¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 08-01-2018
§¸ÀªÀPÀ¯Áåt £ÀUÀgÀ ¥Éưøï oÁuÉ
C¥ÀgÁzsÀ ¸ÀA. 03/2018, PÀ®A. 457, 380 L¦¹ :-
ದಿನಾಂಕ
06-01-2018 ರಂದು 1100 ಗಂಟೆಯಿಂದ 1400
ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಜ್ಞಾನೇಶ್ವರ ತಂದೆ ವಿಶ್ವನಾಥ ರೇಡ್ಡಿ ವಯ:
54 ವರ್ಷ,
ಜಾತಿ:
ರೇಡ್ಡಿ,
ಸಾ:
ಚೌಕೇವಾಡಿ ರವರ ಮನೆಯ ಕೊಣೆ ಕೀಲಿ ಮುರಿದು ಕೊಣೆಯಲ್ಲಿ ಪ್ರವೇಶ ಮಾಡಿ ಕೊಣೆಯಲ್ಲಿಟ್ಟಿದ ಅಲಮಾರಿ ಒಡೆದು
ಅಲಮಾರಿಯಲ್ಲಿದ್ದ 1) ಬಂಗಾರದ ಗಂಟನ 4 ತೊಲೆ ಅ.ಕಿ 1,12,000/- ರೂ., 2) ಕೀವಿಯಲ್ಲಿನ ಝುಮಕಾ 6 ಗ್ರಾಂ. 2 ಜೊತೆ ಅ.ಕಿ 28,000/- ರೂ., 3) ಕೀವಿಯಲ್ಲಿನ ಬಂಗಾರದ ಸರಾಸರಿ 3 ಗ್ರಾಂ. ಅ.ಕಿ 8,400/- ರೂ., 4) ಬಂಗಾರದ ಮಣಿ ( ಗುಂಡು) 2 ಗ್ರಾಂ. 5,600/- ರೂ. ಹಾಗೂ 5] ನಗದು ಹಣ 8,500/- ರೂ. ಹೀಗೆ ಒಟ್ಟು 1,62,500/- ರೂ. ಕಳವು ಮಾಡಿಕೊಂಡು ಹೋಗಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
§¸ÀªÀPÀ¯Áåt UÁæ«ÄÃt ¥Éưøï oÁuÉ
C¥ÀgÁzsÀ ¸ÀA. 04/2018, PÀ®A. 379 L¦¹ :-
ದಿನಾಂಕ
04-01-2018
ರಂದು
ರಂದು 2300 ಗಂಟೆಯಿಂದ ದಿನಾಂಕ 05-01-2018 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ
ಸಂಗಮೇಶ ತಂದೆ ಮಹಾರುದ್ರಪ್ಪಾ ಡೊಣಗಾಪೂರೆ ವಯ: 31 ವರ್ಷ, ಜಾತಿ: ಲಿಂಗಾಯತ, ಸಾ:
ಗೋರ್ಟಾ(ಬಿ) ರವರ ಮಹಿಂದ್ರಾ ಟ್ರಾಕ್ಟರ ಇಂಜಿನ ಟಿಪಿ ನಂ. ಕೆಎ-38/ಟಿ.ಇ-006742/2017/18 ನೇದ್ದು
ಅ.ಕಿ 7,50,000/-
ರೂ.
ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ
ಸಾರಾಂಶದ ಮೇರೆಗೆ ದಿನಾಂಕ 07-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 01/2018, ಕಲಂ. 279, 337, 338,
283, 304(ಎ) ಐಪಿಸಿ :-
ದಿನಾಂಕ 08-01-2017
ರಂದು ಫಿರ್ಯಾದಿ ಪ್ರಲ್ಹಾದರೆಡ್ಡಿ ತಂದೆ ವೆಂಕಟರೆಡ್ಡಿ ಬೊಗಲೆ ವಯ: 29
ವರ್ಷ, ಜಾತಿ: ರೆಡ್ಡಿ, ಸಾ: ದಣ್ಣೂರ, ತಾ: ಅಳಂದ, ಜಿಲ್ಲಾ: ಕಲಬುರಗಿ ರವರು ಮನೆಯಲ್ಲಿದ್ದಾಗ
ಪ್ರವೀಣ ತಂದೆ ವೀರಶೆಟ್ಟಿ ಗಾಡಿ ಸಾ: ಬಾಪೂರ, ತಾ & ಜಿ:
ಬೀದರ ರವರು ಕರೆ ಮಾಡಿ ತಿಳಿಸಿದೇನೆಂದರೆ ನಾನು ನವೀನಕುಮಾರ ತಂದೆ ನಾರಾಯಣ ಸಾ: ಜಹೀರಾಬಾದ
ರವರೊಂದಿಗೆ ಜೀಪ ಸಂಖ್ಯೆ ಕೆಎ-39/ಎ-0205
ನೇದರಲ್ಲಿ ಕುಳಿತು ರಸ್ತೆ ಸುರಕ್ಷತೆ ಪೆಟ್ರೋಲಿಂಗ ಕರ್ತವ್ಯ ಕುರಿತು ಮಂಗಲಗಿ ಗ್ರಾಮದಿಂದ
ರಾಷ್ಟೀಯ ಹೆದ್ದಾರಿ-65 ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಬರುತ್ತಿದ್ದಾಗ
ಜನತಾ ನಗರ ಹುಡಗಿ ಹತ್ತಿರ ಬಂದಾಗ ಕಬ್ಬಿನ ಲಾರಿ ಸಂ. ಕೆಎ-39/5815
ನೇದರ ಚಾಲಕನು ತನ್ನ ಲಾರಿಯನ್ನು ರಾತ್ರಿಯ ಸಮಯದಲ್ಲಿ ರೋಡಿನ ಮೇಲೆ ನಿಲ್ಲಿಸಿ ಇಂಡಿಕೇಟರ್ ಹಾಕದೇ
ಯಾವುದೇ ಮುಂಜಾಗೃತೆ ಕ್ರಮ ವಹಿಸದೇ ಅಜಾಗರುಕತೆಯಿಂದ ನಿಲ್ಲಿಸಿದ್ದರಿಂದ ನಾನು ನಮ್ಮ ಜೀಪನ್ನು
ನಿಲ್ಲಿಸಿ ಲಾರಿ ಚಾಲಕನಿಗೆ ವಿಚಾರಣೆ ಮಾಡಲಾಗಿ ಅವನು ತಿಳಿಸಿದೇನೆಂದರೆ ಸರ್ ನಮ್ಮ ಲಾರಿ ಪಂಚರ್
ಆಗಿದೆ 10
ನಿಮಿಷದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಅಂತ ತಿಳಿಸಿರುತ್ತಾನೆ, ನಂತರ ನಾನು ಲಾರಿ
ಚಾಲಕನಿಗೆ ಇದು ಹೈವೇ ರೋಡ ಇದೇ ನಿನ್ನ ಲಾರಿಯನ್ನು ರೋಡಿನ ಪಕ್ಕದಲ್ಲಿ ನಿಲ್ಲಿಸಿ ನಿನ್ನ ಕೆಲಸ
ಮಾಡಿಕೊಳ್ಳು ಅಂತ ಹೇಳಿ ಸ್ವಲ್ಪ ಮುಂದೆ ಬಂದಾಗ ಹೈದ್ರಾಬಾದ ಕಡೆಯಿಂದ ಹೈದ್ರಾಬಾದ - ಕಲಬುರಗಿ
ಬಸ್ ಸಂಖ್ಯೆ ಕೆಎ-32/ಎಫ್-2089 ನೇದರ ಚಾಲಕ ಮಡಿವಾಳಪ್ಪಾ ತಂದೆ ಶರಣಪ್ಪಾ
ಪಾಟೀಲ್. ಸಾ: ರಾಯಕೊಡ ಇವನು ತನ್ನ ಬಸನ್ನು ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ರೋಡಿನ ಮೇಲೆ
ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಜನತಾ ನಗರ ಹುಡಗಿ ಹತ್ತಿರ ರೋಡಿನ ಮೇಲೆ ನಿಂತಿದ್ದ
ಲಾರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ, ನಂತರ ನಾನು ಹೋಗಿ ನೋಡಲಾಗಿ ಬಸ್ ಕಂಡಕ್ಟರ್
ಅಂಬರಾಯ ತಂದೆ ಮಲ್ಲಪ್ಪಾ ಸಾ: ಇಟಗಾ ಇವರಿಗೆ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ
ಮುರಿದಿರುತ್ತದೆ, ಎಡಗಾಲ ಮೊಳಕಾಲಗೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ಎಡಗಣ್ಣಿನ ಮೇಲೆ
ಸಾದಾ ರಕ್ತಗಾಯ, ಬಲಗಡೆ ಗಲ್ಲಕ್ಕೆ ತರಚಿದ ಗಾಯ ತಲೆಗೆ ಸಾದಾ ಗುಪ್ತಗಾಯ ಮತ್ತು ಎದೆಯಲ್ಲಿ ಸಾದಾ
ಗುಪ್ತಗಾಯವಾಗಿರುತ್ತದೆ, ನಿಮ್ಮ ತಂದೆ ವೆಂಕಟರೆಡ್ಡಿ ತಂದೆ ಶಂಕರರೆಡ್ಡಿ
ಸಾ: ದಣ್ಣೂರ ಇವರಿಗೆ ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಎದೆಯಲ್ಲಿ
ಭಾರಿ ಗುಪ್ತಗಾಯ, ಹಣೆಯ ಎಡಗಡೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾರೆ, ಬಸ್
ಚಾಲಕ ಮಡಿವಾಳಪ್ಪಾ ಇವನಿಗೆ ಬಲ ಮೊಳಕಾಲಗೆ ಸಾದಾ ರಕ್ತಗಾಯ ಮತ್ತು ಎಡಗಡೆ ತೊಡೆಗೆ ಸಾದಾ ಗುಪ್ತ ಗಾಯಗಳು ಆಗಿರುತ್ತವೆ, ನಂತರ ನಾನು ಎಲ್ಲರಿಗೆ
(ಎಲ್ &
ಟಿ)
ಎನ್.ಹೆಚ್.ಎ.ಐ ನ ಅಂಬುಲೆನ್ಸದಲ್ಲಿ ಕೂಡಿಸಿಕೊಂಡು
ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತೇನೆ,
ಬಸ್ ಕಂಡಕ್ಟರ್ ಹೆಸರು ಮತ್ತು ವಿಳಾಸವನ್ನು ಬಸ್ ಚಾಲಕನಿಂದ ಕೇಳಿ ತಿಳಿದುಕೊಂಡಿದ್ದು ಮತ್ತು
ನಿಮ್ಮ ತಂದೆ ಮೃತ ವೆಂಕಟರೆಡ್ಡಿ ಇವರ ಜೇಬಿನಲ್ಲಿ ಇದ್ದ ಐ.ಡಿ ಕಾರ್ಡ ನೋಡಿ ಹೆಸರು ಮತ್ತು
ವಿಳಾಸವನ್ನು ತಿಳಿದುಕೊಂಡಿರುತ್ತೇನೆ, ಲಾರಿ ಚಾಲಕನ ಹೆಸರು ಮತ್ತು ವಿಳಾಸವನ್ನು
ಗೊತ್ತಾಗಿರುವುದಿಲ್ಲಾ, ಲಾರಿ ಚಾಲಕನ್ನು ನೋಡಿದರೆ ಗುರುತ್ತಿಸುತ್ತೇನೆ ಅಂತ ತಿಳಿಸಿರುತ್ತಾರೆ, ನಂತರ
ಫಿರ್ಯಾದಿಯು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಬಂದು ತಮ್ಮ ತಂದೆ ವೆಂಕಟರೆಡ್ಡಿ ಇವರಿಗೆ ನೋಡಲಾಗಿ
ಈ ಮೇಲಿನಂತೆ ಗಾಯಗಳಾಗಿ ಮೃತಪಟ್ಟಿದ್ದು ಕಂಡು ಬಂದಿರುತ್ತದೆ ಅಮತ ನೀಡಿದ ಮೌಖಿಕ ಹೇಳಿಕೆಯ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment