¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 31-08-2018
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 111/2018, ಕಲಂ. 279, 337, 304(ಎ) ಐಪಿಸಿ :-
ದಿನಾಂಕ 30-08-2018 ರಂದು ಫಿರ್ಯಾದಿ ಬಾಗಣ್ಣಾ ತಂದೆ ಮರೇಪ್ಪಾ ತಳವಾರ ವಯ: 19 ವರ್ಷ, ಜಾತಿ: ಕಬ್ಬಲಿಗ, ಸಾ: ಮನೆ ಸಂ. 57, ಪಂಚಶೀಲ ನಗರ ರೇಲ್ವೆ ನಿಲ್ದಾಣದ ಹತ್ತಿರ ಕಲಬುರಗಿ ರವರು ಮೊಹಮ್ಮದ
ಮುಸ್ತಾಫಾ ತಂದೆ ಗುಲಾಮ ರಸೂಲ್. ಸಾ: ಘೊಡವಾಡಿ. ತಾ: ಹುಮನಾಬಾದ ಮೋಟಾರ್ ಸೈಕಲ್ ನಂ. ಕೆಎ-51/ಇಕೆ-3797 ನೇದರ ಮೇಲೆ ಇಬ್ಬರೂ ಕೂಡಿ ಕಲಬುರಗಿ ನಗರದಿಂದ ಹುಮನಾಬಾದ ಮಾರ್ಗವಾಗಿ ಘೊಡವಾಡಿ
ಗ್ರಾಮಕ್ಕೆ ಹೋಗುತ್ತಿದ್ದಾಗ ಮೊಹಮ್ಮದ ಮುಸ್ತಾಫಾ ಇವನು ರಾತ್ರಿಯಾಗಿದ್ದರಿಂದ ತನ್ನ ಮೋಟಾರ್
ಸೈಕಲ್ ನಿಧಾನವಾಗಿ ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಹೊಸ ಆರ್.ಟಿ.ಓ ಚೆಕ್ ಪೋಸ್ಟ್ ಮೊಳಕೇರಾ
ಹತ್ತಿರ ಹೋದಾಗ ರಾಷ್ಟ್ರೀಯ ಹೆದ್ದಾರಿ ನಂ. 65 ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಕಂಟೆನರ್ ಸಂ. ಎಪಿ-16/ಟಿಬಿ-9025.
ನೇದರ ಚಾಲಕನಾದ ಆರೋಪಿ ತ್ರಿನಾಧ ತಂದೆ ಸೀತಮನಾಯಡು ಚಿಮಲ ಸಾ:
ಬಿ.ಸಿ ಕಾಲೋನಿ ಗುಂಡುಗೋಲಾನು ವೇಸ್ಟ ಗೋದಾವರಿ (ಆಂದ್ರ ಪ್ರದೇಶ) ಇವನು ತಾನು ಚಲಾಯಿಸುತ್ತಿದ್ದ
ಕಂಟೆನರ್ ಹಿಂದಿನಿಂದ ಅಂದರೆ ಹೈದ್ರಾಬಾದ ಕಡೆಯಿಂದ ಅತಿವೇಗ ಮತ್ತು ನಿಷ್ಕಾಳಜಿತನದಿಂದ ರೋಡಿನ
ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಮೊಹಮ್ಮದ ಮುಸ್ತಾಫಾ ಇವನು ಚಲಾಯಿಸುತ್ತಿದ್ದ
ಮೋಟಾರ್ ಸೈಕಲನ ಬಲಗಡೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾರೆ, ಕಾರಣ ಸದರಿ ಅಪಘಾತದಿಂದ ಫಿರ್ಯಾದಿಗೆ
ಎಡಗೈ ಬೆರಳುಗಳಿಗೆ ತರಚಿದ ಗಾಯ, ಬಲಗಾಲ ತೊಡೆಗೆ ಸಾದಾ ಗುಪ್ತಗಾಯಗಳು ಆಗಿರುತ್ತವೆ, ಮೊಹಮ್ಮದ
ಮುಸ್ತಾಫಾ ಇವನಿಗೆ ನೋಡಲಾಗಿ ತಲೆಗೆ ತೀವೃ ರಕ್ತಗಾಯ ಮತ್ತು ಎರಡು ಮೊಣಕಾಲುಗಳಿಗೆ ತರಚಿದ ಗಾಯಗಳು
ಆಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
aAvÁQ
¥ÉưøÀ oÁuÉ C¥ÀgÁzsÀ ¸ÀA.
85/2018, PÀ®A. 323, 324, 355, 504, 506, 34 L¦¹ eÉÆvÉ J¸ï.¹/J¸ï.¹ 3(1) (Dgï)
(J¸ï) :-
ಸುಮಾರು 15 ದಿವಸಗಳ ಹಿಂದೆ ರಾಯಪಳ್ಳಿ ಗ್ರಾಮದ ಆಕಾಶ ಈತನು ನಾಗಮಾರಪಳ್ಳಿ ಗ್ರಾಮಕ್ಕೆ
ಬಂದಾಗ ಫಿರ್ಯಾದಿ ರಾಜಕುಮಾರ ತಂದೆ ಈರಪ್ಪಾ ಕಾಂಬಳೆ ವಯ 30 ವರ್ಷ, ಜಾತಿ: ಎಸ್.ಸಿ ಹೊಲಿಯಾ ಸಾ: ನಾಗಮಾರಪಳ್ಳಿ
ಆಕಾಶ ಈತನಿಗೆ 200/- ರೂ. ತನ್ನ ಮನೆಯ ಮೇಲಿನ ಡಿಟಿಹೆಚ್ ಸಿಗ್ನಲ್ ಸೆಟ್ ಮಾಡಲು ಕೊಟ್ಟಿದ್ದು, ಆಕಾಶ ಈತನು ಮನೆಯ ಮೇಲಿನ ಡಿಟಿಹೆಚ್ ಬುಟ್ಟಿ ಚೆಕ್ ಮಾಡಿ
ಇದು ಆಗುವುದಿಲ್ಲ ಕೆಟ್ಟು ಹೊಗಿದೆ ಹೊಸ ಬುಟ್ಟಿ ತೆಗೆದುಕೊಂಡು ಬಾ ನಾನು ಕೂಡಿಸಿಕೊಡುತ್ತೆನೆ
ಅಂತಾ ಹೆಳಿ ಹೊಗಿದ್ದು, ಹಿಗಿರುವಲ್ಲಿ ದಿನಾಂಕ 30-08-2018 ರಂದು ಫಿರ್ಯಾದಿಯು ಅಂಬೇಡ್ಕರ
ಕಟ್ಟೆಯ ಮೇಲೆ ಕುಳಿತಾಗ ಆಕಾಶ ಈತನು ತಮ್ಮೂರ ನಾಮದೇವ ಈತನ ಹೊಟೆಲ್ ಮುಂದೆ ಸಿಸಿ ರೋಡಿನ ಮೇಲೆ
ಬಂದಿದ್ದನ್ನು ನೋಡಿ ಆಕಾಶನ ಹತ್ತಿರ ಹೊಗಿ ನಾನು
ಕೊಟ್ಟ 200/- ರೂ. ನನಗೆ ವಾಪಸ್ಸು ಕೊಡು ಅಂತಾ ಕೆಳಿದಾಗ ಆಕಾಶ ಈತನು ನನಗೆ 200/- ರೂ ವಾಪಸ್ಸು
ಕೊಟ್ಟಾಗ ಅಲ್ಲೆ ಇದ್ದ ನಾಗರಾಜ ತಂದೆ ಹಣಮಂತ ದೆಗಲವಾಡೆ ವಯ: 28 ವರ್ಷ, ಜಾತಿ: ಲಿಂಗಾಯತ, ಸಂತೋಷ ತಂದೆ
ವಿಜಯಕುಮಾರ ಬೆಣ್ಣೆ ವಯ: 23 ವರ್ಷ, ಜಾತಿ: ಲಿಂಗಾಯತ, ವಿರಶೆಟ್ಟಿ ತಂದೆ ಹಣಮಂತ ದೆಗಲವಾಡೆ ವಯ: 24 ವರ್ಷ, ಜಾತಿ: ಲಿಂಗಾಯತ ಇಬ್ಬರು ಸಾ:
ನಾಗಮಾರಪಳ್ಳಿ ರವರು ಕೂಡಿ ಫಿರ್ಯಾದಿಗೆ ಏ ರಾಜ್ಯಾ ನಿನು ನಮ್ಮ ಗೆಳೆಯನಿಗೆ
ಡಿಟಿಹೆಚ್ ರಿಪೇರಿ ಮಾಡಲು ಕೊಟ್ಟ ಹಣ ಯಾಕೆ ವಾಪಸ್ಸು ತೆಗೆದುಕೊಂಡಿದ್ದಿ ಅಂತಾ ಅವಾಚ್ಯ
ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ವಿರಶೆಟ್ಟಿ ಈತನು ಒತ್ತಿ ಹಿಡಿದಾಗ ಸಂತೋಷ ಈತನು ತನ್ನ
ಬಲಗಾಲಿನ ಚಪ್ಪಲಿ ತನ್ನ ಬಲಗೈಯಲ್ಲಿ ತೆಗೆದುಕೊಂಡು ಚಪ್ಪಲಿಯಿಂದ ಎರಡು ಕಪಾಳದ ಮೇಲೆ
ಹೊಡೆದಿರುತ್ತಾನೆ, ನಾಗರಾಜ ಈತನು ಬಡಿಗೆಯಿಂದ ಎಡಮೊಣಕೈ ಹತ್ತಿರ, ಎಡಗಾಲಿನ ಪಿಂಡರಕಿ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಸದರಿ ಘಟನೆಯನ್ನು ನೋಡಿ
ಬಿಡಿಸಲು ಬಂದ ಫಿರ್ಯಾದಿಯ ಅಣ್ಣನಾದ ಸಂಜುಕುಮಾರ ಈತನಿಗೆ ನಾಗರಾಜ ಈತನು ಒಂದು ಕಲ್ಲು
ತೆಗೆದುಕೊಂಡು ಕಲ್ಲಿನಿಂದ ಬಲಗಾಲಿನ ಮೊಣಕಾಲಿನ ಕೆಳಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿರತ್ತಾನೆ,
ಮೂವರು ಸೇರಿ ಫಿರ್ಯಾದಿಗೆ ನೀವು ಎಲ್ಲಿಯಾದರು ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ
ಜೀವದ ಬೆದರಿಕೆ ಹಾಕರುತ್ತಾರೆ, ಸದರಿ ಘಟನೆಯನ್ನು ಕಂಟೆಪ್ಪಾ ತಂದೆ ರಾಮಪ್ಪಾ ಮತ್ತು ಗಣಪತಿ ತಂದೆ
ಶಿವಪ್ಪಾ ವರ್ಮಾ ರವರು ನೊಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment