Police Bhavan Kalaburagi

Police Bhavan Kalaburagi

Thursday, February 2, 2017

BIDAR DISTRICT DAILY CRIME UPDATE 02-02-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-02-2017

d£ÀªÁqÀ ¥Éưøï oÁuÉ UÀÄ£Éß £ÀA. 06/2017, PÀ®A 87 PÉ.¦ PÁAiÉÄÝ :-
ದಿನಾಂಕ 01-02-2017 ರಂದು ಯರನಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ರವೀಂದ್ರನಾಥ ಎಎಸ್ಐ ಜನವಾಡಾ ಪೊಲೀಸ್ ಠಾನೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸಐ ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡೆ ಯರನಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂದೆ ಸಾರ್ವಜನಿಕರ ಸ್ಥಳದಲ್ಲಿ ಗೋಲಾಕಾರವಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೊಪಿತರಾದ 1) ಲಿಂಗಾನಂದ ಸ್ವಾಮಿ ತಂದೆ ಶಿವಾರುದ್ರಯಸ್ವಾಮಿ, 2) ಕಾಂತಯ್ಯಾ ಸ್ವಾಮಿ ತಂದೆ ಗುರಯ್ಯಾ ಸ್ವಾಮಿ, 3) ವಿಜಯ ತಂದೆ ಬೀರಪ್ಪಾ ಪ್ರಭಾನೋರ, 4) ಆಮೇರ ತಂದೆ ಶಮಶೋದ್ದಿನ ಹೊಕಾರ್ಣೆವಾಲೆ, 5) ನವಾಜ್ ತಂದೆ ಇಮಾಮಸಾಬ ಮಚಕುರಿ ರವರ ಮೇಲೆ ದಾಳಿ ಮಾಡಿ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ ಒಟ್ಟು ನಗದು ಹಣ 2170/- ರೂಪಾಯಿ ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ UÀÄ£Éß £ÀA. 09/2017, PÀ®A 498(J), 323, 504 eÉÆvÉ 149 L¦¹ :-
ಫಿರ್ಯಾದಿ ಅಂಬಿಕಾ ಗಂಡ ದಯಾನಂದ ಸಾ: ಶರಣನಗರ (ಕಿಣ್ಣಿ), ಸದ್ಯ: ಮಂಗಳೂರ ರವರಿಗೆ ದಯಾನಂದ ತಂದೆ ದೇವಿಂದ್ರಪ್ಪಾ ತೆಳಕೇರಿ ಮು: ಶರಣನಗರ (ಕಿಣ್ಣಿ) ಎಂಬಾತನಿಗೆ ದಿನಾಂಕ 14-05-2015 ರಂದು ಗಂಡನ ಮನೆಯ ಮುಂದೆ ಸಾಂಪ್ರದಾಯಿಕವಾಗಿ ಮದುವೆ ಮಾಡಿ ಕೊಟ್ಟಿರುತ್ತಾರೆ, ಮದುವೆ ಸಮಯಕ್ಕೆ ಫಿರ್ಯಾದಿಯ ತಂದೆ ತಾಯಿಯವರು 40 ಗ್ರಾಂ. ಬಂಗಾರ ಹಾಗು 11,000/- ರೂಪಾಯಿ ಮತ್ತು 50 ಸಾವಿರದಷ್ಟು ಗೃಹ ಬಳಕೆಯ ಸಾಮಾನುಗಳು ವರನಿಗೆ ಉಡುಗರೆ ರೂಪದಲ್ಲಿ ಕೊಟ್ಟಿರುತ್ತಾರೆ, ಅಲ್ಲದೇ 20 ಸಾವಿರ ರೂಪಾಯಿ ಖರ್ಚು ಮಾಡಿ ಬಟ್ಟೆ ತಂದು ಬಾಸಣಕಿ ಹಾಕಿ ಕೊಟ್ಟಿರುತ್ತಾರೆ, ಲಗ್ನದ ನಂತರ ಗಂಡನ ಮನೆಗೆ ಕರೆದೊಯ್ದು 8 ದಿನಗಳು ಮಾತ್ರ ಚೆನ್ನಾಗಿ ಇಟ್ಟುಕೊಂಡಿರುತ್ತಾರೆ, ನಂತರ ಆರೋಪಿತರಾದ 1) ದಯಾನಂದ ತಂದೆ ದೇವಿಂದ್ರಪ್ಪಾ ವಯ: 45 ವರ್ಷ (ಗಂಡ), 2)  ಶಿವಭದ್ರಮ್ಮ (ಅತ್ತೆ), 3) ದೇವಿಂದ್ರಪ್ಪಾ (ಮಾವ), 4) ಶಶಿಕಲಾ (ಗಂಡನ ಅತ್ತಿಗೆ) 4 ಜನ ಸಾ: ಶರಣನಗರ (ಕಿಣ್ಣಿ) 5) ಸುನೀತಾ ಗಂಡ ಜಯಪ್ಪಾ ಸಾ: ಧನ್ನೂರ (ನಾದನಿ) ಇವರೇಲ್ಲರೂ ಕೂಡಿ ಫಿರ್ಯಾದಿಗೆ ಹೊಡೆಬಡೆ ಮಾಡಿ ಹೊಲಸು ಶಬ್ದಗಳಿಂದ ಬೈದು ಮಾನಸಿಕ ಹಾಗು ದೈಹಿಕ ಹಿಂಸೆ ಕೊಟ್ಟು ನಾನಾ ರೀತಿಯ ಕಿರುಕುಳ ಕೊಡಲಾರಂಭಿಸಿದರು, ಫಿರ್ಯಾದಿಯು ಬಿ.ಎ ಶಿಕ್ಷಣ ವಿದ್ಯಾರ್ಥಿನಿ ಇದ್ದು ಸರಿ ಹೊಂದಬಹುದೆಂದು ತಾಳಿಕೊಂಡರು ಸದರಿ ಆರೋಪಿರು ಸರಿ ಪಡಿಸಿಕೊಳ್ಳಲಿಲ್ಲ, ಫಿರ್ಯಾದಿಯ ನಿಶ್ಚಿತಾರ್ಥ ಮಾಡಿದ ಪ್ರಕಾಶ ಮೇತ್ರೆ ಪೂಜಾರಿ ಎಂಬಾತನು 20 ವರ್ಷದವಳಾದ ಫಿರ್ಯಾದಿಗೆ 45 ವರ್ಷದ ವೃದ್ಧನಿಗೆ ಅನೇಕ ಸುಳ್ಳುಗಳು ಹೇಳಿ ಕೆಟ್ಟ ಆಲೋಚನೆಯಿಂದ ಎಲ್ಲರೂ ಕೂಡಿ ಲಗ್ನ ಮಾಡಿ ಕೊಟ್ಟಿರುತ್ತಾರೆಂದು ಗೊತ್ತಾಯಿತು, ವರ ಹಣದ ಆಸೆಗೆ ಹಾಗು ಫಿರ್ಯಾದಿಗೆ ದುರುಪಯೋಗ ಮಾಡಿಕೊಳ್ಳುವ ವಿಚಾರದಿಂದ ಮಾಡಿಕೊಂಡಿದ್ದಾರೆ, ಅಲ್ಲದೇ ಫಿರ್ಯಾದಿಗೆ ಇನ್ನು 20 ಸಾವಿರ ರೂಪಾಯಿ ನಿಮ್ಮ ತಂದೆಯಿಂದ ತೆಗೆದು ಕೊಂಡು ಬಾ ಎಂದು ಕರೆ ಮುಖಾಂತರ ಸತ್ತಾಯಿಸುತ್ತಿದ್ದಾರೆ, ಫಿರ್ಯಾದಿಯ ತಂದೆ ತಾಯಿ ಯವರು ಅತಿ ಬಡವರಾಗಿದಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-02-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: