Police Bhavan Kalaburagi

Police Bhavan Kalaburagi

Friday, January 31, 2020

BIDAR DISTRICT DAILY CRIME UPDATE 31-01-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 31-01-2020

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 03/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮೀನಾ ಗಂಡ ಬಾಪು ಸೂರ್ಯವಂಶಿ ವಯ: 38 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ನೀಲಕಂಠ ಗ್ರಾಮ, ತಾ: ಬಸವಕಲ್ಯಾಣ ರವರ ಗಂಡನಾದ ಬಾಪು ತಂದೆ ನಾಗನಾಥರಾವ ಸೂರ್ಯವಂಶಿ ರವರು ಮಗಳ ಮದುವೆಗೆ ಮಾಡಿದ ಸಾಲ ಮರಳಿ ಕೊಡಲು ಆಗಿರುವುದಿಲ್ಲಾ ಅಂತ ಜೀವನದಲ್ಲಿ ಜಿಗುಪ್ಸೆಗೊಂಡು ಸರಾಯಿ ಕುಡಿದ ಅಮಲಿನಲ್ಲಿ ದಿನಾಂಕ 29-01-2020 ರಂದು 1900 ಗಂಟೆಯಿಂದ ದಿನಾಂಕ 30-01-2020 ರಂದು 0700 ಗಂಟೆಯ ಮಧ್ಯದ ಅವಧಿಯಲ್ಲಿ ಮ್ಮ ಹೋಲದ ಕಟ್ಟೆಗೆ ಇರುವ ಮಾವಿನ ಮರದ ಒಂದು ಟೊಂಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೂ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರ ಪೊಲೀಸ ಠಾಣೆ ಅಪರಾಧ ಸಂ. 16/2020, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 29-01-2020 ರಂದು ಫಿರ್ಯಾದಿ ಜೀವನ ತಂದೆ ರಾಜಕುಮಾರ ಸೂರ್ಯವಂಶಿ ವಯ: 30 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹುಪಳಾ ರವರ ತಂದೆ ರಾಜಕುಮಾರ ಸೂರ್ಯವಂಶಿ ವಯ: 50 ವರ್ಷ ರವರು ಹೊಸ ಬಡಾವಣೆಯಿಂದ ಹಳೆ ಬಡಾವಣೆಯಲ್ಲಿನ ತಮ್ಮ ಮನೆಗೆ ಹೊಗಬೆಕೆಂದು ಬೀದರ-ಉದಗೀರ ರೋಡಿನ ಹುಪಳಾ ಗ್ರಾಮದ ಶಿವಾಜಿ ಚೌಕ ಹತ್ತಿರ ನಡೆದುಕೊಂಡು ಹೊಗುವಾಗ ಯಾವುದೋ ಒಂದು ಅಪರಿಚಿತ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಫಿರ್ಯಾದಿಯವರ ತಂದೆಗೆ ಹಿಂದಿನಿಂದ ಡಿಕ್ಕಿ ಮಾಡಿ ವಾಹನ ನೀಲ್ಲಿಸದೆ ವಾಹನ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಅವರ ಎಡಗಾಲು ಮೊಳಕಾಲಿನಿಂದ ಕೆಳಭಾಗ ಪೂರ್ತಿ ಭಾರಿ ರಕ್ತಗಾಯವಾಗಿ ನುಚ್ಚುನೂರಾಗಿರುತ್ತದೆ, ಬಲಗಾಲು ಮೊಳಕಾಲಿನಿಂದ ಕೆಳಭಾಗ ಪೂರ್ತಿ ಭಾರಿ ರಕ್ತಗಾಯವಾಗಿ ನುಚ್ಚುನೂರಾಗಿರುತ್ತದೆ, ಬಲಗೈ ಬೆರಳುಗಳಿಗೆ ರಕ್ತಗಾಯ, ಮುಂಗೈಯಿಂದ ಮೊಳಕೈವರೆಗೆ ಭಾರಿ ರಕ್ತಗಾಯವಾಗಿ ಹರಿದಿರುತ್ತದೆ, ನಂತರ ಅವರಿಗೆ 108 ಅಂಬುಲೇನ್ಸನಲ್ಲಿ ಬೀದರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಚಿಕಿತ್ಸೆ ನೀಡುತ್ತಿದ್ದ ವೈದ್ಯಾಧಿಕಾರಿಗಳು ಅವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 03/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 30-01-2020 ರಂದು ಫಿರ್ಯಾದಿ ಬಸಪ್ಪಾ ತಂದೆ ಅಡೇಪ್ಪಾ ಮಾನೆ ವಯ: 55 ವರ್ಷ, ಜಾತಿ: ಕೊರೆವಾ, ಸಾ: ಈಶ್ವರ ನಗರ ಬಸವಕಲ್ಯಾಣ ರವರ ಅಳಿಯನಾದ ದಿಲೀಪ ಜಾಧವ ರವರು ಹಣ್ಣಿನ ವ್ಯಾಪಾರ ಮಾಡಲು ಹಿರೋ ಸ್ಪ್ಲೇಂಡರ್ ಪ್ರೋ ಮೋಟಾರ ಸೈಕಲ ನಂ. ಕೆಎ-56/ಇ-9023 ನೇದ್ದರ ಮೇಲೆ ಮನೆಯಿಂದ ಹೋಗುವಾಗ ಹುಲಗುತ್ತಿ ಶಿವಾರದ ಬಸವಕಲ್ಯಾಣ-ರಾಜೊಳಾ ರೋಡಿನ ಮೇಲೆ ಎದುರಿನಿಂದ ಸುಜುಕಿ ಸ್ವೀಫ್ಟ ಡಿಜೈರ ಕಾರ ನಂ. ಕೆಎ-56/3770 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅಳಿಯನ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ಆರೋಪಿಯು ತನ್ನ ಕಾರನ್ನು ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿ ಪ್ರಯುಕ್ತ ಅಳಿಯನ ತಲೆಯ ಹಿಂದೆ ಹರಿದ ಭಾರಿ ರಕ್ತಗಾಯ, ಬಲಗಾಲ ಪಿಂಡ್ರಿಯ ಮೂಳೆ ಮುರಿದು ಭಾರಿ ರಕ್ತಗಾಯ, ಎಡಗಾಲ ಹಿಮ್ಮಡಿಗೆ ಹರಿದ ರಕ್ತಗಾಯವಾಗಿರುತ್ತದೆ, ನಂತರ 108 ಅಂಬುಲೇನ್ಸ್ನಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಉಮರ್ಗಾದ ವಿಶ್ವೇಕರ ಆಸ್ಪತ್ರೆಗೆ ನಂತರ ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಮರ್ಗಾದ ಶಿವಾಯಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 09/2020, ಕಲಂ. 279, 337, 338 ಐಪಿಸಿ :-
ದಿನಾಂಕ 30-01-2020 ರಂದು ಫಿರ್ಯಾದಿ ನೀಖಿಲ್ ತಂದೆ ಮೋಹನರಾವ ಕಾಂಬಳೆ ವಯ: 25 ವರ್ಷ, ಜಾತಿ: ಎಸ್.ಸಿ ಸಮಗಾರ, ಸಾ: ಶಾಹಾಪುರ ಗಲ್ಲಿ ಬಸವಕಲ್ಯಾಣ ರವರು ಬಸವಕಲ್ಯಾಣ ತಾಲೂಕಿನ ಕಾಂಬಳೆವಾಡಿ ಗ್ರಾಮದಲ್ಲಿರುವ ಮ್ಮ ಸಂಬಧಿಕರ ಮನೆಯಲ್ಲಿ ಮದುವೆ ಕಾರ್ಯಕ್ರಮ ಇದ್ದ ಪ್ರಯುಕ್ತ ಸದರಿ ಮದುವೆ ಕಾರ್ಯಕ್ರಮಕ್ಕೆ ಫಿರ್ಯಾದಿಯು ತಮ್ಮ ಫ್ಯಾಶನ್ ಪ್ಲಸ್ ಮೋಟಾರ್ ಸೈಕಲ ನಂ. ಕೆಎ-39/ಜೆ-4434 ನೇದರ ಮೇಲೆ ಬಸವಕಲ್ಯಾಣದಿಂದ ಮಂಠಾಳ ಗ್ರಾಮದ ಮುಖಾಂತರ ಕಾಂಬಳೆವಾಡಿ ಗ್ರಾಮಕ್ಕೆ ಹೋಗುತ್ತಿರುವಾಗ ಮಂಠಾಳ-ಆಲಗೂಡ ಟಾರ ರೋಡಿನ ಪಕ್ಕದಲ್ಲಿ ಮಂಠಾಳ ಗ್ರಾಮದ ಯಲ್ಲಾಲಿಂಗ್ ದೇವಾಲಕ್ಕೆ ಹೋಗುವ ಕ್ರಾಸ್ ಹತ್ತಿರ ಆಲಗೂಡ ಗ್ರಾಮದ ಕಡೆಯಿಂದ ಮಹಿಂದ್ರಾ ಮ್ಯಾಕ್ಸಿಮೊ ಮಿನಿವ್ಯಾನ್ ವ್ಹಿ.ಎಕ್ಸ್ವಾಹನ ನಂ. ಕೆಎ-28/ಎನ್-9218 ನೇದರ ಚಾಲಕನಾದ ಆರೋಪಿ ದಸ್ತಗಿರ ತಂದೆ ಅಬ್ದುಲ್ಸಾಬ ರಾಜುವಾಲೆ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಆಲಗೂಡ, ತಾ: ಬಸವಕಲ್ಯಾಣ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ನಿಯಂತ್ರಣ ಕಳೆದುಕೊಂಡು ಫಿರ್ಯಾದಿಯ ವಾಹನಕ್ಕೆ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಮೂಗಿನ ಮೇಲೆ, ಹಣೆಯ ಮೇಲೆ ಮತ್ತು ಎಡಗೈ ಕಿರು ಹಾಗು ಉಂಗುರ ಬೆರಳಿಗೆ ತರಚಿದ ರಕ್ತಗಾಯವಾಗಿ, ಗಾಲು ಪಾದದ ಮೇಲ್ಭಾಗದ ಹತ್ತಿರ ಮತ್ತು ಡಗಾಲು ರೊಂಡಿ ಹತ್ತಿರ ಗುಪ್ತಗಾಯವಾಗಿರುತ್ತದೆ, ನಂತರ ಸಂಬಂದಿಕರು ಫಿರ್ಯಾದಿಗೆ ಚಿಕಿತ್ಸೆ ಮಂಠಾಳ ಸರ್ಕಾರಿ ಆಸ್ಪತೆ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 08/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 30-01-2020 ರಂದು ತಾಳಮಡಗಿ ಗ್ರಾಮದ ಹಬೀಬಖಾನ ತಂದೆ ಮಸ್ತಾನಖಾನ ಬಿರಾದಾರ ಇವರ ಹೊಟೇಲ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆ ಅಂತಾ ಸುನೀತಾ ಪಿಎಸ್ಐ ಮನ್ನಾಎಖೇಳ್ಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ತಾಳಮಡಗಿ ಗ್ರಾಮಕ್ಕೆ ಹೋಗಿ ರಾ.ಹೆದ್ದಾರಿ-65 ಫ್ಲೈ ಓವರ್ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಹಬೀಬಖಾನ ತಂದೆ ಮಸ್ತಾನಖಾನ ಬಿರಾದಾರ ವಯ: 49 ವರ್ಷ, ಜಾತಿ: ಮುಸಿೃಚಿ, ಸಾ: ತಾಳಮಡಗಿ ಇತನು ಸಾರ್ವಜನಿಕರಿಗೆ ಇದು ಕಲ್ಯಾಣಿ ಮಟ್ಕಾ ಜೂಜಾಟ ಇದೆ ಒಂದು ರೂಪಾಯಿಗೆ 80/- ರೂಪಾಯಿ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಸದರಿಯವನ ಮೇಲೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ವಿಚಾರಿಸಿದಾಗ ತಾನು ಜನರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಳ್ಳುತ್ತೇನೆ ಅಂತಾ ತಿಳಿಸಿರುತ್ತಾನೆ, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 5570/- ರೂಪಾಯಿಗಳು ಮತ್ತು ಮಟಕಾ ನಂಬರ್ ಬರೆದ 2 ಮಟಕಾ ಚೀಟಿ, ಒಂದು ಬಾಲ ಪೆನ್ನನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 08/2020, ಕಲಂ. 363 ಐಪಿಸಿ :-
ದಿನಾಂಕ 30-01-2020 ರಂದು ಫಿರ್ಯಾದಿ ರೇಖಾ ಗಂಡ ರಾಜಾರಾಮ ಸೆಂಡಗೆ ವಯ: 38 ವರ್ಷ, ಸಾ: ದಾಮರಗಿದ್ದಾ, ತಾ: ನಾರಾಯಣಖೇಡ, ಸದ್ಯ: ಔರಾದ ರವರು ಸುಮಾರು 7 ವರ್ಷದ ಹಿಂದೆ ಔರಾದ ಪಟ್ಟಣಕ್ಕೆ ಮ್ಮ ಕುಟುಂಬ ಸಮೇತ ಬಂದು ಔರಾದ ಪಟ್ಟಣದಲ್ಲಿ ಸದ್ಯ ರಾಜಾಧಾಬಾ ಹಿಂದುಗಡೆ ಇರುವ ಎರಿಯಾದಲ್ಲಿ ಅವರು ತನ್ನ ಇಬ್ಬರೂ ಮಕ್ಕಳಾದ ಪ್ರೇಮ ಮತ್ತು ಶೃತಿ ವಯ: 15 ವರ್ಷ ಮೂವರು ವಾಸವಿದ್ದು, ಗಂಡ ತೆಲಂಗಣಾ ರಾಜ್ಯದ ಸಂಗಾರೆಡ್ಡಿಯಲ್ಲಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ, ಸದರಿ ಇಬ್ಬರು ಮಕ್ಕಳು ನವಚೇತನ ಶಾಲೆಯಲ್ಲಿ  ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಹೀಗಿರುವಾಗ ದಿನಾಂಕ 29-01-2020 ರಂದು ಪ್ರತಿ ದಿನದಂತೆ ಮಗಳು ಶಾಲಾ ಬಸ್ಸಿನಲ್ಲಿ ಶಾಲೆಗೆ ಹೊಗಿರುತ್ತಾಳೆ, 1645 ಗಂಟೆಗೆ ಶಾಲಾ ಬಸ್ಸು ಬಂದಿದ್ದು ಅದರಲ್ಲಿ ಗಳು ಶೃತಿ ಇವಳು ಬಂದಿರುವುದಿಲ್ಲ, ಆಗ ಫಿರ್ಯಾದಿಯು ಶಾಲೆಶಿಕ್ಷಕರಿಗೆ ಕರೆ ಮಾಡಿ ಮಗಳು ಮನೆಗೆ ಬಂದಿರುವುದಿಲ್ಲ ಎಂದು ವಿಚಾರಿಸಿದಾಗ ಶೃತಿ ಇವಳು 1230 ಗಂಟೆಗೆ ತನಗೆ ಹೊಟ್ಟೆ ನೋವು ಬಂದಿರುತ್ತದೆ ಎಂದು ಶಾಲೆಯಲ್ಲಿ ಹೇಳಿ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿರುತ್ತಾಳೆಂದು ತಿಳಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 13/2020, ಕಲಂ. 379 ಐಪಿಸಿ :-
ದಿನಾಂಕ 26-01-2020 ರಂದು ಫಿರ್ಯಾದಿ ಸಚೀನ ತಂದೆ ಶೀವಕುಮಾರ ಸಿಂಪಿ ವಯ: 19 ವರ್ಷ, ಸಾ:  ತ್ರಿಪುರಾಂತ ಬಸವಕಲ್ಯಾಣ ರವರ ಗೆಳೆಯನಾದ ರವಿಂದ್ರ ಸಾ: ಬೆಲೂರ ರವರ ಹಿರೋ ಪ್ಯಾಶನ ಪ್ರೋ ಮೋಟಾರ ಸೈಕಲ ನಂ. ಕೆಎ-56/-6820, ಚಾಸಿಸ್ ನಂ. ಎಮ.ಬಿ.ಎಲ್.ಹೆಚ್.ಎ.10.ಎ.ಡಬ್ಲು.ಡಿ.ಹೆಚ್.ಇ.ಓ.1731, ಇಂಜಿನ್ ನಂ. ಹೆಚ್.ಎ.10.ಇ.ಎನ್.ಡಿ.ಹೆಚ್.ಇ.16563, ಕಪ್ಪು-ಬಿಳಪು ಬಣ್ಣದ್ದು ತೆಗೆದುಕೊಂಡು 2200 ಗಂಟೆಗೆ ಹುಮನಾಬಾದಗೆ ಬಂದು ಕಲ್ಲೂರ ರೋಡಿಗೆ ಇರುವ ಜಾಜಿ ಕಾಂಪ್ಲೇಕ್ಸ ಮುಂದೆ ಸದರಿ ವಾಹನ ನಿಲ್ಲಿಸಿ ದಿನಾಂಕ 27-01-2020 ರಂದು 0030 ಗಂಟೆಗೆ ಬಂದು ನೋಡಲು ತಾನು ನಿಲ್ಲಿಸಿದ ಮೋಟಾರ ಸೈಕಲ ಇರಲಿಲ್ಲ, ಎಲ್ಲಾ ಕಡೆ ಹುಡಕಾಡಿ ನೋಡಲು ಎಲ್ಲಿಯೂ ಸದರಿ ಮೋಟಾರ ಸೈಕಲ ಸಿಕ್ಕಿರುವುದಿಲ್ಲ, ಯಾರೋ ಅಪರಿಚಿತ ಕಳ್ಳರು ಸದರಿ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 30-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲಿಸ ಠಾಣೆ ಅಪರಾಧ ಸಂ. 34/2020, ಕಲಂ. 392 ಐಪಿಸಿ :-
ಫಿರ್ಯಾದಿ ಛಾಯಾ ಗಂಡ ಧನಂಜಯ ಪುರಾಣಿ ಸಾ: ಕರುಣೇಶ್ವರ ನಗರ ರಾಮ ಮಂದಿರ ಹತ್ತಿರ ಕಲಬುರಗಿ ರವರ ಮಗಳಾದ ಪ್ರೀಯಾ ಇವಳು ಈಗ 4 ವರ್ಷಗಳಿಂದ ಭಾಲ್ಕಿಯ ಹೆಚ್.ಡಿ.ಎಫ್.ಸಿ. ಬ್ಯಾಂಕದಲ್ಲಿ ಕೇಲಸ ಮಾಡಿಕೊಂಡಿದ್ದು, ಮಗಳು ಭಾಲ್ಕಿಯ ಬಾಲಾಜಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು, ಈಗ ಎರಡು ದಿವಸಗಳ ಹಿಂದೆ ಫಿರ್ಯಾದಿಯು ತನ್ನ ಮಗಳ ಹತ್ತಿರ ಬಂದಿದ್ದು, ಹೀಗಿರುವಾಗ ದಿನಾಂಕ 30-01-2020 ರಂದು 1330 ಗಂಟೆಗೆ ಫಿರ್ಯಾದಿಯು ತನ್ನ ಮಗಳಿಗೆ ಊಟ ಕೋಡಲು ಹೆಚ್.ಡಿ.ಎಫ್.ಸಿ. ಬ್ಯಾಂಕಿಗೆ ಹೋಗಿ ಊಟ ಕೊಟ್ಟು ಮರಳಿ ಮನೆಗೆ ಹೋಗುವಾಗ 1345 ಗಂಟೆಯ ಸುಮಾರಿಗೆ ಬಾಲಾಜಿ ನಗರದ ಮಗಳ ಮನೆಯ ಹತ್ತಿರ ಯಾರೋ ಅಪರಿಚಿತ 25 ರಿಂದ 30 ವರ್ಷದ ಇಬ್ಬರು ವ್ಯಕ್ತಿಗಳು ಒಂದು ಮೋಟಾರ ಸೈಕಲ ಮೇಲೆ ಎದುರುಗಡೆಯಿಂದ ಬಂದವರೇ ಫಿರ್ಯಾದಿಯ ಕೊರಳಲ್ಲಿದ್ದ 15 ಗ್ರಾಂ. ಬಂಗಾರದ ಸರ ತಾಳಿ ಅ.ಕಿ 57,000/- ರೂ. ಬೆಲೆ ಬಾಳುವುದನ್ನು ದೋಚಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.