಿನ್ನ ಗಂಡನ ಕಾಲಿನ ಮೇಲೆ, ಟೊಂಕದ ಮೇಲೆ ಹಾಯ್ದು ಹೋಗುವಾಗ ನಾನು ನೋಡಲಾಗಿ ಬಿಳಿ ಬಣ್ಣದ ಸ್ವೀಪ್ಟ ಡಿಜಾಯರ ಕಾರ ಹಿಂದಿನಿಂದ ಗುದ್ದಿದೆ ಕಾರ ನಂಬರ ಕೆಎ-28-ಪಿ-0850 ಇದ್ದು ಅಪಘಾತ ಪಡೆಸಿ ಅಫಜಲಪೂರ ಕಡೆ ಕಾರ ಸಮೇತ ಓಡಿ ಹೋಗಿತ್ತಾನೆಂದು ಆಗ ಪ್ರತ್ಯಕ್ಷ ನೋಡಿದ ಬಸವಂತ ತಳವಾರ ಹಾಗೂ ರಸ್ತೆಯ ಮೇಲೆ ಹೊರಟ ಇತರರು ನೋಡಿ ನನಗೆ ಹೇಳಿದ್ದರಿಂದ ನಾನು ನನ್ನ ಮಕ್ಕಳೊಂದಿಗೆ, ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಬಂದು ನೋಡಲಾಗಿ ಬಲಗಾಲಿಗೆ, ಬಲಟೊಂಕಕ್ಕೆ ಮತ್ತು ತಲೆ, ಹಣೆಗೆ, ಮುಖಕ್ಕೆ ಮತ್ತು ಇತರೆ ಕಡೆ ಭಾರಿ ಪ್ರಮಾಣದ ಗಾಯವಾಗಿ ರಕ್ತ ಸ್ರಾವಗೊಂಡು ಮೃತಪಟ್ಟಿದ್ದು ಕಂಡು ಬಂತು ನಾನು ಬಂದು ನನ್ನ ಗಂಡನಿಗೆ ಅಪಘಾತ ಪಡೆಸಿದ ಕಾರ ಚಾಲಕ ರಹೀಮ ಬೇಗ ಸಾ: ಇಂದಿರಾ ನಗರ ಅಫಜಲಪೂರ ಇತನ ಮೇಲೆ ಕಾನೂನು ಕ್ರಮ ತಗೆದುಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಜಗದೇವಿ ಗಂಡ ಚಂದ್ರಕಾಂತ ದೊಡ್ಡಮನಿ ಮು:ಕುನ್ನೂರ ರವರು ದಿನಾಂಕ 06/12/2019 ರಂದು ಮದ್ಯಾಹ್ನ 01-00 ಗಂಟೆ ಸುಮಾರು ನಾನು ಮನೆಯಲ್ಲಿದ್ದಾಗ ನಮ್ಮ ಓಣಿಯ ರಾಜು ತಂದೆ ಭೀಮರಾಯ ದೊಡ್ಡಮನಿ ಇತನು ಮದ್ಯಪಾನ ಮಾಡಿ ನನ್ನ ಮನೆಗೆ ಬಂದು ನಿನ್ನ ಗಂಡ ಎಲ್ಲಿದ್ದಾನೆ ಅಂತಾ ಕೇಳಿದನು ಆಗ ನಾನು ಅವರು ಕೆಲಸಕ್ಕೆ ಹೋಗಿದ್ದಾರೆ ಅಂತಾ ಹೇಳಿದಾಗ ರಾಜು ಇತನು ನನ್ನೊಂದಿಗೆ ವಿನಾಕಾರಣ ತಕರಾರು ಮಾಡಿಕೊಂಡು ಹೋಗಿದ್ದು ಇರುತ್ತದೆ. ನಂತರ ಸಾಯಂಕಾಲ ನನ್ನ ಗಂಡ ಮನೆಗೆ ಬಂದಾಗ ಈ ವಿಷಯ ನನ್ನ ಗಂಡನಿಗೆ ತಿಳಿಸಿರುತ್ತೆನೆ. ನಿನ್ನೆ ದಿನಾಂಕ 10/12/2019 ರಂದು ಮದ್ಯಾಹ್ನ 02-00 ಗಂಟೆ ಸುಮಾರು ಈ ಬಗ್ಗೆ ರಾಜು ಮತ್ತು ಆತನ ಮನೆಯವರಿಗೆ ಕರೆಯಿಸಿ ಆತನಿಗೆ ಬುದ್ದಿವಾದ ಹೇಳಿ ಕಳುಹಿಸಿದರು. ನಂತರ ರಾತ್ರಿ 10-00 ಗಂಟೆ ಸುಮಾರು ನಾನು, ನನ್ನ ಗಂಡ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಾಗ ರಾತ್ರಿ 11-00 ಗಂಟೆ ಸುಮಾರು ನಮ್ಮ ಮನೆಯವರಿಗೆ ಯಾರೋ ಕೂಗಿದ ಹಾಗೇ ಶಬ್ದ ಕೇಳಿ ನಾನು ಮತ್ತು ನನ್ನ ಗಂಡ ಮನೆಯ ಹೊರಗಡೆ ಬಂದು ನೋಡಲಾಗಿ ನಮ್ಮ ಗ್ರಾಮದ ರಾಜು ತಂದೆ ಭೀಮರಾಯ ದೊಡ್ಡಮನಿ, ಅಶೋಕ ತಂದೆ ಶ್ಯಾಮರಾಯ ದೊಡ್ಡಮನಿ, ಸಚಿನ ತಂದೆ ಶ್ಯಾಮರಾಯ ದೊಡ್ಡಮನಿ, ಅಂಬ್ರೇಷ ತಂದೆ ಭೀಮರಾಯ ದೊಡ್ಡಮನಿ, ಅನುಸುಬಾಯಿ ಗಂಡ ಭೀಮರಾಯ ದೊಡ್ಡಮನಿ, ರಾಜಶ್ರೀ ಗಂಡ ರಾಜಪ್ಪ ಮುಗಟಾ,ರಾಜು ಇವರ ಸಂಬಂಧಿಕರಾದ ಗೌತಮ ತಂದೆ ನವರಂಗ, ಸದೇಶ ತಂದೆ ನವರಂಗ ಮು:ಇಬ್ಬರೂ ತಾರಫೇಲ್ ಕಲಬುರಗಿ ಹಾಗೂ ಇತರ 7-8 ಜನರಿದ್ದು ಅವರಲ್ಲಿ ರಾಜು ಇತನು ನನಗೆ ‘’ಬೋಸಡಿ ನಿನ್ನ ಸೊಕ್ಕು ಹೆಚ್ಚಾಗಿದೆ ಅಂತಾ ನನ್ನ ಬಲಗೈ ಹಿಡಿದು ಜಗ್ಗಾಡಿದ್ದು ಆಗ ನನ್ನ ಗಂಡ ಅವಳಿಗೆ ಏಕೆ ಜಗ್ಗಾಡುತ್ತಿ ಅಂತಾ ಕೇಳಿದಾಗ ನನ್ನ ಗಂಡನಿಗೆ ಅಶೋಕ ಮತ್ತು ಸಚಿನ ಕೈಯಿಂದ ಹೊಡೆ ಬಡೆ ಮಾಡ ಹತ್ತಿದರು. ಆಗ ಜಗಳದ ಬಾಯಿ ಕೇಳಿ ನಮ್ಮ ಚಿಕ್ಕಪ್ಪ ಬಸವರಾಜ ತಂದೆ ಲಾಲಪ್ಪ, ಮಸ್ತಾನ ತಂದೆ ಲಾಲಪ್ಪ, ಅತ್ತೆ ರತ್ನಾಬಾಯಿ ಗಂಡ ಲಾಲಪ್ಪ,ಸರಸ್ವತಿ ಗಂಡ ಭೀಮರಾಯ, ಬಸವರಾಜ ತಂದೆ  ಮರೆಪ್ಪ ರವರು ಬಂದು ವಿನಾಕಾರಣ ಯಾಕೇ ಹೊಡೆಯುತ್ತಿರಿ ಇವತ್ತು ಮದ್ಯಾಹ್ನ ಪಂಚಾಯತಿ ಮಾಡಿ ಬಗೆ ಹರಿಸಿರುತ್ತೆವೆ ಅಂತಾ ಹೇಳಿದಾಗ ಬಸವರಾಜ ತಂದೆ ಲಾಲಪ್ಪ ಇತನಿಗೆ ಅಶೋಕ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹಣೆಗೆ ಹೊಡೆದು ರಕ್ತಗಾಯಪಡಿಸಿದನು, ಸಚಿನ  ಮತ್ತು ಅಂಬ್ರೇಷ ಇವರು ಮಸ್ತಾನ ಹಾಗೂ ಬಸವರಾಜ  ಇವರಿಗೆ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡ ಹತ್ತಿದ್ದು ಅಲ್ಲದೇ ಗೌತಮ ಇತನು ಅಲ್ಲೇ ಬಿದ್ದ ಕಲ್ಲನ್ನು ತೆಗೆದುಕೊಂಡು ಮಸ್ತಾನ ಇತನ ಬಲ ಹೊಟ್ಟೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಸಂದೇಶ ಇತನು ಬಸವರಾಜ ತಂದೆ ಮರೆಪ್ಪ ಇತನಿಗೆ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡಿದ್ದು ಅಲ್ಲದೇ ಅನುಸುಬಾಯಿ, ರಾಜಶ್ರೀ ಇವರು ಸರಸ್ವತಿ ಇವಳಿಗೆ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡಿ ಹಾಟ್ಯಾನ್ ಮಕ್ಕಳಿಗೆ ಹೊಡೆಯರಿ ಬೀಡಬ್ಯಾಡರಿ ಸೊಕ್ಕು ಹೆಚ್ಚಾಗಿದೆ ಅಂತಾ ಬೈಯುತ್ತಿದ್ದು ಆಗ ಶರಣಬಸಪ್ಪ ತಂದೆ ಲಾಲಪ್ಪ ಮತ್ತು ಈಶ್ವರಾಜ ತಂದೆ ಮರೆಪ್ಪ ರವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಉಳಿದವರು ಸೂಳೇ ಮಕ್ಕಳೆ ನಿಮ್ಮ ಸೊಕ್ಕು ಹೆಚ್ಚಾಗಿದೆ ರಾಜು ಮತ್ತು ಅಶೋಕ ಇವರ ತಂಟೆಗೆ ಹೋದರೆ ನಿಮಗೆ ಖಲಾಸ  ಮಾಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕುತ್ತ ಹೊರಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: