ಅಶೋಕ ನಗರ ಠಾಣೆ
:ದಿನಾಂಕ 06/09/2015 ರಂದು ಸಂಜೆ 5-30 ಪಿಎಂಕ್ಕೆ ಶ್ರೀ.
ಡಿ.ವೆಂಕಟರಾವ ತಂದೆ ಕೊಪ್ರೇಶರಾವ ದೇಸಾಯಿ ಸಾ: ವಡಗೇರಾ ತಾ: ಶಾಹಪೂರ ಹಾ.ವ: ಪ್ಲಾಟ ನಂ. 133 “ಶ್ರೀ ಕೃಷ್ಣ ನಿವಾಸ” ಎನ್.ಜಿ.ಒ ಕಾಲೋನಿ ಜೇವರ್ಗಿ ರಸ್ತೆ ಕಲಬುರಗಿ ರವರು ಠಾಣೆಗೆ
ಬಂದು ಲಿಖಿತ ಅರ್ಜಿ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ಅಜ್ಜನವರ ವಾರ್ಷಿಕ ಶೃದ್ದದ
ಪ್ರಯುಕ್ತ ದಿನಾಂಕ 04/09/2015 ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೆಲ್ಲರೂ
ಯಾದಗೀರಗೆ ಹೊಗಿರುತ್ತಾರೆ. ದಿನಾಂಕ 06/09/2015 ರಂದು ಬೆಳಿಗ್ಗೆ ವೇಳೆಗೆ ನಮ್ಮ ಮನೆಯ ಮಾಲಿಕರಾದ ರಂಗನಾಥ ಬೊರ್ಗಿಕರ ರವರು ದೂರವಾಣಿ ಮೂಲಕ ಮನೆಗಳ್ಳತನವಾದ ವಿಷಯವನ್ನು ತಿಳಿಸಿದ ಮೇಲೆ ನಮ್ಮ ತಂದೆ
ತಾಯಿಯವರು ಶ್ರದ್ಧಕರ್ಮದಲ್ಲಿ ಇರಬೇಕಾಗಿದ್ದರಿಂದ ನಾನು ಒಬ್ಬನೇ ಕಲಬುರಗಿಗೆ ಬಂದು ನೊಡಲು ಮನೆ
ಬಾಗಿಲು ಕೊಂಡಿ ಹಾಗು ಬೀಗ ಮುರಿದಿತ್ತು ನಂತರ
ಒಳಗಡೆ ಹೊಗಿ ನೊಡಲು ಬೇಡರೂಮಿನಲ್ಲಿದ್ದ ಅಲಮಾರ
ತೆರೆದಿದ್ದು ಬಟ್ಟೆ ಬರೆಗಳು ಚಲ್ಲಾಪಿಲ್ಲಿಯಾಗಿದ್ದವು. ದೇವರಮನೆಯಲ್ಲಿ ಪೂಜಾ ಹಾಗು ಸಹ
ಸಾಮಗ್ರಿಗಳು ಚಲ್ಲಾಪಿಲ್ಲಿಯಾಗಿದ್ದವು. ದಿನಾಂಕ 05-06/09/2015 ರ ರಾತ್ರಿ ವೇಳೆಯಲ್ಲಿ
ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗಿಲಿನ ಬೀಗ ಹಾಗು ಕೊಂಡಿ ಮುರಿದು ಅತಿಕ್ರಮ ಪ್ರವೇಶ ಮಾಡಿ ಈ ಕೆಳಗೆ ನಮೂದಿಸಿದ ಬೆಳ್ಳಿ
ಬಂಗಾರದ ವಸ್ತುಗಳು ಹಾಗು ನಗದನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆ. 1)ಬೆಳ್ಳಿಯ ತಾಟು ಸಣ್ಣದ್ದು-1 2) ಬೆಳ್ಳಿಯ ತಾಟು ದೊಡ್ಡದ್ದು-1 3)ಬೆಳ್ಳಿಯ
ಬಟ್ಟಲುಗಳು-6, 4)ಬೆಳ್ಳಿಯ ಲೋಟಗಳು-17, 5) ಬೆಳ್ಳಿಯ ಆರತಿ ತಟ್ಟೆ-1, 6)ಬೆಳ್ಳಿಯ ಅತ್ತರದಾನ-1, 7)ಬೆಳ್ಳಿಯ ಅರ್ಘ್ಯ ಪಾತ್ರೆ-1, 8)ಬೆಳ್ಳಿಯ ನಿಲಾಂಜನ ಒಂದು ಜೊತೆ-2 9) ಚಿನ್ನದ ತುಳಸಿ
ಮಾಂಗಲ್ಯ-1 10) ಚಿನ್ನದ ನಕಲೇಸ 6 ಗ್ರಾಂ, 11) ಚಿನ್ನದ ಕಿವಿ ಬೆಂಡೊಲಿ ಒಂದು ಜೊತೆ 12) ನಗದು ಹಣ 5000/- ರೂ. ಹೀಗೆ ಒಟ್ಟು 2 ಕೆ.ಜಿ ಬೆಳ್ಳಿಯ ಪೂಜಾ ಹಾಗು
ಸಹಸಾಮಗ್ರಿಗಳು ಮತ್ತು 10 ಗ್ರಾಂ ಬಂಗಾರದ ಆಭರಣದ ಸಾಮಾನುಗಳು ಜೊತೆಗೆ ನಗದು ಸೇರಿದಂತೆ ಅಂದಾಜು
90,000/- ರೂ ಮೊತ್ತದ ಸಾಮಗ್ರಿಗಳು ಕಳ್ಳತನವಾಗಿದ್ದು ನಾವು ತಮಗೆ ಪತ್ತೆ ಹಚ್ಚಿಕೊಡಬೇಕೇಂದು ಅರ್ಜಿಯ
ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment