Police Bhavan Kalaburagi

Police Bhavan Kalaburagi

Monday, January 6, 2020

BIDAR DISTRICT DAILY CRIME UPDATE 06-01-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-01-2020

ಮುಡಬಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 04-01-2020 ರಂದು ಫಿರ್ಯಾದಿ ರಂಜೀತಾ ಗಂಡ ಅರ್ಜುನ ವರವಟ್ಟೆ ಸಾ: ಕೌಡಿಯಾಳ(ಆರ್) ರವರ ಗಂಡ ಯಾವುದೋ ಕಾರಣಕ್ಕೆ ತಮ್ಮ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿನ ಕೋಣೆ ಒಂದರಲ್ಲಿ ಆರ್.ಸಿ.ಸಿ.ಗೆ ಇರುವ ಸೀಲ್ಲಿಂಗ ಹುಕ್ಕಿಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ತನ್ನ ಗಂಡನ ಸಾವಿನ ವಿಷಯದಲ್ಲಿ ನನಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ನಂ. 01/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಲಕ್ಷ್ಮೀ ಗಂಡ ಫ್ರೇಂಕ್ಲಿನ ವಯ: 30 ವರ್ಷ, ಜಾತಿ: ಕ್ರಿಶ್ಚನ, ಸಾ: ಲಾಡಗೇರಿ ಬೀದರ ರವರ ಗಂಡನಾದ ಫ್ರೇಂಕ್ಲಿನ ಇವರು ಪೊಲೀಸ ಇಲಾಖೆಯಲ್ಲಿ ಪೊಲೀಸ ಹೇಡಕಾನ್ಸಟೇಬಲ ಎಂದು ಔರಾದ ಪೊಲೀಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು, ಅವರು ಕಳೆದ ತಿಂಗಳಿಂದ ಕಾಮಾಲೆ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಔರಾದ ಪೊಲೀಸ ಠಾಣೆಯಿಂದ 16-12-2019 ರಂದು ರಜೆ ತೆಗೆದುಕೊಂಡು ಬಂದ ಬಗ್ಗೆ ಫಿರ್ಯಾದಿಗೆ ತಿಳಿಸಿದಾಗ ಫಿರ್ಯಾದಿಯು ಅವರಿಗೆ ಖಾಸಗಿ ಚಿಕಿತ್ಸೆ ಮಾಡಿಸಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 05-01-2020 ರಂದು ಫಿರ್ಯಾದಿಯವರ ಗಂಡ ಫ್ರೇಂಕ್ಲಿನ ಇವರು ರಜೆಯ ಮೇಲಿಂದ ಮರಳಿ ತನ್ನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಹೊಗುತ್ತಿರುವಾಗ ಔರಾದ-ಬೀದರ ಮಾರ್ಗ ಮಧ್ಯದಲ್ಲಿ ತಲೆ ಸುತ್ತಿ ಮತ್ತು ವಾಂತಿಯಾಗುತ್ತಿದ್ದರಿಂದ ವಿಷಯವನ್ನು ಸ್ವತ ಕರೆ ಮುಖಾಂತರ ತಿಳಿಸಿದಾಗ ಫಿರ್ಯಾದಿಯು ಅವರಿಗೆ ತಕ್ಷಣ ಬೀದರ ಸರಕಾರಿ ಆಸ್ಪತ್ರೆಗೆ ಬರಲು ತಿಳಿಸಿ ಫಿರ್ಯಾದಿಯು ಸಹ ಆಸ್ಪತ್ರೆಗೆ ಹೊದಾಗ ಅಷ್ಟರಲ್ಲಿ ಒಂದು ಖಾಸಗಿ ವಾಹನದಲ್ಲಿ ಗಂಡನಿಗೆ ಪರಿಚಯದ ಭೀಮಣ್ಣಾ ತಂದೆ ಅಣ್ಣೆಪ್ಪಾ ಮೈಲಾರೆ ಹಾಗು ಅರುಣ ತಂದೆ ಶಾಮವೆಲ್ಲ ರವರು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದಕೊಂಡು ಬಂದು ವೈದ್ಯಾಧಿಕಾರಿಯವರ ಬಳಿ ತೊರಿಸಲು ಅವರು ಫಿರ್ಯಾದಿಯವರ ಗಂಡನನ್ನು ಪರೀಕ್ಷಿಸಿ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ ಪೊಲೀಸ ಠಾಣೆ ಅಪರಾಧ ಸಂ. 02/2020, ಕಲಂ. 295 ಐಪಿಸಿ :-
ದಿನಾಂಕ 02-01-2020 ರಂದು 1600 ಗಂಟೆಯಿಂದ ದಿನಾಂಕ 05-01-2020 ರಂದು 0700 ಗಂಟೆ ಅವಧಿಯಲ್ಲಿ ಬಗದಲ ಧರಿಯ ಮೇಲೆ ಇದ್ದ ಕಲವೇರಿ ಶೀಲುಬೇಯ ಕಟ್ಟೆಯನ್ನು ಯಾರೋ ಅಪರಿಚಿತ ಕಿಡಿಗೇಡಿಗಳು ಡೆದು ಫಿರ್ಯಾದಿ ಮಲಶೇಟ್ಟಿ ತಂದೆ ಅಡೇಪ್ಪಾ ದಾರಕ್ಕೆ ವಯ: 54 ವರ್ಷ, ಜಾತಿ: ಕ್ರಿಶ್ಚನ, ಸಾ: ಬಗದಲ ರವರ ಸಮೂದಾಯದ ಜನಾಂಗಕ್ಕೆ ಅವಮಾನ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 01/2020, ಕಲಂ. ಮನುಷ್ಯ ಕಾಣೆ :-
ದಿನಾಂಕ 04-01-2020 ರಂದು 0900 ಗಂಟೆಯಿಂದ 1300 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿ ರಾಜಕುಮಾರ ತಂದೆ ಹಾವಪ್ಪಾ ಸಾ: ಗಾಂಧಿ ನಗರ ಕಾಲೋನಿ ಮೈಲೂರ ಬಿದರ ರವರ ಹೆಂಡತಿ ಮರಿಯಳು ರವರು ಬೀದರ ಶಹಾಪುರ ಗೇಟ ಹತ್ತಿರ ಇರುವ ಸೇಂಟ ಜೋಸೆಫ್ ಶಾಲೆಯಿಂದ ಕಾಣೆಯಾಗಿರುತ್ತಾರೆ, ಫಿರ್ಯಾದಿಯವರು ತನ್ನ ಹೆಂಡತಿಯು ಕಾಣೆಯಾದ ಬಗ್ಗೆ ಇಲ್ಲಿಯವರೆಗೆ ಸಂಬಂಧಿಕರ ಮನೆಯಲ್ಲಿ, ಇತರೆ ಕಡೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಫಿರ್ಯಾದಿಯವರ ಹೆಂಡತಿಯ ಚಹರೆ ಪಟ್ಟಿ 1) ಹೆಸರು ಮತ್ತು ವಿಳಾಸ: ಮರಿಯಳು ಗಂಡ ರಾಜಕುಮಾರ ವಯ: 23 ವರ್ಷ, ಜಾತಿ: ಕ್ರೀಶ್ಚನ್, ಸಾ: ಗಾಂಧಿ ನಗರ ಕಾಲೊನಿ ಮೈಲೂರ ಬೀದರ, 2) ಮೈಬಣ್ಣ: ಕಪ್ಪು ಬಣ್ಣ, 3) ಮೈಕಟ್ಟು: ಸಾಧಾರಣ ಮೈಕಟ್ಟು, 4) ಬಟ್ಟೆ :- ಆರೆಂಜ್ ಬಣ್ಣದ ಸೀರೆ ಮತ್ತು ಬ್ಲೌಜ್ ಧರಿಸಿದ್ದು, 5) ಭಾಷೆ : ಕನ್ನಡ, ಹಿಂದಿ, ಇಂಗ್ಲೀಷ ಭಾಷೆ ಮಾತನಾಡುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 05-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 01/2020, ಕಲಂ. 279, 337, 338 ಐಪಿಸಿ :-
ದಿನಾಂಕ 05-01-2020 ರಂದು ಫಿರ್ಯಾದಿ ಭೀಮಶಾ ತಂದೆ ಕಾಳಪ್ಪಾ ಕುಡ್ತೆನೋರ, ವಯ: 55 ವರ್ಷ,  ಜಾತಿ: ಕ್ರಿಶ್ಚನ, ಸಾ: ನೌಬಾದ ಬೀದರ ರವರು ಕೂಲಿ ಕೆಲಸ ಮುಗಿಸಿಕೊಂಡು ಬೀದರದಿಂದ ಮರಳಿ ನೌಬಾದ ಬಸವೇಶ್ವರ ವೃತ್ತದ ಹತ್ತಿರ ಹೋಗಿ ಅಲ್ಲಿಂದ ನೌಬಾದದಲ್ಲಿನ ಮನೆಗೆ ನಡೆದುಕೊಂಡು ಪೋರ್ಡ ಶೋಮ ಹತ್ತಿರ ಬಂದಾಗ ಕೋಳಾರ ಕಡೆಯಿಂದ ಮೊಟಾರ ಸೈಕಲ ನಂ. ಕೆಎ-38/ಹೆಚ್-9345 ನೇದ್ದರ ಸವಾರನಾದ ಆರೋಪಿ ಅಶೋಕ ತಂದೆ ಚೆನ್ನಪ್ಪಾ ಟಂಕಸಾಲ, ವಯ: 53 ವರ್ಷ, ಸಾ: ಗುಂಪಾ ಬೀದರ ಇತನು ತನ್ನ ಮೊಟಾರ ಸೈಕಲನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಫಿರ್ಯಾದಿಗೆ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯಿಂದ ಫಿರ್ಯಾದಿ ತಲೆಯ ಮೇಲೆ ಭಾರಿ ರಕ್ತಗಾಯ ಮತ್ತು ಎಡಕಿವಿಯ ಮೇಲೆ ರಕ್ತಗಾಯವಾಗಿರುತ್ತದೆ ಹಾಗೂ ಸದರಿ ಆರೋಪಿತನ ಎಡಗೈ ಮುಂಗೈಗೆ, ಎಡಮೊಳಕಾಲ ಮೇಲೆ, ಎಡ ಹಿಮ್ಮಡಿ ಹತ್ತಿರ ರಕ್ತಗಾಯ, ಎಡ ಭುಜದ ಹತ್ತಿರ ಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಂದಲೆ ಹೋಗುತ್ತಿದ್ದ ಸಂಬಂಧಿಕ ಮೊಹನದಾಸ ತಂದೆ ರುಕಾರಾಮ ಮತ್ತು ರೋಹಿತ ತಂದೆ ಬಸವರಾಜ ಮೇತ್ರೆ ಸಾ: ನೌಬಾದ ಬೀದರ ರವರು ನೋಡಿ ಗಾಯಗೊಂಡ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: