ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗುಣವಂತ ತಂದೆ ಶಂಕರ ಬಿಸೆ ಸಾ: ಮಣೂರ ಇವರು ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜಾರಿಕೆ ಸೇವೆ ಮಾಡುತ್ತಿದ್ದು ನಮ್ಮಂತೆ ನಮ್ಮೂರಿನ ತಮ್ಮಣ್ಣ ತಂದೆ ಶಿವಪ್ಪ ಪೂಜಾರಿ ಇವರ ಕುಟುಂಬಕ್ಕು ಸಹ ಪೂಜಾರಿಕೆಯ ಪಾಲು ಇರುತ್ತದೆ, ಈಗ ಕೆಲವು ವರ್ಷಗಳಿಂದ ಸದರಿ ತಮ್ಮಣ್ಣ ಪೂಜಾರಿ ಮತ್ತು ಅವನ ಕಡೆಯವರು ನಮಗೆ ಶ್ರೀ ಯಲ್ಲಮ್ಮ ದೇವಸ್ಥಾನದ ಪೂಜಾರಿಕೆ ಪೂರ್ತಿ ನಮ್ಮದು ಇರುತ್ತದೆ ನೀವು ಇನ್ನುಮುಂದೆ ಪೂಜಾರಿಕೆ ಮಾಡಬೇಡಿ ಅಂತಾ ಹೇಳಿದ್ದರಿಂದ ನಮಗೂ ಅವರಿಗೂ ತಕರಾರು ಆಗಿರುತ್ತದೆ. ಅಂದಿನಿಂದ ಸದರಿ ತಮ್ಮಣ್ಣ ಪೂಜಾರಿ ಮತ್ತು ಅವನ ಕಡೆಯವರು ನಮ್ಮ ಮೇಲೆ ದ್ವೇಷ ಸಾದಿಸುತ್ತಾ ಬಂದಿರುತ್ತಾರೆ, ದಿನಾಂಕ 30-05-2017
ರಂದು ಸದರಿ ಶ್ರೀ ಯಲ್ಲಮ್ಮ ದೇವಸ್ಥಾನದ ಪೂಜಾರಿಕೆ ವಿಷಯವಾಗಿ ಇದ್ದ ತಕಾರಿನ ಬಗ್ಗೆ ನ್ಯಾಯ ಪಂಚಾಯತಿ ಮಾಡಿ ಬಗೆ ಹರಿಸಿಕೊಳ್ಳೊಣ ಎಂದು ಗ್ರಾಮದ ಮುಖಂಡರು ಹೇಳಿದ ಮೇರೆಗೆ ಇಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ಭೀಮಾ ನದಿಯ ಹತ್ತಿರ ಇರುವ ಶ್ರೀ ಅಂಬಾ ಭವಾನಿ ಗುಡಿಯ ಹತ್ತಿರ ಎಲ್ಲರಿಗೂ ಬರಲು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಸಮಾಜದ ಎಲ್ಲಾ ಮುಖಂಡರು ಕೂಡಿಕೊಂಡು ಶ್ರೀ ಅಂಬಾ ಭವಾನಿ ಗುಡಿಯ ಹತ್ತಿರ ಹೋಗಿ ಮಾತುಕತೆ ಮಾಡುತ್ತಿದ್ದಾಗ ನಮ್ಮೂರಿನ 1) ಬಸಪ್ಪ ತಂದೆ ಮಾಹಾದೇವಪ್ಪ ಕರೂಟಿ 2) ಬಸು ಅಳ್ಳಗಿ 3) ಯಶವಂತ ಕರೂಟಿ 4) ಚನ್ನು ಕರೂಟಿ 5) ಮಾಹಾದೇವ ಸಾಲುಟಗಿ 6) ಮಾಹಾದೇವ ಅಲ್ಲಾಪೂರ 7) ಮಾಹಾದೇವ ಜಾನಕರ್ 8) ಧಾನು ಧಾನಶೇಟ್ಟಿ ಮತ್ತು ಇವರ ಕಡೆಯವರು 9) ಭೀಮಣ್ಣ ಹತ್ತರಕಿ 10) ಮುದಕಪ್ಪ ತಂದೆ ಬಸಪ್ಪ ಹಿರೋಳ್ಳಿ 11) ಶಿರಕೂ ಕರೂಟಿ 12) ತಮ್ಮಣ್ಣ ತಂದೆ ಶಿವಪ್ಪ ಪೂಜಾರಿ 13) ಭಿಮಾಶಂಕರ ತಂದೆ ಗಡ್ಡೆಪ್ಪ ಪೂಜಾರಿ 14) ಶೇಖರ ತಂದೆ ತಮ್ಮಣ್ಣ ಪೂಜಾರಿ 15) ಧಾನಪ್ಪ ತಂದೆ ತಮ್ಮಣ್ಣ ಪೂಜಾರಿ 16) ಶಿವಪ್ಪ ತಂದೆ ಗಡ್ಡೆಪ್ಪ ಪೂಜಾರಿ 17) ಪ್ರಕಾಶ ತಂಣದೆ ಗಡ್ಡೆಪ್ಪ ಪೂಜಾರಿ 18) ಮಲ್ಲು ತಂದೆ ಗಡ್ಡೆಪ್ಪ ಪೂಜಾರಿ 19) ಶಿವಪ್ಪ ತಂದೆ ಪರಮೇಶ್ವರಪೂಜಾರಿ 20) ಬಸವರಾಜ ತಂದೆ ಪರಮೇಶ್ವರ ಪೂಜಾರಿ 21) ಸಚಿನ ತಂದೆ ಸಿದ್ದಪ್ಪ ಪೂಜಾರಿ 22) ರಾಹುಲ್ ತಂದೆ ಶಾಂತಪ್ಪ ಪೂಜಾರಿ ಹಾಗೂ ಇತರರೂ ಕೂಡಿಕೊಂಡು ಒಳಸಂಚು ಮಾಡಿ ಬಸಪ್ಪ ತಂದೆ ಮಾಹಾದೇವಪ್ಪ ಕರೂಟಿ ಇವರ ಕಾರ ನಂ ಎಮ್.ಹೆಚ್-13 9555 ಈ ಕಾರಿನಲ್ಲಿದ್ದ ಬಡಿಗೆಗಳನ್ನು ಹಾಗೂ ಕಲ್ಲುಗಳನ್ನು ಮತ್ತು ತಲವಾರನ್ನು ತಗೆದುಕೊಂಡು ಬಂದು ಏಕಾ ಏಕಿ ನನಗೆ ಮತ್ತು ನನ್ನ ಮಕ್ಕಳಾದ ಆಕಾಶ ತಂದೆ ಗುಣವಂತ ಬಿಸೆ (ಗೊಂದಳಿ), ಲಕನ್ ತಂದೆ ಗುಣವಂತ ಬಿಸೆ (ಗೊಂದಳಿ), ನನ್ನ ಹೆಂಡತಿ ಇಂದುಬಾಯಿ ಗಂಡ ಗುಣವಂತ ಬಿಸೆ (ಗೊಂದಳಿ), ಹಾಗೂ ನಮ್ಮ ಅಣ್ಣ ತಮ್ಮಕಿಯ ಕಿರಣ ತಂದೆ ಸಹದೇವ ಬಿಸೆ (ಗೊಂದಳಿ), ಮಹಾದೇವ ತಂದೆ ಮೋತಿರಾಮ ಬಿಸೆ (ಗೊಂದಳಿ), ವಿಷ್ಣು ತಂದೆ ಶಂಕರ ಬಿಸೆ (ಗೊಂದಳಿ), ಅಂಬಾದಾಸ್ ತಂದೆ ಅರ್ಜುನ ಬಿಸೆ (ಗೊಂದಳಿ), ವಿಜಯ ತಂದೆ ಗುಂಡಪ್ಪ ಬಿಸೆ (ಗೊಂದಳಿ), ಮನೋಹರ್ ತಂದೆ ದೊಂಡಿಬಾ ಪಾಚಂಗೆ ನಮಗೆಲ್ಲರಿಗೂ ಮಾರಕಾಸ್ತ್ರಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ, ಸದರಿಯವರು ನಮಗೆ ಹಲ್ಲೆ ಮಾಡುತ್ತಿದ್ದಾಗ ನ್ಯಾಯ ಪಂಚಾಯತಿಗೆ ಬಂದವರು ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಸದರಿಯವರು ಹೊಡೆದರಿಂದ ನಮಗೆಲ್ಲರಿಗೂ ಬಾರಿ ರಕ್ತಗಾಯಗಳು ಮತ್ತು ಒಳಪೆಟ್ಟುಗಳು ಆಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರೀ ದೇವಿಂದ್ರ
ತಂದೆ ತಿಪ್ಪಣ್ಣ ಜಾನ ಸಾಃ ಜೀವಣಗಿ ತಾಃ ಜಿಃ ಕಲಬುರಗಿ ಹಾಃವಃ ಗಂಗಾಮಯಿ ಮಠ ಹತ್ತಿರ ಜೇವರಗಿ ಇವರು
ಜೇವರಗಿ ಪಟ್ಟಣದ ಗಂಗಾಮಯಿ ಮಠದ ಹತ್ತಿರ ಸ್ವಂತ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ
ವಾಸವಾಗಿರುತ್ತೆನೆ. ನಮ್ಮ ಮನೆಯ ಎರಡು ಕೊಣೆಗಳು ಪರಸಪ್ಪ ತಂದೆ ಯಲ್ಲಪ್ಪ ಮಾದರ ಶಿಕ್ಷಕರಿಗೆ ಬಾಡಿಗೆ ಕೊಟ್ಟಿದ್ದು ಅವರು ತನ್ನ ಹೆಂಡತಿ
ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ದಿನಾಂಕ 28.05.2017 ರಂದು ರಾತ್ರಿ ಮನೆಯಲ್ಲಿ ಎಲ್ಲರೂ ಊಟಮಾಡಿಕೊಂಡು ರಾತ್ರಿ 10.00 ಗಂಟೆಯ ಸುಮಾರಿಗೆ
ನಮ್ಮ ಮನೆಯ ಬಾಗೀಲ ಮುಚ್ಚಿ ಕೀಲಿ ಹಾಕಿ ನಾವು ಮನೆಯವರೆಲ್ಲರೂ ಮತ್ತು ಪರಸಪ್ಪ ಮಾದರ ಎಲ್ಲರೂ
ನಮ್ಮ ಮನೆಯ ಛತ್ತಿನ ಮೇಲೆ ಹೋಗಿ ಮಲಗಿಕೊಂಡಿರುತ್ತೆವೆ. ದಿ. 29.05.2017 ರಂದು ಮುಂಜಾನೆ 6.00
ಗಂಟೆಯ ಸುಮಾರಿಗೆ ಪರಸಪ್ಪ ಮಾದರ ಇವರು ಎದ್ದು ಕೇಳಗೆ ಬಂದು ನಮ್ಮ ಮನೆಯ ಬಾಗೀಲ ತೆರೆದಿದ್ದು
ನೋಡಿ ಬಂದು ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮನೆಯ ಮೇಲಿಂದ ಎದ್ದು ಬಂದು ನೋಡಲಾಗಿ
ನಮ್ಮ ಮನೆಯ ಬಾಗೀಲ ಕೀಲಿ ಮುರಿದಿದ್ದು ಮತ್ತು ಬಾಗೀಲ ತೆರೆದಿದ್ದು ಇತ್ತು ಅಲ್ಲದೆ ಬಾಡಿಗೆ ಇದ್ದ
ಪರಸಪ್ಪ ಇವರ ಮನೆಯ ಬಾಗೀಲ ಸಹ ತೆರೆದಿದ್ದು ಇತ್ತು. ನಂತರ ನಾವು ನಮ್ಮ
ಮನೆಯೊಳಗೆ ಹೋಗಿ ನೋಡಲಾಗಿ ನಮ್ಮ ಮನೆಯಲ್ಲಿ ಸಾಮಾನುಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು.
ನಮ್ಮ ಮನೆಯೊಳಗಿನ ಕಬ್ಬಿಣದ ಕಪಾಟ ತೆರದು ನೋಡಲು ಅರದಲ್ಲಿ ಇಟ್ಟ ಬಂಗಾರದ ಆಭರಣಗಳು 83 ಗ್ರಾಂ ಬಂಗಾರದ ಆಭರಣಗಳು ಅ.ಕಿ. 2,34,000/- ರೂ
ಕಿಮ್ಮತ್ತಿನವು ಕಳ್ಳತನವಾಗಿದ್ದವು ನಂತರ ನಮ್ಮ ಮನೆಯಲ್ಲಿ ಬಾಡಿಗೆ ಇದ್ದ ಪರಸಪ್ಪ ಮಾದರ ಇವರ
ಮನೆಯ ಬಾಗಿಲ ಕೀಲಿ ಮುರಿದು ಅವರ ಮನೆಯಲ್ಲಿನ 1) ನಗದು ಗಣ 24,200/- ರೂ
2) 5 ಗ್ರಾಂ ಬೆಳ್ಳಿಯ ಒಂದು ಜೊತೆ ಕಾಲು ಚೈನಗಳು ಅ.ಕಿ. 3,000/- ರೂ
ಕಿಮ್ಮತ್ತಿನವು ಕಳುವಾದ ಬಗ್ಗೆ ಮತ್ತು ಅವರ ಎಸ್.ಬಿ.ಹೆಚ್. ಬ್ಯಾಂಕ ಜೇವರಗಿಯಲ್ಲಿ ಡಿಪೊಜೀಟ್
ಇಟ್ಟ ಹಣ ಬಾಂಡ್ ಕಳುವಾಗಿರುತ್ತದೆ ಒಟ್ಟು 83 ಗ್ರಾಂ ಬಂಗಾರದ ಅಭರಣಗಳು 5 ಗ್ರಾಂ ಬೆಳ್ಳಿಯ
ಆಭರಣಗಳು & ನಗದು ಹಣ ಸೇರಿ ಒಟ್ಟು 2,61,200/-
ರೂಪಾಯಿ ಕಿಮ್ಮತ್ತಿನಷ್ಟು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment