Police Bhavan Kalaburagi

Police Bhavan Kalaburagi

Monday, January 8, 2018

KALABURAGI DISTRICT CRIME REPORTS.

ಗ್ರಾಮೀಣ ಠಾಣೆ ಕಲಬುರಗಿ  : ದಿನಾಂಕ:- 08/01/2017 ರಂದು ಬೆಳಿಗ್ಗೆ 07:30 ಗಂಟಗೆ ಫಿರ್ಯಾದಿ ಶ್ರೀ ದಿಗಂಬರ ತಂದೆ ಹರಿಶ್ಚಂದ್ರ ಸಿಂದೇ ಸಾ:ಗೌರಿ ಶಂಕರ ಸೋಸೈಟಿ ಬಾಬಳಗಾಂವ ಆರ್.ಟಿ.ಓ ಆಫೀಸ ಹತ್ತಿರ ಲಾತೂರ ಮಹಾರಾಷ್ಟ್ರ ಇತನು ಪೊಲೀಸ ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಕಂಪ್ಯೂಟರನಲ್ಲಿ ಬೆರಳಚ್ಚು ಮಾಡಿಸಿದ್ದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶವೆನೆಂದರೆ ನನಗೆ ಮಾಯಾ ಎಂಬ ಹೆಂಡತಿ ಇದ್ದು ಅವಳ ಹೊಟ್ಟೆಯಿಂದ ಅಶ್ವಿನಿ ಎಂಬ ಹೆಣ್ಣು ಮಗಳಿದ್ದು ಅವಳು ಅಂದಾಜು 20 ವರ್ಷಗಳ ಹಿಂದೆ ತೀರಿಕೊಂಡಿದ್ದು ತದನಂತರ  2-3 ವರ್ಷಗಳ ಮೇಲೆ ನಾನು ನಮ್ಮ ಜಾತಿಯವರೆ ಆದ ಸತ್ಯಭಾಮಾ ಎಂಬವಳೊಂದಿಗೆ ಪ್ರೀತಿಸಿದ್ದು ಅವಳಿಗೆ ಮೊದಲು ರಾಮ ಎಂಬುವನೊಂದಿಗೆ ಲಗ್ನವಾಗಿ ಶರದ ಮತ್ತು ಯುವರಾಜ ಎಂಬ ಎರಡು ಜನ ಗಂಡು ಮಕ್ಕಳಿದ್ದು ಅವಳು ಗಂಡನಿಗೆ ಬಿಟ್ಟು ನನ್ನೊಂದಿಗೆ ಈ ಮಕ್ಕಳೊಂದಿಗೆ ಉಳಿದುಕೊಂಡಿದ್ದು ಅಂದಿನಿಂದ ನಾವು ಗಂಡ ಹೆಂಡತಿಯರಾಗಿ ಮತ್ತು ಈ ಮಕ್ಕಳನ್ನು ಕೂಡಾ ನನ್ನ ಮಕ್ಕಳಂತೆ ನೋಡಿಕೊಂಡು ಬರುತ್ತಿರುತ್ತೇನೆ. ಲಾತೂರಿನ ಟಿ.ಎಂ.ಸಿ ಟ್ರಾನ್ಸಪೊರ್ಟದ ಲಾರಿ ನಂ MH-24 AB-9263 ನೆದ್ದರ ಮೇಲೆ ಡೈವರ್ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ನಿನ್ನೆ ದಿನಾಂಕ:- 07/01/2018 ರಂದು  ಮಹಾರಾಷ್ಟ್ರದ ನಗರದ ಜಿಲ್ಲೆಯಲ್ಲಿ ಈ ಲಾರಿಯಲ್ಲಿದ್ದ ಸಿಮೆಂಟ ಲೋಡನ್ನು ಖಾಲಿ ಮಾಡಿ ಅಲ್ಲಿಂದ ಮದ್ಯಾಹ್ನದ ನಂತರ ನಾನು ಮತ್ತು ನನ್ನ ಸಾಕು ಮಗ ಯುವರಾಜ ವಯ:20 ವರ್ಷ ಇಬ್ಬರು ಅಲ್ಲಿಂದ ಬಿಟ್ಟು ಚಿತ್ತಾಪೂರದ ಸಿಮೆಂಟ ಕಾರ್ಖಾನೆಗೆ ಬರುವ ಕುರಿತು ಹೊರಟಿದ್ದು ಮಗ ಯುವರಾಜ ಇತನು ಲಾರಿಯನ್ನು ನಡೆಸಿಕೊಂಡು ಬರುತ್ತಿದ್ದು ಇಂದು ದಿನಾಂಕ:- 08/01/2018 ರಂದು ಬೆಳಗಿನ ಜಾವ 04:00 ಗಂಟೆ ಸುಮಾರಿಗೆ ಕಲಬುರಗಿ-ಆಳಂದ ರೋಡಿನ ಪಟ್ಟಣ ಗ್ರಾಮದ ಟೋಲ ನಾಕಾ ಹತ್ತಿರ ಬಂದಾಗ ಮಗನು ನನಗೆ ಎಬ್ಬಿಸಿ ಲಾರಿಯನ್ನು ನನಗೆ ನಡೆಸುವಂತೆ ಹೇಳಿದ್ದು ನಾನು ಲಾರಿಯನ್ನು ಟೋಲ ನಾಕಾ ಪಾಸ್ ಮಾಡಿ ಸ್ವಲ್ಪ ಅಂತರದಲ್ಲಿ 04:15 ಗಂಟೆ ಸುಮಾರಿಗೆ ಸಂಡಾಸ ಬರುತ್ತಿರುವುದ್ದರಿಂದ್ದ ರೋಡಿನ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ನಾನು ಸಂಡಾಸಕ್ಕೆ ರೋಡಿನ ಬದಿಯಲ್ಲಿಯೇ ಕುಳಿತುಕೊಳ್ಳುವಾಗ ಮಗನು ಲಾರಿಯಲ್ಲಿಯೇ ಮಲಗಿಕೊಂಡಿದ್ದನು. ಅಷ್ಟೋತ್ತಿಗೆ ಲಾರಿಯ ಹಿಂದುಗಡೆಯಿಂದ ಇಬ್ಬರು 30-35 ವರ್ಷದ ವಯಸ್ಸಿನ ಗಂಡು ಮಕ್ಕಳು ಬಂದವರೇ ನನಗೆ ಒಮ್ಮಲೇ ಮುಖಕ್ಕೆ ಒತ್ತಿ ಹಿಡಿದು ರೋಡಿನ ತಗ್ಗಿನಲ್ಲಿ ಕರೆದುಕೊಂಡು ಹೋಗುವಾಗ ನಾನು ಅದರಿಂದ ಭಯಗೊಂಡು ಚೀರಾಡಿದಾಗ ಈ ಶಬ್ದವನ್ನು ನನ್ನ ಮಗ ಕೇಳಿ ಲಾರಿಯಿಂದ ಇಳಿದು ನಮ್ಮ ಹತ್ತಿರ ಬಂದವನೇ ಹಾಗೆಯೇ ನಾನು ಚೀರಾಡುವಾಗ ಅವರಿಗೆ ಮಗ ಬೀಡುವಂತೆ ಒಂದು ಏಟು ಅವರಲ್ಲಿ ಒಬ್ಬನ ಮುಖಕ್ಕೆ ಹೊಡೆದಿದ್ದರಿಂದ್ದ ಅವರು ಒಮ್ಮಲೇ ನನಗೆ ಮತ್ತು ಮಗನಿಗೆ ನೂಕಿಸಿಕೊಟ್ಟಂತೆ ಮಾಡಿ ಒಬ್ಬನು ತನ್ನಲ್ಲಿರುವ ಹರಿತವಾದ ಚಾಕುವಿನಿಂದ ಮಗನ ಕುತ್ತಿಗೆಯ ಬಲಬದಿಗೆ ಜೋರಾಗಿ ಹೊಡೆದಿದ್ದರಿಂದ್ದ ಮಗನು ಚೀರಾಡುತ್ತಾ ನೆಲಕ್ಕೆ ಬಿದ್ದನು ನೋಡಲಾಗಿ ಭಾರಿ ಪ್ರಮಾಣದ ರಕ್ತಗಾಯವಾಗಿ ಕಾಲು ತಿಕ್ಕುತ್ತಿದ್ದಾಗ ಅವರಿಬ್ಬರು ಅಲ್ಲಿಂದ ಓಡಿ ಹೋದರು ಇದರಿಂದ್ದ ನಾನು ಚೀರಾಡುತ್ತಾ ಟೋಲ ನಾಕಾದ ಕಡೆಗೆ ಓಡುತ್ತಾ ಹೋಗಿ ಟೋಲ ನಾಕಾದ ಮಾನ್ಯೇಜರ್ ಹಾಗು ಇನ್ನು ಇಬ್ಬರನ್ನು ಕರೆದುಕೊಂಡು ಬರುವಷ್ಟ್ರರಲ್ಲಿ ಮಗನು ಭಾರಿ ರಕ್ತಸ್ರಾವವಾಗಿ ಕೊಲೆ ಆಗಿ ಬಿದ್ದಿದ್ದನು.ಈ ಘಟನೆಯು 04:15 ಎ.ಎಂದಿಂದ 04:20 ಎ.ಎಂದ ಸುಮಾರಿಗೆ ಸಂಭವಿಸಿರುತ್ತದೆ. ಅವರನ್ನು ಮತ್ತೆ ನೋಡಿದಲ್ಲಿ ಗುರ್ತಿಸುತ್ತೇನೆ.  ಕಾರಣ ಯಾರೋ ಇಬ್ಬರು ಗಂಡು ಮನುಷ್ಯರು ಅಂದಾಜು 30-35 ವರ್ಷ ವಯಸ್ಸಿನವರು ನನ್ನ ಹತ್ತಿರ ಬಂದು ಒತ್ತಿ ಹಿಡಿದುಕೊಂಡು ಜಗ್ಗಿಕೊಂಡು ಹೋಗುವಾಗ ಮಗನು ಬೀಡಿಸಲು ಬಂದಾಗ ಹರಿತವಾದ ಚಾಕುವಿನಿಂದ ಯಾವುದೋ ಬಲವಾದ ಉದ್ದೇಶಕ್ಕಾಗಿ ಮಗನ ಬಲಭಾಗದ ಕುತ್ತಿಗಿಗೆ ಚುಚ್ಚಿ ಭಾರಿ ಗಾಯಗೊಳಿಸಿ ಕೊಲೆ ಮಾಡಿ ಪರಾರಿ ಆಗಿದ್ದು ಅವರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ವಗೈರೇ ಫಿರ್ಯಾದಿ ಹೇಳಿಕೆ ಸಾರಾಂಶದ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.

No comments: