Police Bhavan Kalaburagi

Police Bhavan Kalaburagi

Monday, December 28, 2020

BIDAR DISTRICT DAILY CRIME UPDATE 28-12-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-12-2020

 

ಮಾರ್ಕೆಟ ಪೊಲೀಸ ಠಾಣೆ ಬೀದರ ಯು.ಡಿ.ಆರ್ ಸಂ. 14/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-

ಫಿರ್ಯಾದಿ ಸುನೀತಾ ಗಂಡ ಮಾಣಿಕರಾವ ದೇಶಮುಖ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಯರನಳ್ಳಿ ಗ್ರಾಮ, ತಾ: ಜಿ: ಬೀದರ ರವರ ಗಂಡನಾದ ಮಾಣಿಕರಾವ ತಂದೆ ಮಾರುತಿರಾವ ದೇಶಮುಖ ವಯ: 44 ವರ್ಷ ಇವರಿಗೆ ಈಗ ಸುಮಾರು ಒಂದು ವರ್ಷದಿಂದ ಲಿವರ ಬೇನೆ ಇದ್ದು ಚಿಕಿತ್ಸೆ ಮಾಡಿಸಿದರು ಕೂಡಾ ಕಡಿಮೆ ಆಗಿರುವುದಿಲ್ಲ, ಅವರಿಗೆ ಸರಾಯಿ ಕುಡಿಯುವ ಚಟ ಸಹ ಇರುತ್ತದೆ. ಸದರಿಯವರು ದಿನಾಂಕ 26-12-2020 ರಂದು 1345 ಗಂಟೆಯಿಂದ 27-12-2020 ರಂದು 0900 ಗಂಟೆಯ ಅವಧಿಯಲ್ಲಿ ಬೀದರ ನಗರದ ಸಿಟಿ ಲಾಡ್ಜನಲ್ಲಿ ರೂಂ ನಂ. 101 ನೇದರಲ್ಲಿ ಮಲಗಿರುವ ಬೇಡ್ ಮೇಲೆ ಅನಾರೋಗ್ಯದಿಂದ ಬಳಲಿ ಮೃತಪಟ್ಟಿರಬಹುದು, ಅವರ ಮರಣದ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ನಂ. 21/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ರಾಣಿ ಗಂಡ ಶಾಮವಿಲ್ ಗಾಯಕವಾಸಾ: ದುಡುಕನಾಳ ರವರ ಗಂಡನಾದ ಶಾಮವಿಲ್ ತಂದೆ ದೇವಿದಾಸ ಗಾಯಕವಾಡ ಇತನು ಸರಾಯಿ ಕುಡಿಯುವ ಚಟದವನಾಗಿದ್ದು, ಹೀಗಿರುವಾಗ ದಿನಾಂಕ 27-12-2020 ರಂದು ಫಿರ್ಯಾದಿಯವರ ಗಂಡ ಸರಾಯಿ ಕುಡಿದ ನಶೆಯಲ್ಲಿ ತನ್ನ ಮೈ ಮೇಲೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಬೆಂಕಿಯಿಂದ ಗಾಯಗೊಂಡು ಚಿಕಿತ್ಸೆ ಸಲುವಾಗಿ ಔರಾದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆಯು ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ನೂತನ ನಗರ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 25/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-

ಫಿರ್ಯಾದಿ ಜೇಶ್ರೀ ಗಂಡ ಓಂಕಾರ ಮ್ಯಾಕರೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಡೊಂಗರಗಿ ಗ್ರಾಮ, ತಾ: ಭಾಲ್ಕಿ ರವರ ಗಂಡನಾದ ಓಂಕಾರ ತಂದೆ ಬಸವರಾಜ ವಯ: 40 ವರ್ಷ ರವರು ಕೆ.ಎಸ್.ಆರ್.ಟಿ.ಸಿ ಬೀದರ ಘಟಕ-1 ರಲ್ಲಿ ಚಾಲಕ ಅಂತ ಸೂಮಾರು 15 ವರ್ಷಗಳಿಂದ ಕರ್ತವ್ಯ ಮಾಡಿಕೊಂಡಿದ್ದು, ದಿನಾಂಕ 26-12-2020 ರಂದು ರಾತ್ರಿ ವೇಳೆಯಲ್ಲಿ ಫಿರ್ಯಾದಿಯವರ ಗಂಡನವರು ಗಂಡನವರು ಲಾಕ್ ಡೌನ್ ಆದಾಗಿನಿಂದ ಸರಿಯಾಗಿ ಸಂಬಳ ಸಿಗದೆ ಸಾಲ ಹೇಗೆ ತೀರಿಸುವುದು ಅಂತ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಅಥವಾ ಇನ್ನಾವುದೋ ಕಾರಣಕ್ಕೆ ತಾನು ಸಾಯಬೇಕೆಂದು ಡಿಪೊ-1 ಬೀದರನಲ್ಲಿ ಸಿಬ್ಬಂದಿಯವರ ವಿಶ್ರಾಂತಿ ಕೋಣೆಯಲ್ಲಿ ಛತ್ತಿಗೆ ಇರುವ ಕಬ್ಬಿಣದ ಕೊಂಡಿಗೆ ಸುತಳಿಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ, ತನ್ನ ಗಂಡನ ಸಾವಿನಲ್ಲಿ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 27-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 86/2020, ಕಲಂ. 279, 337, 338 ಐಪಿಸಿ :-

ದಿನಾಂಕ 27-12-2020 ರಂದು ಫಿರ್ಯಾದಿ ರಾಜು ತಂದೆ ಮಾಣಿಕರಾವ ಗಾಯಕವಾಡ ವಯ: 40 ವರ್ಷ, ಜಾತಿ: ಮಾಂಗ, ಸಾ: ರಕ್ಷಾಳ (ಕೆ), ತಾ: ಔರಾದ, ಸದ್ಯ: ಸುಂದರ ನಗರ ಮಾಂಗೆವಾಡಿ ಕಾತರಾಜ ಪುಣೆ ರವರು ಗ್ರಾಮ ಪಂಚಾಯತಿ ಚುನಾವಣೆ ಇದ್ದ ಪ್ರಯುಕ್ತ ಮತದಾನ ಕುರಿತುಮ್ಮ ಗ್ರಾಮಕ್ಕೆ ಬರಲುನ್ನ ಗೆಳೆಯನಾದ ಸೌಧಗರ ತಂದೆ ರೋಹಿದಾಸ ಕಾಕಡೆ ಸಾ: ಮಂಗಳವಾಡಿ ಪುಣೆ ರವರ ಕಾರ ನಂ. ಎಮ್.ಹೆಚ್-12/ಜೆ.ಸಿ-2817 ನೇದರಲ್ಲಿ ತನ್ನ ಮಗನಾದ ಅವಿನಾಶ ವಯ: 13 ವರ್ಷ, ಮಗಳು ಸಪ್ನಾ ವಯ: 14 ವರ್ಷ ಮತ್ತು ತಮ್ಮ ಪಪ್ಪು ವಯ: 35 ವರ್ಷ, ತಮ್ಮನ ಹೆಂಡತಿ ಸತ್ಯಮ್ಮಾ ವಯ: 28 ವರ್ಷ ತಮ್ಮನ ಮಗನಾದ ವಿನೋದ ವಯ: 12 ವರ್ಷ ಎಲ್ಲರೂ ಕೂಡಿಕೊಂಡು ಪೂನಾದಿಂದ ರಾ.ಹೆ ನಂ. 65 ಮುಖಾಂತರಮ್ಮೂರಿಗೆ ಹೋಗುವಾಗ ಕಾರನ್ನು ಗೆಳೆಯ ಸೌದಗಾರ ಕಾಕಡೆ ಈತನು ಚಲಾಯಿಸುತ್ತಿದ್ದು, ಮಹಾರಾಷ್ಟ್ರ ಬಾರ್ಡರ್ ದಾಟಿದ ನಂತರ ಸೌದಾಗರ ಕಾಕಡೆ ಈತನು ತನ್ನ ಕಾರನ್ನು ಅತಿವೇಗ ನಿಷ್ಕಾಳಜಿತನದಿಂದ ಚಲಾಯಿಸಿ ಉಮಾಪೂರ ಕ್ರಾಸ್ ಹತ್ತಿರ ಡಿವೈಡರಗೆ ಡಿಕ್ಕಿ ಮಾಡಿದ್ದರಿಂದ ಕಾರ್ ಪಲ್ಟಿಯಾಗಿರುತ್ತದೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಯಾವುದೇ ಗಾಯಗಳಾಗಿರುವದಿಲ್ಲಾ, ಅವಿನಾಶ ಈತನಿಗೆ ಎದೆಯಲ್ಲಿ ಗುಪ್ತಗಾಯವಾಗಿರುತ್ತದೆ, ಸಪ್ನಾ ಇವಳ ಬಲಕೈಗೆ ತರಚಿದಗಾಯವಾಗಿರುತ್ತದೆ, ಪಪ್ಪು ಈತನಿಗೆ ತಲೆಗೆ ಭಾರಿ ರಕ್ತಗಾಯ, ಸೊಂಟದಲ್ಲಿ ಗುಪ್ತಗಾಯ, ಎರಡು ಕೈಗಳಿಗೆ ತರಚಿದಗಾಯಗಳಾಗಿದ್ದು, ಸತ್ಯಮ್ಮಾ ಇವಳಿಗೆ ಸೊಂಟದಲ್ಲಿ ಗುಪ್ತಗಾಯ, ಬಲಗಾಲು ಮೊಣಕಾಲಿಗೆ ತರಚಿದಗಾಯವಾಗಿರುತ್ತದೆ, ವಿನೋದ ಇತನ ಎದೆಗೆ ಗುಪ್ತಗಾಯವಾಗಿರುತ್ತದೆ, ಆರೋಪಿ ಸೌದಾಗರ ಇತನ ತಲೆಗೆ ಭಾರಿ ರಕ್ತಗಾಯ, ಬಲಗಡೆ ಎದೆಯಲ್ಲಿ ಗುಪ್ತಗಾಯವಾಗಿರುತ್ತದೆ, ನಂತರ ಅಲ್ಲಿ ಸೇರಿದ ಜನರು 108 ಅಂಬುಲೇನ್ಸ ಕರೆಯಿಸಿದಾಗ ಫಿರ್ಯಾದಿಯು ಗಾಯಗೊಂಡ ಎಲ್ಲರಿಗೂ ಅಂಬುಲೆನ್ಸದಲ್ಲಿ  ಉಪಚಾರ  ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.