Police Bhavan Kalaburagi

Police Bhavan Kalaburagi

Sunday, January 5, 2020

KALABURAGI DISTRICT REPORTED CRIMES

ಅಫಘಾತ ಪ್ರಕರಣಗಳು :
ಯಡ್ರಾಮಿ ಠಾಣೆ :ದಿನಾಂಕ: 04-01-2020 ರಂದು ಬೆಳ್ಳಿಗ್ಗೆ 8-30 ಘಂಟೆಗೆ ದುರ್ಗಪ್ಪ ಹಲಸೂರ, ಪರಸಪ್ಪ , ಮಲ್ಲಮನರ, ಇಮಾಮಸಾಬ ಮುಲ್ಲಾ, ದಾದಾಪೀರ ಬೆಣ್ಣಿ ರವರು ಕೂಡಿ ಟ್ರ್ಯಾಕ್ಟರ ನಂಬರ ಕೆ.-28 ಟಿಸಿ-8472 ನೇದ್ದಕ್ಕೆ ಜೋಡಿಸಿದ ಟ್ರ್ಯಾಲಿಯಲ್ಲಿ ಕುಳಿತು ರಾಂಪೂರಕ್ಕೆ ಹೋದರು ಟ್ರ್ಯಾಕ್ಟರನ್ನು ಪ್ರವೀಣ ಸಾ:ಕನ್ನೊಳ್ಳಿ ಎಂಬುವವರು ನಡೆಸುತ್ತಿದ್ದರು. ನಂತರ 2-15 ಪಿ.ಎಂ ಸುಮಾರಿಗೆ ವಿಷಯ  ಗೊತ್ತಾಗಿದ್ದೇನೆಂದರೆ ಮುಡ್ಡಿ ಕ್ರಾಸ ಹತ್ತಿರ ಖೈನೂರ ರೋಡಿನ ಮೇಲೆ ಡಾಂಬರ ಕೆಲಸ ಮಾಡುವವರ ಟ್ರ್ಯಾಕ್ಟರ ಎಕ್ಸಿಡೆಂಟಾಗಿ ಒಬ್ಬ ಸತ್ತಿರುತ್ತಾನೆ ಅಂತಾ ಗೊತ್ತಾಗಿ ನಾನು ಮತ್ತು ಜೀತೇಂದ್ರ ಜಗಳೂರ , ಬರ್ಮಪ್ಪ ಮಾಳಗಿ ರವರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ರಸ್ತೆಯ ಮಧ್ಯ ದುರ್ಗಪ್ಪನು ಬಿದ್ದಿದ್ದು, ಅವನನ್ನು ನೋಡಲಾಗಿ ಅವನ ಗದ್ದದ ಮೇಲೆ ಬಲಗಣ್ಣಿನ ಹುಬ್ಬಿನ ಮೇಲೆ ಹಾಗೂ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಕಿವಿಯಿಂದ ರಕ್ತ ಸೋರಿದ್ದು, ಹೊಟ್ಟೆಯ ಮೇಲೆ ಎದೆಯ ಮೇಲೆ ತರಚಿದ ಗಾಯವಾಗಿರುತ್ತದೆ. ದುರ್ಗಪ್ಪ ಇವನು ಸ್ಥಳದಲ್ಲೆ ಮೃತಪಟ್ಟಿದ್ದನು. ನಂತರ ಪರಸಪ್ಪನಿಗೆ ಕೇಳಲಾಗಿ ಹೇಳಿದ್ದೇನೆಂದರೆ ನಾನು ಮತ್ತು ದಾದಾಪೀರ ಟ್ರ್ಯಾಲಿಯಲ್ಲಿ ಕುಳಿತಿದ್ದೇವು. ಟ್ರ್ಯಾಕ್ಟರ ಡ್ರೈವರ ಪಕ್ಕದಲ್ಲಿ ದುರ್ಗಪ್ಪ ಮತ್ತು ಇಮಾಮಸಾಬ ರವರು ಕುಳಿತಿದ್ದರು. ಟ್ರ್ಯಾಕ್ಟರ ಚಾಲಕ ಪ್ರವೀಣ ಇವನು ಟ್ರ್ಯಾಕ್ಟರನ್ನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ಮುಡ್ಡಿ ಕ್ರಾಸ ಸಮೀಪ ಒಮ್ಮೆಲೆ ದುರ್ಗಪ್ಪ ಇವನು ಟ್ರ್ಯಾಕ್ಟರನಿಂದ ಹಾರಿ ಇಂಜನ ದೊಡ್ಡ ಟೈರಗಾಲಿಯಲ್ಲಿ ಬಿದ್ದು ನಂತರ ಅವನ ಮೇಲೆ ಟ್ರ್ಯಾಲಿಯ ಗಾಲಿಯು ಹಾದಿದ್ದು ಇರುತ್ತದೆ. ಆಗ ನಾವು ಕೆಳಗೆ ಇಳಿದಾಗ ನಂತರ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನು ತೆಗೆದುಕೊಂಡು ಹೋಗಿ ಟ್ರ್ಯಾಲಿಯನ್ನು ಎಲ್ಲೊ ನಿಲ್ಲಿಸಿ ಇಂಜೆನ ಒಂದೆ ತಂದು ನಿಲ್ಲಿಸಿರುತ್ತಾನೆ. ನಂತರ ಚಾಲಕನು ಇಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದರು. ಆದ್ದರಿಂದ ಟ್ರ್ಯಾಕ್ಟರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ತಿಪ್ಪಣ್ಣ ತಂ ದುರ್ಗಪ್ಪ ತೊಂಡೂರ ಸಾ:ದೇವಗೇರಿ ತಾ:ಜಿ:ಹಾವೇರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ:03/01/2020 ರಂದು 5-45 ಪಿ,ಎಮ್.ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಸರುಬಾಯಿ ಇಬ್ಬರು ಮನೆಯಲ್ಲಿದ್ದಾಗ ಸಿದ್ದಪ್ಪ ಗೊಲ್ಲರ ಮತ್ತು ನನ್ನ ಮಗ ಶ್ಯಾಮಣ್ಣ ಇಬ್ಬರು ಕೂಡಿಕೊಂಡು ಕಕ್ಕಳಮೇಲಿ ಗ್ರಾಮದಲ್ಲಿರುವ ನನ್ನ ತಂಗಿಯಾದ ಯಲ್ಲವ್ವನ ಹತ್ತಿರ  ಹೋಗಿ ಬರುತ್ತೇವೆ ಅಂತಾ  ನಮಗೆ ಹೇಳಿ ನಮ್ಮ ಮೋಟಾರ ಸೈಕಲ್ ನಂ ಕೆಎ-32-ಈ.ಎಫ್-8646 ನೇದ್ದನ್ನು ತಗೆದುಕೊಂಡು ಹೋಗಿರುತ್ತಾರೆ ನಂತರ 6-30 ಪಿ.ಎಮ್ ಸುಮಾರಿಗೆ ನನ್ನ ಮೋಬಾಯಿಲ್ ನಂಬರಗೆ ನನ್ನ ತಂಗಿಯ ಮಗನಾದ ಸಿದ್ದಪ್ಪ ಇತನು ಫೋನ್ ಮಾಡಿ ಶ್ಯಾ ಮಣ್ಣನ ಮೊಬೈಲ ಪೋನನಿಂದ ನನ್ನ ಮೊಬೈಲಗೆ ಒಬ್ಬರು ಪೋನ ಮಾಡಿ ಈ ಮೋಬೈಲ ನಂಬರನ ವ್ಯಕ್ತಿ ನಿಮಗೆ ಏನಾಗಬೆಕೆಂದು ಕೇಳಿದ ಆಗ ನಾನು ಅವನು ಶ್ಯಾಮಣ್ಣ ಅಂತ ಇದ್ದು ಅಫಜಲಪೂರದಲ್ಲಿರುವ ನನ್ನ ಸಹೋದರ ಮಾವನ ಮಗನಿರುತ್ತಾನೆ ಏನಾಗಿದೆ ಅಂತ ಕೇಳಿದೆನು ಈಗ 6-15 ಪಿ,ಎಮ್.ಸುಮಾರಿಗೆ ಶ್ಯಾ ಮಣ್ಣ ಮತ್ತು ಅವನ ಜೋತೆ ಇನ್ನೋಬ್ಬ ವ್ಯಕ್ತಿ ಮೋಟಾರ ಸೈಕಲ ಮೇಲೆ ಬನ್ನೆಟ್ಟಿ ಕ್ರಾಸ್ ಹತ್ತೀರ ಎಕ್ಸಿಡೇಂಟ್ ಆಗಿ ಬಿದ್ದಿರುತ್ತಾರೆ ಅಂತಾ ಹೇಳಿರುತ್ತಾರೆ ಅಂತ ತಿಳಿಸಿದನು ಆಗ ನಾನು ಮತ್ತು ನನ್ನ ಹೆಂಡತಿ, ಮತ್ತು ಮಗಳಾದ ಶಾಂತಾಬಾಯಿ, ಮೂರು ಜನ ಕೂಡಿಕೊಂಡು ಅಫಜಲಪೂರ ದಿಂದ ಘತ್ತರಗಿ ರಸ್ತೆಗೆ ಇರುವ ಬನ್ನೆಟ್ಟಿ ಕ್ರಾಸ್ ಹತ್ತಿರ ಹೋಗಿ ನೋಡಲಾಗಿ ನನ್ನ ಮಗ ಶ್ಯಾಮಣ್ಣ ಇತನಿಗೆ ತಲೆಗೆ ಭಾರಿ ರಕ್ತಗಾಯ ಮತ್ತು  ಎಡಗಡೆ ಕಣ್ಣಿನ ಪಕ್ಕ ಭಾರಿ ರಕ್ತಗಾಯ ಮತ್ತು ಎರಡು ಕೈಗಳು ಮುರಿದಿದ್ದು ಸದರಿ ಗಾಯಗಳಿಂದ ನನ್ನ ಮಗನು ಸ್ಥಳದಲ್ಲಿಯೆ ಮೃತಪಟ್ಟಿದ್ದು ಕಂಡು ಬಂತು ಮತ್ತು ಸಿದ್ದಪ್ಪ ಇತನಿಗೆ  ತಲೆಗೆ ಭಾರಿಗಾಯವಾಗಿರುವದ್ದು ಕಂಡು ಬಂತು ನಂತರ ಸಿದ್ದಪ್ಪನಿಗೆ ನಾವು ಸರಕಾರಿ ಆಸ್ಪತ್ರೇ ಅಫಜಲಪೂರಕ್ಕೆ 108 ವಾಹನದಲ್ಲಿ ಕಳೂಹಿಸಿಕೊಟ್ಟು ನನ್ನ ಮಗನ ಮೃತ ದೇಹವನ್ನು ಅಫಜಲಪೂರ ಸರಕಾರಿ ಆಸ್ಪತ್ರೇಯ ಶವಗಾರ ಕೋಣೆಯಲ್ಲಿ ಹಾಕಿರುತ್ತೆವೆ ಕಾರಣ ಮೋಟಾರ ಸೈಕಲ ನಂಬರ ಕೆ,ಎ-32 ಈಎಫ್-8646 ನೇದ್ದರ ಮೇಲೆ ಹೋಗುತ್ತಿದ್ದ ನನ್ನ ಮಗ ಶ್ಯಾಮಣ್ಣನಿಗೆ ಮತ್ತು ಸಿದ್ದಪ್ಪನಿಗೆ ಯಾವುದೊ ಒಂದು ವಾಹನ ಅಪಘಾತಪಡಿಸಿದ್ದು ಇರುತ್ತದೆ ಕಾರಣ ಅಪಘಾತಪಡಿಸಿದ ವಾಹನವನ್ನು ಪತ್ತೆಮಾಡಿ ಅಪಘಾತಪಡಿಸಿದವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು  ಶ್ರೀ  ಸಿದ್ದಪ್ಪ ತಂದೆ ಗುರಪ್ಪ ಸಾ|| ಅಫಜಲಪೂರ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: