ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-01-2020
ಗಾಂಧಿಗಂಜ
ಪೊಲೀಸ್
ಠಾಣೆ, ಬೀದರ ಅಪರಾಧ ಸಂ. 03/2020, ಕಲಂ. 379 ಐಪಿಸಿ :-
ದಿನಾಂಕ 03-01-2020 ರಂದು 2200 ಗಂಟೆಗೆ ಫಿರ್ಯಾದಿ ರಾಜರಡ್ಡಿ ತಂದೆ ಮಾಧವರಡ್ಡಿ ಸಾ: ಚಿಟ್ಟಾ, ರವರು ತಮ್ಮ ಚಿಕ್ಕಪ್ಪ ವಾಸವಾದ ಕುಂಬಾರವಾಡದ ಗಣೇಶ ನಗರಕ್ಕೆ ತನ್ನ ಬಜಾಜ ಪಲ್ಸರ ದ್ವಿಚಕ್ರ ವಾಹನ ನಂ. ಕೆಎ-38/ಕ್ಯೂ-0944
ಅ.ಕಿ 40,000/- ರೂ. ನೇದ್ದರ ಮೇಲೆ ಹೋಗಿ ಸದರಿ ವಾಹನವನ್ನು ಅವರ ಬಾಡಿಗೆಯ ಮನೆಯ ಎದುರುಗಡೆ ಇಟ್ಟು ರಾತ್ರಿ ಅಲ್ಲಿಯೆ ವಸತಿ ಮಾಡಿ ಮರು ದಿವಸ ದಿನಾಂಕ 04-01-2020 ರಂದು 0600 ಗಂಟೆಗೆ ಎದ್ದು ನೋಡಲು ಫಿರ್ಯಾದಿಯು ನಿಲ್ಲಿಸಿದ ಸದರಿ ಇರಲಿಲ್ಲ, ಫಿರ್ಯಾದಿಯವರ ತನ್ನ ವಾಹನವನ್ನು ಎಲ್ಲಾ ಕಡೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಫಿರ್ಯಾದಿಯವರ ಸದರಿ ವಾಹನವನ್ನು ಯಾರೋ ಅಪರಿಚಿತ ಆರೋಪಿತರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ.
05/2020, ಕಲಂ. 279, 304(ಎ) ಐಪಿಸಿ :- ದಿನಾಂಕ 05-01-2020 ರಂದು ಫಿರ್ಯಾದಿ
ಗಣೇಶ ತಂದೆ ಕಾಶಿರಾಮ ರಜಪೂತ ಸಾ:
ಹಂದಿಕೇರಾ, ತಾ: ಹುಮನಾಬಾದ ರವರ ಚಿಕ್ಕಮ್ಮನ ಮಗ ರಾಮಸಿಂಗ ತಂದೆ ಗುಂಡುಸಿಂಗ ರಜಪೂತ ಇತನು ತನ್ನ ಮೋಟಾರ್ ಸೈಕಲ್ ಸಂ. ಎಮ್.ಹೆಚ್-14/ಬಿ.ಎಫ್-4746 ನೇದನ್ನು ಚಲಾಯಿಸಿಕೊಂಡು ಮನೆಯಿಂದ ಹೊಲಕ್ಕೆ ಬಂದು ಹೊಲದಲ್ಲಿ ಬೆಳೆಗಳಿಗೆ ನೀರು ಬಿಟ್ಟು ತನ್ನ ಮೋಟಾರ್ ಸೈಕಲ್ ಮೇಲೆ ಮರಳಿ ಮನೆಗೆ ಬರುತ್ತಿದ್ದಾಗ ತನ್ನ ಮೋಟಾರ್ ಸೈಕಲ್ ನೇದನ್ನು ಹೊಲದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಭೀಮಶಾ ತಂದೆ ಲಾಲಪ್ಪಾ ಚಂದನಹಳ್ಳಿ ರವರ ಹೊಲದ ಹತ್ತಿರ ಬಂದು ತನ್ನ ಮೋಟಾರ್ ಸೈಕಲ್ ಸ್ಕೀಡ್ ಆಗಿ ತನ್ನಿಂದ ತಾನೆ ಮೋಟಾರ್ ಸೈಕಲ್ ಸಮೇತ ರೋಡಿನ ಬದಿಯಲ್ಲಿ ಬಿದ್ದಿರುತ್ತಾನೆ,
ಕಾರಣ ಸದರಿ ಅಪಘಾತದಿಂದ
ಆತನ ತಲೆಯ ಹಿಂದೆ ತೀವ್ರ ರಕ್ತಗಾಯ ಮತ್ತು ಹಣೆಗೆ ಸಾದಾ ರಕ್ತಗಾಯಗಳು ಆಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-01-2020 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ.
04/2020, ಕಲಂ. 363
ಐಪಿಸಿ :-
ಫಿರ್ಯಾದಿ ಸಿದ್ದಪ್ಪಾ ತಂದೆ ನಾಗಪ್ಪಾ ಪರೀಟ ವಯ: 48 ವರ್ಷ, ಜಾತಿ: ಪರೀಟ, ಸಾ: ಹಳ್ಳಿಖೇಡ (ಬಿ) ರವರ ಮಗನಾದ ನಾಗೇಶ ಇವನಿಗೆ ಹಳ್ಳಿಖೇಡ (ಬಿ) ಪಟ್ಟಣದ ಜ್ಞಾನ ದೇವಿಂದ್ರ ಶಾಲೆಯ ಹತ್ತಿರದಿಂದ ದಿನಾಂಕ 05-01-2020 ರಂದು 0945 ಗಂಟೆಯಿಂದ 1030 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಯಾವುದೊ ಉದ್ದೇಶದಿಂದ ಅವನÀನ್ನು ಅಪಹರಣ ಮಾಡಿಕೊಂಡು ಹೋಗಿರುವ ಬಗ್ಗೆ ಸಂಶಯ ಇರುತ್ತದೆ, ಅಪಹರಣಕೊಳ್ಳಗಾದ ನಾಗೇಶ ಇತನ ಚಹರೆ ಪಟ್ಟಿ 1) ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕಪ್ಪನೆ ಕೂದಲು, ನೇರವಾದ ಮೂಗು 2) ಅವನ ಮೈ ಮೇಲೆ ಒಂದು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಒಂದು ತೀಳಿ ಹಳದಿ ಬಣ್ಣದ ಫುಲ್ ಶರ್ಟ ಧರಿಸಿದ್ದು ಇರುತ್ತದೆ, 3) ಆತನು ಕನ್ನಡ ಭಾಷೆ ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ.
05/2020, ಕಲಂ.
78(3) ಕೆ.ಪಿ ಕಾಯ್ದೆ :-
ದಿನಾಂಕ 06-01-2020 ರಂದು ಹಳ್ಳಿಖೇಡ[ಬಿ] ಪಟ್ಟಣದ ಶ್ರೀ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪಂಚಮುಖಿ ತಂದೆ ಬಸವಣಪ್ಪಾ ಜಾಡುರ ಸಾ: ಹಳ್ಳಿಖೇಡ (ಬಿ) ಇತನು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಮಹಾಂತೇಶ ಲಂಬಿ ಪಿ.ಎಸ್.ಐ ಹಳ್ಳಿಖೇಡ[ಬಿ] ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾತ್ಮಿ ಪ್ರಕಾರ ಹಳ್ಳಿಖೇಡ[ಬಿ] ಪಟ್ಟಣದ ಶ್ರೀ ಬಸವೇಶ್ವರ ಚೌಕ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿ ಪಂಚಮುಖಿ ತಂದೆ ಬಸವಣಪ್ಪಾ ಜಾಡುರ ವಯ: 31 ವರ್ಷ, ಜಾತಿ: ಲಿಂಗಾಯತ, ಸಾ: ಹಳ್ಳಿಖೇಡ (ಬಿ) ಇತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನೋಡಿ ಖಚಿತಪಡಿಸಿಕೊಂಡು ಪಿಎಸ್ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಲು ಮಟಕಾ ಚೀಟಿ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಮಟಕಾ ಬರೆದುಕೊಡುತ್ತಿದ್ದ ಆರೋಪಿಗೆ ಹಿಡಿದು ಅವನ ಅಂಗ ಜಡ್ತಿ ಮಾಡಲಾಗಿ ಆತನ ಹತ್ತಿರ 2020/- ರೂ. ನಗದು ಹಣ, 2 ಮಟಕಾ ಚೀಟಿ ಮತ್ತು 1 ಪೆನ್ ಸಿಕ್ಕಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 04/2020, ಕಲಂ.
78(3) ಕೆ.ಪಿ ಕಾಯ್ದೆ :-
ದಿನಾಂಕ 06-01-2020 ರಂದು ಬಸವಕಲ್ಯಾಣ ನಗರದ ಕೆ.ಎಸ್.ಆರ.ಟಿ.ಸಿ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಸುನೀಲ್ ಕುಮಾರ ಪಿ.ಎಸ.ಐ [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ
ಕರೆ ಮುಖಾಂತರ
ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ
ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೆ.ಎಸ್.ಆರ.ಟಿ.ಸಿ ಬಸ್ ನಿಲ್ದಾಣದ
ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಸದರಿ ಕೆ.ಎಸ್.ಆರ.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಾಜಕುಮಾರ ತಂದೆ ಶ್ರೀಮಂತ ಮಾನೆ ವಯ: 32 ವರ್ಷ, ಸಾ: ತ್ರಿಪುರಾಂತ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೇಲೆ ದಾಳಿ ಮಾಡಿ
ಹಿಡಿದು ಅವನ
ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 5420/- ರೂ., 02 ಮಟಕಾ ಚೀಟಿಗಳು ಹಾಗು ಒಂದು ಬಾಲ್ ಪೆನ್ ಸಿಕ್ಕಿದ್ದು ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ
ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment