ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-01-2020
ಮಹಿಳಾ ಪೊಲೀಸ ಠಾಣೆ, ಬೀದರ ಅಪರಾಧ ಸಂ. 02/2020, ಕಲಂ. 498(ಎ), 323, 504 ಜೊತೆ 34 ಐಪಿಸಿ :-
ಫಿರ್ಯಾದಿ ಲಕ್ಷ್ಮೀ ಗಂಡ ಮಲ್ಲೇಶ ವಯ: 22 ವರ್ಷ, ಜಾತಿ: ವಡ್ಡರ್, ಸಾ: ಆತ್ಮಾಕೂರ್, ತಾ: ಸದಾಶಿವಪೇಟ, ಸದ್ಯ: ವಿದ್ಯಾ ನಗರ ಕಾಲೋನಿ, ಬೀದರ ರವರ ಮದುವೆಯು ಸುಮಾರು 4 ವರ್ಷಗಳ ಹಿಂದೆ ಸದಾಶಿವಪೇಟ ಆತ್ಮಾಕೂರ್ದ ಮಲ್ಲೇಶ ಪುಜಾರಿ ಇತನ ಜೊತೆಯಲ್ಲಿ ಆಗಿದ್ದು, ಗಂಡ ದಿನಾಲು ಸರಾಯಿ ಕುಡಿಯುವ ಚಟವುಳ್ಳವನಾಗಿದ್ದು, ಫಿರ್ಯಾದಿಗೆ ನೀನು ಕೂಲಿ ಕೆಲಸ ಮಾಡಿ ನನಗೆ ಸರಾಯಿ ಕುಡಿಯಲು ಹಣ ಕೊಡು ಅಂತ ಸಣ್ಣ ಪುಟ್ಟ ವಿಷಯಕ್ಕಾಗಿ ಜಗಳ ತೆಗೆದು, ಹೊಡೆ ಬಡೆ ಮಾಡುತ್ತಾ ಮನಸ್ಸಿಗೆ ಹತ್ತುವ ಹಾಗೆ ಮಾತನಾಡಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ ಮತ್ತು ಅತ್ತೆಯಾದ ಪುಲ್ಲಮ್ಮಾ, ದೊಡ್ಡ ನಾದಣಿಯಾದ ಅಂಜಮ್ಮಾ, ನಾದಣಿಯ ಗಂಡನಾದ ರಾಜು ತಂದೆ ಯಲ್ಲಯ್ಯಾ ರವರು ಸಹ ಫಿರ್ಯಾದಿಗೆ ಬೈದು ನಿನಗೆ ಮನೆ ಕೆಲಸ ಬರುವದಿಲ್ಲ, ಕಲ್ಲು ಒಡೆಯಲು ಹೋಗು ಅಂತ ಕೈಯಿಂದ ಕೂದಲು ಹಿಡಿದು ಎಳೆದು ಹೊಡೆ ಬಡೆ ಮಾಡಿರುತ್ತಾರೆ, ಫಿರ್ಯಾದಿಯು ಅವರ ಕಿರುಕುಳ ತಾಳಲಾರದೇ ತನ್ನ ಮಗನೊಂದಿಗೆ ಬೀದರಗೆ ಬಂದು ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 02-01-2020 ರಂದು
ಫಿರ್ಯಾದಿಯ ಗಂಡನಾದ ಮಲ್ಲೇಶ ಮತ್ತು ರಾಜು, ಪುಲ್ಲಮ್ಮಾ, ಅಂಜಮ್ಮಾ ರವರೆಲ್ಲರೂ ತಾಯಿಯ ಮನೆಗೆ ಬಂದು ನೀನು ಇನ್ನು ಇಲ್ಲೆ ಉಳಿದುಕೊಳ್ಳು ಮಲ್ಲೇಶನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತ ಜಗಳ ಮಾಡಿ, ಗಂಡ ಮಲ್ಲೇಶ ಇತನು ಕೂದಲು ಹಿಡಿದು ಕಪಾಳದ ಮೇಲೆ ಹೊಡೆದು, ಮಗನಿಗೆ ತೆಗೆದುಕೊಂಡು ಹೋಗುವಾಗ ಫಿರ್ಯಾದಿ ಹಾಗೂ ಫಿರ್ಯಾದಿಯ ತಾಯಿ ಹಾಲು ಕುಡಿಯುವ ಮಗು ಇದೆ ಏಕೆ ತೆಗೆದುಕೊಂಡು ಹೋಗುತ್ತೀರಿ ಅಂತ ಕೇಳಿದಕ್ಕೆ ತಾಯಿಗೆ ಪುಲ್ಲಮ್ಮಾ, ಅಂಜಮ್ಮಾ ರವರು ನಿನ್ನ ಮಗಳಿಗೆ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳು, ನಮ್ಮ ಮಗನಿಗೆ ನಾವು ಕರೆದೊಯ್ಯುತ್ತೇವೆ ಅಂತ ಜಗಳದ ಶಬ್ದವನ್ನು ಕೇಳಿ ಪಕ್ಕದ ಮನೆಯ ಸಂತೋಷ ಮತ್ತು ರಾಜು ರವರು ಬಂದು ಗಂಡ ಹಾಗು ಗಂಡನ ಮನೆಯವರಿಗೆ ನೀವು ಕೂಸಿಗೆ ತೆಗೆದುಕೊಂಡು ಹೋಗುವದು ಸರಿ ಇಲ್ಲ ಅಂತ ಹೇಳಿದರೂ ಸಹ ಕೂಸಿUೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ, ಬೀದರ ಅಪರಾಧ ಸಂ. 04/2020, ಕಲಂ. 498(ಎ), 504, 307 ಜೊತೆ 34 ಐಪಿಸಿ :-
ಫಿರ್ಯಾದಿ ರಶೀದಾ ಬೇಗಂ ಗಂಡ ಮಹ್ಮದ ಜಿಲಾನಿ ವಯ: 22 ವರ್ಷ, ಜಾತಿ: ಮುಸ್ಲಿಂ, ಸಾ: ಮದಿನಾ ಕಾಲೋನಿ ಕಲಬುರ್ಗಿ ರವರಿಗೆ ಒಂದು ವರ್ಷದ ಹಿಂದೆ ಕಲಬುರ್ಗಿಯ ಮಹ್ಮದ ಜಿಲಾನಿ ಇತನ ಜೊತೆಯಲ್ಲಿ ಮದುವೆ ಆಗಿರುತ್ತದೆ, ಮದುವೆಯಾದ ನಂತರ ಫಿರ್ಯಾದಿ ಹಾಗು ಗಂಡ ಮತ್ತು ಅತ್ತೆಯಾದ ಜರಿನಾ ಖಾನಂ, ಮಾವನಾದ ಮಹ್ಮದ ಅಜೀಮ್ ನಾಲ್ಕು ಜನ ಮಾತ್ರ ಕಲಬುರ್ಗಿಯಲ್ಲಿಯೇ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಗಂಡನಿಗೆ ಬೇರೆ ಹೆಣ್ಣು ಮಗಳ ಸಹವಾಸ ಇದ್ದು, ಸರಾಯಿ ಕುಡಿಯುವ ಚಟದವನು ಇರುತ್ತಾನೆ, ಅದೆ ಒಂದು ಕಾರಣದಿಂದ ಫಿರ್ಯಾದಿಗೆ ಗಂಡ ತು ಪಸಂದ ನೈಹೆ, ತುಜೆ ತಲಾಖ ದೆತೂ, ತು ಚೋಡಕೊ ಚಲೆ ಜಾ ಮಾ ಬಾಪಕೆ ಪಾಸ ಅಂತ ಬೈದು ಕೂದಲು ಹಿಡಿದು ಹೊಡೆ ಬಡೆ ಮಾಡುತ್ತಾ ಬಂದಿರುತ್ತಾನೆ, ಅತ್ತೆ ಮಾವ ರವರು ಸಹ ಫಿರ್ಯಾದಿಗೆ ತು ತೆರೆ ಮಾ ಬಾಪಕೆ ಪಾಸ್ ಚಲೆ ಜಾ ಜಿಲಾನಿಕೂ ದುಸರೆ ಶಾದಿ ಕರತೆ ಅಂತ ದಿನಾಲು ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಬಂದಿರುತ್ತಾರೆ, ಹೀಗಿರುವಾಗ ದಿನಾಂಕ
02-01-2020 ರಂದು ಫಿರ್ಯದಿ ಹಾಗೂ ಗಂಡ, ಅತ್ತೆ, ಮಾವ ರವರೆಲ್ಲರೂ ಊಟ ಮಾಡಿ ಮಲಗಿಕೊಂಡಾಗ ಅದೆ ದಿವಸ ಬೆಳಗಿನ ಜಾವ 0500 ಗಂಟೆಯ ಸುಮಾರಿಗೆ ಗಂಡ ಫಿರ್ಯಾದಿಯ ಮೈಮೇಲಿದ್ದ ಓಡಣಿಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಲು ಪ್ರಯತ್ನಸಿದಾಗ, ಫಿರ್ಯಾದಿಯು ಚೀರಿದ ಶಬ್ದವನ್ನು ಕೇಳಿ ಪಕ್ಕದ ಮನೆಯಲ್ಲಿದ್ದ ಫಿರ್ಯಾದಿಯ ಅಕ್ಕಳಾದ ಶಾಹೀನ್ ಬೆಗಂ ಇವಳು ಮತ್ತು ತಮ್ಮನಾದ ಎಂ.ಡಿ ಸಮೀರ ಹಾಗು ಕಾಲೋನಿಯ ಸುಲೇಮಾನ್ ರವರು ಬಂದು ಕುತ್ತಿಗೆಗೆ ಆದ ಗಾಯ ನೋಡಿ ವಿಚಾರಿಸಿದಾಗ ಅಷ್ಟರಲ್ಲಿ ಆರೋಪಿತರಾದ ಗಂಡ, ಅತ್ತೆ, ಮಾವ ಮನೆಯಿಂದ ಓಡಿ ಹೋಗಿರುತ್ತಾರೆ, ನಂತರ ಫಿರ್ಯಾದಿಗೆ ತಮ್ಮನಾದ ಎಂ.ಡಿ ಸಮೀರ ಇತನು ದಿನಾಂಕ 03-01-2020 ರಂದು ಕಲಬುರ್ಗಿಯಿಂದ ಖಾಸೆಂಪುರಕ್ಕೆ ಕರೆದುಕೊಂಡು ಬಂದಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 04-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 06/2020, ಕಲಂ. 457, 380 ಐಪಿಸಿ :-
ಫಿರ್ಯಾದಿ ಅಮರನಾಥ ತಂದೆ ಗುರುಲಿಂಗಯ್ಯಾ ಮಠಪತಿ,
ವಯ: 36 ವರ್ಷ, ಜಾತಿ:
ಸ್ವಾಮಿ, ಸಾ: ಕುನಬಿವಾಡಾ ಚಿಟಗುಪ್ಪಾ ರವರು ಚಿಟಗುಪ್ಪಾ ಪಟ್ಟಣದ ಎ.ಪಿ.ಎಮ್.ಸಿ ಮಾರ್ಕೆಟನಲ್ಲಿ ಬರುವ ಶ್ರೀ ಸಾಯಿ ಡಿಸ್ಟ್ರೀಬ್ಯೂಟರ್ (ತಂಪು ಪಾನಿಯ) ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಪ್ರತಿ ನಿತ್ಯದಂತೆ ದಿನಾಂಕ 03-01-2020 ರಂದು 2000 ಗಂಟೆಗೆ ಮುಚ್ಚಿಕೊಂಡು ಹೋಗುವಾಗ ಅಂಗಡಿಯಲ್ಲಿರುವ ಕ್ಯಾಶ ಕೌಂಟರನಲ್ಲಿ 10,000/- ರೂ. ಇಟ್ಟು ಹೋಗಿದ್ದು, ನಂತರ ದಿನಾಂಕ
04-01-2020 ರಂದು 0730 ಗಂಟೆಗೆ ತಮ್ಮ ಅಂಗಡಿಗೆ ಬಂದು ನೋಡಲು ಅಂಗಡಿಯ ಶೇಟರ ಕೀಲಿ ಮುರಿದು ಒಳಗಡೆ ಇರುವ ಕೌಂಟರಿನ ಕೀಲಿ ಮುರಿದು ಕಾಗದ ಪತ್ರಗಳು ಚೆಲ್ಲಾಪಿಲ್ಲಿ ಮಾಡಿ ಅದರಲ್ಲಿದ್ದ 10,000/- ರೂ. ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಹಾಗು ಎ.ಪಿ.ಎಮ್.ಸಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಸಂಗಮ ಬಾರಿನ ಶೆಟರಿನ ಕೀಲಿ ಮುರಿದು ಅದರಲ್ಲಿನ ಮೂರು ರಾಯಲ್ ಸ್ಟಾಗ್ ವಿಸ್ಕಿ ಬಾಟಲಗಳು ಅ.ಕಿ 1200/- ರೂ. ಹಾಗೂ ಮಹೆಂದ್ರ ರವರ ರಾಜೂರಿ ಸ್ಟೀಲ್ ಅಂಗಡಿ ಬಾಗಿಲು ಮುರಿದು ಸಿಸಿ ಕ್ಯಾಮರ ಒಡೆದು ಕೌಂಟರನಲ್ಲಿರುವ 1100/- ರೂಪಾಯಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment