ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-12-2019
ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್ ನಂ. 30/2019, ಕಲಂ. 174
ಸಿ.ಆರ್.ಪಿ.ಸಿ :-
ದಿನಾಂಕ 09-12-2019 ರಂದು ರಾತ್ರಿ ವೇಳೆಯಲ್ಲಿ ಪಿüರ್ಯಾದಿ ಸಂತೋಷ ತಂದೆ ಚಂದ್ರಶೇಖರ ಪಾಟೀಲ, ವಯ: 22 ವರ್ಷ, ಜಾತಿ: ಬ್ರಾಹ್ಮಣ, ಸಾ: ಗೋದಾವರಿ ಲಾಡ್ಜ ಹಿಂದುಗಡೆ ವಿಜಯಪುರ ರವರ ತಂದೆಯಾದ ಚಂದ್ರಶೇಖರ ತಂದೆ ದೇವಿಂದ್ರಪ್ಪಾ ಪಾಟೀಲ ವಯ: 57 ವರ್ಷ ರವರು ಹುಮನಾಬಾದ ಬಸ ನಿಲ್ದಾಣದಲ್ಲಿ ಮಲಗಿಕೊಂಡಾಗ ಚಳಿ ಹೆಚ್ಚಾಗಿಯೋ ಅಥವಾ ಯಾವುದೋ ಬೇನೆಯಿಂದ ಮ್ರತಪಟ್ಟಂತೆ ಕಂಡುಬರುತ್ತದೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ.
132/2019, ಕಲಂ. 201, 302 ಐಪಿಸಿ
:-
ಫಿರ್ಯಾದಿ ಸುಭಾಷ ತಂದೆ
ಕಾಶಪ್ಪಾ ವಗ್ಗೆ ವಯ: 32 ವರ್ಷ, ಜಾತಿ: ಕುರುಬ, ಸಾ: ಚಳಕಾಪೂರ ವಾಡಿ, ತಾ:
ಭಾಲ್ಕಿ ರವರಿಗೆ ತಮ್ಮೂರ ಶಿವಾರದಲ್ಲಿ ಹೊಲ ಸರ್ವೆ ನಂ. 242 ನೇದ್ದರಲ್ಲಿ 2 ಎಕರೆ 05 ಗುಂಟೆ ಜಮೀನು ಫಿರ್ಯಾದಿಯ
ಹೆಸರಿನಿಂದ ಇರುತ್ತದೆ, ಈ ವರ್ಷ ಹೊಲದಲ್ಲಿ ಸೋಯಾ ಬೇಳೆ ಮತ್ತು ತೊಗರೆ ಬೇಳೆ ಬಿತ್ತಿದ್ದು, ಅಂದಾಜು
2 ತಿಂಗಳ ಹಿಂದೆ
ಸೋಯಾ ಬೆಳೆ ತೆಗೆದು ಹೊಟ್ಟನ್ನು ಹೊಲದ ದಕ್ಷಿಣ ದಿಕ್ಕಿಗೆ ಸರಕಾರಿ ಹಣದಿಯಲ್ಲಿ ಇಟ್ಟಿದ್ದು, ಹೀಗಿರುವಾಗ
ದಿನಾಂಕ 10-12-2019 ರಂದು ಪ್ರತಿ
ದಿನದಂತೆ ಫಿರ್ಯಾದಿಯು ತನ್ನ ಹೊಲಕ್ಕೆ ಬಂದು ಕೆಲಸ ಮಾಡಿ 1800 ಗಂಟೆ ಸುಮಾರಿಗೆ ಮನೆಗೆ ಹೊಗಿದ್ದು, ನಂತರ ದಿನಾಂಕ 11-12-2019 ರಂದು 0800 ಗಂಟೆ
ಸುಮಾರಿಗೆ ಫಿರ್ಯಾದಿಯು ತಮ್ಮ ಹೊಲದ ಕೃಷಿ ಹೊಂಡಾದ ಹತ್ತಿರ ಹೊಗಿ ನೊಡಲು ಸೋಯಾ ಬೆಳೆ ಹೊಟ್ಟನ್ನು
ಸುಟ್ಟಿದಂತೆ ಕಂಡು ಬಂದಿದ್ದರಿಂದ ಅದರ ಹತ್ತಿರ ಹೊಗಿ ನೋಡಲು ಸೋಯಾ ಬೆಳೆಯ ಸುಟ್ಟಿದ ಹೊಟ್ಟಿನ
ಬೂದಿಯಲ್ಲಿ ಒಂದು ಶವ ಸುಟ್ಟಂತೆ ಕಂಡು ಬಂದಿರುತ್ತದೆ, ಶವವು ಪೂರ್ತಿ ಸುಟ್ಟು ಕರಕಲ್ ಆಗಿದ್ದು
ತಲೆಯ ಬುರಡೆ,
ಎದೆಯ
ಭಾಗ ಅರ್ಧಾ-ಮರ್ದಾ ಸುಟ್ಟಿದ್ದು ಶವ ಅಂಗಾತವಾಗಿ ಪೂರ್ವಕ್ಕೆ ತಲೆ, ಪಶ್ಚಿಮಕ್ಕೆ
ಕಾಲು ಮಾಡಿ ಬಿದ್ದಿರುತ್ತೆ, ಈ ಶವವು ಗಂಡು ವ್ಯಕ್ತಿಯ ಶವ ಇದ್ದು ಅಂದಾಜು ವಯ 25 ರಿಂದ 35 ವರ್ಷ ಇದ್ದಂತೆ
ಕಂಡು ಬರುತ್ತದೆ, ಮೃತ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲಾ, ಯಾರೊ ಅಪರಿಚಿತ
ವ್ಯಕ್ತಿಗಳು ಯಾವದೊ ಒಂದು ಉದ್ದೇಶದಿಂದ ಮೃತನಿಗೆ ಬೇರೆ ಸ್ಥಳದಲ್ಲಿ ಕೊಲೆ ಮಾಡಿ ದಿನಾಂಕ 10-12-2019 ರಂದು 1800 ಗಂಟೆಯಿಂದ
ದಿನಾಂಕ 11-12-2019 ರಂದು 0800 ಗಂಟೆಯ
ಅವಧಿಯಲ್ಲಿ ಶವ ತಂದು ಸೋಯಾಬಿನ ಹೊಟ್ಟಿನಲ್ಲಿ ಹಾಕಿ ಸಾಕ್ಷಿ ಪುರಾವೆ ನಾಶ ಮಾಡುವ ಉದ್ದೇಶದಿಂದ
ಶವ ಸುಟ್ಟು ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ದೂರಿನ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ
ಪೊಲೀಸ್ ಠಾಣೆ ಅಪರಾಧ ಸಂ. 206/2019, ಕಲಂ. 380 ಐಪಿಸಿ :-
ದಿನಾಂಕ 10-12-2019 ರಂದು ಫಿರ್ಯಾದಿ ಅನೀಲ ತಂದೆ
ಶರಣಪ್ಪಾ ಹೊಕ್ರಾಣೆ ವಯ:
42 ವರ್ಷ, ಜಾತಿ: ಲಿಂಗಾಯತ, ಸಾ: ಸಂತಪೂರ, ಸದ್ಯ: ಗುಂಪಾ ಚಿಟ್ಟಾ ಕ್ರಾಸ ಹತ್ತಿರ ಬೀದರ ರವರು ಎಂದಿನಂತೆ ಮುಂಜಾನೆ ತನ್ನ ಅಂಗಡಿ ತೆರೆದಿದ್ದು, ನಂತರ
ಫಿರ್ಯಾದಿಯವರ ತಂದೆಯವರು ಮದ್ಯಾಹ್ನ ಸಮಯದಲ್ಲಿ ಬಂದು ಫಿರ್ಯಾದಿಗೆ 1 ಲಕ್ಷ ರೂಪಾಯಿ ಕಿರಾಣ ಸಾಮಾನು
ತರುವಗೊಸ್ಕರ ತಂದು ಕೊಟ್ಟಿದ್ದು ಮತ್ತು
ಕಿರಾಣ ಅಂಗಡಿಯಲ್ಲಿ 3-4 ದಿವಸಗಳಿಂದ ಗಿರಾಕಿ ಆಗಿದ ಹಣ
ಒಟ್ಟು ಹಣ
60,000/- ರೂಪಾಯಿಗಳು ಇದ್ದು, ಫಿರ್ಯಾದಿಯವರ ಹತ್ತಿರ ಇದ್ದು ಹೀಗೆ ಒಟ್ಟು ಹಣ 1,60,000/- ರೂ ಇದ್ದು, ಫಿರ್ಯಾದಿಯು ಸ್ವಲ್ಪ ಕಿರಾಣ ಸಾಮಾನುಗಳು ತಂದಿದ್ದು ಅವುಗಳನ್ನು ಹಚ್ಚಿಕೊಳ್ಳಲು 2250 ಗಂಟೆಯಾಗಿದ್ದು ಆ ಸಮಯದಲ್ಲಿ ಯಾರೋ 3 ಜನರು
ನನಗೆ ಸಿಗರೇಟ ಬೇಕು ಅಂತ ಕೇಳುತ್ತಿದ್ದಾಗ ಸ್ವಲ್ಪ ತಾಳು ಅಂತ
ಹೇಳಿ, ದೂರದಿಂದ ಪೊಲೀಸ ಜೀಪ್ ಬರುತ್ತಿರುವಾಗ ನೋಡಿ
ಅಂಗಡಿಯನ್ನು ಮುಚ್ಚಲು ತಡವಾಗಿದ್ದರಿಂದ ಫಿರ್ಯಾದಿಯು ತನ್ನ ಅಂಗಡಿಯಲ್ಲಿ ಟೇಬಲ ಮೇಲೆ ಒಂದು ಕ್ಯಾರಿಬ್ಯಾಗದಲ್ಲಿಟ್ಟ ಹಣವನ್ನು ಅಂಗಡಿಯ ಟೇಬಲ ಮೇಲೆ ಇಟ್ಟಿದ್ದು ಅವಸರದಲ್ಲಿ ಅಂಗಡಿಯ ಶೆಟರನ್ನು ಕೀಲಿ ಹಾಕದೇ ಕೆಳಗೆ
ಎಳೆದು ಸ್ವಲ್ಪ
ಮುಂದೆ ಬಂದು ನಿಂತಿದ್ದು ಪೊಲೀಸ ಜೀಪ ಬಂದು ಮುಂದೆ ಹೋದ ನಂತರ ತನ್ನ ಅಂಗಡಿ ಕೀಲಿ ಹಾಕಲು ಹೋಗುವಷ್ಟರಲ್ಲಿ ಈ
ಮೋದಲು ಕಿರಾಣ ಅಂಗಡಿಯಲ್ಲಿ
ಸೀಗರೆಟ ಕೇಳಲು ಬಂದ 3 ಅಪರಿಚಿತ ಜನರು ಶೆಟರ್ ಎತ್ತಿ ಫಿರ್ಯಾದಿಯು
ಟೇಬಲ ಮೇಲೆ ಇಟ್ಟ ಹಣದ
ಕ್ಯಾರಿಬ್ಯಾಗವನ್ನು ತೆಗೆದುಕೊಂಡು ಓಡಿ ಹೋಗುತ್ತಿದ್ದಾಗ ಅವರಿಗೆ ಬೆನ್ನಹತ್ತಿದ್ದು ಅವರು ತನ್ನ ಮೋಟಾರ್ ಸೈಕಲ ಮೇಲೆ
ಚಿಟ್ಟಾ ರೋಡಿನ ಕಡೆ ಓಡಿ ಹೋಗಿರುತ್ತಾರೆ, ಅವರ ಮುಖ ನೋಡಿದರೆ ನಾನು ಗುರುತಿಸುತ್ತೇನೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-12-2019 ರಂದು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ
ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 111/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ
:-
ನಾಂಕ
11-12-2019 ರಂದು ಫಿರ್ಯಾದಿ
ಕಾಶಿನಾಥ ತಂದೆ ಶೆಂಕರಪ್ಪಾ ಮಹಾಗಾಂವ ವಯ: 52 ವರ್ಷ, ಜಾತಿ: ಲಿಂಗಾಯತ, ಸಾ: ಕಣಜಿ, ಸದ್ಯ:
ಬಸವನಗರ ಬೀದರ ರವರು ತನ್ನ ಮಗನಾದ ವಿಶಾಲ ತಂದೆ ಕಾಶಿನಾಥ ವಯ: 19 ವರ್ಷ ಇತನ
ಜೊತೆಯಲ್ಲಿ ಲ್ಯಾಪಟಾಪ್ ರಿಪೇರಿ ಕುರಿತು ಮಡಿವಾಳ ವೃತ್ತದ ಕಡೆಯಿಂದ ಹೊಸ ಬಸನಿಲ್ದಾಣ ಕಡೆಗೆ ಮೋಟಾರ
ಸೈಕಲ ನಂ. ಕೆಎ-39/ಎಲ್-5385 ನೇದರ ಮೇಲೆ ಹೋಗುತ್ತಿದ್ದಾಗ ವಿಜಯಲಕ್ಷ್ಮೀ ಸಾರಿ ಸೆಂಟರ್ ಹತ್ತಿರ
ಬಂದಾಗ ಹಿಂದಿನಿಂದ ಅಂದರೆ ಮಡಿವಾಳ ವೃತ್ತದ ಕಡೆಯಿಂದ ಆಟೋ ನಂ.ಕೆಎ-38/6352 ನೇದರ ಚಾಲಕನಾದ
ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ
ಆಟೋ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ವಿಶಾಲ ಈತನಿಗೆ ಬಲಗಡೆ ಗಲ್ಲದ
ಮೇಲೆ ರಕ್ತಗಾಯ,
ಬಲಗಾಲ
ತೊಡೆಯ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಆಗ ಅಲ್ಲಿಂದಲೇ
ಹೋಗುತ್ತಿದ್ದ ಪರಿಚಯಸ್ಥರಾದ ಸುನೀಲ ತಂದೆ ವೈಜಿನಾಥ ಸಿಂದೆ ಸಾ: ಆನಂದ ನಗರ ಬೀದರ ಮತ್ತು ಶರಣಪ್ಪಾ
ತಂದೆ ರೇವಣಪ್ಪಾ ಸಾ: ಕಣಜಿ ಫಿರ್ಯಾದಿಗೆ ಆದ ಗಾಯಗಳನ್ನು ನೋಡಿ ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ
ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ
ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ
ಪೊಲೀಸ್ ಠಾಣೆ ಅಪರಾಧ ಸಂ. 186/2019, ಕಲಂ. 379 ಐಪಿಸಿ :-
ದಿನಾಂಕ 26-12-2019 ರಂದು ಫಿರ್ಯಾದಿ ಮೊಹಮ್ಮದ ವಾಜಿದ
ತಂದೆ ಎಕ್ಬಾಲಸಾಬ ಕಬಾಡಿ ವಯ: 26 ವರ್ಷ, ಜಾತಿ: ಮುಸ್ಲಿಂ,
ಸಾ: ಮಹೇಬೂಬ ನಗರ ಕಲಬುರ್ಗಿ ರವರು ತನ್ನ ಗೆಳೆಯ ಅಬ್ದುಲ್ ರಸಿದ ತಂದೆ ಖಾಜಾ ಪಟೆಲ್ ರವರ
ಜೊತೆಯಲ್ಲಿ ತನ್ನ ಹಿರೊ ಸ್ಪ್ಲೇಂಡರ ಪ್ಲಸ್ ಮೊಟಾರ ಸೈಕಲ ನಂ. ಕೆಎ-32/ಇ.ಬಿ-6813 ನೇದರ ಮೇಲೆ ಭಾಲ್ಕಿ ತಾಲೂಕಿನ ಮರೂರ
ದರ್ಗಾಕ್ಕೆ ಬಂದು ದರ್ಗಾದ ಹತ್ತಿರ ಮೊಟಾರ ಸೈಕಲ ನಿಲ್ಲಿಸಿ ದರ್ಗಾದಲ್ಲಿ ದರ್ಶನ ಮಾಡಲು ಹೊಗಿ
ಮರಳಿ ಮೊಟಾರ ಸೈಕಲ ನೀಲ್ಲಿಸಿದ ಸ್ಥಳಕ್ಕೆ ಬಂದು ನೊಡಲು ಅಲ್ಲಿ ಮೊಟಾರ ಸೈಕಲ ಇರಲಿಲ್ಲ, ನಂತರ ಎಲ್ಲಾ ಕಡೆಗೆ ಸುತ್ತಾಡಿ ಜನರಿಗೆ ವಿಚಾರಣೆ ಮಾಡಲು ಮೊಟಾರ ಸೈಕಲ ಸಿಕ್ಕಿರುವುದಿಲ್ಲ, ಅಂದಿನಿಂದ ಇಲ್ಲಿಯವರೆಗೆ ಕಳೆದು ಹೋದ ಮೊಟಾರ ಸೈಕಲ ಹುಡುಕಾಡಲು
ಸಿಕ್ಕಿರುವುದಿಲ್ಲ, ಸದರಿ ಮೊಟಾರ ಸೈಕಲನ ಅ.ಕಿ 20,000/- ರೂಪಾಯಿ ಇರುತ್ತದೆ ಅಂತ
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment